ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,21,2017

Question 1

1. ಮಿಸ್ ಇಂಡಿಯಾ USA 2017 ರ ಕಿರೀಟವನ್ನು ಯಾರು ಪಡೆದುಕೊಂಡರು?

A
ಪ್ರಾಚಿ ಸಿಂಗ್
B
ಸ್ವಪ್ನಾ ಮನ್ನಮ್
C
ಶ್ರೀ ಸೈನಿ
D
ಕವಿತಾ ಮಲ್ಹೋತ್ರಾ ಪತನಿ
Question 1 Explanation: 

ಶ್ರೀ ಸೈನಿ ವಾಷಿಂಗ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದ ಶ್ರೀ ಸೈನಿ ಅವರು ನ್ಯೂಜೆರ್ಸಿಯ ಎಡಿಸನ್ನಲ್ಲಿರುವ ರಾಯಲ್ ಆಲ್ಬರ್ಟ್ಸ್ ಪ್ಯಾಲೇಸ್ನಲ್ಲಿ ನಡೆದ ಮಿಸ್ ಇಂಡಿಯಾ USA 2017 ರ ಕಿರೀಟವನ್ನು ಜಯಿಸಿದರು.

Question 2

2. National Rice Research Institute (NRRI) ಯಾವ ರಾಜ್ಯದಲ್ಲಿದೆ?

A
ಕೇರಳ
B
ವೆಸ್ಟ್ ಬೆಂಗಲ್
C
ಆಂದ್ರ ಪ್ರದೇಶ
D
ಒಡಿಶಾ
Question 2 Explanation: 

ಒಡಿಶಾ National Rice Research Institute (NRRI) ವು ಒಡಿಶಾದ ಕಟಕ್-ಪ್ಯಾರಡಿಪ್ ರಸ್ತೆಯಲ್ಲಿನ ಬಿಡಿಯಾದಾರ್ ಪುರ ಗ್ರಾಮದಲ್ಲಿದೆ. ಇದು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ (ICAR) ಅಡಿಯಲ್ಲಿನ ಪ್ರಧಾನ ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿದೆ.

Question 3

3. ರಾಖಿನೆ ಸ್ಟೇಟ್ನ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಇತ್ತೀಚೆಗೆ ಭಾರತ ಮತ್ತು ಯಾವ ದೇಶವು ಒಪ್ಪಂದಕ್ಕೆ ಸಹಿ ಹಾಕಿವೆ?

A
ಮ್ಯಾನ್ಮಾರ್
B
ನೇಪಾಳ
C
ಶ್ರೀಲಂಕಾ
D
ಬಾಂಗ್ಲಾದೇಶ
Question 3 Explanation: 
ಮ್ಯಾನ್ಮಾರ್

ರಾಖಿನೆ ಸ್ಟೇಟ್ನ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಇತ್ತೀಚೆಗೆ ಭಾರತ ಮತ್ತು ಮ್ಯಾನ್ಮಾರ್ ಒಪ್ಪಂದಕ್ಕೆ ಸಹಿ ಹಾಕಿವೆ.

Question 4

4. ಪರಿಸರ ಸ್ವಚ್ಚತೆಗಾಗಿ ಇತ್ತೀಚೆಗೆ ಕೇಂದ್ರ ಸರ್ಕಾರ ಕಲ್ಮೇಶ್ವರಂ ಲಿಪ್ಟ್ ನೀರಾವರಿ ಯೋಜನೆ (KLIS) ಗೆ ಅನುಮತಿ ನೀಡಿದೆ. ಈ ಯೋಜನೆಯನ್ನು ಯಾವ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ?

A
ಕೇರಳ
B
ಆಂದ್ರ ಪ್ರದೇಶ
C
ತೆಲಂಗಾಣ
D
ಒಡಿಶಾ
Question 4 Explanation: 
ತೆಲಂಗಾಣ

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯದ ತಜ್ಞರ ಅಪ್ರೇಸಲ್ ಸಮಿತಿಯು ಇತ್ತೀಚೆಗೆ ತೆಲಂಗಾಣದಲ್ಲಿ ಕಲ್ಮೇಶ್ವರಂ ಲಿಪ್ಟ್ ನೀರಾವರಿ ಯೋಜನೆ (KLIS) ಗೆ ಅನುಮತಿ ನೀಡಿದೆ. ಈ ಯೋಜನೆಯ ಉದ್ದೇಶವು ತೆಲಂಗಾಣದ ಕರಿಮ್ ನಗರ ಜಿಲ್ಲೆಯ ಮಡ್ಡಿಗಡ್ಡ ಗ್ರಾಮದ ಸಮೀಪ ಗೋದಾವರಿ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸುವುದಾಗಿದೆ.

Question 5

5. 2040 ದೆ.ರೊಳಗೆ ತೈಲ ಮತ್ತು ನೈಸರ್ಗಿಕ ಅನಿಲಗಳ ಎಲ್ಲಾ ಪರಿಶೋಧನೆ ಮತ್ತು ಉತ್ಪಾದನೆಯನ್ನು ನಿಷೇಧಿಸುವ ಕಾನೂನನ್ನು ಇತ್ತೀಚೆಗೆ ಯಾವ ಪಾರ್ಲಿಮೆಂಟ್ ಅಂಗೀಕರಿಸಿದೆ?

A
ಫ್ರಾನ್ಸ್
B
ಬೆಲ್ಜಿಯಂ
C
ಜರ್ಮನಿ
D
ಬ್ರೆಜಿಲ್
Question 5 Explanation: 
ಫ್ರಾನ್ಸ್

ಫ್ರಾನ್ಸ್ನ ಪಾರ್ಲಿಮೆಂಟ್ ಇತ್ತೀಚೆಗೆ ದೇಶ ಮತ್ತು ಅದರ ಸಾಗರೋತ್ತರ ಪ್ರದೇಶಗಳಲ್ಲಿ 2040 ರೊಳಗೆ ತೈಲ ಮತ್ತು ನೈಸರ್ಗಿಕ ಅನಿಲದ ಎಲ್ಲಾ ಪರಿಶೋಧನೆ ಮತ್ತು ಉತ್ಪಾದನೆಯನ್ನು ನಿಷೇಧಿಸುವ ಕಾನೂನನ್ನು ಅನುಮೋದಿಸಿದೆ. ಈ ಕಾನೂನಿನಡಿಯಲ್ಲಿ ಅಸ್ತಿತ್ವದಲ್ಲಿರುವ ಡ್ರಿಲ್ಲಿಂಗ್ ಪರವಾನಗಿಗಳನ್ನು ನವೀಕರಿಸಲಾಗುವುದಿಲ್ಲ ಮತ್ತು ಹೊಸ ಅನ್ವೇಷಣೆ ಪರವಾನಗಿಗಳನ್ನು ನೀಡಲಾಗುವುದಿಲ್ಲ

Question 6

6. ಜೀ ಸಿನೆ (Zee Cine ) ಅವಾರ್ಡ್ಸ್ 2018 ನಲ್ಲಿ ಗ್ಲೋಬಲ್ ಐಕಾನ್ ಪ್ರಶಸ್ತಿಯನ್ನು ಯಾರು ಪಡೆದರು?

A
ಕತ್ರಿನಾ ಕೈಫ್
B
ಪ್ರಿಯಾಂಕ ಚೋಪ್ರಾ
C
ಅಕ್ಷಯ್ ಕುಮಾರ್
D
ಅಮಿತಾಭ್ ಬಚ್ಚನ್
Question 6 Explanation: 
ಪ್ರಿಯಾಂಕ ಚೋಪ್ರಾ

ಮಹಾರಾಷ್ಟ್ರದ ಮುಂಬೈನಲ್ಲಿ ಡಿಸೆಂಬರ್ 19 ರಂದು ಜೀ ಸಿನೆ (Zee Cine ) ಅವಾರ್ಡ್ಸ್ 2018 ನಲ್ಲಿ ಗ್ಲೋಬಲ್ ಐಕಾನ್ ಪ್ರಶಸ್ತಿಯನ್ನು ಪ್ರಿಯಾಂಕ ಚೋಪ್ರಾ ಪಡೆದಿದ್ದಾರೆ. ಹಾಗೂ ‘ಬದ್ರಿನಾಥ ಕಿ ದುಲ್ಹಾನಿಯ ಮಾಮ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಶ್ರೀದೇವಿಯವರಿಗೆ ಅತ್ಯತ್ತಮ ನಟಿ (ಸ್ತ್ರೀ) ಮತ್ತು ವರುಣ್ ಧವನ್ ಅವರಿಗೆ ಅತ್ಯುತ್ತಮ ನಟ (ಪುರುಷ) ಪ್ರಶಸ್ತಿಗಳನ್ನು ನೀಡಲಾಯಿತು.

Question 7

7. ಇತ್ತೀಚೆಗೆ ಜೆಎಲ್ಎಲ್ (JLL) ಇಂಡಿಯಾ ರಿಪೋರ್ಟ್ 2017ರ ಪ್ರಕಾರ, ಭಾರತದ ಯಾವ ನಗರವು ಅತ್ಯಂತ ದುಬಾರಿ ಕಚೇರಿ ಸ್ಥಳಗಳ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಪಡೆದಿದೆ?

A
ದೆಹಲಿ
B
ಕೊಲ್ಕತ್ತಾ
C
ಜೈಪುರ
D
ಮುಂಬೈ
Question 7 Explanation: 
ದೆಹಲಿ

ಇತ್ತೀಚೆಗೆ ಜೆಎಲ್ಎಲ್ ಇಂಡಿಯಾ ರಿಪೋರ್ಟ್ 2017ರ ಪ್ರಕಾರ ದೆಹಲಿಯು ವಿಶ್ವದ ಅತ್ಯಂತ ದುಬಾರಿ ಕಚೇರಿ ಸ್ಥಳಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. JLLನ ಅಧ್ಯಯನದ ಪ್ರಕಾರ ದೆಹಲಿಯ ಬಾಡಿಗೆಗಳು ಸ್ಯಾನ್ ಫ್ರಾನ್ಸಿಸ್ಕೋ, ದುಬೈ ಮತ್ತು ವಾಷಿಂಗ್ಟನ್ ಡಿಸಿಗಿಂತಲೂ ಹೆಚ್ಚು ದುಬಾರಿಯಾಗಿದೆ. ಮತ್ತು ಮುಂಬೈ 16ನೇ ಸ್ಥಾನದಲ್ಲಿದೆ.

Question 8

8. ಭಾರತದ ಪ್ರಥಮ ರಾಷ್ಟ್ರೀಯ ರೈಲು ಮತ್ತು ಸಾರಿಗೆ ವಿಶ್ವವಿದ್ಯಾಲಯ (NRTU) ಯಾವ ರಾಜ್ಯದಲ್ಲಿ ಸ್ಥಾಪನೆಯಾಗುತ್ತದೆ?

A
ಗುಜರಾತ್
B
ಕರ್ನಾಟಕ
C
ರಾಜಸ್ಥಾನ
D
ಒಡಿಶಾ
Question 8 Explanation: 
ಗುಜರಾತ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ವಡೋದರಾದಲ್ಲಿ ಭಾರತದ ಪ್ರಥಮ ರಾಷ್ಟ್ರೀಯ ರೈಲು ಮತ್ತು ಸಾರಿಗೆ ವಿಶ್ವವಿದ್ಯಾಲಯ (NRTU)ದ ಸ್ಥಾಪನೆಗೆ ಅನುಮೋದನೆಯನ್ನು ನೀಡಿದ್ದಾರೆ.

Question 9

9. 17ನೇ ಭಾರತೀಯ ವಿಜ್ಞಾನ ಸಂವಹನ ಕಾಂಗ್ರೆಸ್ (ಐಎಸ್ಸಿಸಿ-2017) ಅನ್ನು ಯಾವ ನಗರ ದಲ್ಲಿ ಆಯೋಜಿಸಲಾಯಿತು?

A
ಕಟಕ್
B
ನವ ದೆಹಲಿ
C
ಚೆನೈ
D
ಅಗರ್ತಲಾ
Question 9 Explanation: 
ನವ ದೆಹಲಿ

17ನೇ ಭಾರತೀಯ ವಿಜ್ಞಾನ ಸಂವಹನ ಕಾಂಗ್ರೆಸ್ (ISCC-2017) ಅನ್ನು ಡಿಸೆಂಬರ್ 21 ರಂದು ನವ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (IIMC)ನಲ್ಲಿ ಆಯೋಜಿಸುತ್ತಿದೆ. ಇದು ಸಿಎಸ್ಐಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕಮ್ಯೂನಿಕೇಶನ್ ಅಂಡ್ ಇನ್ಫಾರ್ಮೇಶನ್ ರಿಸೋರ್ಸಸ್ (ಎನ್ಐಎಸ್ಸಿಏಐಆರ್) ಸಹಯೋಗದೊಂದಿಗೆ ಪ್ರಾರಂಭಿಸುತ್ತಿದೆ.

Question 10

10. 2018ರ ಹಾಕಿ ವಿಶ್ವ ಕಪ್ಗಾಗಿ ಅಂಪೈರ್ಗಳ ಸಮಿತಿಯಲ್ಲಿ ಜಾವೇದ್ ಶೇಖ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಯಾವ ದೇಶದವರು?

A
ಪಾಕಿಸ್ತಾನ
B
ಬಾಂಗ್ಲಾದೇಶ
C
ಭಾರತ
D
ಮ್ಯಾನ್ಮಾರ್
Question 10 Explanation: 
ಭಾರತ

ಭಾರತದ ರಘು ಮತ್ತು ಜಾವೇದ್ ಶೇಖ್ ಅವರನ್ನು ಇತ್ತೀಚೆಗೆ ಭುವನೇಶ್ವರದಲ್ಲಿ ನಡೆಯಲಿರುವ 2018 ರ ಹಾಕಿ ವಿಶ್ವ ಕಪ್ಗೆ ಅಂಪೈರ್ಗಳ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2018/04/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್212017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.