ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,24,25,2017
Question 1 |
1. ಗ್ಯಾಲಿಮ್ ಜಾರಿಲ್ಗಾಪೋವ್ನ ಬಾಕ್ಸಿಂಗ್ ಪಂದವಳಿಯಲ್ಲಿ ನಮನ್ ತನ್ವರ್ ಅವರು ಚಿನ್ನದ ಪದಕವನ್ನು ಪಡೆದರು. ಅವರು ಯಾವ ತೂಕದ ವಿಭಾಗದಲ್ಲಿ ಚಿನ್ನವನ್ನು ಗೆದ್ದರು?
60 ಕೆಜಿ | |
49 ಕೆಜಿ | |
91 ಕೆಜಿ | |
75 ಕೆಜಿ |
91 ಕೆಜಿ ಕಝಕಿಸ್ತಾನ್ನ ಕರಾಗಾಂಡದಲ್ಲಿ ನಡೆದ 2017ರ ಗ್ಯಾಲಿಮ್ ಜಾರಿಲ್ಗಾಪೋವ್ನ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ನಮನ್ ತನ್ವರ್ ಅವರು ಚಿನ್ನದ ಪದಕವನ್ನು ಪಡೆದರು. ಅವರು 91 ಕೆಜಿ ವಿಭಾಗದಲ್ಲಿ ಚಿನ್ನವನ್ನು ಗೆದ್ದರು. ಈ ಪಂದ್ಯಾವಳಿಯಲ್ಲಿ ಭಾರತೀಯ ಬಾಕ್ಸರ್ಗಳು ಮೂರು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು. ಚಿನ್ನದ ಪದಕ ವಿಜೇತರಾದ ಕೆ ಶ್ಯಾಮ ಕುಮಾರ್ 49 ಕೆಜಿ, ನಮನ್ ತನ್ವರ್ 91 ಕೆಜಿ ಮತ್ತು ಸತೀಶ್ ಕುಮಾರ್ 91 ಕೆಜಿ ವಿಭಾಗದಲ್ಲಿ ಭಾಗವಹಿಸಿದ್ದರು.
Question 2 |
2. ಗುಡ್ ಗವರ್ನನ್ಸ್ ಡೇ (ಜಿಜಿಡಿ) ಯನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಡಿಸೆಂಬರ್ 25 | |
ಡಿಸೆಂಬರ್ 2 | |
ಡಿಸೆಂಬರ್ 26 | |
ಡಿಸೆಂಬರ್23 |
ಡಿಸೆಂಬರ್ 25 ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ಪ್ರಯುಕ್ತ , ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 25 ರಂದು ಗುಡ್ ಗವರ್ನನ್ಸ್ ಡೇ (ಜಿಜಿಡಿ) ಯನ್ನು ಆಚರಿಸಲಾಗುತ್ತದೆ
Question 3 |
3. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ನ ಹೊಸ ಜನರಲ್ ಮ್ಯಾನೇಜರ್ (GM) ಆಗಿ ನೇಮಕಗೊಂಡವರು ಯಾರು?
ಎಂ. ವಿ. ಶ್ರೀಧರ್ | |
ಕಪಿಲ್ ದೇವ್ | |
ಸಾಬಾ ಕರೀಮ್ | |
ದಿಲೀಪ್ ಸರ್ದೇಸಾಯಿ |
ಸಾಬಾ ಕರೀಮ್ ಭಾರತದ ಮಾಜಿ ವಿಕೆಟ್ ಕೀಪರ್ ಸಾಬಾ ಕರೀಮ್ ಅವರನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ನ ಹೊಸ ಜನರಲ್ ಮ್ಯಾನೇಜರ್ (GM) ಆಗಿ ನೇಮಕ ಮಾಡಲಾಗಿದೆ. ಕಾರ್ಯಸೂಚಿ ಯೋಜನೆಗಳನ್ನು ಅನುಷ್ಠಾನಗೊಳಿಸುವದು, ಬಜೆಟ್, ಪಂದ್ಯದ ಆಡುವ ನಿಯಮಗಳು ಮತ್ತು ದೇಶೀಯ ಕಾರ್ಯಕ್ರಮದ ಆಡಳಿತವನ್ನು ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ.
Question 4 |
4. ವಿಶ್ವ ಆರ್ಥಿಕ ವೇದಿಕೆ (WEF) -2018 ರ ವಾರ್ಷಿಕ ಸಭೆಯನ್ನು ಆಯೋಜಿಸುವ ನಗರ ಯಾವುದು?
ದಾವೋಸ್ | |
ನವ ದೆಹಲಿ | |
ಜಿನೀವಾ | |
ಬರ್ಲಿನ್ |
ದಾವೋಸ್ ವಿಶ್ವ ಆರ್ಥಿಕ ವೇದಿಕೆ (WEF) -2018 ರ ವಾರ್ಷಿಕ ಸಭೆ ಜನವರಿ 22 ರಿಂದ ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ಆಯೋಜಿಸಲಾಗುವುದು. 5 ದಿನಗಳ ವರೆಗೆ ನಡೆಯುವ ಸಭೆಯಲ್ಲಿ ಇದೆ ಮೊದಲ ಬಾರಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಆರ್ಥಿಕ ವೇದಿಕೆ (WEF)ಯಲ್ಲಿ ಭಾಗವಹಿಸಿದರು.
Question 5 |
5. ಯಾವ ನಗರವು ತನ್ನ ಸ್ವಂತ ಲೋಗೊವನ್ನು ಪಡೆದುಕೊಂಡ ಮೊದಲ ಭಾರತೀಯ ನಗರವಾಗಿದೆ?
ಪುಣೆ | |
ಬೆಂಗಳೂರು | |
ಕೊಚ್ಚಿ | |
ಪಾಟ್ನಾ |
ಬೆಂಗಳೂರು ಕರ್ನಾಟಕ ಸರ್ಕಾರವು ಡಿಸೆಂಬರ್ 24, 2017 ರಂದು ಬೆಂಗಳೂರು ನಗರದ ಲಾಂಛನವನ್ನು ಪ್ರವಾಸೋದ್ಯಮ ತಾಣವಾಗಿ ಬ್ರಾಂಡಿಂಗ್ ಮಾಡಲು ಪ್ರಾರಂಭಿಸಿದೆ. ಇದರೊಂದಿಗೆ, ಬೆಂಗಳೂರು ತನ್ನದೇ ಸ್ವಂತ ಲೋಗೊವನ್ನು ಪಡೆದ ಮೊದಲ ಭಾರತೀಯ ನಗರವಾಗಿದೆ. ಈ ಲಾಂಛನವನ್ನು ನಾಮೂರ್ ಅವರು ವಿನ್ಯಾಸಗೊಳಿಸಿದರು.
Question 6 |
6. ಬೆಟ್ಲಾ ರಾಷ್ಟ್ರೀಯ ಉದ್ಯಾನ (BNP) ಯು ಯಾವ ರಾಜ್ಯದಲ್ಲಿದೆ?
ಜಾರ್ಖಂಡ್ | |
ಪಂಜಾಬ್ | |
ಹಿಮಾಚಲ ಪ್ರದೇಶ | |
ಹರಿಯಾಣ |
ಜಾರ್ಖಂಡ್ ಬೆಟ್ಲಾ ರಾಷ್ಟ್ರೀಯ ಉದ್ಯಾನ (BNP) ವು ಜಾರ್ಖಂಡ್ನ ಲಥೇರ್ ಜಿಲ್ಲೆಯ ಛೋಟಾ ನಾಗ್ಪುರ್ ಪ್ರಸ್ಥಭೂಮಿಯಲ್ಲಿದೆ ಮತ್ತು 226.33 ಚ.ಕಿ ಪ್ರದೇಶವನ್ನು ಹೊಂದಿದೆ. ಇದು ಕರಡಿ, ಪ್ಯಾಂಥರ್ ಮತ್ತು ತೋಳ, ಜಕಲ್, ಕತ್ತೆಕಿರುಬ ಇತ್ಯಾದಿಗಳಿಗೆ ನೆಲೆಯಾಗಿದೆ
Question 7 |
7. ಭಾರತದ ಮೊದಲ ಬ್ರಾಡ್ ಗೇಜ್ ಹವಾನಿಯಂತ್ರಿತ ಎಸಿ (AC) EMU ಉಪನಗರ ರೈಲು ಯಾವ ನಗರದಲ್ಲಿ ಪ್ರಾರಂಭವಾಗಿದೆ?
ಕೊಲ್ಕತ್ತಾ | |
ಜೈಪುರ್ | |
ದೆಹಲಿ | |
ಮುಂಬೈ |
ಮುಂಬೈ ಭಾರತದ ಮೊದಲ ಬ್ರಾಡ್ ಗೇಜ್ ಹವಾನಿಯಂತ್ರಿತ ಎಸಿ (AC) EMU ಉಪನಗರ ರೈಲು ಮಹಾರಾಷ್ಟ್ರದ ಮುಂಬೈಯಲ್ಲಿ ಪ್ರಾರಂಭವಾಗಿದೆ. 2017ರ ಡಿಸೆಂಬರ್ 25 ರಂದು ಈ ರೈಲು ಮುಂಬೈಯ ಪಶ್ಚಿಮ ರೈಲು ನಿಲ್ದಾಣದ ಬೋರಿವಾಲಿ ನಿಲ್ದಾಣಿದಿಂದ ಚಾಲನೆ ಪಡೆಯಿತು. ಈ ಎಸಿ ರೈಲು 14.10 ಗಂಟೆಗೆ ಅಂಧೇರಿ ರೈಲು ನಿಲ್ದಾಣಿದಿಂದ ಹೊರಟು 14.44 ಗಂಟೆಗೆ ಚರ್ಚ್ಗೇಟ್ ತಲುಪುವುದು.
Question 8 |
8. ಹಿಮಾಚಲ ಪ್ರದೇಶದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದವರು ಯಾರು?
ನೀರಾಜ್ ನಯ್ಯರ್ | |
ಸುರೇಶ್ ಭಾರದ್ವಾಜ್ | |
ಮಹೇಂದರ್ ಸಿಂಗ್ | |
ಜೈರಾಮ್ ಠಾಕೂರ್ |
ಜೈರಾಮ್ ಠಾಕೂರ್ 5 ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಜೈರಾಮ್ ಠಾಕೂರ್ ಅವರು ಹಿಮಾಚಲ ಪ್ರದೇಶದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮತ್ತು ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು.
Question 9 |
9. ಯಾವ ದೇಶ ವಿಶ್ವದ ಅತಿದೊಡ್ಡ ಉಭಯಚರ ವಿಮಾನ “AG600” ವನ್ನು ಪ್ರಾರಂಭಿಸಿದೆ?
ನ್ಯೂಜಿಲೆಂಡ್ | |
ಚೀನಾ | |
ನಾರ್ವೆ | |
ಜಪಾನ್ |
ಚೀನಾ ಚೀನಾ ವಿಶ್ವದ ಅತಿದೊಡ್ಡ ಉಭಯಚರ ವಿಮಾನ “AG600” ವನ್ನು ಡಿಸೆಂಬರ್ 21, 2017 ರಂದು ಗುವಾಂಗ್ಡಾಂಗ್ ಪ್ರಾಂತ್ಯದ ಝುಹೈ ಜಿನ್ವಾನ್ ಸಿವಿಲ್ ಏವಿಯೇಷನ್ ವಿಮಾನ ನಿಲ್ದಾಣದಿಂದ ತನ್ನ ಮೊದಲ ಹಾರಾಟವನ್ನು ಪ್ರಾರಂಭಿಸಿದೆ. 121 ಅಡಿ ಉದ್ದದ “AG600” ವಿಮಾನವು “ಕುನ್ಲಾಂಗ್” ಎಂಬ ಸಂಕೇತನಾಮವನ್ನು ಹೊಂದಿದ್ದು, 38.8 ಮೀಟರ್ ರೆಕ್ಸಾನ್ ಮತ್ತು 4 ಟರ್ಬೊಪ್ರೊಪ್ ಎಂಜಿನ್ಗಳನ್ನು ಹೊಂದಿದೆ.
Question 10 |
ಲಿಬೇರಿಯಾದ ಹೊಸ ಅಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
ಜೋಸೆಫ್ ಬೋಕಾಯ್ | |
ಜಾರ್ಜ್ ವೆಯ್ | |
ಎಲ್ಲೆನ್ ಜಾನ್ಸನ್ ಸಿರ್ಲೀಫ್ | |
ಡೊಮ ಜಾನ್ಸನ್ |
ಜಾರ್ಜ್ ವೆಯ್ ಮಾಜಿ ಫುಟ್ಬಾಲ್ ಸೂಪಸ್ಟಾರ್ ಜಾರ್ಜ್ ವೆಯ್ ಅವರು ಉಪಾಧ್ಯಕ್ಷ ಜೋಸೆಫ್ ಬೊಕೈ ಅವರನ್ನು 61.5 % ಮತಗಳ ಅಂತರದಿಂದ ಸೋಲಿಸದ ನಂತರ ಲಿಬೇರಿಯಾದ ಹೊಸ ಅಧ್ಯಕ್ಷರಾಗಿ ಆಯ್ಕೆಯಾದರು. ಜಾರ್ಜ್ ವೆಯ್ ಅವರು ಫೀಫಾ ವರ್ಲ್ಡ್ ಪ್ಲೇಯರ್ ಆಫ್ ದಿ ಇಯರ್ ಮತ್ತು ಪ್ರತಿಷ್ಠಿತ ಬ್ಯಾಲನ್ ಡಿ ಓರ್ರನ್, ಎರಡು ಪ್ರಶಸ್ತಿ ಗೆದ್ದ ಏಕೈಕ ಆಫ್ರಕನ್ ಫುಟ್ಬಾಲ್ ಆಟಗಾರ.
[button link=”http://www.karunaduexams.com/wp-content/uploads/2018/04/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್24252017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Good questions