ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ ಏಪ್ರಿಲ್-26-27, 2018
Question 1 |
1. ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ನೇರವಾಗಿ ಆಯ್ಕೆಯಾದ ಮೊದಲ ಮಹಿಳಾ ವಕೀಲೆ ಯಾರು ?
) ಪಿ.ಜೆ. ನಾಯಕ್ | |
ಇಂದೂ ಮಲ್ಹೋತ್ರಾ | |
) ವಿನೋದ್ ರೈ | |
ವೇದಿಕಾ ಬಂದರ್ಕರ್ |
ಇಂದೂ ಮಲ್ಹೋತ್ರಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇರ ನೇಮಕಗೊಂಡ ದೇಶದ ಮೊದಲ ಮಹಿಳಾ ವಕೀಲೆ ಎಂಬ ಹೆಗ್ಗಳಿಕೆ ಪಡೆದ ಇಂದೂ ಮಲ್ಹೋತ್ರಾ ಅವರು ಬೆಂಗಳೂರಿನವರು ಎನ್ನುವುದು ಕನ್ನಡಿಗರ ಹೆಮ್ಮೆ. ಇಂದೂ ಅವರು 1983ರಲ್ಲಿ ವಕೀಲೆ ವೃತ್ತಿಗೆ ಸೇರಿದ್ದು, ದಿಲ್ಲಿ ಬಾರ್ ಕೌನ್ಸಿಲ್ನಲ್ಲಿ ಹೆಸರು ನೋಂದಾಯಿಸಿದ್ದಾರೆ. 1988ರಲ್ಲಿ ಸುಪ್ರೀಂಕೋರ್ಟ್ ನ್ಯಾಯವಾದಿಯಾಗಿ ಪ್ರವೇಶ ಪಡೆದ ಅವರು ಆ ಪರೀಕ್ಷೆಯಲ್ಲಿ ಮೊದಲಿಗರಾಗಿದ್ದರು. ಇದಕ್ಕಾಗಿ ಅವರಿಗೆ ಮುಕೇಶ್ ಗೋಸ್ವಾಮಿ ಸ್ಮಾರಕ ಪ್ರಶಸ್ತಿ ಸಂದಿತ್ತು. ಮಧ್ಯಸ್ಥಿಕೆ ನ್ಯಾಯ ವಿಚಾರಣೆ ಕಾನೂನಿನಲ್ಲಿ ತಜ್ಞೆಯಾಗಿರುವ ಇಂದೂ ಅವರು ಹಲವಾರು ದೇಶೀಯ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯವಿಚಾರಣೆಯಲ್ಲಿ ಪಾಲ್ಗೊಂಡಿದ್ದಾರೆ. ಯಾರೂ ಸ್ವೀಕರಿಸಲು ಒಪ್ಪದ ಹಲವಾರು ಪ್ರಕರಣಗಳನ್ನು ಸ್ವೀಕರಿಸಿ ಜಯಿಸಿದ ಹೆಗ್ಗಳಿಕೆ ಅವರದು.
Question 2 |
2. 2018ರ ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಯಾವಾಗ ಆಚರಿಲಾಗುತ್ತದೆ?
ಏಪ್ರಿಲ್ 26 | |
ಏಪ್ರಿಲ್ 22 | |
ಏಪ್ರಿಲ್ 21 | |
ಏಪ್ರಿಲ್ 29 |
ಏಪ್ರಿಲ್ 26 ಏಪ್ರಿಲ್ 26 ರಂದು ವಿಶ್ವ ಬೌದ್ಧಿಕ ಆಸ್ತಿ ಹಕ್ಕಿನ (ಐಪಿಆರ್) ದಿನವನ್ನು ಆಚರಿಸಲಾಗುತ್ತದೆ. 2000ದಲ್ಲಿ ಇದನ್ನು ವಿಶ್ವ ಬೌದ್ಧಿಕ ಆಸ್ತಿ ಸಂಘಟನೆ ಜಾರಿಗೆ ತಂದಿತು. ಒಂದೆಡೆ ಜಾಗತಿಕ ಆರ್ಥಿಕತೆ ಕುಸಿಯುತ್ತಿದೆ ಆದರೆ ಭಾರತದ ಆರ್ಥಿಕತೆ ಮಾತ್ರ ಭರವಸೆ ಮೂಡಿಸುವಂತಿದೆ. ಇಂಥ ಸಂದರ್ಭದಲ್ಲಿ ಬೌದ್ಧಿಕ ಆಸ್ತಿ ಹಕ್ಕು ವಿಷಯದಲ್ಲಿ ನಾವು ಎಲ್ಲಿದ್ದೇವೆ, ನಮ್ಮ ಸ್ಥಿತಿ-ಗತಿಗಳೇನು ಎಂಬುದರ ಕುರಿತು ಪರಾಮರ್ಶೆ ಮಾಡುವುದಕ್ಕಿದು ಸಕಾಲ ದಿನವಾಗಿದೆ.
Question 3 |
3. ಭಾರತದ ಅತಿ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ಯಾರು ದಾಖಲೆ ಮಾಡಿದ್ದಾರೆ ?
ಪಿಮಾ ಖಂದು | |
ಪವನ್ ಚಾಮ್ಲಿಂಗ್ ( ಸಿಕ್ಕಿಂ) | |
ಅಮರೀಂದರ್ ಸಿಂಗ್ | |
ಮಾಣಿಕ್ ಸರ್ಕಾರ್ |
ಪವನ್ ಚಾಮ್ಲಿಂಗ್ ಸಿಕ್ಕಿಂ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ದೇಶದಲ್ಲಿ ಸುದೀರ್ಗಾವಧಿಯಲ್ಲಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಸಿಪಿಐ(ಎಂ) ನಾಯಕ ನಾಯಕ ದಿವಂಗತ ಜ್ಯೋತಿ ಬಸು ಅವರನ್ನು ಹಿಂದಿಕ್ಕಿ ಚಾಮ್ಲಿಂಗ್ ಈ ದಾಖಲೆ ಮಾಡಿದ್ದಾರೆ. 1977ರಿಂದ 2000 ರವರೆಗೆ ಸತತ 23 ವರ್ಷ (ಜೂನ್ 21, 1977 ರಿಂದ ನವೆಂಬರ್ 6, 2000) ಜ್ಯೋತಿ ಬಸು ಪಶ್ಚಿಮ ಬಂಗಾ¬ಳದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು ಇದೀಗ ಚಾಮ್ಲಿಂಗ್ ಈ ದಾಖಲೆ ಮುರಿದಿದ್ದಾರೆ. ಸಿಕ್ಕಿಂ ಡೆಮಾಕ್ರಾಟಿಕ್ ಫ್ರಂಟ್ ಸಂಸ್ಥಾಪಕ ಅಧ್ಯಕ್ಷ ಚಾಮ್ಲಿಂಗ್ ಭಾನುವಾರದಂದು ಮುಖ್ಯಮಂತ್ರಿಯಾಗಿ 25 ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ಅವರು ಡಿಸೆಂಬರ್ 12, 1994 ರಂದು ಸಿಕ್ಕಿಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
Question 4 |
4. ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಇಂಟರ್ನೆಟ್ ಬ್ರ್ಯಾಂಡ್ ಆಗಿ ಯಾವ ಕಂಪನಿ ಆಯ್ಕೆಯಾಗಿದೆ?
ಯಾಹೂ | |
ಮ್ಯೈಕ್ರೋಸಾಫ್ಟ್ | |
ಗೂಗಲ್ | |
ಯುನಿಸಿಸ್ |
ಗೂಗಲ್ ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಇಂಟರ್ನೆಟ್ ಬ್ರ್ಯಾಂಡ್ ಆಗಿ ಗೂಗಲ್ ಆಯ್ಕೆಯಾಗಿದೆ. ಇದು ಇಂಟರ್ನೆಟ್ ಸಂಬಂಧಿತ ಸೇವೆಗಳನ್ನು ಮತ್ತು ಉತ್ಪನ್ನಗಳನ್ನು ಒದಗಿಸುವ ವಿಶೇಷ ಅಮೆರಿಕನ್ ಬಹುರಾಷ್ಟ್ರೀಯ ನಿಗಮವಾಗಿದೆ. ಈ ಸಂಸ್ಥೆಯು ಹುಡುಕಾಟ, ಕ್ಲೌಡ್ ಕಂಪ್ಯೂಟಿಂಗ್, ತಂತ್ರಾಂಶ ಮತ್ತು ಆನ್ಲೈನ್ ಜಾಹೀರಾತು ತಂತ್ರಜ್ಞಾನಗಳು ಒಳಗೊಂಡಿವೆ. ಇದರ ಲಾಭ ಬಹಳಷ್ಟು ಆಡ್ ವರ್ಡ್ಸ್ ನಿಂದ ಪಡೆಯಲು. ಅವರು ಡಿ ಸಮಯದಲ್ಲಿ ಗೂಗಲ್ ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಸ್ಥಾಪಿಸಿದರು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಒಟ್ಟಾಗಿ ಅವರು ತನ್ನ ಪಾಲನ್ನು 16 ರಷ್ಟು ಸ್ವಂತ. ಅವರು ಸೆಪ್ಟೆಂಬರ್ 4, 1998 ರಂದು ಒಂದು ಖಾಸಗಿ ಕಂಪನಿ ಗೂಗಲ್ ಸಂಘಟಿತ. ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೋರ್ಡ್ ವಿವಿಯ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಎಂಬ ಪಿ.ಹೆಚ್.ಡಿ. ವಿದ್ಯಾರ್ಥಿಗಳ ಸಂಶೋಧನೆಯ ಫಲವಾಗಿದೆ. ಇವರ ಈ ಪ್ರೊಜೆಕ್ಟ್ ೧೯೯೬ರ ಮಾರ್ಚ್ ನಲ್ಲಿ ಆರಂಭವಾಯಿತು. ಸಾಂಪ್ರದಾಯಿಕ ಹುಡುಕಾಟ ಎಂಜಿನ್ ಹುಡುಕಾಟ ಪದಗಳನ್ನು ಪುಟ ಕಾಣಿಸಿಕೊಂಡರು ಎಷ್ಟು ಬಾರಿ ಎಣಿಸುವ ಮೂಲಕ ಫಲಿತಾಂಶಗಳನ್ನು ಸ್ಥಾನ, ಎರಡು ಜಾಲತಾಣಗಳಲ್ಲಿ ಸಂಬಂಧಗಳನ್ನು ವಿಶ್ಲೇಷಿಸಿ ಒಂದು ಉತ್ತಮ ವ್ಯವಸ್ಥೆ ಬಗ್ಗೆ ಸಿದ್ಧಾಂತ. ಈ ಹೊಸ ತಂತ್ರಜ್ಞಾನವನ್ನು ಪೇಜ್ರ್ಯಾಂಕ್ ಎಂದು; ಇದು ಪುಟಗಳ ಸಂಖ್ಯೆಯಿಂದ ಒಂದು ವೆಬ್ಸೈಟ್ ಪ್ರಸ್ತುತತೆ ನಿರ್ಧರಿಸುತ್ತದೆ, ಮತ್ತು ಆ ಪುಟಗಳು ಪ್ರಾಮುಖ್ಯತೆಯನ್ನು, ಮೂಲ ಸೈಟ್ ಮರಳಿ ಸಂಪರ್ಕಿಸುತ್ತದೆ.
Question 5 |
5. ' ಪಾರಂಪರಿಕ ತಾಣಗಳನ್ನು ದತ್ತು ಪಡೆಯುವ ' ಯೋಜನೆಯಡಿಯಲ್ಲಿ, "ಕೆಂಪು ಕೋಟೆ" ಯನ್ನು ಯಾವ ಕಂಪನಿ ದತ್ತು ಪಡೆದಿದೆ?
ಸಹಾರಾ | |
ರಿಲಾಯನ್ಸ್ | |
ದಾಲ್ಮಿಯಾ ಭಾರತ್ ಲಿಮಿಟೆಡ್
| |
ಆದಿತ್ಯಾ ಬಿರ್ಲಾ |
ದಾಲ್ಮಿಯಾ ಭಾರತ್ ಲಿಮಿಟೆಡ್ ಪಾರಂಪರಿಕ ತಾಣವೊಂದನ್ನು ದತ್ತು ಪಡೆಯಿರಿ ಯೋಜನೆಯಡಿ ದಿಲ್ಲಿಯ ಕೆಂಪು ಕೋಟೆಯನ್ನು ವರ್ಷಕ್ಕೆ 5 ಕೋಟಿ ರೂ. ಲೀಸಿನ ಮೇಲೆ ದತ್ತು ಪಡೆಯುವ ಸಂಬಂಧ ತಿಳಿವಳಿಕೆ ಒಪ್ಪಂದವೊಂದಕ್ಕೆ ದಾಲ್ಮಿಯಾ ಭಾರತ್ ಲಿಮಿಟೆಡ್ ಕಂಪೆನಿ ಸಹಿಹಾಕಿರುವುದು ಇದೀಗ ವಿವಾದಕ್ಕೆ ಕಾರಣವಾಗಿದ್ದು ಈ ಡೀಲ್ ಅನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಈ ಕ್ರಮವನ್ನು ಟ್ವಿಟರ್ನಲ್ಲಿ ಲೇವಡಿ ಮಾಡಿರುವ ಕಾಂಗ್ರೆಸ್ ಪಕ್ಷ, ಸರಕಾರವು ಸದ್ಯವೇ ದತ್ತಿಗೆ ಕೊಡಲಿರುವ ಈ ಕೆಳಗಿನವುಗಳಲ್ಲಿ ಯಾವುದೆಂಬುದನ್ನು ಗುರುತಿಸಿ ಎಂದು ಜನರನ್ನು ಪ್ರಶ್ನಿಸಿದೆ : 1. ಸಂಸತ್ತು, 2. ಲೋಕ ಕಲ್ಯಾಣ ಮಾರ್ಗ, 3. ಸರ್ವೋಚ್ಚ ನ್ಯಾಯಾಲಯ. 4. ಮೇಲಿನ ಎಲ್ಲವೂ.
Question 6 |
6. ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ಹೊಸ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
ವಿ ಎಸ್ ಕೊಕ್ಜೆ | |
ಸುಭಾಷ್ ಕಪೂರ್ | |
ಡಾ. ಮಹೇಶ್ ಮೆಹತಾ | |
ಅಶೋಕ್ರಾವ್ ಚೌಗೂಲ್ |
ವಿ ಎಸ್ ಕೊಕ್ಜೆ ವಿಶ್ವ ಹಿಂದೂ ಪರಿಷತ್ನ ಅಂತಾರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆಂದು 52 ವರ್ಷಗಳಲ್ಲೇ ಮೊದಲ ಬಾರಿಗೆ ನಡೆದ ರಹಸ್ಯ ಮತದಾನದ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ನ್ಯಾ.ವಿ.ಎಸ್.ಕೊಕ್ಜೆ ವಿಎಚ್ಪಿ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದಾದ ಒಂದೇ ಗಂಟೆಯಲ್ಲಿ ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲರಾದ ಕೊಕ್ಜೆ ಅವರು ತಮ್ಮ ಹೊಸ ತಂಡವನ್ನು ಘೋಷಿ ಸಿದ್ದು, ನಿರ್ಗಮಿತ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ರನ್ನು ಈ ತಂಡದಿಂದ ಹೊರ ಗಿಟ್ಟಿದ್ದಾರೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ತೊಗಾಡಿಯಾ, ವಿಎಚ್ಪಿಗೆ ರಾಜೀನಾಮೆ ಕೊಟ್ಟಿದ್ದು, 16ರಿಂದ ಅನಿರ್ದಿಷ್ಟಾ ವಧಿ ಉಪವಾಸ ನಡೆಸುವುದಾಗಿ ಘೋಷಿಸಿದ್ದಾರೆ. 92 ಮತಗಳ ಪೈಕಿ ಕೊಕ್ಜೆ ಅವರಿಗೆ 131 ಮತಗಳು ಸಿಕ್ಕಿದ್ದವು. ಇಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್, "ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದೇ ನಮ್ಮ ಗುರಿ. ಮಂದಿರ ನಿರ್ಮಿಸಿಯೇ ತೀರುತ್ತೇವೆ. ಅಯೋಧ್ಯೆಯಲ್ಲಿ ಬಾಬರಿ ಎಂಬ ಹೆಸರಿನ ಮಸೀದಿಯೇ ಇರುವುದಿಲ್ಲ' ಎಂದಿದ್ದಾರೆ.
Question 7 |
7. ಕೃಷ್ಣ ವನ್ಯಜೀವಿ ಧಾಮ ಎಲ್ಲಿದೆ?
ತಮಿಳುನಾಡು | |
ಆಂಧ್ರ ಪ್ರದೇಶ | |
ಕೇರಳ | |
ಕರ್ನಾಟಕ |
ಆಂಧ್ರ ಪ್ರದೇಶ ಕೃಷ್ಣ ವನ್ಯಜೀವಿ ಧಾಮವು ಆಂಧ್ರಪ್ರದೇಶದಲ್ಲಿದೆ. ಇದು ಪ್ರಪಂಚದ ಅಪರೂಪದ ಪರಿಸರ-ಪ್ರದೇಶಗಳಲ್ಲಿ ಒಂದಾಗಿದೆ. ಏಕೆಂದರೆ ಇದು ಪ್ರಾಚೀನ ಶಿಲಾಯುಗದ ಅರಣ್ಯದ ವಿಶಾಲ ಪ್ರದೇಶಗಳನ್ನು ಹೊಂದಿದೆ.
Question 8 |
8. ಇತ್ತೀಚೆಗೆ ನಿಧನರಾದ ಟೋನಿ ಡೇನಿಯಲ್, ಯಾವ ಕ್ರೀಡೆಗೆ ಪ್ರಸಿದ್ದಿ ಹೊಂದಿದ್ದಾರೆ?
ಟೆನಿಸ್ | |
ಅಥ್ಲೆಟಿಕ್ಸ್ | |
ಕ್ರಿಕೆಟ್ | |
ಹಾಕಿ |
ಅಥ್ಲೆಟಿಕ್ಸ್ ಭಾರತದ ಮಾಜಿ ಅಥ್ಲೀಟ್, ಟೋನಿ ಡೇನಿಯಲ್ (66), ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ)ನ ತಾಂತ್ರಿಕ ಸಮಿತಿ ಅಧ್ಯಕ್ಷ ಮತ್ತು ಕೇರಳ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ನ ಕಾರ್ಯಕಾರಿ ಉಪಾಧ್ಯಕ್ಷ (ಕೆಎಸ್ಎಎ)ರಾದ ಟೋನಿ ಡೇನಿಯಲ್ (66ವರ್ಷ) ಅವರು ಏಪ್ರಿಲ್ 25, 2018 ರಂದು ಕೊಚ್ಚಿಯಲ್ಲಿ ನಿಧನ ಹೊಂದಿದ್ದು ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ) ಶೋಕ ವ್ಯಕ್ತಪಡಿಸಿದ್ದಾರೆ.
Question 9 |
9. ಜಲಪೂಟ್ ಅಣೆಕಟ್ಟು ಗೋದಾವರಿ ನದಿಯ ಯಾವ ಉಪನದಿಗೆ ಕಟ್ಟಲಾಗಿದೆ?
ಬಂಗಾಂಗಾ ನದಿ | |
ಮಚ್ಕುಂಡ್ ನದಿ | |
ನಸಾರ್ಡಿ ನದಿ | |
ಕಿನ್ನೇನಾಸನಿ ನದಿ |
ಮಚ್ಕುಂಡ್ ನದಿ ಜಲಪೂಟ್ ಅಣೆಕಟ್ಟು ಗೋದಾವರಿ ನದಿಯ ಉಪನದಿಯಾದ ಮಚ್ಕುಂಡ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಜಲವಿದ್ಯುತ್ ಅಣೆಕಟ್ಟು ಮತ್ತು ಒಡಿಶಾ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವಿನ ಒಂದು ಗಡಿಭಾಗವಾಗಿದೆ. ಈ ಅಣೆಕಟ್ಟು ವಿಶಾಖಪಟ್ಟಣ ಜಿಲ್ಲೆಯ ಓಂದ್ರಾ ಗಡ್ಡ ಸಮೀಪದಲ್ಲಿದೆ. ಇದನ್ನು ದುಡುಮಾ ಫಾಲ್ಸ್ ಎಂದು ಕರೆಯುತ್ತಾರೆ.
Question 10 |
10. ದೂಧ್ಸಾಗರ್ ಜಲಪಾತವು ಯಾವ ರಾಜ್ಯದಲ್ಲಿದೆ?
ಮಹಾರಾಷ್ಟ್ರ | |
ಕರ್ನಾಟಕ | |
ಹರಿಯಾಣ | |
ಗೋವಾ |
ಗೋವಾ ದೂಧ್ಸಾಗರ್ ಜಲಪಾತವು, ಗೋವಾ ರಾಜಧಾನಿ ಪಣಜಿಯಿಂದ 60 ಕಿಮೀ ದೂರದಲ್ಲಿದೆ. ದೂಧ್ಸಾಗರ ರೈಲ್ವೇ ನಿಲ್ದಾಣದಿಂದ 12 ಕಿಮೀ ದೂರದಲ್ಲಿದೆ. ಕರ್ನಾಟಕದ ಕ್ಯಾಸಲ್ರಾಕ್ ಹಾಗೂ ಗೋವಾದ ಮಡಂಗಾವ್ ದಾರಿಯಾಗಿ ದೂಧ್ಸಾಗರ್ ಜಲಪಾತವನ್ನು ನೋಡಬಹುದು. ನಿಸರ್ಗದ ಸವಿಯನ್ನು ಸವಿಯಬೇಕಾದರೆ ದೂಧ್ಸಾಗರ್ ಜಲಪಾತಕ್ಕೊಮ್ಮೆ ಭೇಟಿ ನೀಡಿ.ಬೆಟ್ಟಗುಡ್ಡಗಳ ನಡುವೆ ಸೀಳಿಕೊಂಡು ಹಚ್ಚಹಸಿರಿನ ವನಸಿರಿಯ ನಡುವೆ ಹಾಲು ಬಿಳುಪಿನ ನೀರಧಾರೆ ನಿಜಕ್ಕೂ ಒಂದು ಕ್ಷಣ ಮಂತ್ರಮುಗ್ಧರನ್ನಾಗಿಸುತ್ತದೆ. ದೂಧ್ ಸಾಗರ ಜಲಪಾತವು ಧಾರವಾಡ ಹಾಗೂ ಗೋವಾ ಮಾರ್ಗದಲ್ಲಿ ಸಿಗುತ್ತದೆ. ಹಾಲಿನ ನೊರೆಯಂತೆ ಉಕ್ಕುತ್ತಿದೆ. ಎರಡು ಕವಲುಗಳಾಗು ಧುಮ್ಮಿಕ್ಕಿದರೂ ಮತ್ತೆ ಒಟ್ಟಿಗೆ ಸೇರಿ, ಬಾಗುತ್ತಾ, ಬಳುಕುತ್ತಾ ಹರಿಯುತ್ತದೆ. ಜೊತೆಗೆ ನಿರಂತರವಾಗಿ ಬಿಡುವಿಲ್ಲದೆ ಜಿನುಗುವ ಮಳೆ ಸಿಂಚನದಲ್ಲಿ ಪ್ರವಾಸಿಗರು ನೆನೆಯುತ್ತಾ ಭೋರ್ಗರೆಯುವ ಜಲಧಾರೆಯನ್ನು ಸವಿಯಬಹುದು. ದೂಧ್ಸಾಗರ ಜಲಪಾತವನ್ನು ರೈಲಿನ ಪ್ರಯಾಣದಲ್ಲಿ ನೋಡಬೇಕು. ರೈಲು ಮೂಲಕ ಪ್ರಯಾಣ ಕೈಗೊಂಡರೆ ದೂಧ್ ಸಾಗರದ ಸೌಂದರ್ಯದ ಜತೆಗೆ ದಟ್ಟ ಕಾನನದ ಹಸಿರನ್ನು ಸವಿಯಬಹುದು. ಬೇಸಿಗೆ ಕಾಲದಲ್ಲಿ ನೀರಿನ ಹರಿವು ಕಡಿಮೆಯಾಗುವುದರಿಂದ ಮಳೆಗಾಲದಲ್ಲಿ ಭೇಟಿ ನೀಡುವುದೊಳ್ಳೆಯದು.
Super it is help for everyone
Comment
Tx
Joine me see