ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಗೆ ಪ್ರೋ ಕಬಡ್ಡಿ ಚಾಂಪಿಯನ್ ಪಟ್ಟ

ಕಳೆದ ವರ್ಷ ಚಾಂಪಿಯನ್ ಆಗಿದ್ದ ಪಾಟ್ನಾ ಪೈರೇಟ್ಸ್ ತಂಡ 4ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ನಲ್ಲಿ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 37-29 ರ ಅಂತರದಲ್ಲಿ ಸೋಲಿಸುವ ಮೂಲಕ ಪಾಟ್ನಾ ಪೈರೇಟ್ಸ್ ಗೆಲುವಿನ ನಗೆ ಬೀರಿತು.

  • ಹೈದ್ರಾಬಾದ್ ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಎರಡು ಬಾರಿ ಚಾಂಪಿಯನ್ ಆಗುವ ಮೂಲಕ ಲೀಗ್ ನಲ್ಲಿ ಅತಿ ಹೆಚ್ಚು ಬಾರಿ ಪ್ರಶಸ್ತಿಗೆದ್ದ ತಂಡ ಎನಿಸಿತು.
  • ಪುಣೇರಿ ಪಲ್ಟನ್ ಹಾಗೂ ತೆಲುಗು ಟೈಟನ್ಸ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.

ಹಿಂದೆ ಪ್ರಶಸ್ತಿ ಪಡೆದಿದ್ದ ತಂಡಗಳು:

  • 2014: ಪಿಂಕ್ ಪ್ಯಾಂಥರ್ಸ್
  • 2015: ಯು ಮುಂಬಾ
  • 2016 (ಜನವರಿ): ಪಾಟ್ನಾ ಪೈರೇಟ್ಸ್

ಮಹಿಳಾ ಕಬಡ್ಡಿ ಚಾಂಪಿಯನ್ ಷಿಪ್ ನಲ್ಲಿ ಸ್ಟೋರ್ಮ್ ಕ್ವೀನ್ಸ್ ಗೆ ಜಯ:

  • ಇದೇ ಮೊದಲ ಬಾರಿ ನಡೆದ ಮಹಿಳಾ ಕಬಡ್ಡಿ ಚಾಂಪಿಯನ್ ಷಿಪ್ ನಲ್ಲಿ ಕರ್ನಾಟಕದ ತೇಜಸ್ವಿನಿ ಬಾಯಿ ನೇತೃತ್ವದ ಸ್ಟೋರ್ಮ್ ಕ್ವೀನ್ ತಂಡ ಮಮತ ಪೂಜರಿ ನೇತೃತ್ವದ ಫೈರ್ ಬರ್ಡ್ಸ್ ತಂಡವನ್ನು 24-23 ಅಂತರದಲ್ಲಿ ಸೋಲಿಸುವ ಮೂಲಕ ಚಾಂಪಿಯನ್ ಆಯಿತು.

 

ಪ್ರವಾಸೋದ್ಯಮ ಅಭಿವೃದ್ದಿ ಮಧ್ಯಪ್ರದೇಶಕ್ಕೆ ಪ್ರಥಮ, ಕರ್ನಾಟಕಕ್ಕೆ ಮೂರನೇ ಸ್ಥಾನ

2014-15ನೇ ಸಾಲಿನ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಪ್ರವಾಸೋದ್ಯಮದ ಸಮಗ್ರ ಅಭಿವೃದ್ದಿ ಕ್ರಮಗಳನ್ನು ಕೈಗೊಂಡ ರಾಜ್ಯಗಳ ಪೈಕಿ ಮಧ್ಯಪ್ರದೇಶ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಜನ್ ರವರು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಿದರು.

  • ಗುಜರಾತ್ ರಾಜ್ಯ ಎರಡನೇ ಸ್ಥಾನ ಹಾಗೂ ಕರ್ನಾಟಕ ರಾಜ್ಯ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ.
  • ತೆಲಂಗಣದ ವಾರಂಗಲ್ ಉತ್ತಮ ಪಾರಂಪರಿಕ ನಗರ ಪ್ರಶಸ್ತಿಗೆ ಭಾಜನವಾಗಿದೆ.
  • ಮಧ್ಯಪ್ರದೇಶದ ಅಮರ್‌ಕಂಟಕ್‌ ಸ್ಮಾರಕಗಳು ಅತ್ಯುತ್ತಮ ನಿರ್ವಹಣೆಯ ಮತ್ತು ಅಶಕ್ತರ ಸ್ನೇಹಿ ಸ್ಮಾರಕ ಪ್ರಶಸ್ತಿಗೆ ಭಾಜನವಾಗಿವೆ.
  • ಅತ್ಯುತ್ತಮ ಜವಾಬ್ದಾರಿಯುತ ಪ್ರವಾಸೋದ್ಯಮ ಯೋಜನೆ ವಿಭಾಗದಡಿ ಯೆಸ್ ಬ್ಯಾಂಕ್ ಲಿಮಿಟೆಡ್ ನ “ಎಡ್ಜ್ ಆಫ್ ಇಂಡಿಯಾ” ಮತ್ತು ಕೇರಳದ ವಯನಾಡ್ ನ “ರೆಸ್ಪಾನ್ಸಿಬಲ್ ಟೂರಿಸಂ ಇನ್ ವಯನಾಡ್” ಆಯ್ಕೆಯಾಗಿವೆ.
  • ರಾಜಸ್ತಾನದ ಸವಾಯ್‌ ಮಧೋಪುರ ರೈಲು ನಿಲ್ದಾಣವು ಅತ್ಯುತ್ತಮ ಪ್ರವಾಸೋದ್ಯಮ ಸ್ನೇಹಿ ರೈಲು ನಿಲ್ದಾಣ ಎಂಬ ಪ್ರಶಸ್ತಿ ಪಡೆದುಕೊಂಡಿದೆ. ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ ಗೌರವ ದೊರೆತಿದೆ.
  • ಗೋವಾದ ತಾಜ್‌ ಎಕ್ಸೋಟಿಕಾ, ಪಂಚತಾರಾ ಹೋಟೆಲ್ ವಿಭಾಗಗಳಲ್ಲಿ ಅತ್ಯುತ್ತಮ ಹೋಟೆಲ್‌ ಪ್ರಶಸ್ತಿ ಪಡೆದುಕೊಂಡಿದೆ.
  • ಉದಯಪುರದ ಫತೇಹ್‌ ಪ್ರಕಾಶ್‌ ಪ್ಯಾಲೇಸ್‌, ಕೊಟ್ಟಾಯಂ ಜಿಲ್ಲೆಯ ಕುಮಾರಗಂನ ಕೊಕೊನಟ್‌ ಲಗೂನ್‌ ಮತ್ತು ಬಿಕಾನೆರ್‌ನ ಗಜ್ನೆರ್‌ ಪ್ಯಾಲೇಸ್‌ ಅತ್ಯುತ್ತಮ ಪಾರಂಪರಿಕ ಹೋಟೆಲ್‌ಗಳೆನಿಸಿಕೊಂಡಿವೆ.

ಐಸಿಸಿ ಹಾಲ್ ಆಫ್ ಫೇಮ್ ಗೆ ಮುತ್ತಯ್ಯ ಮುರಳೀಧರನ್, ಜಾರ್ಜ್ ಲೊಮನ್, ಅರ್ಥರ್ ಮೊರಿಸ್ ಹಾಗೂ ಕರೆನ್ ರೊಲ್ಟನ್

ಖ್ಯಾತ ಕ್ರಿಕೆಟ್ ಆಟಗಾರರಾದ ಮುತ್ತಯ್ಯ ಮುರಳೀಧರನ್, ಜಾರ್ಜ್ ಲೊಮನ್, ಅರ್ಥರ್ ಮೊರಿಸ್ ಹಾಗೂ ಕರೆನ್ ರೊಲ್ಟನ್ ರವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಳಿಸಲು ಆಯ್ಕೆಮಾಡಲಾಗಿದೆ.

ಮುತ್ತಯ್ಯ ಮುರಳೀಧರನ್:

  • ಐಸಿಸಿ ಹಾಲ್ ಆಫ್ ಫೇಮ್ ಸೇರ್ಪಡೆಗೊಳ್ಳಲಿರುವ ಶ್ರೀಲಂಕಾದ ಮೊದಲ ಆಟಗಾರ ಮುತ್ತಯ್ಯ ಮುರಳೀಧರನ್.
  • 2011 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಇವರು, ಶ್ರೀಲಂಕಾ ಕಂಡ ಅದ್ಬುತ ಸ್ಪಿನ್ ಮಾಂತ್ರಿಕ.
  • ತಮ್ಮ ವೃತ್ತಿಜೀವನದಲ್ಲಿ ಮುರಳೀಧರನ್ ರವರು ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ (ODI) 534 ವಿಕೆಟ್, ಟೆಸ್ಟ್ ಪಂದ್ಯದಲ್ಲಿ 800 ವಿಕೆಟ್ ಮತ್ತು T20 ಪಂದ್ಯದಲ್ಲಿ 13 ವಿಕೆಟ್ ಪಡೆದಿದ್ದಾರೆ. ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ದಾಖಲೆಯನ್ನು ಮುರಳೀಧರನ್ ಹೊಂದಿದ್ದಾರೆ.
  • ಐಸಿಸಿ ಟೆಸ್ಟ್ ಬೌಲರ್ ಆಟಗಾರರ ಪಟ್ಟಿಯಲ್ಲಿ ಸತತವಾಗಿ 1711 ದಿನಗಳ ಕಾಲ ನಂ.1 ಪಟ್ಟವನ್ನು ಅಲಂಕರಿಸಿ ದಾಖಲೆ ನಿರ್ಮಿಸಿದ್ದಾರೆ.

ಅರ್ಥರ್ ಮೊರಿಸ್:

  • ಅರ್ಥರ್ ಮೊರಿಸ್ ರವರು ಆಸ್ಟ್ರೇಲಿಯಾದ ಶ್ರೇಷ್ಠ ಎಡಗೈ ಬ್ಯಾಟ್ಸಮನ್. ಮೊರಿಸ್ ರವರು 93 ನೇ ವಯಸ್ಸಿನಲ್ಲಿ ಆಗಸ್ಟ್ 2015 ರಂದು ನಿಧನರಾದರು.
  • 1946 ರಿಂದ 1955ರ ಅವಧಿಯ ವೃತ್ತಿಜೀವನದಲ್ಲಿ 46 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 162 ಪಂದ್ಯಗಳನ್ನು ಆಡುವ ಮೂಲಕ 12,614 ರನ್ ಗಳನ್ನು ಗಳಿಸಿದ್ದಾರೆ.
  • 2001 ರಲ್ಲಿ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್ ಗೆ ಇವರು ಸೇರ್ಪಡೆಗೊಂಡಿದ್ದರು. ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಳ್ಳುತ್ತಿರುವ ಆಸ್ಟ್ರೇಲಿಯಾದ 22 ನೇ ಕ್ರಿಕೆಟ್ ಆಟಗಾರ.

ಜಾರ್ಜ್ ಲೊಮನ್:

  • ಇಂಗ್ಲೆಂಡ್ ಕ್ರಿಕೆಟಿಗ ಹಾಗೂ ಸಾರ್ವಕಾಲಿಕ ಮಹಾನ್ ಬೌಲರ್. ಲೊಮನ್ ರವರು ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಳ್ಳುತ್ತಿರುವ ಇಂಗ್ಲೆಂಡ್ ನ 27ನೇ ಕ್ರಿಕೆಟ್ ಆಟಗಾರ.
  • ತಮ್ಮ ಕ್ರಿಕೆಟ್ ಜೀವನದಲ್ಲಿ 16 ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ 112 ವಿಕೆಟ್ ಗಳಿಸಿರುವ ಇವರು, ಡಿಸೆಂಬರ್ 1, 1901 ರಲ್ಲಿ 36ನೇ ವಯಸ್ಸಿನಲ್ಲಿ ಮರಣ ಹೊಂದಿದರು.

ಕರೆನ್ ರೊಲ್ಟನ್:

  • ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ್ತಿ. ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗುತ್ತಿರುವ ಆರನೇ ಮಹಿಳಾ ಆಟಗಾರ್ತಿ ಹಾಗೂ ಆಸ್ಟ್ರೇಲಿಯಾದ ಮೂರನೇಯವರು.
  • 1997 ರಿಂದ 2009 ರ 14 ವರ್ಷದ ಅವಧಿಯಲ್ಲಿ 14 ಟೆಸ್ಟ್ ಹಾಗೂ 141 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 1,002 ರನ್ ಹಾಗೂ 4,814 ರನ್ ಗಳಿಸಿದ್ದಾರೆ.
  • ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಪೈಕಿ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆಯನ್ನು ರೊಲ್ಟನ್ ಹೊಂದಿದ್ದಾರೆ.

ಐಸಿಸಿ ಹಾಲ್ ಆಫ್ ಫೇಮ್ ಬಗ್ಗೆ:

  • ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ 2009 ರಲ್ಲಿ ಹಾಲ್ ಆಫ್ ಫೇಮ್ ಅನ್ನು ಸ್ಥಾಪಿಸಿದೆ. ಕ್ರಿಕೆಟ್ ದಂತಕಥೆಗಳ ಸಾಧನೆಗೆ ಗೌರವ ತೋರುವ ಸಲುವಾಗಿ ಹಾಲ್ ಆಫ್ ಫೇಮ್ ಸ್ಥಾಪಿಸಲಾಗಿದೆ. ಇಂಗ್ಲೆಂಡ್ ನ 27 ಆಟಗಾರರು ಹಾಲ್ ಆಫ್ ಫೇಮ್ ನಲ್ಲಿ ಸ್ಥಾನಪಡೆದಿದ್ದು, ಹಾಲ್ ಆಫ್ ಫೇಮ್ ನಲ್ಲಿ ಅತಿ ಹೆಚ್ಚು ಆಟಗಾರರನ್ನು ಹೊಂದಿರುವ ಖ್ಯಾತಿ ಹೊಂದಿದೆ.

3 Thoughts to “ಪ್ರಚಲಿತ ವಿದ್ಯಮಾನಗಳು-ಜುಲೈ 31, 2016”

  1. Hanamantrsya

    Full useful for competitivers Sir ,hatsup

  2. Anonymous

    Really very usefull

Leave a Comment

This site uses Akismet to reduce spam. Learn how your comment data is processed.