ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 1, 2016
Question 1 |
1.ಬುಚೆಯೋನ್ ಇಂಟರ್ನ್ಯಾಷನಲ್ ಫೆಂಟಾಸ್ಟಿಕ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಏಷ್ಯಾ ವಿಭಾಗದ ಅತ್ಯುತ್ತಮ ಪ್ರಶಸ್ತಿ ಪಡೆದ ಭಾರತದ ಸಿನಿಮಾ ಯಾವುದು?
ಸೈಕೊ ರಾಮನ್ | |
ಕಬಾಲಿ | |
ಬಾಹುಬಲಿ | |
ಆಟೋ ಹೆಡ್ |
Question 1 Explanation:
ಸೈಕೊ ರಾಮನ್:
ಅನುರಾಗ್ ಕಶ್ಯಪ್ ಅವರ ಸರಣಿ ಕೊಲೆಗಳ ಕಥಾ ಹಂದರದ ‘ಸೈಕೋ ರಾಮನ್’ (ರಾಮನ್ ರಾಘವ್ 2.0) ಚಿತ್ರವು ಕೊರಿಯಾದಲ್ಲಿ ನಡೆದ ಬೈಫಾನ್ (ಬುಚೆಯೋನ್ ಇಂಟರ್ನ್ಯಾಷನಲ್ ಫೆಂಟಾಸ್ಟಿಕ್ ಫಿಲ್ಮ್ ಫೆಸ್ಟಿವಲ್)ಉತ್ಸವದಲ್ಲಿ ಏಷ್ಯಾ ವಿಭಾಗದ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿದೆ. ದೀಪಕ್ ಸಂಪತ್ ಅವರು ರೋಹಿತ್ ಮಿತ್ತಲ್ ಅವರ ‘ಆಟೋ ಹೆಡ್’ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರು.
Question 2 |
2.ದೇಶದಲ್ಲೆ ಮೊದಲ ಬಾರಿಗೆ ‘ಸುಖೀ ಇಲಾಖೆ’ (Happiness Department) ಯನ್ನು ಪ್ರಥಮವಾಗಿ ಆರಂಭಿಸಿದ ರಾಜ್ಯ ಯಾವುದು?
ದೆಹಲಿ | |
ಮಧ್ಯ ಪ್ರದೇಶ | |
ಜಮ್ಮು ಮತ್ತು ಕಾಶ್ಮೀರ | |
ಸಿಕ್ಕಿಂ |
Question 2 Explanation:
ಮಧ್ಯ ಪ್ರದೇಶ:
ಮಧ್ಯ ಪ್ರದೇಶ ಸರ್ಕಾರವು ‘ಸುಖೀ ಇಲಾಖೆ’ (Happiness Department) ಎಂಬ ಹೊಸ ಖಾತೆ/ಇಲಾಖೆಯನ್ನು ಇದೇ ಮೊದಲ ಬಾರಿಗೆ ಭಾರತದಲ್ಲಿ ಆರಂಭಿಸಿದ್ದು, ಈ ಇಲಾಖೆಯು ತನ್ನ ರಾಜ್ಯದ ಸಾರ್ವಜನಿಕರು ಆನಂದವಾಗಿರಲು ಬೇಕಾದಂತಹ ವಾತಾವರಣವನ್ನು ಪೂರಕವಾದ ಅಗತ್ಯಗಳನ್ನು ಒದಗಿಸಲಿದೆ. ಅಲ್ಲದೆ ಜನರ ಆನಂದವನ್ನು ಅಳೆಯಲು ಮಾನದಂಡವನ್ನು ಸಹ ಪಟ್ಟಿ ಮಾಡಲಿದೆ. ಮಧ್ಯ ಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾನ್ ಈ ಇಲಾಖೆಯ ಮುಖ್ಯಸ್ಥರಾಗಿದ್ದಾರೆ
Question 3 |
3.ಇತ್ತೀಚೆಗೆ ಮುಕ್ತಾಯಗೊಂಡ ಮೈತ್ರಿ ಮಿಲಿಟರಿ ಸಮರಭ್ಯಾಸ (Maitree-2016)-2106 ಭಾರತ ಮತ್ತು ಯಾವ ದೇಶದ ನಡುವೆ ನಡೆಯಿತು?
ಶ್ರೀಲಂಕಾ | |
ಥಾಯ್ಲೆಂಡ್ | |
ಚೀನಾ | |
ಜಪಾನ್ |
Question 3 Explanation:
ಥಾಯ್ಲೆಂಡ್:
ಭಾರತ-ಥಾಯ್ಲೆಂಡ್ ನಡುವಿನ ಮೈತ್ರಿ ಸಮರಭ್ಯಾಸ ಥಾಯ್ಲೆಂಡ್ ನ ಕ್ರಬಿಯಲ್ಲಿ ಮುಕ್ತಾಯಗೊಂಡಿತ್ತು. ರಾಯಲ್ ಥಾಯ್ಲೆಂಡ್ ಆರ್ಮಿಯಡಿಯಲ್ಲಿ ಜುಲೈ 15 ರಂದು ಆರಂಭಗೊಂಡಿತ್ತು. ಎರಡು ವಾರಗಳ ಕಾಲ ನಡೆದ ಸಮರಭ್ಯಾಸದಲ್ಲಿ ಭಾರತೀಯ ಸೇನೆಯ 90 ಯೋದರು ಪಾಲ್ಗೊಂಡಿದ್ದರು. ಉಭಯ ದೇಶಗಳ ನಡುವೆ ಪರಸ್ಪರ ಸಹಕಾರ, ಭಯೋತ್ಪಾದನೆ ಹತ್ತಿಕ್ಕುವಿಕೆ ಮತ್ತು ಎರಡು ದೇಶಗಳ ನಡುವೆ ಯುದ್ದತಂತ್ರ ವಿನಿಮಯ ಮಾಡಿಕೊಳ್ಳುವುದು ಸಮರಭ್ಯಾಸದ ಮುಖ್ಯ ಗುರಿ.
Question 4 |
4.2016 ಅಂತರರಾಷ್ಟ್ರೀಯ ತಂಬಾಕು ನಿಯಂತ್ರಣ ಸಮ್ಮೇಳನ ಯಾವ ದೇಶದಲ್ಲಿ ನಡೆಯಲಿದೆ?
ಬಾಂಗ್ಲದೇಶ | |
ಚೀನಾ | |
ಭಾರತ | |
ಶ್ರೀಲಂಕಾ |
Question 4 Explanation:
ಭಾರತ:
ಅಂತರರಾಷ್ಟ್ರೀಯ ತಂಬಾಕು ನಿಯಂತ್ರಣ ಸಮ್ಮೇಳನವು ಉತ್ತರಪ್ರದೇಶದ ನೊಯ್ಡಾದಲ್ಲಿ ನವೆಂಬರ್ ನಲ್ಲಿ ನಡೆಯಲಿದೆ. ತಂಬಾಕು ಉತ್ಪನ್ನಗಳ ಅಕ್ರಮ ವ್ಯಾಪಾರ ತಡೆಯುವುದು ಈ ಸಮ್ಮೇಳನದ ಉದ್ದೇಶವಾಗಿದೆ. 180 ದೇಶಗಳ ಸುಮಾರು 1000-1800 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
Question 5 |
5.ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಸಂಜೀವಿನ ಸಸ್ಯದ ಶೋಧನೆಗಾಗಿ ಯಾವ ರಾಜ್ಯ ಸಮಿತಿಯನ್ನು ರಚಿಸಿದೆ?
ಕರ್ನಾಟಕ | |
ಉತ್ತರಖಂಡ | |
ಉತ್ತರ ಪ್ರದೇಶ | |
ಪಶ್ಚಿಮ ಬಂಗಾಳ |
Question 5 Explanation:
ಉತ್ತರಖಂಡ:
ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಸಂಜೀವಿನ ಸಸ್ಯದ ಶೋಧನೆಗಾಗಿ ಉತ್ತರಖಂಡ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಸಂಜೀವಿನಿ ಸಸ್ಯವು ಸತ್ತವರಲ್ಲಿ ಜೀವ ತುಂಬುವ ಶಕ್ತಿಯನ್ನು ಹೊಂದಿರುವುದಾಗಿ ರಾಮಾಯಣದಲ್ಲಿ ತಿಳಿಸಲಾಗಿದೆ. ಅನೇಕ ಔಷಧೀಯ ಗುಣಗಳನ್ನು ಹೊಂದಿದೆ ಎನ್ನಲಾದ ಈ ಸಸಿಗೆ ಭಾರಿ ಬೇಡಿಕೆಯಿದೆ ಆದರೆ ಇದುವರೆಗೂ ಪತ್ತೆ ಹಚ್ಚಲಾಗಿಲ್ಲ.
Question 6 |
6.2016 ಫಾಮುಲಾ ಒನ್ ಜರ್ಮನ್ ಗ್ರ್ಯಾನ್ ಪ್ರೀಕ್ಸ್ ಚಾಂಪಿಯಷಿಪ್ ಗೆದ್ದವರು ಯಾರು?
ಲೇವಿಸ್ ಹ್ಯಾಮಿಲ್ಟನ್ | |
ನಿಕೋ ರೊಸ್ಬರ್ಗ್ | |
ಡೇನಿಯಲ್ ರಿಕಿಯಾಡೋ | |
ಮ್ಯಾಕ್ಸ್ ವೆರ್ಸ್ಟಾಪೆನ್ |
Question 6 Explanation:
ಲೇವಿಸ್ ಹ್ಯಾಮಿಲ್ಟನ್:
ಮರ್ಸಿಡೀಸ್ ತಂಡದ ಚಾಲಕ ಲೇವಿಸ್ ಹ್ಯಾಮಿಲ್ಟನ್ ರವರು 2016 ಫಾಮುಲಾ ಒನ್ ಜರ್ಮನ್ ಗ್ರ್ಯಾನ್ ಪ್ರೀಕ್ಸ್ ಚಾಂಪಿಯಷಿಪ್ನಲ್ಲಿ ವಿಜೇತರಾದರು. ಸಹ ಚಾಲಕ ಜರ್ಮನಿಯ ನಿಕೋ ರೋಸ್ಬರ್ಗ್ ರವರು ಎರಡನೇ ಸ್ಥಾನವನ್ನು ಪಡೆದುಕೊಂಡರು.
Question 7 |
7.ಈ ಕೆಳಗಿನ ಯಾವ ದೇಶ 2016 ರಲ್ಲಿ ನಡೆಯುವ ವಿಶ್ವಕಪ್ ಕಬಡ್ಡಿ ಟೂರ್ನಿಯ ಆತಿಥ್ಯ ವಹಿಸಲಿದೆ?
ಪಾಕಿಸ್ತಾನ | |
ಭಾರತ | |
ಪೊಲೆಂಡ್ | |
ಕೆನಡಾ |
Question 7 Explanation:
ಭಾರತ:
2016 ವಿಶ್ವಕಪ್ ಕಬಡ್ಡಿ ಟೂರ್ನಿಯು ಅಕ್ಟೋಬರ್ ನಲ್ಲಿ ನಡೆಯಲಿದ್ದು, ಈ ಬಾರಿ ಭಾರತ ಟೂರ್ನಿಯ ಆತಿಥ್ಯವಹಿಸಲಿದೆ. ಟೂರ್ನಿಯಲ್ಲಿ ಅತಿಥೇಯ ಭಾರತ, ಅಮೆರಿಕ, ಕೆನಡಾ, ಇಂಗ್ಲೆಂಡ್, ಆಸ್ಟ್ರೇ ಲಿಯಾ, ಇರಾನ್, ಪೋಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ, ಕೊರಿಯಾ, ಜಪಾನ್ ಮತ್ತು ಕೆನ್ಯಾ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಈ ವಿಶ್ವಕಪ್ ನ ಪ್ರಸಾರ ಹಕ್ಕನ್ನು ಸ್ಟಾರ್ ಸ್ಪೋರ್ಟ್ ಪಡೆದುಕೊಂಡಿದೆ.
Question 8 |
8.ಇತ್ತೀಚೆಗೆ ಅಂತರರಾಷ್ಟ್ರೀಯ ಪುಟ್ಬಾಲ್ ಗೆ ನಿವೃತ್ತಿ ಘೋಷಿಸಿದ “ಬಾಸ್ಟೀಯನ್ ಶ್ವಾನ್ಸ್ಟೀಗರ್” ಯಾವ ದೇಶದವರು?
ಜಪಾನ್ | |
ಅರ್ಜೆಂಟೀನಾ | |
ಜರ್ಮನಿ | |
ಫ್ರಾನ್ಸ್ |
Question 8 Explanation:
ಜರ್ಮನಿ:
ಬಾಸ್ಟೀಯನ್ ಶ್ವಾನ್ಸ್ಟೀಗರ್ ರವರು ಜರ್ಮನಿಯ ಪ್ರಸಿದ್ದ ಪುಟ್ಬಾಲ್ ಆಟಗಾರ. ಮಿಡ್ ಫೀಲ್ಡ್ ಆಟಗಾರರಾಗಿದ್ದ, ಇವರು ಅನೇಕ ಬಾರಿ ತಂಡದ ಗೆಲುವಿಗೆ ಕಾರಣರಾಗಿದ್ದರು. 31 ವರ್ಷದ ಶ್ವಾನ್'ಸ್ಟೀಗರ್ ಅವರು 120 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು.
Question 9 |
9.ದೆಹಲಿ ಮತ್ತು ಅಗರ್ತಲಾ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಯಾವ ರೈಲಿಗೆ ಇತ್ತೀಚೆಗೆ ಚಾಲನೆ ನೀಡಲಾಯಿತು?
ತ್ರಿಪುರ ಸುಂದರಿ ಎಕ್ಸಪ್ರೆಸ್ | |
ಈಶಾನ್ಯ ರಾಣಿ ಎಕ್ಸಪ್ರೆಸ್ | |
ಬ್ರಹ್ಮಪುತ್ರ ಎಕ್ಸಪ್ರೆಸ್ | |
ನ್ಯಾಷನಲ್ ಎಕ್ಸಪ್ರೆಸ್ |
Question 9 Explanation:
ತ್ರಿಪುರ ಸುಂದರಿ ಎಕ್ಸಪ್ರೆಸ್:
ದೆಹಲಿ ಮತ್ತು ಅಗರ್ತಲಾ ನಡುವೆ ಸಂಚರಿಸಲಿರುವ ‘ತ್ರಿಪುರ ಸುಂದರಿ ಎಕ್ಸ್ಪ್ರೆಸ್’ ರೈಲಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ರವರು ಚಾಲನೆ ನೀಡಿದರು. ಪ್ರತೀ ಭಾನುವಾರ ಅಗರ್ತಲಾದಿಂದ ಹೊರಡಲಿರುವ ತ್ರಿಪುರ ಸುಂದರಿ ಎಕ್ಸ್ಪ್ರೆಸ್ ರೈಲು ಗುವಾಹತಿ, ನ್ಯೂ ಜಲಪಾಯಿ ಗುರಿ ಮೂಲಕ 47 ಗಂಟೆಗಳ ಸುದೀರ್ಘ ಪ್ರಯಾಣದ ನಂತರ ದೆಹಲಿ ತಲುಪಲಿದೆ.
Question 10 |
10.ಲಂಡನ್ ಷೇರು ಪೇಟೆಯಲ್ಲಿ ಇದೇ ಮೊದಲ ಬಾರಿಗೆ ಮಸಾಲ ಬಾಂಡ್ ಗಳನ್ನು ವಿತರಿಸಿದ ಭಾರತದ ಹಣಕಾಸಿನ ಸಂಸ್ಥೆ ಯಾವುದು?
HDFC | |
SBI | |
IDBI | |
ICICI |
Question 10 Explanation:
HDFC:
ಲಂಡನ್ ಷೇರು ಪೇಟೆಯಲ್ಲಿ ಭಾರತೀಯ ರೂಪಾಯಿಯ ‘ಮಸಾಲ ಬಾಂಡ್’ ಗಳನ್ನು The Housing Development Finance Corporation (HDFC) ಯು ವಿತರಿಸಿತು ಈ ಮೂಲಕ ಬ್ಯಾಂಕ್ ತನ್ನ ಹೂಡಿಕೆಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಸ್ತರಿಸಿಕೊಂಡಿದೆ ಅಲ್ಲದೆ ಭಾರತೀಯ ಕರೆನ್ಸಿಯಲ್ಲಿ ಬಾಂಡ್ ಗಳನ್ನು ವಿತರಿಸುವ ಮೂಲಕ ವಿದೇಶಿ ವಿನಿಮಯದಲ್ಲಿ ಉಂಟಾಗುವ ಅಸ್ಥಿರತೆಯನ್ನು ಸವಾಲಾಗಿ ಸ್ವೀಕರಿಸಲಿದೆ.
There are 10 questions to complete.
Hi these are superb current affairs quiz,
thank you
Thank you sir