ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 11, 2016
Question 1 |
1.ಮೊದಲ ಸಾರ್ಕ್ ಯುವ ಸಂಸದರ ಸಂವಾದ (SAARC Young Parliamentarian Conference)ವನ್ನು ಯಾವ ದೇಶದಲ್ಲಿ ಆಯೋಜಿಸಲಾಗುತ್ತಿದೆ?
ಭಾರತ | |
ಪಾಕಿಸ್ತಾನ | |
ನೇಪಾಳ | |
ಬಾಂಗ್ಲದೇಶ |
ಪ್ರಥಮ ಸಾರ್ಕ್ ರಾಷ್ಟ್ರಗಳ ಯುವ ಸಂಸದರ ಸಂವಾದ ಪಾಕಿಸ್ತಾನದ ಇಸ್ಲಮಾಬಾದ್ ನಲ್ಲಿ ಆಗಸ್ಟ್ 16 ರಿಂದ 18 ರವರೆಗೆ ನಡೆಯಲಿದೆ. ಭಾರತದಿಂದ ಮೂರು ಸದಸ್ಯರನ್ನೊಳಗೊಂಡ ಪ್ರತಿನಿಧಿ ತಂಡ ಈ ಸಂವಾದದಲ್ಲಿ ಭಾಗವಹಿಸಲಿದೆ.
Question 2 |
2.ದೇಶದಲ್ಲಿ ಇ-ಕಾಮರ್ಸ್ (ಆನ್ಲೈನ್ ವಹಿವಾಟ) ಸಂಬಂಧಿಸಿದ ಎಲ್ಲ ವಿವಾದಾತ್ಮಕ ವಿಷಯಗಳನ್ನು ಪರಾಮರ್ಶಿಸಲು ಕೇಂದ್ರ ಸರ್ಕಾರವು ಯಾರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ?
ಸುಬೋಧ್ ಯಾದವ್ | |
ಅಮಿತಾಬ್ ಕಾಂತ್ | |
ಆರ್. ಚಿದಂಬರಂ | |
ಸುಬ್ರಮಣ್ಯಂ ಸ್ವಾಮಿ |
ದೇಶದಲ್ಲಿ ಇ-ಕಾಮರ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ವಿವಾದಾತ್ಮಕ ವಿಷಯಗಳನ್ನು ಪರಾಮರ್ಶಿಸಲು ಕೇಂದ್ರ ಸರ್ಕಾರವು ಸಮಿತಿಯೊಂದನ್ನು ಇತ್ತೀಚೆಗೆ ರಚಿಸಿದೆ. ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಈ ಸಮಿತಿಯ ಈ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ವಾಣಿಜ್ಯ, ಕೈಗಾರಿಕೆ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಸಚಿವಾಲಯಗಳ ಅಧಿಕಾರಿಗಳು ಸಮಿತಿಯಲ್ಲಿ ಇರಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನಾಲ್ಕು ರಾಜ್ಯಗಳ ಪ್ರತಿನಿಧಿಗಳೂ ಸಮಿತಿಯ ಸದಸ್ಯರಾಗಿರಲಿದ್ದಾರೆ.
Question 3 |
3.ವಿಶ್ವ ಜೈವಿಕ ಇಂಧನ ದಿನ (World Bio-Fuel Day)ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಆಗಸ್ಟ್ 8 | |
ಆಗಸ್ಟ್ 9 | |
ಆಗಸ್ಟ್ 10 | |
ಆಗಸ್ಟ್ 11 |
ವಿಶ್ವ ಜೈವಿಕ ಇಂಧನ ದಿನವನ್ನು ಪ್ರತಿ ವರ್ಷ ಆಗಸ್ಟ್ 10 ರಂದು ಆಚರಿಸಲಾಗುತ್ತದೆ. ಆಗಸ್ಟ್ 10, 1893 ರಲ್ಲಿ ರುಡಾಲ್ಪ್ ಡಿಸೇಲ್ (ಡಿಸೇಲ್ ಎಂಜಿನ್ ಕಂಡುಹಿಡಿದವರು) ಬಟಾಣಿ ಎಣ್ಣೆ (Peanut oil) ಮೂಲಕ ಎಂಜಿನ್ ಚಾಲನೆ ಮಾಡಿದ್ದರು. ಆ ಮೂಲಕ ಭವಿಷ್ಯದಲ್ಲಿ ಜೈವಿಕ ಇಂಧನದ ಮಹತ್ವವನ್ನು ಅಂದೇ ಮನಗೊಂಡಿದ್ದರು. ರುಡಲ್ಪ್ ಡಿಸೇಲ್ ರವರ ಈ ಮಹತ್ವದ ಅನ್ವೇಷಣೆಯನ್ನು ಸ್ಮರಿಸುವ ಸಲುವಾಗಿ ಆಗಸ್ಟ್ 10 ರಂದು ವಿಶ್ವ ಜೈವಿಕ ಇಂಧನ ದಿನವನ್ನಾಗಿ ಆಚರಿಸಲಾಗುತ್ತಿದೆ. ಜೈವಿಕ ಇಂಧನ ಎಂದರೆ ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಮೂಲಗಳಿಂದ ಉತ್ಪಾದನೆಯಾಗುವ ಇಂಧನ. ವಿವಿಧ ಎಣ್ಣೆ ಬೀಜಗಳು, ಪ್ರಾಣಿ ಜನ್ಯ ಕೊಬ್ಬು, ಕಬ್ಬು, ಸಿಹಿಜೋಳ, ಗೋವಿನಜೋಳ ಮುಂತಾದ ಸಕ್ಕರೆ ಅಂಶವುಳ್ಳ ಉತ್ಪನ್ನಗಳಿಂದ ಹಾಗೂ ಭವಿಷ್ಯದಲ್ಲಿ ಸಮುದ್ರದ ಹಿನ್ನೀರಿನಲ್ಲಿ, ಅನುಪಯುಕ್ತ ಹಾಗೂ ಮಲೀನ ನೀರಿನ ಮೇಲೆ ಸುಲಭವಾಗಿ ಬೆಳೆಯಬಲ್ಲ ಆಲ್ಗಿ ಬೆಳೆಗಳಿಂದ ಜೈವಿಕ ಇಂಧನವನ್ನು ತಯಾರಿಸಿ, ವಾಹನ ಹಾಗೂ ಇತರೆಡೆ ಬಳಸಬಹುದಾಗಿದೆ.
Question 4 |
4.ಕ್ವಿಟ್ ಇಂಡಿಯಾ ಚಳುವಳಿಯ ಅಮೃತ ಮಹೋತ್ಸವದ ಅಂಗವಾಗಿ “ಕ್ವಿಟ್ ಇಂಡಿಯಾ 2 ಸ್ವರಾಜ್ಯ ನಿಂದ ಸುರಾಜ್ಯ” ಅಭಿಯಾನವನ್ನು ಯಾವ ರಾಜ್ಯ ಇತ್ತೀಚೆಗೆ ಆರಂಭಿಸಿತು?
ಮಹಾರಾಷ್ಟ್ರ | |
ಗುಜರಾತ್ | |
ರಾಜಸ್ಥಾನ | |
ಮಧ್ಯ ಪ್ರದೇಶ |
ಸಾಮಾಜಿಕ ಪಿಡುಗಗಳನ್ನು ತೊಲಗಿಸುವ ಸಲುವಾಗಿ “ಕ್ವಿಟ್ ಇಂಡಿಯಾ 2 ಸ್ವರಾಜ್ಯ ನಿಂದ ಸುರಾಜ್ಯ” ಚಳುವಳಿಗೆ ಮಹಾರಾಷ್ಟ್ರದಲ್ಲಿ ಚಾಲನೆ ನೀಡಲಾಯಿತು. ಮುಂಬೈನ ಐತಿಹಾಸಿಕ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕ್ವಿಟ್ ಇಂಡಿಯಾ ಚಳುವಳಿಯ ಅಮೃತ ಮಹೋತ್ಸವ ಆಚರಣೆ ವೇಳೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಮತ್ತು ಕೇಂದ್ರ ಸಚಿವ ವೆಂಕಯ್ಯನಾಡ್ಡು ಚಾಲನೆ ನೀಡಿದರು.
Question 5 |
5. ಈ ಕೆಳಗಿನ ಯಾವ ರಾಜ್ಯಗಳಿಗೆ ಕೂಡಂಕುಳಂ ಅಣು ವಿದ್ಯುತ್ ಘಟಕದಿಂದ ವಿದ್ಯುತ್ ಪೂರೈಕೆ ಮಾಡಲಾಗುವುದು?
I) ತಮಿಳು ನಾಡು
II) ಕರ್ನಾಟಕ
III) ಕೇರಳ
IV) ತೆಲಂಗಣ
ಈ ಕೆಳಗೆ ಕೊಟ್ಟಿರುವ ಕೋಡ್ ಗಳಿಂದ ಸರಿಯಾದ ಉತ್ತರವನ್ನು ಆರಿಸಿ:
I, II & IV ಮಾತ್ರ | |
I & II ಮಾತ್ರ | |
I, II & III ಮಾತ್ರ | |
I, II, III & IV |
ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ಕೂಡಂಕುಳಂ ಅಣು ವಿದ್ಯುತ್ ಸ್ಥಾವರದ 1ನೆ ಘಟಕವನ್ನು ಬುಧವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಜಂಟಿಯಾಗಿ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. 1ನೆ ಘಟಕವು 2013ರ ಜುಲೈಯಲ್ಲಿ ಕಾರ್ಯಾರಂಭಗೊಂಡಿದ್ದರೂ, ಈ ವರ್ಷಾರಂಭದಲ್ಲಷ್ಟೇ ಸತತ ವಿದ್ಯುದುತ್ಪಾದನೆ ಯನ್ನು ಆರಂಭಿಸಿದೆ. ಇದುವರೆಗೆ ಘಟಕ ದಿಂದ 1 ಸಾವಿರ ಕೋಟಿ ಯುನಿಟ್ ವಿದ್ಯುದುತ್ಪಾದನೆಯಾಗಿದೆ. ಮುಂದಿನ ದಿನಗಳಲ್ಲಿ ಕೂಡಂಕುಳಂನಲ್ಲಿ ತಲಾ 1 ಸಾವಿರ ಮೆ.ವಾ. ಸಾಮರ್ಥ್ಯದ ಇನ್ನೂ 5 ಘಟಕಗಳನ್ನು ಸ್ಥಾಪಿಸಲಾಗುವುದು. ಈ ವಿದ್ಯುತ್ ಉತ್ಪಾದನ ಕೇಂದ್ರದಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ತಮಿಳು ನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿಗೆ ಪೂರೈಸಲಾಗುವುದು.
Question 6 |
6.ಯಾವ ದೇಶದಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಸಭೆಯನ್ನು ಆಯೋಜಿಸಲಾಗಿತ್ತು?
ಥಾಯ್ಲೆಂಡ್ | |
ಇಂಡೋನೇಷಿಯಾ | |
ಚೀನಾ | |
ರಷ್ಯಾ |
ಅಂತರರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಸಭೆಯನ್ನು ಇದೇ ಮೊದಲ ಬಾರಿಗೆ ಆಗಸ್ಟ್ 10, 2016 ರಂದು ಬಾಲಿ, ಇಂಡೋನೇಷ್ಯಾದಲ್ಲಿ ಆಯೋಜಿಸಲಾಗಿತ್ತು. ಗಡಿಯಾಚೆಗಿನ ಭಯೋತ್ಪಾದನೆಯ ಆತಂಕ ನಿವಾರಿಸುವಲ್ಲಿ ಅಂತರರಾಷ್ಟ್ರೀಯ ಸಹಕಾರ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. "ಭಯೋತ್ಪಾದನೆಯ ವಿರುದ್ಧ ಗಡಿಯಾಚೆಗಿನ ಚಳುವಳಿ" ಇದು ಸಭೆಯ ಧ್ಯೇಯವಾಕ್ಯ. ಭಾರತದಿಂದ ರಾಜ್ಯ ಗೃಹ ವ್ಯವಹಾರಗಳ ಸಚಿವ ಕಿರೆನ್ ರಿಜೆಜು ಸಭೆಯಲ್ಲಿ ಭಾಗವಹಿಸಿದ್ದರು.
Question 7 |
ಕೆ.ಎಂ.ಹನುಮಂತರಾಯಪ್ಪ | |
ಬಿ.ಎಸ್. ಜವರೇಗೌಡ | |
ರವಿಂದ್ರ ಸಿಂಗ್ ರಾಥೋಡ್ | |
ಜಾನಕಿ ರಾಮಕೃಷ್ಣ |
ಕರ್ನಾಟಕದ ಕೆ.ಎಂ.ಹನುಮಂತರಾಯಪ್ಪ ಕೇಂದ್ರ ರೇಷ್ಮೆ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡರು. ಹನುಮಂತರಾಯಪ್ಪ ಅವರು ಮೂರು ವರ್ಷಗಳ ಕಾಲ ಅಧಿಕಾರದಲ್ಲಿರಲಿದ್ದಾರೆ. ಇವರು ರೇಷ್ಮೆ ಮಂಡಳಿಯ 25ನೇ ಅಧ್ಯಕ್ಷರಾಗಿದ್ದು, ಎನ್ ಎಸ್ ಬಿಸೇಗೌಡ ಅವಧಿ ಮುಕ್ತಾಯಗೊಂಡ ಕಾರಣ ಇವರನ್ನು ನೇಮಕಮಾಡಲಾಗಿದೆ.
Question 8 |
8.ಸಾಗರ ಮೇಲಿನ ಹಕ್ಕುಗಳ ರಕ್ಷಣೆ ಮಾಡುವ ಸಲುವಾಗಿ ಯಾವ ದೇಶ ಇತ್ತೀಚೆಗೆ “ಗಫೆನ್-3 (Gaofen-3)” ಉಪಗ್ರಹವನ್ನು ಹಾರಿಸಿದೆ?
ವಿಯೆಟ್ನಾಂ | |
ಚೀನಾ | |
ಉತ್ತರ ಕೊರಿಯಾ | |
ಜಪಾನ್ |
ದಕ್ಷಿಣ ಚೀನಾ ಮೇಲೆ ತನ್ನ ಹಕ್ಕುಗಳ ರಕ್ಷಣೆ ಮಾಡುವ ಸಲುವಾಗಿ ಚೀನಾ ಹೈ ರೆಸಲ್ಯೂಶನ್ ಸಿಂಥೆಟಿಕ್ ಅಪರ್ಚರ್ ರಡಾರ್ ಅಥವಾ ಗಫೆನ್-3 ಉಪಗ್ರಹವನ್ನು ಕಕ್ಷೆಗೆ ಸೇರಿಸಿದೆ. ಈ ಉಪಗ್ರಹವನ್ನು ಚೀನಾದ ಉತ್ತರ ಶಾಂಕ್ಸಿ ಪ್ರಾಂತ್ಯದಲ್ಲಿರುವ, ತೈಯೂನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ 4C ರಾಕೆಟ್ ಮೂಲಕ ಕಕ್ಷೆಗೆ ಸೇರಿಸಲಾಯಿತು.
Question 9 |
9.ಫೋರ್ಬ್ಸ್ ಬಿಡುಗಡೆಗೊಳಿಸಿದ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ 100 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡವರು ಯಾರು?
ಬಿಲ್ ಗೇಟ್ಸ್ | |
ಎರಿಕ್ ಸ್ಚಿಮಿಡ್ತ್ | |
ಟ್ರವಿಸ್ ಕಲಾನಿಕ್ | |
ಅಜೀಮ್ ಪ್ರೇಮ್ ಜಿ |
ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ 100 ಶ್ರೀಮಂತ ವ್ಯಕ್ತಿಗಳ ಫೋರ್ಬ್ಸ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಈ ವರ್ಷದ ಪಟ್ಟಿಯ ಮೊದಲ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಇದ್ದಾರೆ. ಅವರ ಸಂಪತ್ತಿನ ಮೊತ್ತ ಸುಮಾರು 78 ಶತಕೋಟಿ ಅಮೆರಿಕನ್ ಡಾಲರ್ ಆಗಿದೆ. ವಿಪ್ರೋ ಅಧ್ಯಕ್ಷ ಅಜೀಮ್ ಪ್ರೇಮ್ ಜಿ 13ನೇ ಸ್ಥಾನದಲ್ಲಿ ಮತ್ತು ಹೆಚ್ ಸಿಎಲ್ ಸಹ ಸ್ಥಾಪಕ ಶಿವ ನದರ್ 17ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಮ್ ಜಿ ಅವರ ಸಂಪತ್ತಿನ ಮೊತ್ತ 16 ಬಿಲಿಯನ್ ಅಮೆರಿಕನ್ ಡಾಲರ್ ಇದ್ದರೆ, ನದರ್ ಅವರದ್ದು 11.6 ಶತಕೋಟಿ ಡಾಲರ್ ನಷ್ಟು ಆಸ್ತಿ ಮೌಲ್ಯವಿದೆ.
Question 10 |
5780 ಮೆಗಾ ವ್ಯಾಟ್ | |
4578 ಮೆಗಾ ವ್ಯಾಟ್ | |
5120 ಮೆಗಾ ವ್ಯಾಟ್ | |
6570 ಮೆಗಾವ್ಯಾಟ್ |
ನಮಸ್ಕಾರ ಸರ್ ಧನ್ಯವಾದಗಳು ನಿಮ್ಮ ಈ ಮಾಹಿತಿಗೇ
Nice re