ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -9
Question 1 |
1.ಭದ್ರಾ ಮೇಲ್ದಂಡೆ ಮತ್ತು ಎತ್ತಿನ ಹೊಳೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೆ ತರಲು ಯಾವ ಹೆಸರಿನಲ್ಲಿ ಹೊಸ ಜಲ ನಿಗಮ ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ?
ಕೆ.ಸಿ.ರೆಡ್ಡಿ | |
ವಿಶ್ವೇಶ್ವರಯ್ಯ | |
ಸರ್ ಮಿರ್ಜಾ ಇಸ್ಮಾಯಿಲ್ | |
ಅಬ್ದುಲ್ ನಜೀರ್ ಸಾಬ್ |
ಭದ್ರಾ ಮೇಲ್ದಂಡೆ ಮತ್ತು ಎತ್ತಿನ ಹೊಳೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೆ ತರಲು ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಹೊಸ ಜಲ ನಿಗಮ ಸ್ಥಾಪಿಸಲು ತೀರ್ಮಾನಿಸಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿಗಮದ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಹೊಸ ನಿಗಮಕ್ಕೆ ವಿಶೇಷಾಧಿಕಾರಿಯಾಗಿ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್.ರುದ್ರಯ್ಯ ಅವರನ್ನು ಈಗಾಗಲೇ ನೇಮಿಸಲಾಗಿದ್ದು, ಅವರು ಪೂರ್ವಭಾವಿ ಕೆಲಸ ಆರಂಭಿಸಿದ್ದಾರೆ. ಹೊಸ ನಿಗಮದ ನಿರ್ದೇಶಕ ಮಂಡಳಿಗೆ 15 ಸದಸ್ಯರನ್ನು ನೇಮಿಸಲಾಗುವುದು. 12 ಸದಸ್ಯರನ್ನು ಒಳಗೊಂಡ ನಿರ್ದೇಶಕ ಮಂಡಳಿ ರಚಿಸಲು ಅವಕಾಶವಿದೆ
Question 2 |
2.ರಾಜ್ಯ ಮಕ್ಕಳ ರಕ್ಷಣಾ ನೀತಿ-2016ಕ್ಕೆ ಸಂಬಂಧಿಸಿದಂತೆ ಈ ಹೇಳಿಕೆಗಳನ್ನು ಗಮನಿಸಿ:
I) ಮಕ್ಕಳ ನೀತಿಯನ್ನು ಜಾರಿ ಮಾಡಿದ ದೇಶದ ಮೊದಲ ರಾಜ್ಯ ಕರ್ನಾಟಕ
II) ರಾಜ್ಯ ಮಕ್ಕಳ ರಕ್ಷಣಾ ನೀತಿ-2016ನ್ನು ಕಾರ್ಮಿಕ ಇಲಾಖೆ ರೂಪಿಸಿದೆ
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
ರಾಜ್ಯ ಮಕ್ಕಳ ರಕ್ಷಣಾ ನೀತಿ-2016ಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ರೂಪಿಸಿದೆ. ದೇಶದಲ್ಲಿ ಮಕ್ಕಳ ನೀತಿಯನ್ನು ಜಾರಿ ಮಾಡಿದ ಮೊದಲ ರಾಜ್ಯ ಕರ್ನಾಟಕ. ಶಾಲಾ ಮಕ್ಕಳಿಗೆ ಪೋಸ್ಕೊ (ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ) ಬಗ್ಗೆ ಜಾಗೃತಿ ಮೂಡಿಸಬೇಕು, ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚಿಸಬೇಕು ಎಂಬ ಅಂಶಗಳು ಸೇರಿದಂತೆ ಮಕ್ಕಳ ಆರೋಗ್ಯ ಹಾಗೂ ಹಾಗೂ ಶಾಲಾ ಬಸ್ಗಳ ಸುರಕ್ಷತೆ ಕುರಿತು ಶೈಕ್ಷಣಿಕ ಸಂಸ್ಥೆಗಳು ಅನುಸರಿಸಲೇಬೇಕಾದ ವಿವಿಧ ಮಾರ್ಗಸೂಚಿಗಳು ಈ ನೀತಿಯಲ್ಲಿವೆ.
Question 3 |
3.ಈ ಕೆಳಗಿನ ಯಾವ ಸಂಸ್ಥೆ ಬೆಂಗಳೂರಿನಲ್ಲಿ ಆಧಾರ್ ಆಧಾರಿತ ಇ-ಸಹಿ (ಇ-ಸಿಗ್ನೇಚರ್) ಸೇವೆಯನ್ನು ಆರಂಭಿಸಿತು?
ಲೀಗಲ್ ಡೆಸ್ಕ್ ಡಾಟ್ ಕಾಮ್ | |
ಫೋರಂ ಸಿಗ್ನೇಚರ್ | |
ಎಸಿಬಿ | |
ಇನ್ಪೋಸಿಸ್ |
ಎಂಬ ಸ್ಟಾರ್ಟ್ ಅಪ್ ಬೆಂಗಳೂರಿನಲ್ಲಿ ಆಧಾರ್ ಆಧಾರಿತ ಇ-ಸಿಗ್ನೇಚರ್ ಸೇವೆಯನ್ನು ಆರಂಭಿಸಿದೆ. ಇದರಿಂದ ಬಾಡಿಗೆ ಪತ್ರದಿಂದ ಕರಾರು ಪತ್ರದವರೆಗೆ ಎಲ್ಲಾ ದಾಖಲೆಗಳು ತ್ವರಿತವಾಗಿ ಸಿಗಲಿವೆ.
Question 4 |
4.ಈ ಕೆಳಗಿನ ಜಿಲ್ಲೆಗಳನ್ನು ಗಮನಿಸಿ
I) ಚಿಕ್ಕಮಗಳೂರು
II) ದಾವಣಗೆರೆ
III) ತುಮಕೂರು
IV) ಚಿತ್ರದುರ್ಗ
ಭದ್ರಾ ಮೇಲ್ದಂಡೆ ಯೋಜನೆಯು ಮೇಲಿನ ಯಾವ ಜಿಲ್ಲೆಗಳಿಗೆ ನೀರಾವರಿ ಸೌಕರ್ಯ ಕಲ್ಪಿಸುವ ಗುರಿ ಹೊಂದಿದೆ?
I & II ಮಾತ್ರ | |
I & III ಮಾತ್ರ | |
I, II & III ಮಾತ್ರ | |
I, II, III & IV |
ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಮಾಡುವುದರಿಂದ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ 2,25,515 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. ಈ ಜಿಲ್ಲೆಗಳಲ್ಲಿನ 367 ಸಣ್ಣ ನೀರಾವರಿ ಕೆರೆಗಳನ್ನು ತುಂಬಿಸಲು, ವಾಣಿ ವಿಲಾಸ ಸಾಗರಕ್ಕೆ ಸುಮಾರು 2 ಟಿಎಂಸಿ ಅಡಿ ನೀರು ಪೂರೈಸಲು ಸಾಧ್ಯವಿದೆ. ಈ ಯೋಜನೆಗೆ ರೂ 12,340 ಕೋಟಿ ಪರಿಷ್ಕೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
Question 5 |
5.ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2016-17ನೇ ಸಾಲಿನ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿಗೆ ಈ ಕೆಳಗಿನ ಯಾರನ್ನು ಆಯ್ಕೆ ಮಾಡಲಾಗಿದೆ?
ಪಂ. ರವೀಂದ್ರ ಯಾವಗಲ್ ಮತ್ತು ಸುಬ್ರಹ್ಮಣ್ಯ ಭಟ್ | |
ಡಾ.ಕೆ. ವರದರಂಗನ್ ಮತ್ತು ನಾಗರತ್ನಮ್ಮ | |
ಪರಮೇಶ್ವರ ಹೆಗಡೆ ಮತ್ತು ಸೂರ್ಯನಾರಾಯಣ ಚಾರ್ | |
ಶೀಲಾ ಶ್ರೀಧರ್ ಮತ್ತು ರಾಮುಲ ಗಾದಗಿ |
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2016-17ನೇ ಸಾಲಿನ 'ಕರ್ನಾಟಕ ಕಲಾಶ್ರೀ' ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಗೌರವ ಪ್ರಶಸ್ತಿಗೆ ಖ್ಯಾತ ತಬಲಾ ವಾದಕ (ಹಿಂದುಸ್ತಾನಿ) ಧಾರವಾಡದ ಪಂ. ರವೀಂದ್ರ ಯಾವಗಲ್ ಮತ್ತು ಗಮಕ ಕಲಾವಿದ ಕಾಸರಗೋಡಿನ ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ.
Question 6 |
6.ರಾಜ್ಯ ಸರ್ಕಾರ ಇತ್ತೀಚೆಗೆ ನಾಡಪ್ರಭು ಕೆಂಪೇಗೌಡ ಪ್ರಾಧಿಕಾರ ರಚನೆ ಸ್ಥಾಪಿಸಲು ನಿರ್ಧರಿಸಿದ್ದು, ಈ ಕೆಳಗಿನ ಯಾರು ಇದರ ಅಧ್ಯಕ್ಷರಾಗಲ್ಲಿದ್ದಾರೆ?
ರಾಜ್ಯದ ಮುಖ್ಯಮಂತ್ರಿ | |
ಗೃಹ ಸಚಿವರು | |
ರಾಜ್ಯಪಾಲರು | |
ಸರ್ಕಾರದ ಪ್ರಧಾನ ಕಾರ್ಯದರ್ಶಿ |
ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. ಮೊದಲ ಹಂತದಲ್ಲಿ ಪ್ರಾಧಿಕಾರ ಸ್ಥಾಪನೆ ಮಾಡಲು 5 ಕೋಟಿ ರೂ.ಗಳ ಅನುದಾನ ನೀಡಲಾಗುತ್ತದೆ. 15 ಸದಸ್ಯರನ್ನು ಒಳಗೊಂಡ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಪ್ರಾದೇಶಿಕ ಆಯುಕ್ತರು ನೋಡಲ್ ಅಧಿಕಾರಿಯಾಗಿರುತ್ತಾರೆ. ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ಗಳು, ಮತ್ತು ಸ್ಪೆಷಲ್ ಕಮೀಷನರ್ಗಳು ಪ್ರಾಧಿಕಾರಕ್ಕೆ ಸದಸ್ಯರಾಗಿರುತ್ತಾರೆ.
Question 7 |
ಭಾಗವತ | |
ಕಲೆ | |
ತುಳು ಸಿನಿಮಾ | |
ಪತ್ರಕೋದ್ಯಮ |
ತೆಂಕುತಿಟ್ಟಿನ ಪ್ರಥಮ ಮಹಿಳಾ ಭಾಗವತರೆಂದು ಪ್ರಸಿದ್ಧರಾದ ಪ್ರಸಿದ್ಧ ನರ್ಮದಾ ಶಿಬರೂರಾಯ (75) ಅವರು ನಿಧನರಾದರು. ತೆಂಕು ತಿಟ್ಟಿನಲ್ಲಿ ಲೀಲಾವತಿ ಬೈಪಡಿತ್ತಾಯ ಅವರು ಭಾಗವತರಾಗಿ ಮೇಳಗಳಲ್ಲಿ ತಿರುಗಾಡಿ ಹೆಸರಾದವರು. ನರ್ಮದಾ ಅವರು ಅದಕ್ಕಿಂತಲೂ ಮೊದಲೇ ಭಾಗವತಿಕೆ ಕಲಿತಿದ್ದರು. ಆದರೆ ಅವರು ವೃತ್ತಿಪರ ಮೇಳಗಳಿಗೆ ಹೋಗಿಲ್ಲ, ಹವ್ಯಾಸಿಯಾಗಿ ಯಕ್ಷಗಾನ ಭಾಗವತಿಕೆ ಮಾಡುತ್ತಿದ್ದರು. ಹಲವು ಶಿಷ್ಯರಿಗೂ ಯಕ್ಷಗಾನದ ಭಾಗವತಿಕೆ ಹೇಳಿಕೊಟ್ಟಿದ್ದರು.
Question 8 |
8.ಇತ್ತೀಚೆಗೆ ಸುದ್ದಿಯಲ್ಲಿದ್ದ “ಇಸ್ವೆಸ್ಟ್ ಕರ್ನಾಟಕ ಫೋರಂ”ಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ:
I) ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ.
II) ಬೃಹತ್ ಮತ್ತು ಮದ್ಯಮ ಕೈಗಾರಿಕೆ ಸಚಿವರು ಈ ಸಂಸ್ಥೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
III) ಸರ್ಕಾರದ ಪ್ರಧಾನ ಕಾರ್ಯದರ್ಶಿ ಈ ಸಂಸ್ಥೆಯ ಸಿಇಓ ಆಗಲಿದ್ದಾರೆ.
ಕೆಳಗೆ ಕೊಟ್ಟಿರುವ ಕೋಡ್ ಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ?
I & II ಮಾತ್ರ | |
II & III ಮಾತ್ರ | |
I & III ಮಾತ್ರ | |
I, II & III ಮಾತ್ರ |
ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ದೃಷ್ಟಿಯಿಂದ ಕೈಗಾರಿಕೋದ್ಯಮಿಗಳನ್ನು ಒಳಗೊಂಡ 'ಇನ್ವೆಸ್ಟ್ ಕರ್ನಾಟಕ ಫೋರಂ' ಎಂಬ ನೋಂದಾಯಿತ ಕಂಪೆನಿಯನ್ನು ಸ್ಥಾಪಿಸಲಾಗುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆತಿಳಿಸಿದ್ದಾರೆ. ಉದ್ದೇಶಿತ ಈ ಸಂಸ್ಥೆಯಲ್ಲಿ ಆರು ಮಂದಿ ಕೈಗಾರಿಕೋದ್ಯಮಿಗಳು ಒಳಗೊಂಡಂತೆ 9 ಮಂದಿ ನಿರ್ದೇಶಕರು ಇರಲಿದ್ದಾರೆ. ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಂಪೆನಿಯ ಕಾರ್ಯದರ್ಶಿಯಾಗಿದ್ದು, ಕೈಗಾರಿಕಾ ಸಚಿವರು ಅಧ್ಯಕ್ಷರಾಗಿರಲಿದ್ದಾರೆ.
Question 9 |
9.ಕನ್ನಡದ ಪ್ರಕಾಶ್ ನಂಜಪ್ಪ ಯಾವ ಕ್ರೀಡೆಯಲ್ಲಿ ಪ್ರಸಿದ್ದಿ ಹೊಂದಿದ್ದಾರೆ?
ಬಾಕ್ಸಿಂಗ್ | |
ಚೆಸ್ | |
ಶೂಟಿಂಗ್ | |
ರನ್ನಿಂಗ್ |
ಕರ್ನಾಟಕದ ಪ್ರಕಾಶ್ ನಂಜಪ್ಪ ಅವರು ಪ್ರಸಿದ್ದ ಶೂಟರ್. 50 ಮೀ ಪುರುಷರ ಶೂಟಿಂಗ್ ಚಾಂಪಿಯನ್ ಪಿಪ್ ನಲ್ಲಿ ಇವರು ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು.
Question 10 |
10.ಈ ಕೆಳಕಂಡ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳನ್ನು ಯಾವುವು?
I) ಯಗಚಿ ನದಿಯು ತುಂಗಾಭದ್ರ ನದಿಯ ಪ್ರಮುಖ ಉಪನದಿ
II) ಬೇಲೂರಿನ ಬಳಿ ಈ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ
ಈ ಕೆಳಗೆ ಕೊಟ್ಟಿರುವ ಕೋಡ್ ಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ:
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
ಯಗಚಿ ನದಿಯು ಹೇಮಾವತಿ ನದಿಯ ಮುಖ್ಯ ಉಪನದಿ. ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟಿ ಹಾಸನ ಜಿಲ್ಲೆಯ ಗೊರೂರಿನ ಬಳಿ ಹೇಮಾವತಿ ನದಿಯನ್ನು ಸೇರುತ್ತದೆ. ವಿಶ್ವವಿಖ್ಯಾತ ಬೇಲೂರು ಈ ನದಿಯ ದ೦ಡೆಯಲ್ಲಿದೆ. ಬೇಲೂರಿನ ಬಳಿ ಈ ನದಿಗೆ ಸುಮಾರು ೪ ಟಿ ಎ೦ ಸಿ ಸಾಮರ್ಥ್ಯದ ಅಣೆಕಟ್ಟೆ ನಿರ್ಮಿಸಲಾಗಿದೆ.
Comment
Thank u sir
Thanks allot
Thanks sir