ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 17, 2016

Question 1

1.ಉತ್ತರ ಪ್ರದೇಶ ಸರ್ಕಾರ ನೀಡುವ ರಾಣಿ ಲಕ್ಷಿ ಬಾಯಿ ಪ್ರಶಸ್ತಿಗೆ ಈ ಕೆಳಗಿನ ಯಾರನ್ನು ಆಯ್ಕೆಮಾಡಲಾಗಿದೆ?

A
ದೀಪಾ ಕರ್ಮಕರ್
B
ಸುಷ್ಮ ಸ್ವರಾಜ್
C
ಸಾಕ್ಷಿ ಮಲ್ಲಿಕ್
D
ಸೈನಾ ನೆಹ್ವಾಲ್
Question 1 Explanation: 
ಸಾಕ್ಷಿ ಮಲ್ಲಿಕ್:

ರಿಯೋ ಒಲಿಂಪಿಕ್ಸ್ನ ಮಹಿಳೆಯರ ಕುಸ್ತಿ 58 ಕೆ.ಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ತಂದು ಕೊಟ್ಟ ಸಾಕ್ಷಿ ಮಲ್ಲಿಕ್ ಅವರಿಗೆ ರಾಣಿ ಲಕ್ಷಿ ಬಾಯಿ ಪ್ರಶಸ್ತಿಗೆ ನೀಡುವುದಾಗಿ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಅಖಿಲೇಶ್ ಯಾದವ್ ಘೋಷಿಸಿದ್ದಾರೆ. ಪ್ರಶಸ್ತಿಯು ರಾಣಿ ಲಕ್ಷಿ ಬಾಯಿ ಕಂಚಿನ ಪ್ರತಿಮೆ, ರೂ 3.11 ಲಕ್ಷ ನಗದನ್ನು ಒಳಗೊಂಡಿದೆ.

Question 2

2.ಇತ್ತೀಚೆಗೆ ಮುಕ್ತಾಯಗೊಂಡ “ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (Indian Film Festival of Melbourne)”ನಲ್ಲಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?

A
ನವಾಜುದ್ದೀನ್ ಸಿದ್ದಿಕಿ, ಸೋನಮ್ ಕಪೂರ್
B
ರಣಬೀರ್ ಕಪೂರ್, ಪ್ರಿಯಾಂಕ ಚೋಪ್ರಾ
C
ನವಾಜುದ್ದೀನ್ ಸಿದ್ದಿಕಿ, ಪ್ರಿಯಾಂಕ ಚೋಪ್ರಾ
D
ಸಲ್ಮಾನ್ ಖಾನ್, ಕತ್ತಿನಾ ಕೈಫ್
Question 2 Explanation: 
ನವಾಜುದ್ದೀನ್ ಸಿದ್ದಿಕಿ, ಸೋನಮ್ ಕಪೂರ್:

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಾಮನ್ ರಾಘವ್ 2.0 ಚಿತ್ರದಲ್ಲಿನ ಅಭಿನಯಕ್ಕಾಗಿ ನವಾಜುದ್ದೀನ್ ಸಿದ್ದಿಕಿ ಅವರಿಗೆ ನೀಡಲಾಗಿದೆ. ನಿರ್ಜಾ ಚಿತ್ರದಲ್ಲಿನ ಅಭಿನಯಕ್ಕಾಗಿ ಸೋನಮ್ ಕಪೂರ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಗಿದೆ. ಮಹಿಳಾ ಸಬಲೀಕರಣ ಇದು ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ನ-2016ನ ಧ್ಯೇಯವಾಕ್ಯ.

Question 3

3.ರಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಸಾಕ್ಷಿ ಮಲ್ಲಿಕ್ ಅವರು ಯಾರನ್ನು ಮಣಿಸುವ ಮೂಲಕ ಮಹಿಳೆಯರ ಕುಸ್ತಿ 58 ಕೆ.ಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಪದಕ ಗೆದ್ದರು?

A
ರಟ್ಕೆವಿಚ್ ಯುಲಿಯ
B
ಹೆರ್ಹಲ್ ಒಸನ
C
ಐಸಿಲೂ ಟೈನೀಬೆಕೋವಾ
D
ಕರ್ಯೊಕ ಅರೆನಾ
Question 3 Explanation: 
ಐಸಿಲೂ ಟೈನೀಬೆಕೋವಾ:

ರಿಯೋ ಒಲಂಪಿಕ್ಸ್ನ ಮಹಿಳೆಯರ 58 ಕೆಜಿ ಫ್ರೀ ಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಸಾಕ್ಷಿ ಮಲಿಕ್ ಅವರು ಕಿರ್ಗಿಸ್ತಾನದ ಐಸಿಲೂ ಟೈನೀಬೆಕೋವಾ ಅವರನ್ನು 8-5 ಅಂತರದಿಂದ ಮಣಿಸಿ ಕಂಚಿನ ಪದಕ ಬಾಚಿಕೊಂಡರು. ಸಾಕ್ಷಿ ಮಲಿಕ್ ಒಲಿಂಪಿಕ್ಸ್ ಪದಕ ಜಯಿಸಿದ ಬಾರತದ ಮೊದಲ ಮಹಿಳಾ ಕುಸ್ತಿಪಟು ಹಾಗೂ ದೇಶದ ನಾಲ್ಕನೇ ಮಹಿಳಾ ಕ್ರೀಡಾಪಟು ಇದರೊಂದಿಗೆ ಒಲಿಂಪಿಕ್ಸ್ ನಲ್ಲಿ ಭಾರತ ಜಯಿಸಿದ ಪದಕದ ಸಂಖ್ಯೆ 25 ಕ್ಕೆ ಏರಿದೆ.

Question 4

4.ವಿಶ್ವದ ಅತಿದೊಡ್ಡ ವಿಮಾನ “ಏರ್ ಲ್ಯಾಂಡರ್-10” ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಯಾವ ದೇಶದಲ್ಲಿ ನಡೆಸಲಾಯಿತು?

A
ಚೀನಾ
B
ರಷ್ಯಾ
C
ಇಂಗ್ಲೆಂಡ್
D
ಅಮೆರಿಕಾ
Question 4 Explanation: 
ಇಂಗ್ಲೆಂಡ್:

ವಿಶ್ವದ ಅತಿದೊಡ್ಡ ವಿಮಾನ “ಏರ್ ಲ್ಯಾಂಡರ್-10 (Airlander-10)”ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಕೇಂದ್ರ ಇಂಗ್ಲೆಂಡ್‌ನ ಕಾರ್ಡಿಂಗ್ಟನ್ ವಾಯುನೆಲೆಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಸರಕು ಸಾಗಣೆ ಸೇರಿದಂತೆ ವಾಣಿಜ್ಯವಲಯದಲ್ಲೂ ಬಳಸಬಹುದಾದ ಈ ವಿಮಾನವನ್ನು ಯುನೈಟೆಡ್ ಕಿಂಗ್ಡಮ್ ನ ಹೈಬ್ರೀಡ್ ಏರ್ ವೆಹಿಕಲ್ಸ್ ಅಭಿವೃದ್ದಿಪಡಿಸಿದೆ. ಏರ್ ಲ್ಯಾಂಡರ್-10 ಭಾಗಶಃ ವಿಮಾನ ಮತ್ತು ಭಾಗಶಃ ವಾಯುನೌಕೆಯಾಗಿದ್ದು, ಹೀಲಿಯಂ ಅನಿಲ ತುಂಬಲಾಗಿದೆ. ಏರ್‌ಲ್ಯಾಂಡರ್ 10 ವಿಮಾನ 92 ಮೀಟರ್ ಉದ್ದ ಮತ್ತು 43.5 ಮೀ ಅಗಲವಿದೆ. ಏರ್‌ಲ್ಯಾಂಡರ್ 4880 ಮೀಟರ್ ಎತ್ತರದವರೆಗೂ ಹಾರಬಲ್ಲದು ಮತ್ತು 148 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ ಮತ್ತು 10 ಟನ್ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

Question 5

5.ಇತ್ತೀಚೆಗೆ “ಎಡ್ಗರ್ ಲುಂಗು (Edgar Lungu)” ಅವರು ಯಾವ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?

A
ಇಥೋಪಿಯಾ
B
ಜಾಂಬಿಯ
C
ಕೀನ್ಯಾ
D
ಜಿಂಬಾಂಬ್ವೆ
Question 5 Explanation: 
ಜಾಂಬಿಯ:

ಎಡ್ಗರ್ ಲುಂಗು ಅವರು ಜಾಂಬಿಯಾದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಲುಂಗು ಪ್ಯಾಟ್ರಿಯಾಟಿಕ್ ಫಂಟ್ ಪಕ್ಷದ ನಾಯಕರು. ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಲುಂಗು ಶೇ 50.5% ಮತಗಳನ್ನು ಪಡೆಯುವ ಮೂಲಕ ಚುನಾವಣೆಯಲ್ಲಿ ವಿಜೇತರಾದರು.

Question 6

6.“ದಿ ಪ್ಯೂಚರ್ ಆಫ್ ಇಂಟರ್ನೆಟ್ ಇನ್ ಇಂಡಿಯಾ (The Future of Internet in India)” ವರದಿಯನ್ನು ಯಾವ ಸಂಸ್ಥೆ ಬಿಡುಗಡೆಗೊಳಿಸಿದೆ?

A
Nasscom
B
Assocham
C
RBI
D
Nabard
Question 6 Explanation: 
Nasscom:

ದಿ ಪ್ಯೂಚರ್ ಇಂಟರ್ನೆಟ್ ಇನ್ ಇಂಡಿಯಾ ವರದಿಯನ್ನು ಇತ್ತೀಚೆಗೆ ನಾಸ್ಕಂ ಬಿಡುಗಡೆಗೊಳಿಸಿದೆ. ವರದಿ ಪ್ರಕಾರ ಗ್ರಾಮೀಣ ಭಾರತದಲ್ಲಿ ಇಂಟರ್ ನೆಟ್ ಬಳಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, 2020 ರ ವೇಳೆಗೆ ವೆಬ್ ಬಳಕೆದಾರರ ಸಂಖ್ಯೆ 730 ಮಿಲಿಯನ್ ದಾಟುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. 2015 ರ ಅಂತ್ಯದ ವೇಳೆಗೆ ಭಾರತದಲ್ಲಿ ಇಂಟರ್ ನೆಟ್ ಬಳಕೆದಾರರ ಸಂಖ್ಯೆ 350 ಮಿಲಿಯನ್ ನಷ್ಟಾಗಿದೆ. ಇಂಟರ್ ನೆಟ್ ಬಳಕೆದಾರರ ವಿಷಯದಲ್ಲಿ ಚೀನಾ ನಂತರದ ಸ್ಥಾನದಲ್ಲಿರುವ ಭಾರತ, ಅತಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ಮಾರುಕಟ್ಟೆಯಾಗಿದ್ದು ಹೊಸ ಬಳಕೆದಾರರ ಪೈಕಿ ಶೇ.75 ರಷ್ಟು ಮಂದಿ ಗ್ರಾಮೀಣ ಪ್ರದೇಶದವರಾಗಿದ್ದಾರೆ ಎಂದು ನಾಸ್ಕಾಮ್ ವರದಿ ತಿಳಿಸಿದೆ. ಹೆಚ್ಚುತ್ತಿರುವ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಇ-ಕಾಮರ್ಸ್, ಆನ್ ಲೈನ್ ಶಾಪಿಂಗ್ ಬೆಳವಣಿಗೆಗೂ ಕಾರಣವಾಗಲಿದ್ದು 2015 ರಲ್ಲಿ 17 ಬಿಲಿಯನ್ ಡಾಲರ್ ನಷ್ಟು ಮೌಲ್ಯವಿದ್ದ ಇ-ಕಾಮರ್ಸ್ ಮಾರುಕಟ್ಟೆ 2020 ವೇಳೆಗೆ 34 ಬಿಲಿಯನ್ ಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು 2020 ರ ವೇಳೆಗೆ ಶೇ.70 ರಷ್ಟು ಜನತೆ ಆನ್ ಲೈನ್ ಮೂಲಕ ಶಾಪಿಂಗ್ ಮಾಡಿದರೆ ಶೇ.50 ರಷ್ಟು ಜನತೆ ಆನ್ ಲೈನ್ ಮೂಲಕ ಪ್ರಯಾಣ ಟಿಕೆಟ್ ಗಳನ್ನು ಕಾಯ್ದಿರಿಸುತ್ತಾರೆ ಎಂದು ನಾಸ್ಕಾಮ್ ಹೇಳಿದೆ

Question 7

7.ಒಲಂಪಿಕ್ಸ್ ಪುಟ್ಬಾಲ್ ಇತಿಹಾಸದಲ್ಲಿ ಅತಿ ವೇಗದ ಗೋಲ್ ಗಳಿಸಿ ದಾಖಲೆ ನಿರ್ಮಿಸಿದ ಪುಟ್ಬಾಲ್ ಆಟಗಾರ_____?

A
ವುಕ್ ಬೆಕಿಕ್
B
ನವಾಫ್ ಅಲ್ ಅಬೆದ್
C
ನೇಮರ್
D
ಜನಿನ್ ಮೆಕಿ
Question 7 Explanation: 
ನೇಮರ್:

ಬ್ರೆಜಿಲ್ನ ಫುಟ್ಬಾಲ್ ಆಟಗಾರ ನೇಮರ್ ಹೊಂಡುರಾಸ್ ಜತೆ ನಡೆದ ರಿಯೋ ಒಲಿಂಪಿಕ್ಸ್ ಸೆಮಿಫೈನಲ್ ಪಂದ್ಯದಲ್ಲಿ ಆಟ ಪ್ರಾರಂಭವಾದ ಕೇವಲ 15 ಸೆಕೆಂಡುಗಳಲ್ಲಿ ಮೊದಲ ಗೋಲು ಬಾರಿಸಿ ಫುಟ್ಬಾಲ್ ಜಗತ್ತಿನ ವೇಗದ ಗೋಲು ಎಂಬ ವಿಶ್ವದಾಖಲೆ ಬರೆದರು. ಈ ಮೊದಲು ಕೆನಡಾದ ಜನಿನ್ ಬೆಕಿ ಆಸ್ಟ್ರೇಲಿಯ ವಿರುದ್ಧ 19 ಸೆಕೆಂಡುಗಳಲ್ಲಿ ಗಳಿಸಿದ್ದ ಗೋಲಿನ ದಾಖಲೆ ಅಳಿಸಿ ಹಾಕಿದ ನೇಮರ್ ಬ್ರೆಜಿಲ್ ತಂಡ ರಿಯೋ ಕಪ್ ಫೈನಲ್ಗೆ ಲಗ್ಗೆ ಇಡುವ ಮುನ್ನಡಿ ಬರೆದರು. ಈ ಪಂದ್ಯದಲ್ಲಿ ಬ್ರೆಜಿಲ್ ಹೊಂಡುರಾಸ್ ತಂಡವನ್ನು 6-0 ಗೋಲುಗಳಿಂದ ಬಗ್ಗುಬಡಿದು ಫೈನಲ್ ಪ್ರವೇಶಿಸಿತು.

Question 8

8.ವಿವಾದಿತ “ಮ್ಯಿಟ್ಸೊನೆ ಅಣೆಕಟ್ಟು (Myitsone) ಯಾವ ದೇಶಕ್ಕೆ ಸಂಬಂಧಿಸಿದೆ?

A
ಚೀನಾ
B
ಮಯನ್ಮಾರ್
C
ರಷ್ಯಾ
D
ಜಪಾನ್
Question 8 Explanation: 
ಮ್ಯಿಟ್ಸೊನೆ ಅಣೆಕಟ್ಟು:

ಮ್ಯಿಟ್ಸೊನೆ ಅಣೆಕಟ್ಟು ಮಯನ್ಮಾರ್ ನ ದೊಡ್ಡ ಅಣೆಕಟ್ಟುಗಳಲ್ಲಿ ಒಂದಾಗಿದ್ದು, 2017ಕ್ಕೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ. ಚೀನಾದ ಸಹಯೋಗದೊಂದಿಗೆ ಈ ಅಣೆಕಟ್ಟನ್ನು ನಿರ್ಮಿಸಲಾಗುತ್ತಿದ್ದು, ವಿದ್ಯುತ್ ಉತ್ಪಾದಿಸುವುದು ಅಣೆಕಟ್ಟಿನ ಪ್ರಮುಖ ಉದ್ದೇಶ. ಅಪಾರ ಭೂಮಿ ಮುಳುಗಡೆಯಿಂದ ಮತ್ತು ಪರಿಸರ ಮೇಲಾಗುವ ಪರಿಣಾಮದಿಂದ ಈ ಅಣೆಕಟ್ಟಿಗೆ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಚೀನಾ ಈ ಅಣೆಕಟ್ಟಿನಿಂದ ಹೆಚ್ಚು ವಿದ್ಯುತ್ ಪಡೆಯಲಿದೆ ಎಂಬ ಧೋರಣೆ ಈ ಯೋಜನೆಯನ್ನು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

Question 9

9.ಯಾವ ದೇಶ ವಿಶ್ವದ ಅತಿ ಎತ್ತರದ ಮತ್ತು ಉದ್ದದ ಗಾಜಿನ ಸೇತುವೆಯನ್ನು ನಿರ್ಮಿಸಿದೆ?

A
ಅಮೆರಿಕಾ
B
ಚೀನಾ
C
ಇರಾನ್
D
ಸ್ವೀಡನ್
Question 9 Explanation: 
ಚೀನಾ:

ಚೀನಾದ ಹುನಾನ್ ಪ್ರಾಂತದಲ್ಲಿರುವ ಜಾಂಗ್ಜಿಯಾಜಿ ನ್ಯಾಷನಲ್ ಫಾರೆಸ್ಟ್ ನಲ್ಲಿ ವಿಶ್ವದ ಅತಿ ಎತ್ತರದ ಹಾಗೂ ಉದ್ದದ ಗಾಜಿನ ಸೇತುವೆ ನಿರ್ಮಿಸಲಾಗಿದೆ. 430 ಮೀ. ಉದ್ದ ಹಾಗೂ 300 ಮೀ. ಎತ್ತರವಿರುವ ಈ ಸೇತುವೆ ಆರು ಮೀ. ಅಗಲವಿದೆ. ಮೂರು ಸ್ತರಗಳಲ್ಲಿ 99 ಪಾರದರ್ಶಕ ಗಾಜಿನ ಫಲಕಗಳನ್ನೊಳಗೊಂಡಿದೆ. ವಿನ್ಯಾಸ, ನಿರ್ಮಾಣ ಮತ್ತಿತರ ವಿಷಯಗಳಿಗೆ ಸಂಬಂಧಿಸಿ ಈ ಸೇತುವೆ 10 ವಿಶ್ವದಾಖಲೆಗಳನ್ನು ನಿರ್ವಿುಸಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿ ದಿನ ಗರಿಷ್ಠ 8,000 ಪ್ರವಾಸಿಗರಿಗೆ ಸೇತುವೆ ದಾಟಲು ಅವಕಾಶ ಕಲ್ಪಿಸಲಾಗುವುದು.

Question 10

10.ವಿಶ್ವ ಪತ್ರಿಕಾ ಸ್ವಾತಂತ್ರ್ಯ ಪ್ರಶಸ್ತಿ (World Press Freedom Award)ಯನ್ನು ಯಾವ ಸಂಸ್ಥೆ ನೀಡುತ್ತದೆ?

A
ವಿಶ್ವಸಂಸ್ಥೆ
B
ಯುನೆಸ್ಕೊ
C
ಯುರೋಪಿಯನ್ ಒಕ್ಕೂಟ
D
ವಿಶ್ವ ಪತ್ರಕರ್ತರ ಒಕ್ಕೂಟ
Question 10 Explanation: 
ಯುನೆಸ್ಕೊ:

ವಿಶ್ವ ಪತ್ರಿಕಾ ಸ್ವಾತಂತ್ರ ದಿನದ (ಮೇ 3) ಅಂಗವಾಗಿ ಯುನೆಸ್ಕೊ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಪ್ರಶಸ್ತಿಯನ್ನು 1997 ರಿಂದ ಪ್ರತಿ ವರ್ಷ ನೀಡುತ್ತಿದೆ. Guillermo Cano World Press Freedom Prize ಎಂತಲೂ ಕರೆಯಲಾಗುವ ಈ ಪ್ರಶಸ್ತಿಯನ್ನು ಪತ್ರಿಕಾ ಸ್ವಾತಂತ್ರ್ಯಕ್ಕೆ ಅಪಾರ ಸೇವೆ ನೀಡಿದ ವ್ಯಕ್ತಿ/ಸಂಸ್ಥೆಗಳಿಗೆ ನೀಡಲಾಗುತ್ತದೆ. ಇದುವರೆಗೂ ಭಾರತದ ಯಾವೊಬ್ಬ ಪತ್ರಕರ್ತರಿಗೂ ಪ್ರಶಸ್ತಿ ಲಭಿಸಿಲ್ಲ.

There are 10 questions to complete.

6 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 17, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

  2. Rudrayya Volimath.At:// Arasanakeri
    Dist&Tg.//Koppal.Post// Hasagal .

Leave a Comment

This site uses Akismet to reduce spam. Learn how your comment data is processed.