ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 19, 2016
Question 1 |
1.ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ನೂತನ ಗವರ್ನರ್ ಆಗಿ ಯಾರು ನೇಮಕಗೊಂಡಿದ್ದಾರೆ?
ಯು.ಆರ್.ಗಾಂಧಿ | |
ಅರುಂಧತಿ ಭಟ್ಟಚಾರ್ಯ | |
ಉರ್ಜಿತ್ ಪಟೇಲ್ | |
ಹೆಚ್.ಆರ್. ಖಾನ್ |
ಭಾರತೀಯ ರಿಸರ್ವ್ ಬ್ಯಾಂಕ್ ಡೆಪ್ಯೂಟಿ ಗವರ್ನರ್ ಉರ್ಜಿತ್ ಪಟೇಲ್ RBIನ ನೂತನ ಗರ್ವನರ್ ಆಗಿ ನೇಮಕಗೊಂಡಿದ್ದಾರೆ. ಸಂಪುಟ ಕಾರ್ಯದರ್ಶಿ ನೇತೃತ್ವದ ಹಣಕಾಸು ಕ್ಷೇತ್ರದ ನಿಯಂತ್ರಣ ನೇಮಕಾತಿಗಳ ಹುಡುಕು ಸಮಿತಿ (Financial Sector Regulatory Appointments Search Committee (FSRASC)) ಶಿಫಾರಸ್ಸಿನ ಮೇರೆಗೆ ಇವರ ನೇಮಕಾತಿಯನ್ನು ಅಂತಿಮಗೊಳಿಸಲಾಗಿದೆ. ಪಟೇಲ್ RBIನ ಡೆಪ್ಯೂಟಿ ಗರ್ವನರ್ ಆಗಿ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಗವರ್ನರ್ ಆಗಿರುವ ರಘುರಾಮ್ ರಾಜನ್ ಅವಧಿ ಸೆಪ್ಟೆಂಬರ್ 4 ರಂದು ಮುಕ್ತಾಯಗೊಳ್ಳುವುದರಿಂದ ಅವರ ಸ್ಥಾನವನ್ನು ಪಟೇಲ್ ತುಂಬಲಿದ್ದಾರೆ. ಲಂಡನ್ ವಿಶ್ವವಿದ್ಯಾಲಯ ಮತ್ತು ಆಕ್ಸಪರ್ಡ್ ವಿವಿಯಿಂದ ಪದವಿ ಪಡೆದಿರುವ ಪಟೇಲ್ ಅವರು ಪ್ರತಿಷ್ಠಿತ ಯಾಲೇ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಪಟೇಲ್ ಭಾರತೀಯ ರಿಸರ್ವ್ ಬ್ಯಾಂಕ್ ನ 24ನೇ ಗವರ್ನರ್.
Question 2 |
2.'ಟೆಕ್ಸಾಸ್ ವಿಮೆನ್ಸ್ ಹಾಲ್ ಆಫ್ ಫೇಮ್' ಸೇರ್ಪಡೆಗೊಳ್ಳಲಿರು ಭಾರತ ಮೂಲದ ಅಮೆರಿಕಾ ಮಹಿಳೆ ಯಾರು?
ನೀರಾ ಟಂಡನ್ | |
ರೇಣು ಖತೋರ್ | |
ಸುಷ್ಮಾ ಸಿಂಗ್ | |
ಚಂದ್ರಕಲಾ ಯಾದವ್ |
ಪ್ರತಿಷ್ಠಿತ ಹ್ಯೂಸ್ಟನ್ ವಿಶ್ವವಿದ್ಯಾಲಯದ (ಯುಎಚ್) ಚಾನ್ಸೆಲರ್ ಹಾಗೂ ಅಧ್ಯಕ್ಷರಾಗಿರುವ ಭಾರತ ಮೂಲದ ರೇಣು ಖತೋರ್ (61) ಅವರು 'ಟೆಕ್ಸಾಸ್ ವಿಮೆನ್ಸ್ ಹಾಲ್ ಆಫ್ ಫೇಮ್'ಗೆ ಸೇರ್ಪಡೆಗೊಳ್ಳಲಿದ್ದಾರೆ. ಅಮೆರಿಕದ ಎರಡನೇ ಅತಿ ದೊಡ್ಡ ರಾಜ್ಯಕ್ಕೆ ನೀಡಿದ ವಿಶಿಷ್ಟ ಕೊಡುಗೆಗಾಗಿ ಗುರುತಿಸಿ ಅವರನ್ನು 'ಟೆಕ್ಸಾಸ್ ವಿಮೆನ್ಸ್ ಹಾಲ್ ಆಫ್ ಫೇಮ್'ಗೆ ಆಯ್ಕೆಮಾಡಲಾಗಿದೆ. ಖತೋರ್ ಅಮೆರಿಕಾದ ಸಂಶೋಧನಾ ವಿವಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹ್ಯೂಸ್ಟನ್ ವಿಶ್ವವಿದ್ಯಾಲಯದ ಚಾನ್ಸೆಲರ್ ಆಗಿ ಆಯ್ಕೆಯಾದ ಮೊದಲ ಭಾರತ ಮೂಲದ ಸಂಜಾತೆ. ಉತ್ತರಪ್ರದೇಶದ ಫಾರೂಕಾಬಾದ್ ಜಿಲ್ಲೆಯಲ್ಲಿ ಜನಿಸಿದ ಖತೋರ್ ಅವರು 1973ರಲ್ಲಿ ಕಾನ್ಪುರ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದವರು. ಇವರು ಹ್ಯೂಸ್ಟನ್ ವಿಶ್ವವಿದ್ಯಾಲಯದ 13ನೇ ಅಧ್ಯಕ್ಷರು ಮತ್ತು 8ನೇ ಚಾನ್ಸೆಲರ್.
Question 3 |
3. “ಬ್ರಿಕ್ಸ್ ಮಹಿಳಾ ಸಂಸದರ ವೇದಿಕೆ (BRICS Women Parliamentarians Forum)” ಸಭೆಯನ್ನು ಯಾವ ನಗರದಲ್ಲಿ ಆಯೋಜಿಸಲಾಗಿತ್ತು?
ಜೈಪುರ | |
ಹೈದ್ರಾಬಾದ್ | |
ಪುಣೆ | |
ಬೆಂಗಳೂರು |
ಬ್ರಿಕ್ಸ್ ಮಹಿಳಾ ಸಂಸದರ ವೇದಿಕೆಯ ಎರಡು ದಿನಗಳ ಸಭೆಗೆ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಜನ್ ಅವರು ರಾಜಸ್ತಾನದ ಜೈಪುರದಲ್ಲಿ ಉದ್ಘಾಟಿಸಿದರು. ಆಗಸ್ಟ್20 ಮತ್ತು 21 ರಂದು ನಡೆಯಲಿರುವ ಈ ಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ 42 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬ್ರಿಕ್ಸ್ ರಾಷ್ಟ್ರಗಳೆಂದರೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ. ಈ ಸಭೆಗೆ ಬ್ರೆಜಿಲ್ ನ 5 ಮಹಿಳಾ ಸಂಸದರೆಯರು, ರಷ್ಯಾದ 3 ಸಂಸದರೆಯರು, ಭಾರತದಿಂದ 28, ಚೀನಾದಿಂದ 2 ಮತ್ತು ದಕ್ಷಿಣ ಆಫ್ರಿಕಾದಿಂದ 4 ಮಹಿಳಾ ಸಂಸದರೆಯರು ಭಾಗವಹಿಸಲಿದ್ದಾರೆ.
Question 4 |
4.ಇತ್ತೀಚೆಗೆ ಯಾವ ಸಮಿತಿ ಭಾರತದಲ್ಲಿ ಕಾರ್ಪೋರೇಟ್ ಬಾಂಡ್ ಮಾರುಕಟ್ಟೆ ಅಭಿವೃದ್ದಿ (Development of Corporate Bond Market in India) ಕುರಿತು ತನ್ನ ವರದಿಯನ್ನು ಸಲ್ಲಿಸಿತು?
ಯು.ಕೆ.ಸಿನ್ಹಾ ಸಮಿತಿ | |
ಹೆಚ್.ಆರ್.ಖಾನ್ ಸಮಿತಿ | |
ಉರ್ಜಿತ್ ಪಟೇಲ್ ಸಮಿತಿ | |
ಯು.ಆರ್.ಗಾಂಧಿ ಸಮಿತಿ |
ಭಾರತದಲ್ಲಿ ಕಾರ್ಪೋರೇಟ್ ಬಾಂಡ್ ಮಾರುಕಟ್ಟೆ ಅಭಿವೃದ್ದಿ ಪರಾಮರ್ಶೆ ಮಾಡುವ ಸಲುವಾಗಿ ರಚಿಸಲಾಗಿದ್ದ ಹೆಚ್.ಆರ್.ಖಾನ್ ಸಮಿತಿ ತನ್ನ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರಿಗೆ ಸಲ್ಲಿಸಿತ್ತು. ದೇಶದಲ್ಲಿ ಕಾರ್ಪೋರೇಟ್ ಬಾಂಡ್ ಮಾರುಕಟ್ಟೆ ಅಭಿವೃದ್ದಿ ಪಡಿಸುವ ಸಲುವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಈ ಸಮಿತಿಯನ್ನು ಸೆಪ್ಟೆಂಬರ್ 2015ರಲ್ಲಿ ರಚಿಸಲಾಗಿತ್ತು. ವಿದೇಶ ಬಂಡವಾಳ ಹೂಡಿಕೆ ನಿಯಮ ಸಡಿಲಗೊಳಿಸುವುದು ಸೇರಿದಂತೆ ಸೆನ್ಸೆಕ್ಸ್ ನಿಫ್ಟಿ ಮಾದರಿಯಲ್ಲಿ ಕಾರ್ಪೋರೇಟ್ ಬಾಂಡ್ ಸೂಚ್ಯಂಕವನ್ನು ಅಳವಡಿಸಿಕೊಳ್ಳುವಂತೆ ಸಮಿತಿ ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದೆ. ಅಲ್ಲದೇ FEMA ಕಾಯಿದೆಗು ತಿದ್ದುಪಡಿ ತರಲು ಸೂಚಿಸಿದೆ.
Question 5 |
5.ಬಿಡುಗಡೆ ಸಿದ್ದಗೊಂಡಿರುವ “ಒನ್ ಇಂಡಿಯನ್ ಗರ್ಲ್” ಪುಸ್ತಕದ ಲೇಖಕರು ಯಾರು?
ಚೇತನ್ ಭಗತ್ | |
ಸುಮನ್ ಅಗರವಾಲ್ | |
ವಿಕ್ರಂ ಸೇಠ್ | |
ಅರವಿಂದ್ ಅಡಿಗ |
ಒನ್ ಇಂಡಿಯನ್ ಗರ್ಲ್ ಖ್ಯಾತ ಇಂಗ್ಲಿಷ್ ಲೇಖಕ ಚೇತನ್ ಭಗತ್ ರ ಹೊಸ ಪುಸ್ತಕ. 'ಒನ್ ಇಂಡಿಯನ್ ಗರ್ಲ್' ಅಕ್ಟೋಬರ್ ಒಂದರಂದು ಮಾರುಕಟ್ಟೆಗೆ ಬರಲಿದೆ. 'ಫೈವ್ ಪಾಯಿಂಟ್ ಸಮ್‌ಒನ್', 'ಒನ್ ನೈಟ್ ಅಟ್ ದಿ ಕಾಲ್ ಸೆಂಟರ್', 'ದಿ ಥ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್', 'ಟು ಸ್ಟೇಟ್ಸ್', 'ಹಾಫ್ ಗರ್ಲ್ಫ್ರೆಂಡ್' ಚೇತನ್ ಭಗತ್ ಅವರ ಜನಪ್ರಿಯ ಕಾದಂಬರಿಗಳು.
Question 6 |
6.ಯಾವ ದೇಶ ರಿಯೋ ಒಲಂಪಿಕ್ಸ್ನಲ್ಲಿ ಪುರುಷರ ಹಾಕಿಯಲ್ಲಿ ಚಿನ್ನ ಗೆಲ್ಲುವ ಮೂಲಕ ಒಲಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗ ಹಾಕಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು?
ಬೆಲ್ಜಿಯಂ | |
ಅರ್ಜೇಂಟೆನಾ | |
ಸ್ಪೇನ್ | |
ಆಸ್ಟ್ರೇಲಿಯಾ |
ಅರ್ಜೆಂಟೀನಾ ಪುರುಷರ ಹಾಕಿ ತಂಡದವರು ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಒಲಿಂಪಿಕ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ 4–2 ಗೋಲುಗಳಿಂದ ಬೆಲ್ಜಿಯಂ ವಿರುದ್ಧ ಗೆದ್ದಿತು. ಉಭಯ ತಂಡಗಳು ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದವು.
Question 7 |
7.ಈ ಕೆಳಗಿನ ಯಾವ ಶೈಕ್ಷಣಿಕ ಸಂಸ್ಥೆ ನಮಾಮಿ ಗಂಗೆ ಯೋಜನೆಯಡಿ ಉತ್ತರ ಪ್ರದೇಶ ಐದು ಹಳ್ಳಿಗಳನ್ನು ದತ್ತು ಪಡೆಯುವ ಮೂಲಕ ಗಂಗಾ ಶುದ್ದೀಕರಣಕ್ಕೆ ಕೈಜೋಡಿಸಿತು?
ಐಐಟಿ ಖರಗಪುರ್ | |
ಐಐಟಿ ಖಾನ್ಪುರ್ | |
ಐಐಎಸ್ಸಿ, ಬೆಂಗಳೂರು | |
ಐಐಟಿ ರೂರ್ಕಿ |
ಖಾನ್ಪುರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ನಮಾಮಿ ಗಂಗೆ ಯೋಜನೆಯಡಿ ಉತ್ತರ ಪ್ರದೇಶದ ಐದು ಹಳ್ಳಿಗಳನ್ನು ದತ್ತುಪಡೆದುಕೊಂಡಿದೆ. ಉತ್ತರ ಪ್ರದೇಶದ ರಮೆಲ್ ನಗರ್, ಪ್ರತಪುರ್, ಹರಿ ಹಿಂದ್ಪುರ್, ಕೊರ ಕತಾರಿಯ ಮತ್ತು ಕತ್ರಿ ಲದ್ವ ಖೇರ ಗ್ರಾಮಗಳನ್ನು ದತ್ತು ಪಡೆಯಲಾಗಿದೆ. ಈ ಕಾರ್ಯಕ್ರಮದಡಿ ಐಐಟಿ ಖಾನ್ಪುರ್ ತನ್ನ ತಂತ್ರಜ್ಞಾನ ಬಳಸಿ ಗಂಗಾನದಿಗೆ ಚರಂಡಿ ನೀರು ಸೇರ್ಪಡೆಯಾಗುವುದನ್ನು ತಡೆಯಲಿದೆ. ಈ ಕಾರ್ಯವನ್ನು ಐಐಟಿ ಖಾನ್ಪುರ್ದ ಸಿವಿಲ್ ಎಂಜನಿಯರಿಂಗ್ ವಿಭಾಗವು ಕೈಗೊಳ್ಳಲಿದೆ. ನದಿ ನೀರಿಗೆ ಚರಂಡಿ ನೀರು ಸೇರ್ಪಡೆಗೊಳ್ಳದಂತೆ ಹಾಗೂ ನೀರಿನ ಗುಣಮಟ್ಟ ಮತ್ತು ಸ್ವಚ್ಚತೆಗೆ ಒತ್ತು ನೀಡಲಾಗುವುದು.
Question 8 |
8.ಭಾರತವನ್ನು ಹೊರತುಪಡಿಸಿ, ತಮಿಳು ಈ ಕೆಳಗಿನ ಯಾವ ದೇಶಗಳ ಅಧಿಕೃತ ಭಾಷೆಯಾಗಿದೆ?
ಶ್ರೀಲಂಕಾ ಮತ್ತು ಸಿಂಗಾಪುರ | |
ಶ್ರೀಲಂಕಾ ಮತ್ತು ಥಾಯ್ಲೆಂಡ್ | |
ಥಾಯ್ಲೆಂಡ್ ಮತ್ತು ಮಾರಿಷಸ್ | |
ಮಾರಿಷಸ್ ಮತ್ತು ಮಲೇಷಿಯಾ |
ಭಾರತವನ್ನು ಹೊರತುಪಡಿಸಿ, ಶ್ರೀಲಂಕಾ ಮತ್ತು ಸಿಂಗಾಪುರದಲ್ಲಿ ತಮಿಳು ಅಧಿಕೃತ ಭಾಷೆಯಾಗಿದೆ. ಮಲೇಷಿಯಾ ಮತ್ತು ಮಾರಿಷಸ್ ನಲ್ಲಿ ತಮಿಳು ಅಲ್ಪಸಂಖ್ಯಾತ ಭಾಷೆಯಾಗಿದೆ.
Question 9 |
9.ವಿಶ್ವ ಮಾನವತೆ ದಿನ (World Humanitarian DAy) ಯಾವ ದಿನದಂದು ಆಚರಿಸಲಾಗುತ್ತದೆ?
ಆಗಸ್ಟ್ 16 | |
ಆಗಸ್ಟ್ 18 | |
ಆಗಸ್ಟ್ 19 | |
ಆಗಸ್ಟ್ 21 |
ವಿಶ್ವ ಮಾನವತೆ ದಿನವನ್ನು ಪ್ರತಿ ವರ್ಷ ಆಗಸ್ಟ್ 19 ರಂದು ಆಚರಿಸಲಾಗುತ್ತದೆ. 2003, ಆಗಸ್ಟ್ 19ರಲ್ಲಿ ಇರಾನ್ ನ ಬಾಗ್ದಾದ್ ನಲ್ಲಿರುವ ವಿಶ್ವಸಂಸ್ಥೆಯ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಿದ ದಿನವನ್ನು ವಿಶ್ವ ಮಾನವತೆ ದಿನವೆಂದು ಆಚರಿಸಲಾಗುತ್ತಿದೆ. ಒಂದೇ ಮಾನವೀಯತೆ (One Humanity) ಎನ್ನುವುದು ಈ ವರ್ಷದ ವಿಶ್ವ ಮಾನವತೆ ದಿನದ ಧ್ಯೇಯವಾಕ್ಯ.
Question 10 |
10.ಭಾರತದ ಅದಿತಿ ಅಶೋಕ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
ಈಜು | |
ಅರ್ಚರಿ | |
ಗಾಲ್ಫ್ | |
ಸೈಕ್ಲಿಂಗ್ |
ಅದಿತಿ ಅಶೋಕ್ ಭಾರತದ ವೃತ್ತಿಪರ ಗಾಲ್ಫ್ ಆಟಗಾರ್ತಿ. ಅದಿತಿ ರಿಯೋ ಒಲಂಪಿಕ್ಸ್ ನಲ್ಲಿ ಗಾಲ್ಫ್ನಲ್ಲಿ ಭಾಗವಹಿಸಿದ್ದ ಏಕೈಕ ಭಾರತೀಯ ಕ್ರೀಡಾಪಟು. 18ರ ಹರೆಯದ ಅದಿತಿ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತದ ಕ್ರೀಡಾಪಟುಗಳಲ್ಲಿ ಅತ್ಯಂತ ಕಿರಿಯ ಸ್ಪರ್ಧಿ ಎನಿಸಿದ್ದರು.
Thanks
Thanks
Super
ಧನ್ಯವಾದಗಳು ಸರ್