ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 21, 2016

Question 1

1.2016 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಈ ಕೆಳಗಿನ ಯಾರು ಆಯ್ಕೆಯಾಗಿಲ್ಲ?

A
ಪಿ.ವಿ.ಸಿಂಧು
B
ದೀಪಾ ಕಮರ್ಕರ್
C
ಜಿತು ರಾಯ್
D
ಲಲಿತಾ ಬಾಬರ್
Question 1 Explanation: 
ಲಲಿತಾ ಬಾಬರ್:

ರಿಯೊ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಾದ ಪಿವಿ ಸಿಂಧು, ಸಾಕ್ಷಿ ಮಲಿಕ್ ಮತ್ತು ಅತ್ಯುತ್ತಮ ಪ್ರದರ್ಶನ ನೀಡಿ ದೇಶದ ಜನರ ಮನ ಗೆದ್ದ ದೀಪಾ ಕರ್ಮಾಕರ್ ಹಾಗೂ ಜಿತು ರಾಯ್ 2016ರ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿ ಬೆಳ್ಳಿ ಪದಕ ಗೆದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಖ್ಯಾತಿಗೆ ಪಿವಿ ಸಿಂಧು ಪಾತ್ರರಾಗಿದ್ದರೆ, ಮಹಿಳೆಯರ ಕುಸ್ತಿಯಲ್ಲಿ ಮೊದಲ ಬಾರಿ ಕಂಚು ಗೆದ್ದು ಸಾಕ್ಷಿ ಮಲಿಕ್ ದಾಖಲೆ ಬರೆದಿದ್ದಾರೆ. ದೀಪಾ ಕರ್ಮಾಕರ್ ಜಿಮ್ನಾಸ್ಟಿಕ್ಸ್ ಆಟದಲ್ಲಿ ಫೈನಲ್ ಪ್ರವೇಶಿಸಿದ್ದರು ಮತ್ತು ಜಿತು ರಾಯ್ ಶೂಟಿಂಗ್ನಲ್ಲಿ ಪದಕ ಗೆಲ್ಲದಿದ್ದರೂ ಉತ್ತಮ ಪ್ರದರ್ಶನ ನೀಡಿದ್ದರು.

Question 2
2.ಯಾವ ರಾಜ್ಯ ತನ್ನ ರಾಜ್ಯ ಮೀನಿನ ಸಂರಕ್ಷಣೆಗೆ ಅಟ್ಲಾಸ್ ಸಿದ್ಧಪಡಿಸುವ ವಿನೂತನ ಪ್ರಯತ್ನ ಆರಂಭಿಸಿದ ದೇಶದ ಮೊದಲ ರಾಜ್ಯವೆನಿಸಿದೆ?
A
ಕೇರಳ
B
ಕರ್ನಾಟಕ
C
ಮಧ್ಯ ಪ್ರದೇಶ
D
ಗೋವಾ
Question 2 Explanation: 
ಮಧ್ಯ ಪ್ರದೇಶ:

ಮಧ್ಯಪ್ರದೇಶ ಸರ್ಕಾರ ತನ್ನ "ರಾಜ್ಯ ಮೀನು" ನರ್ಮದಾ ಮಹ್ಸೀರ್ (ತೋರ್ ತೋರ್) ಸಂರಕ್ಷಣೆಗೆ ಅಟ್ಲಾಸ್ ಸಿದ್ಧಪಡಿಸುವ ವಿನೂತನ ಮಾರ್ಗ ಜಾರಿಗೆ ತಂದಿದೆ. ಅಪಾಯದ ಅಂಚಿನಲ್ಲಿರುವ ಈ ಮೀನು ತಳಿಯನ್ನು ಸಂರಕ್ಷಿಸಲು ಇಂಥ ಪ್ರಯೋಗ ಆರಂಭಿಸಿದ ದೇಶದ ಮೊದಲ ರಾಜ್ಯ. ಈ ಯೋಜನೆಯಡಿ ಅರಣ್ಯ ಇಲಾಖೆ ಈಗಾಗಲೇ ನರ್ಮದಾ ಮಹ್ಸೀರ್ ತಳಿಯ ಮೀನುಗಳಿರುವ ಪ್ರದೇಶಗಳನ್ನು ಗುರುತಿಸುವ ಕಾರ್ಯ ಆರಂಭಿಸಿದೆ. ಸಂರಕ್ಷಿತ ಪ್ರದೇಶಗಳಲ್ಲಿ ಗ್ಲೋಬಲ್ ಇನ್ಫಾರ್ಮೇಷನ್ ಸಿಸ್ಟಂ (ಜಿಐಎಸ್) ಮೂಲಕ ಮ್ಯಾಪಿಂಗ್ ಮಾಡಲು ನಿರ್ಧರಿಸಲಾಗಿದೆ.

Question 3

3.ಪ್ರಧಾನಿ ಮೋದಿ ಮತ್ತು ಆಪ್ಘಾನ್ ಅಧ್ಯಕ್ಷ ಆಶ್ರಫ್ ಘಾನಿ ಜಂಟಿಯಾಗಿ ಸ್ಟೊರ್ ಪ್ಯಾಲೆಸ್ (Stor Palace)ಅನ್ನು ಯಾವ ನಗರದಲ್ಲಿ ಉದ್ಘಾಟಿಸಿದರು?

A
ಮಝರ್-ಇ-ಷರೀಪ್
B
ಕಾಬುಲ್
C
ಹೆರತ್
D
ಕಂದಹಾರ್
Question 3 Explanation: 
ಕಾಬುಲ್:

ಆಪ್ಘಾನಿಸ್ತಾನದ ಕಾಬುಲ್ ನಗರದಲ್ಲಿ ನವೀಕರಿಸಲಾದ ಸ್ಟೊರ್ ಪ್ಯಾಲೆಸ್ ಅನ್ನು ನರೇಂದ್ರ ಮೋದಿ ಮತ್ತು ಆಪ್ಘಾನ್ ಅಧ್ಯಕ್ಷ ಆಶ್ರಫ್ ಘಾನಿ ಜಂಟಿಯಾಗಿ ವಿಡಿಯೋ ಸಂವಾದ ಮೂಲಕ ಲೋಕಾರ್ಪಣೆ ಮಾಡಿದರು. ಸ್ಟೊರ್ ಪ್ಯಾಲೆಸ್ ಅನ್ನು ಆಪ್ಘಾನಿಸ್ತಾನದ ದೊರೆ ಅಮನುಲ್ಲಾ ಖಾನ್ 1920 ರಲ್ಲಿ ನಿರ್ಮಿಸಿದ್ದರು. ಆದರೆ 90ರ ದಶಕದಲ್ಲಿ ನಡೆದ ಯುದ್ದದಲ್ಲಿ ಈ ಪ್ಯಾಲೆಸ್ ಭಾಗಶಃ ಹಾಳಾಗಿತ್ತು.

Question 4

4.ರಿಯೋ ಒಲಂಪಿಕ್ಸ್ ನ ಪದಕ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಪಡೆದ ರಾಷ್ಟ್ರಗಳನ್ನು ಗುರುತಿಸಿ?

A
ಅಮೆರಿಕಾ, ಚೀನಾ, ಬ್ರಿಟನ್
B
ಅಮೆರಿಕಾ, ಬ್ರಿಟನ್, ಚೀನಾ
C
ಅಮೆರಿಕಾ, ಚೀನಾ, ಜಪಾನ್
D
ಅಮೆರಿಕಾ, ಬ್ರಿಟನ್, ಜಪಾನ್
Question 4 Explanation: 
ಅಮೆರಿಕಾ, ಬ್ರಿಟನ್, ಚೀನಾ:

ರಿಯೋ ಒಲಂಪಿಕ್ಸ್ ಪದಕ ಪಟ್ಟಿಯಲ್ಲಿ ಅಮೆರಿಕ 121 ಪದಕಗಳನ್ನು ಗೆಲ್ಲುವ ಮೂಲಕ ಅಗ್ರಸ್ಥಾನ ಪಡೆದಿದೆ. ಇದರಲ್ಲಿ 46 ಚಿನ್ನ, 37 ಬೆಳ್ಳಿ ಮತ್ತು 38 ಕಂಚಿನ ಪದಕಗಳು ಒಳಗೊಂಡಿವೆ. ಬ್ರಿಟನ್ 27 ಚಿನ್ನದ ಪದಕದೊಂದಿಗೆ ಒಟ್ಟು 70 (ಬೆಳ್ಳಿ 23, ಕಂಚು 17) ಪದಕಗಳು ಪಡೆದರೆ ಚೀನಾ 26 ಬಂಗಾರದ ಪದಕ ಸಹಿತ, ಒಟ್ಟು 67 (ಬೆಳ್ಳಿ 18, ಕಂಚು 26) ಪದಕಗಳೊಂದಿಗೆ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿವೆ. ರಷ್ಯಾ (56 ಪದಕ) ಮತ್ತು ಜರ್ಮನಿ (42 ಪದಕ) ಟಾಪ್ ಐದರಲ್ಲಿರುವ ಇತರೆ ರಾಷ್ಟ್ರಗಳು. ಭಾರತ ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆಲ್ಲುವ ಮೂಲಕ 67ನೇ ಸ್ಥಾನವನ್ನು ಪಡೆದುಕೊಂಡಿದೆ.

Question 5

5.ಫ್ರಾನ್ಸ್ ಸರ್ಕಾರ ನೀಡುವ ಪ್ರತಿಷ್ಠಿತ ಷೆವಾಲಿಯಾರ್ (Chevalier de l'Ordre des Arts et Lettres) ಪ್ರಶಸ್ತಿಗೆ ಆಯ್ಕೆಯಾದ ನಟ ಯಾರು?

A
ಅಮಿತಾಬ್ ಬಚ್ಚನ್
B
ಕಮಲ್ ಹಾಸನ್
C
ರಜನೀಕಾಂತ್
D
ಅಂಬರೀಷ್
Question 5 Explanation: 
ಕಮಲ್ ಹಾಸನ್:

ಖ್ಯಾತ ತಮಿಳು ನಟ ಕಮಲ್ ಹಾಸನ್ ಅವರನ್ನು ಫ್ರಾನ್ಸ್ ನ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಷೆವಾಲಿಯಾರ್ (Chevalier de l'Ordre des Arts et Lettres) (Knight in the National Order Arts and Letters) ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಾನ್ಸ್ನ ಸಂಸ್ಕೃತಿ ಮತ್ತು ಸಂವಹನ ಇಲಾಖೆ ಈ ಪ್ರಶಸ್ತಿಯನ್ನು ನೀಡುತ್ತಿದೆ. ಕಮಲ್ ಹಾಸನ್ ಈ ಪ್ರಶಸ್ತಿಯನ್ನು ಪಡೆಯಲಿರುವ ಎರಡನೇ ತಮಿಳು ಚಿತ್ರ ನಟರಾಗಿದ್ದಾರೆ. ಈ ಹಿಂದೆ 1995ರಲ್ಲಿ ತಮಿಳು ಚಿತ್ರ ನಟ ಶಿವಾಜಿ ಗಣೇಶನ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

Question 6

6.ಕೇಂದ್ರ ವಿದ್ಯುತ್ ಪ್ರಾಧಿಕಾರ ಇತ್ತೀಚೆಗೆ ಅನುಮೋದನೆ ನೀಡಿದ “1000 ಮೆ.ವ್ಯಾ ಟರ್ಗ ಜಲವಿದ್ಯುತ್ ಯೋಜನೆ” ಯಾವ ರಾಜ್ಯಕ್ಕೆ ಸಂಬಂಧಿಸಿದೆ?

A
ಪಶ್ಚಿಮ ಬಂಗಾಳ
B
ಆಂಧ್ರ ಪ್ರದೇಶ
C
ತೆಲಂಗಣ
D
ಅಸ್ಸಾಂ
Question 6 Explanation: 
ಪಶ್ಚಿಮ ಬಂಗಾಳ:

ಪಶ್ವಿಮ ಬಂಗಾಳದ ಪುರುಲಿಯ ಜಿಲ್ಲೆಯಲ್ಲಿ 1000 ಮೆ.ವ್ಯಾಟ್ ಸಾಮರ್ಥ್ಯದ ಟರ್ಗ ಜಲವಿದ್ಯುತ್ ಯೋಜನೆ (Turga Hydel Power Project) ಅನುಷ್ಟಾನಗೊಳ್ಳಲಿದೆ. ರೂ 4,500 ಕೋಟಿಯ ಈ ಯೋಜನೆಗೆ ಕೇಂದ್ರ ವಿದ್ಯುತ್ ಪ್ರಾಧಿಕಾರ ಅನುಮೋದನೆ ನೀಡಿದ್ದು, ಪರಿಸರ ಇಲಾಖೆ ಅನುಮೋದನೆ ನೀಡಿದ ಮೇಲೆ ಕಾಮಗಾರಿ ಆರಂಭಿಗೊಳ್ಳಲಿದೆ.

Question 7

7.ಇತ್ತೀಚೆಗೆ ಸುದ್ದಿಯಲ್ಲಿದ್ದ ಬವರ್-373 (Bavar-373) ದೂರಗಾಮಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಯಾವ ದೇಶ ಅಭಿವೃದ್ದಿಪಡಿಸಿದೆ?

A
ರಷ್ಯಾ
B
ಇರಾನ್
C
ಉತ್ತರ ಕೊರಿಯಾ
D
ಚೀನಾ
Question 7 Explanation: 
ಇರಾನ್:

ಇರಾನ್ ಹೊಸ ಬವರ್-373 ದೂರಗಾಮಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದ್ದು, ಇತ್ತೀಚೆಗೆ ಇದರ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಇರಾನ್ ಮೇಲೆ ಅಂತಾರಾಷ್ಟ್ರೀಯ ನಿರ್ಬಂಧ ಹೇರಿದ್ದ ವೇಳೆಯಲ್ಲಿ ಇದನ್ನು ಅಭಿವೃದ್ದಿಪಡಿಸಲಾಗಿತ್ತು ಎನ್ನಲಾಗಿದೆ. ರಷ್ಯಾದ ಎಸ್-300 ಕ್ಷಿಪಣೆ ವ್ಯವಸ್ಥೆಯ ಪರ್ಯಾಯವಾಗಿ ಇರಾನ್ ಇದನ್ನು ಅಭಿವೃದ್ದಿಪಡಿಸಿದೆ. ಅಂತಾರಾಷ್ಟ್ರೀಯ ನಿರ್ಬಂಧ ಹೇರಿದ್ದ ಹಿನ್ನಲೆಯಲ್ಲಿ ರಷ್ಯಾ ಎಸ್-300 ಕ್ಷಿಪಣೆ ವ್ಯವಸ್ಥೆಯನ್ನು 2010 ರಿಂದ ಇರಾನ್ ಗೆ ಸರಬರಾಜು ಮಾಡುವುದನ್ನು ನಿಲ್ಲಿಸಿತ್ತು.

Question 8

8.ಯಾವ ದೇಶದ ಮಹಿಳಾ ತಂಡ ಒಲಂಪಿಕ್ಸ್ ಬ್ಯಾಸ್ಕೆಟ್ ಬಾಲ್ ನಲ್ಲಿ ಸತತವಾಗಿ ಆರು ಬಾರಿ ಚಿನ್ನ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದೆ?

A
ಸ್ಪೇನ್
B
ಅಮೆರಿಕಾ
C
ಬ್ರೆಜಿಲ್
D
ಚೀನಾ
Question 8 Explanation: 
ಅಮೆರಿಕಾ:

ಅಮೆರಿಕದ ಮಹಿಳಾ ತಂಡ ರಿಯೊ ಒಲಿಂಪಿಕ್ಸ್ನ ಬ್ಯಾಸ್ಕೆಟ್ಬಾಲ್ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಒಲಂಪಿಕ್ಸ್ ಫೈನಲ್ನಲ್ಲಿ ಅಮೆರಿಕ 101-72 ರಲ್ಲಿ ಸ್ಪೇನ್ ತಂಡವನ್ನು ಮಣಿಸಿತು. ಅಮೆರಿಕ ಮಹಿಳೆಯರು ಒಲಿಂಪಿಕ್ಸ್ನಲ್ಲಿ ಗೆದ್ದ ಸತತ ಆರನೇ ಚಿನ್ನ ಇದು. ಅಮೆರಿಕ ತಂಡ 1992ರ ಒಲಿಂಪಿಕ್ ಕೂಟದ ಸೆಮಿಫೈನಲ್ನಲ್ಲಿ ಕೊನೆಯದಾಗಿ ಸೋಲು ಅನುಭವಿಸಿತ್ತು. ಬಳಿಕ ನಡೆದ ಆರು ಒಲಿಂಪಿಕ್ಸ್ಗಳಲ್ಲಿ ಒಮ್ಮೆಯೂ ಸೋಲು ಅನುಭವಿಸಿಲ್ಲ.

Question 9

9.ಯಾವ ರಾಜ್ಯದಲ್ಲಿ ಈಚೆಗೆ ಚೀನಾದ “ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ನ (ಸಿಆರ್ಆರ್ಸಿ)” ಲೋಕೋಮೋಟಿವ್ ಎಂಜಿನ್ ನಿರ್ಮಾಣ ಮತ್ತು ದುರಸ್ತಿ ಮಾಡುವ ಘಟಕವನ್ನು ಆರಂಭಿಸಿದೆ?

A
ಮಹಾರಾಷ್ಟ್ರ
B
ಗುಜರಾತ್
C
ಹರಿಯಾಣ
D
ಪಂಜಾಬ್
Question 9 Explanation: 
ಹರಿಯಾಣ:

ಹರಿಯಾಣದಲ್ಲಿ ರೈಲ್ವೆ ಲೋಕೋಮೋಟಿವ್ ಎಂಜಿನ್ ನಿರ್ಮಾಣ ಮತ್ತು ದುರಸ್ತಿ ಮಾಡುವ ಜಂಟಿ ಸಹಭಾಗಿತ್ವದ ಸಂಸ್ಥೆಯನ್ನು ಚೀನಾದ ಅತ್ಯಂತ ವೇಗದ ರೈಲು ಓಡಿಸುವ ಕಂಪೆನಿ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ನ (ಸಿಆರ್ಆರ್ಸಿ) ಹರಿಯಾಣದಲ್ಲಿ ಆರಂಭಿಸಿದೆ. ಮೇಕ್ ಇನ್ ಇಂಡಿಯಾದಡಿ ರೈಲು ಸಾರಿಗೆ ಬಿಡಿಭಾಗಗಳ ತಯಾರಿಕೆಗೆ ಬಂಡವಾಳ ಹೂಡಿದ ಮೊದಲ ವಿದೇಶಿ ಕಂಪೆನಿ ಇದಾಗಿದೆ. ರೂ 425.65 ಕೋಟಿ ಬಂಡವಾಳವನ್ನು ಹೂಡಿದ್ದು, ಶೇ 51 ಷೇರನ್ನು ಚೀನಾ ಹೊಂದಿದೆ.

Question 10

10.ಪ್ರತಿಷ್ಠಿತ ವ್ಯಾಸ ಸಮ್ಮಾನ್ ಪ್ರಶಸ್ತಿ-2015, ಯಾರಿಗೆ ನೀಡಿ ಗೌರವಿಸಲಾಯಿತು?

A
ವಿ.ಕೆ.ದುಗ್ಗಾಲ್
B
ಸುನೀತಾ ಜೈನ್
C
ಕೆ.ಎನ್.ತ್ರಿಪಾಠಿ
D
ಮೃಣಲ್ ಪಾಂಡೆ
Question 10 Explanation: 
ಸುನೀತಾ ಜೈನ್‌ :

ಖ್ಯಾತ ಹಿಂದಿ ಲೇಖಕಿ, ಸಂಶೋಧಕಿ ಸುನೀತಾ ಜೈನ್‌ ಅವರಿಗೆ ಪ್ರತಿಷ್ಠಿತ ವ್ಯಾಸ ಸಮ್ಮಾನ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಸುನೀತಾ ಜೈನ್ ಅವರ ‘ಕ್ಷಮಾ’ ಕವನ ಸಂಕಲನ 2015ರ ಪ್ರತಿಷ್ಠಿತ ‘ವ್ಯಾಸ ಸಮ್ಮಾನ’ ಪ್ರಶಸ್ತಿಗೆ ಆಯ್ಕೆಮಾಡಲಾಗಿತ್ತು. ಪ್ರಶಸ್ತಿಯನ್ನು ಕೆ.ಕೆ. ಬಿರ್ಲಾ ಫೌಂಡೇಷನ್ ಸ್ಥಾಪಿಸಿದ್ದು, ಹಿಂದಿ ಸಾಹಿತ್ಯಕ್ಕೆ ಅಸಾಧಾರಣ ಕೊಡುಗೆ ನೀಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿ ₹2.50 ಲಕ್ಷ ಮೊತ್ತವನ್ನೊಳಗೊಂಡಿದೆ. ಖ್ಯಾತ ಸಾಹಿತಿ ವಿಶ್ವನಾಥ್ ಪ್ರಸಾದ್ ತಿವಾರಿ ಅವರನ್ನೊಳಗೊಂಡ ಸಮಿತಿ ಈ ಕೃತಿಯನ್ನು ಆಯ್ಕೆ ಮಾಡಿತ್ತು.

There are 10 questions to complete.

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 21, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.