ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 23, 2016

Question 1

1.ಈ ಕೆಳಗಿನ ವ್ಯಕ್ತಿಗಳನ್ನು ಗಮನಿಸಿ:

I) ಜೇಮ್ಸ್ ಟೇಲರ್

II) ಸಿ.ಡಿ.ದೇಶ್ ಮುಖ್

III) ವೈ.ವಿ.ರೆಡ್ಡಿ

IV) ಉರ್ಜಿತ್ ಪಟೇಲ್

ಈ ಮೇಲಿನ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಸರಿಯಾದ ಸಂಬಂಧವನ್ನು ಗುರುತಿಸಿ?

A

ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ ನಲ್ಲಿ ಅರ್ಥಶಾಸ್ತ್ರದಲ್ಲಿ ಪದವೀದರರು

B

ಆರ್ ಬಿಐ ನಲ್ಲಿ ಡೆಪ್ಯೂಟಿ ಗವರ್ನರ್ ಆಗಿ ಗವರ್ನರ್ ಹುದ್ದೆಗೆ ಆಯ್ಕೆಯಾಗಿದ್ದವರು

C

ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಕಾರ್ಯನಿರ್ವಹಿಸಿ ಗವರ್ನರ್ ಆದವರು

D

ಸಂಪುಟ ಕಾರ್ಯದರ್ಶಿಗಳಾಗಿದ್ದವರು

Question 1 Explanation: 

ಆರ್ ಬಿಐ ನಲ್ಲಿ ಡೆಪ್ಯೂಟಿ ಗವರ್ನರ್ ಆಗಿ ಗವರ್ನರ್ ಹುದ್ದೆಗೆ ಆಯ್ಕೆಯಾಗಿದ್ದವರುಜೇಮ್ಸ್ ಟೇಲರ್, ಸಿ.ಡಿ.ದೇಶ್ ಮುಖ್, ಬಿ.ಎನ್.ಅದರ್ಕರ್, ಉರ್ಜಿತ್ ಪಟೇಲ್, ಎ,ಘೋಷ್, ಸಿ.ರಂಗರಾಜನ್, ಉರ್ಜಿತ್ ಪಟೇಲ್ ಮತ್ತು ವೈ.ವಿ ರೆಡ್ಡಿ ಭಾರತೀಯ ರಿಸರ್ವ್ ಬ್ಯಾಂಕ್ ನ ಡೆಪ್ಯೂಟಿ ಗರ್ವನರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ಬಳಿಕೆ ಗವರ್ನರ್ ಆಗಿ ನೇಮಕಗೊಂಡವರು. ಇತ್ತೀಚೆಗೆ ಗವರ್ನರ್ ಆಗಿ ನೇಮಕಗೊಂಡ ಉರ್ಜಿತ್ ಪಟೇಲ್ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಕಗೊಂಡ 8ನೇ ಡೆಪ್ಯೂಟಿ ಗವರ್ನರ್.

Question 2

2.ನ್ಯೂ ವರ್ಲ್ಡ್ ವೆಲ್ತ್ ವರದಿ ಪ್ರಕಾರ ವಿಶ್ವದ ಸಮೃದ್ದ ರಾಷ್ಟ್ರಗಳ ಪೈಕಿ ಭಾರತ ಎಷ್ಟನೇ ಸಮೃದ್ದ ರಾಷ್ಟ್ರವಾಗಿದೆ?

A
ಎರಡನೇ
B
ಐದನೇ
C
ಏಳನೇ
D
ಹತ್ತನೇ
Question 2 Explanation: 
ಏಳನೇ:

ನ್ಯೂ ವರ್ಲ್ಡ್ ವೆಲ್ತ್ ವರದಿ ಪ್ರಕಾರ ಜಗತ್ತಿನ 10 ಆರ್ಥಿಕ ಸಮೃದ್ಧ ರಾಷ್ಟ್ರಗಳ ಪೈಕಿ ಭಾರತ (5,600 ಡಾಲರ್) ಏಳನೇ ಸ್ಥಾನದಲ್ಲಿದೆ. ಪಟ್ಟಿಯ ಮೊದಲ ಸ್ಥಾನದಲ್ಲಿ ಅಮೆರಿಕ (48,900 ಬಿಲಿಯನ್ ಡಾಲರ್), ನಂತರ ಚೀನಾ (17,400 ಬಿಲಿಯನ್ ಡಾಲರ್), ತೃತೀಯ ಸ್ಥಾನದಲ್ಲಿ ಜಪಾನ್ (15,100 ಬಿಲಿಯನ್ ಡಾಲರ್), ನಾಲ್ಕನೇ ಸ್ಥಾನದಲ್ಲಿ ಬ್ರಿಟನ್ (9,200 ಬಿಲಿಯನ್ ಡಾಲರ್), ಐದನೇ ಸ್ಥಾನದಲ್ಲಿ ಜರ್ಮನಿ (9,100 ಬಿಲಿಯನ್ ಡಾಲರ್), ಆರನೇ ಸ್ಥಾನದಲ್ಲಿ ಫ್ರಾನ್ಸ್ (6,600 ಬಿಲಿಯನ್ ಡಾಲರ್) ಇವೆ. ಭಾರತದ ನಂತರದ 8 ನೇ ಸ್ಥಾನದಲಿ ಕೆನಡಾ (4,700 ಬಿಲಿಯನ್ ಡಾಲರ್), 9 ನೇ ಸ್ಥಾನದಲ್ಲಿ ಆಸ್ಟ್ರೇಲಿಯ (4,500 ಬಿಲಿಯನ್ ಡಾಲರ್) , 10 ನೇ ಸ್ಥಾನದಲ್ಲಿ ಇಟಲಿ (4,400 ಬಿಲಿಯನ್ ಡಾಲರ್) ಇವೆ.

Question 3

3.ಇಂಟರ್ ನೆಟ್ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಗಸ್ಟ್ 23, 1991ರಂದು ಈ ಕೆಳಗಿನ ಯಾವುದನ್ನು ಅನ್ವೇಷಿಸಲಾಯಿತು?

A
ಇ-ಮೇಲ್
B
ವರ್ಲ್ಡ್ ವೈಡ್ ವೆಬ್ (WWW)
C
ಕಂಪ್ಯೂಟರ್ ಡಿಸ್ಕ್ (ಸಿಡಿ)
D
ಆಪ್ಟಿಕಲ್ ಫೈಬರ್
Question 3 Explanation: 
ವರ್ಲ್ಡ್ ವೈಡ್ ವೆಬ್ (WWW):

ಆಗಸ್ಟ್ 23, 1991 ರಂದು ವರ್ಲ್ಡ್ ವೈಡ್ ವೆಬ್ ಬಳಕೆಗೆ ಸಾರ್ವಜನಿಕರಿಗೆ ಅವಕಾಶ ಸಿಕ್ಕಿತ್ತು. ಈ ಅನ್ವೇಷಣೆಗೆ 25 ವರ್ಷ ತುಂಬಿದ್ದು, ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ವರ್ಲ್ಡ್ ವೈಡ್ ವೆಬ್ ಅನ್ವೇಷಿಸಿದರು ಸರ್ ಟಿಮ್ ಬರ್ನರ್ಸ್ ಲೀ. ಇಂಟರ್ನೆಟ್ನ ಮಹತ್ವದ ಸಂಶೋಧನೆ ಕೈಗೊಂಡಾಗ ಬರ್ನರ್ ಲೀ ಸ್ವಿಜರ್ಲೆಂಡ್ನ ಜಿನೇವಾದಲ್ಲಿರುವ ಯುರೋಪ್ ಪರಮಾಣು ಸಂಶೋಧನೆ (ಸೆರ್ನ್) ಕೇಂದ್ರದಲ್ಲಿ ಭೌತ ವಿಜ್ಞಾನಿಯಾಗಿದ್ದರು. ಕಂಪನಿಯಿಂದ ಸೂಕ್ತ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ಇಂಟರ್ನೆಟ್ ಅನ್ನು ಸಾರ್ವಜನಿಕರ ಬಳಕೆಗೆ ನೀಡಿದರು. ವೆಬ್ ಬ್ರೌಸಿಂಗ್ಗೆ ಅನುಕೂಲ ವಾಗುವಂತೆ 1990ರಲ್ಲಿ ಸರ್ ಲೀ ಮೊದಲಿಗೆ ಎಚ್ಟಿಎಂಎಲ್, ಯುಆರ್ಎಲ್ ತಂತ್ರಜ್ಞಾನವನ್ನು ಮುಂದಿಟ್ಟರು. ಇದನ್ನು 1991ರ ಆ.6ರಂದು ಲೈವ್ ಆಗಿ ಪ್ರಾಯೋಗಿಕವಾಗಿ ಲೋಕಾರ್ಪಣೆ ಗೊಂಡಿತು. 1991ರ ಆ. 23ರಂದು ಸಾರ್ವಜನಿಕರ ಬಳಕೆಗೆ ಬಿಡುಗಡೆ ಗೊಳಿಸಲಾಯಿತು.

Question 4

4.ಯಾವ ರಾಜ್ಯದ ಇತ್ತೀಚೆಗೆ ತನ್ನ ಸ್ವಂತ ಆಂತರಿಕ ಭದ್ರತಾ (Internal Security) ಕಾಯಿದೆಯ ಕರಡು ಸಿದ್ದಪಡಿಸಿದ ದೇಶದ ಮೊದಲ ರಾಜ್ಯವೆನಿಸಿದೆ?

A
ಮಹಾರಾಷ್ಟ್ರ
B
ಪಶ್ಚಿಮ ಬಂಗಾಳ
C
ಹಿಮಾಚಲ ಪ್ರದೇಶ
D
ಗುಜರಾತ್
Question 4 Explanation: 
ಮಹಾರಾಷ್ಟ್ರ:

ಮಹಾರಾಷ್ಟ್ರ ಸರ್ಕಾರ ತನ್ನ ಸ್ವಂತ ಆಂತರಿಕ ಭದ್ರತಾ ಕಾಯಿದೆ “ಮಹಾರಾಷ್ಟ್ರ ರಕ್ಷಣೆ ಆಂತರಿಕ ಭದ್ರತೆ ಕಾಯಿದೆ (Maharashtra Protection Internal Security Act)” ಯ ಕರಡು ಸಿದ್ದಪಡಿಸಿದ್ದು, ತನ್ನದೇ ಆದ ಸ್ವಂತ ಆಂತರಿಕ ಭದ್ರತಾ ಕಾಯಿದೆ ರೂಪಿಸಿದ ಮೊದಲ ರಾಜ್ಯವೆನಿಸಿದೆ. ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಣೆಗಾಗಿ ಈ ಕಾಯಿದೆಯ ಕರಡು ಪ್ರತಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಕಾಯಿದೆ ಪ್ರಕಾರ ರಾಜ್ಯದ ಗಡಿ ಪ್ರದೇಶದೊಳಗೆ ಭಯೋತ್ಪಾದನೆ, ವಿದ್ವಂಸಕ ಕೃತ್ಯಗಳು, ಎರಡು ಗುಂಪುಗಳ ನಡುವೆ ಘರ್ಷಣೆ, ಅಮಾಯಕರ ಮೇಲೆ ಹಲ್ಲೆ, ಸಾರ್ವಜಿಕ ಅಥವಾ ಖಾಸಗಿ ಆಸ್ತಿಪಾಸ್ತಿಗಳ ದ್ವಂಸ ಸೇರಿದಂತೆ ಇನ್ನಾವುದೇ ಕೃತ್ಯಗಳಿಂದ ಶಾಂತಿ ಕದಡುವ ಸನ್ನಿವೇಶಗಳನ್ನು ಆಂತರಿಕ ಭದ್ರತೆಯಡಿ ಉಲ್ಲೇಖಿಸಲಾಗಿದೆ.

Question 5

5.2016 ದ್ರೋಣಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಬಿಶ್ವೇಶರ್ ನಂದಿ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

A
ಕ್ರಿಕೆಟ್
B
ಜಿಮ್ನಾಸ್ಟಿಕ್
C
ಕುಸ್ತಿ
D
ಶೂಟಿಂಗ್
Question 5 Explanation: 
ಜಿಮ್ನಾಸ್ಟಿಕ್:

ಈ ಬಾರಿಯ ದ್ರೋಣಚಾರ್ಯ ಪ್ರಶಸ್ತಿಗೆ ಆರು ಜನರನ್ನು ಆಯ್ಕೆಮಾಡಲಾಗಿದೆ. ವಿರಾಟ್ ಕೊಹ್ಲಿ ರವರ ಗರು ರಾಜ್ ಕುಮಾರ್ ಶರ್ಮಾ (ಕ್ರಿಕೆಟ್), ದೀಪಾ ಕಮರ್ಕರ್ ಅವರ ಕೋಚ್ ಬಿಶೇಶ್ವರ್ ನಂದಿ (ಜಿಮ್ನಾಸ್ಟಿಕ್ಸ್), ಉಳಿದಂತೆ ನಾಗಪುರಿ ರಮೇಶ್ (ಅಥ್ಲೆಟಿಕ್ಸ್), ಸಾಗರ್ ಮಲ್ ದಯಾಳ್ (ಬಾಕ್ಸಿಂಗ್), ಎಸ್ ಪ್ರದೀಪ್ ಕುಮಾರ್ (ಈಜು) (ಜೀವಮಾನ ಸಾಧನೆ) ಮತ್ತು ಮಹಾಬೀರ್ ಸಿಂಗ್- ಕುಸ್ತಿ (ಜೀವಮಾನ ಸಾಧನೆ).

Question 6

6.ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (Pension Fund Regulatory and Development Authority) ಕೇಂದ್ರ ಸ್ಥಳ ಎಲ್ಲಿದೆ?

A
ಹೈದ್ರಾಬಾದ್
B
ಕೊಚ್ಚಿ
C
ಪುಣೆ
D
ದೆಹಲಿ
Question 6 Explanation: 
ದೆಹಲಿ:

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರವನ್ನು ಭಾರತ ಸರ್ಕಾರ ಆಗಸ್ಟ್ 23, 2003 ರಂದು ಸ್ಥಾಪಿಸಿದೆ. ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ. ಹೇಮಂತ್ ಕಂಟ್ರಾಕ್ಟರ್ ಈ ಪ್ರಾಧಿಕಾರದ ಈಗಿನ ಅಧ್ಯಕ್ಷರು.

Question 7

7.ಭಾರತೀಯ ಅಂಚೆ ಪಾವತಿ ಬ್ಯಾಂಕ್ಗಳ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?

A
ಆರ್.ಎಸ್.ಸೋಧಿ
B
ಬಿಷಪ್ ಚೌಧರಿ
C
ಕರಣ್ ಸಿಂಗ್
D
ಸಂತೋಷ್ ಕುಮಾರ್
Question 7 Explanation: 
ಆರ್.ಎಸ್.ಸೋಧಿ:

ಅಮುಲ್ ಮ್ಯಾನೇಜಿಂಗ್ ಡೈರೆಕ್ಟರ್ ಆರ್ ಎಸ್ ಸೋಧಿ ಅವರನ್ನು ಭಾರತೀಯ ಅಂಚೆ ಪಾವತಿ ಬ್ಯಾಂಕ್ಗಳ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಭಾರತೀಯ ಅಂಚೆ ಪಾವತಿ ಬ್ಯಾಂಕ್ಗಳ ಮಂಡಳಿಯು ಒಟ್ಟು ಐದು ಸ್ವತಂತ್ರ ನಿರ್ದೇಶಕರನ್ನು ಹೊಂದಿರಲಿದ್ದು, ಸೋಧಿ ಮೊದಲಿಗರು. ಭಾರತೀಯ ಅಂಚೆ ಇಲಾಖೆ ಇತ್ತೀಚೆಗಷ್ಟೇ ಈ ಮಂಡಳಿಯನ್ನು ರಚಿಸಲು ಅನುಮತಿಯನ್ನು ಪಡೆದುಕೊಂಡಿದ್ದು, ಸೆಪ್ಟೆಂಬರ್ 2017 ರಿಂದ ಬ್ಯಾಂಕಿಂಗ್ ಕಾರ್ಯ ಆರಂಭಿಸಲಿದೆ.

Question 8

8.ಫೋರ್ಬ್ಸ್ ನಿಯತಕಾಲಿಕೆಯ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ಯಾರಿಗೆ ಲಭಿಸಿದೆ?

A
ಜೆನಿಫರ್ ಲಾರೆನ್ಸ್
B
ಮೆಕಾರ್ಥಿ
C
ಸ್ಕಾಲೆಟ್ ಜೋಹನ್ಸನ್
D
ದೀಪಿಕಾ ಪಡುಕೋಣೆ
Question 8 Explanation: 
ಜೆನಿಫರ್ ಲಾರೆನ್ಸ್:

ಹಾಲಿವುಡ್ನಟಿ ಜೆನ್ನಿಫರ್ ಲಾರೆನ್ಸ್ 46 ಮಿಲಿಯನ್ ಡಾಲರ್ ವಾರ್ಷಿಕ ಸಂಭಾವನೆ ಪಡೆಯುವ ಮೂಲಕ ಫೋರ್ಬ್ಸ್ ನಿಯತಕಾಲಿಕೆ ವಿಶ್ವ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಮತ್ತೋರ್ವ ಅಮೆರಿಕ ನಟಿ ಮೆಕಾರ್ಥಿ 33 ಮಿಲಿಯನ್ ಡಾಲರ್ ಸಂಭಾವನೆ ಪಡೆಯುವ ಮೂಲಕ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಮೂರನೇ ಸ್ಥಾನ ಕೂಡ ಅಮೆರಿಕದ ಪಾಲಾಗಿದ್ದು, ನಟಿ, ಮಾಡೆಲ್ ಸ್ಕಾರ್ಲೆಟ್ ಜೋಹಾನ್ಸನ್ ಪಡೆದುಕೊಂಡಿದ್ದಾರೆ. ಭಾರತದ ದೀಪಿಕಾ ಪಡುಕೋಣೆ (10 ಮಿಲಿಯನ್ ಡಾಲರ್) ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ನಾಲ್ಕನೇ ಸ್ಥಾನ ಅಮೆರಿಕದ ಜೆನ್ನಿಫರ್ ಅನಿಸ್ಟನ್ (21 ಮಿಲಿಯನ್ ಡಾಲರ್), ಐದನೇ ಸ್ಥಾನ ಚೀನಾದ ಗಾಯಕಿ, ನಿರ್ದೇಶಕಿ ಫ್ಯಾನ್ ಬಿಗ್ಬಿಂಗ್ (17 ಮಿಲಿಯನ್ ಡಾಲರ್), ಆರನೇ ಸ್ಥಾನ ದಕ್ಷಿಣ ಆಫ್ರಿಕಾದ ನಟಿ ಚಾರ್ಲಿಜ್ ಥರಾನ್ (16.6 ಮಿಲಿಯನ್ ಡಾಲರ್), ಏಳನೇ ಸ್ಥಾನ ಮೆರಿಕದ ನಟಿ ಏಮೀ ಆಡಮ್್ಸ (13.5 ಮಿಲಿಯನ್ ಡಾಲರ್), ಎಂಟನೇ ಸ್ಥಾನ ಅಮೆರಿಕದ ಜುಲಿಯಾ ರಾಬಟರ್Õ (12 ಮಿಲಿಯನ್ ಡಾಲರ್), ಅಮೆರಿಕದ ನಟಿ ಮಿಲಾ ಕುನಿಸ್ (11 ಮಿಲಿಯನ್ ಡಾಲರ್) ಒಂಬತ್ತನೇ ಸ್ಥಾನದಲ್ಲಿದ್ದಾರೆ.

Question 9

9.ಗೋದಾವರಿ ಮತ್ತು ಅದರ ಉಪನದಿಗಳ ಮೇಲೆ ಮೂರು ಬ್ಯಾರೇಜ್ ಗಳ ನಿರ್ಮಾಣ ಮಾಡುವ ಒಪ್ಪಂದಕ್ಕೆ ಯಾವ ಎರಡು ರಾಜ್ಯಗಳು ಇತ್ತೀಚೆಗೆ ಸಹಿ ಹಾಕಿದವು?

A
ಆಂಧ್ರಪ್ರದೇಶ ಮತ್ತು ತೆಲಂಗಣ
B
ತೆಲಂಗಣ ಮತ್ತು ಮಹಾರಾಷ್ಟ್ರ
C
ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ
D
ತೆಲಂಗಣ ಮತ್ತು ಓಡಿಶಾ
Question 9 Explanation: 
ತೆಲಂಗಣ ಮತ್ತು ಮಹಾರಾಷ್ಟ್ರ:

ಗೋದಾವರಿ ಮತ್ತು ಅದರ ಉಪನದಿಗಳ ಮೇಲೆ ಮೂರು ಬ್ಯಾರೇಜ್ ಗಳ ನಿರ್ಮಾಣ ಮಾಡುವ ಐತಿಹಾಸಿಕ ಒಪ್ಪಂದಕ್ಕೆ ಮಹಾರಾಷ್ಟ್ರ ಮತ್ತು ತೆಲಂಗಣ ಸರ್ಕಾರ ಸಹಿ ಹಾಕಿವೆ. ಒಪ್ಪಂದದ ಅನ್ವಯ ತೆಲಂಗಣ ಸರ್ಕಾರ ಗೋದಾವರಿ ಮತ್ತು ಅದರ ಉಪನದಿಗಳಾದ ಪ್ರಣ್ಹಿತ ಮತ್ತು ಪೆನ್ ಗಂಗಾ ನದಿಗಳ ಮೇಲೆ ಮೂರು ಬ್ಯಾರೇಜ್ ಗಳನ್ನು ನಿರ್ಮಿಸಲಿದ್ದು, ಆ ಮೂಲಕ ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಿದೆ. ಈ ಒಪ್ಪಂದದಡಿ ಮೇದಿಗಡ್ಡ ಬಳಿ ಗೋದಾವರಿ ನದಿ ಮೇಲೆ, ತುಮ್ಮಿದಹಟ್ಟಿ ಬಳಿ ಪ್ರಣ್ಹಿತ ನದಿ ಮೇಲೆ ಮತ್ತು ಚನಕ-ಕೊರಟ ಬಳಿ ಪೆನ್ ಗಂಗಾ ನದಿ ಮೇಲೆ ಬ್ಯಾರೇಜ್ ಗಳನ್ನು ನಿರ್ಮಿಸಲಾಗುವುದು.

Question 10
10.ಪಶ್ಚಿಮ ಬಂಗಾಳದ ಕೋಚ್ ಬೆಹಾರ್ ಯಾವುದಕ್ಕೆ ಪ್ರಸಿದ್ದಿ ಹೊಂದಿದೆ?
A
ಚರ್ಮದ ಉದ್ದಿಮೆ
B
ರೇಷ್ಮೆ ಕೈಗಾರಿಗೆ
C
ಗಾಜು ಕೈಗಾರಿಕೆ
D
ಸೆಣಬು ಉದ್ದಿಮೆ
Question 10 Explanation: 
ರೇಷ್ಮೆ ಕೈಗಾರಿಗೆ
There are 10 questions to complete.

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 23, 2016”

  1. Anonymous

    Ond answer wrong deepika padukone tenth place. India 5600 billion dallor.

  2. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.