ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 24, 2016

Question 1

1.ದಕ್ಷಿಣ ಭಾರತದ ಮೊದಲ ಮಕ್ಕಳ ನ್ಯಾಯಾಲಯ (Children Court)ವನ್ನು ಯಾವ ನಗರದಲ್ಲಿ ಆರಂಭಿಸಲಾಯಿತು?

A
ಪುಣೆ
B
ಬೆಂಗಳೂರು
C
ಹೈದ್ರಾಬಾದ್
D
ಚೆನ್ನೈ
Question 1 Explanation: 
ಹೈದ್ರಾಬಾದ್:

ದಕ್ಷಿಣ ಭಾರತದ ಮೊದಲ ಮಕ್ಕಳ ನ್ಯಾಯಾಲಯ (Children Court)ವನ್ನು ಹೈದರಾಬಾದ್‌ನಲ್ಲಿ ಆರಂಭಿಸಲಾಯಿತು. ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಈ ನ್ಯಾಯಾಲಯವನ್ನು ಆರಂಭಿಸಲಾಗಿದೆ. ದಕ್ಷಿಣ ಹೈದ್ರಾಬಾದ್ ನ ನಂಪಳ್ಳಿ ಕ್ರಿಮಿನಲ್‌ ಕೋರ್ಟ್‌ ಸಂಕೀರ್ಣದಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಮೇಶ್‌ ರಂಗನಾಥನ್‌ ಹಾಗೂ ತೆಲಂಗಾಣದ ಡಿಜಿಪಿ ಅನುರಾಗ್ ಶರ್ಮಾ ಅವರು ನ್ಯಾಯಾಲಯಕ್ಕೆ ಚಾಲನೆ ನೀಡಿದರು. ಇದು ದಕ್ಷಿಣ ಭಾರತದಲ್ಲಿ ಮೊದಲನೆಯ ಮತ್ತು ದೇಶದ 6ನೇ ಮಕ್ಕಳ ನ್ಯಾಯಾಲಯವಾಗಿದೆ. ಮಕ್ಕಳ ನ್ಯಾಯಾಲಯವು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನಷ್ಟೇ ವಿಚಾರಣೆ ನಡೆಸಲಿದೆ. Protection of Children from Sexual Offences (POSCO) Act-2012 ಯಡಿ ಕಡ್ಡಾಯವಾಗಿರುವ ಮಕ್ಕಳಸ್ನೇಹಿ ಕೊಠಡಿಗಳ ವ್ಯವಸ್ಥೆ, ವಿಡಿಯೋ ಕ್ಯಾಮರ ವಿಚಾರಣೆ ವ್ಯವಸ್ಥೆಯನ್ನು ಈ ನ್ಯಾಯಾಲಯ ಹೊಂದಿದೆ. ಪ್ರಸ್ತುತ ಮಕ್ಕಳ ನ್ಯಾಯಾಲಯ ಪ್ರಸ್ತುತ ಗೋವಾ ಮತ್ತು ದೆಹಲಿಯಲ್ಲಿ ಮಾತ್ರ ಇದ್ದು, ನಂತರದ ಸ್ಥಾನ ಇದೀಗ ತೆಲಂಗಾಣದ ಪಾಲಾಗಿದೆ.

Question 2

2.ವೃತ್ತಿಪರ ತರಭೇತಿ ಸಂಬಂಧ ಭಾರತ ಈ ಕೆಳಗಿನ ಯಾವ ರಾಷ್ಟ್ರದೊಂದಿಗೆ ಇತ್ತೀಚೆಗೆ ಸಹಿ ಹಾಕಿದೆ?

A
ಜರ್ಮನಿ
B
ಆಸ್ಟ್ರೇಲಿಯಾ
C
ಕೆನಡಾ
D
ಜಪಾನ್
Question 2 Explanation: 
ಜರ್ಮನಿ:

ವೃತ್ತಿಪರ ತರಭೇತಿ ಮೂಲಕ ಕೈಗಾರಿಕ ಸಮೂಹಗಳಲ್ಲಿ ಕೆಲಸವನ್ನು ಸುಧಾರಿಸುವ ಸಲುವಾಗಿ ಭಾರತ ಇತ್ತೀಚೆಗೆ ಜರ್ಮನಿಯೊಂದಿಗೆ ವೃತ್ತಿಪರ ತರಭೇತಿ ಒಪ್ಪಂದಕ್ಕೆ ಸಹಿಹಾಕಿದೆ. ಒಪ್ಪಂದದಡಿ ಭಾರತ-ಜರ್ಮನ್ ನಡುವೆ ಕೈಗಾರಿಕಾ ಸಂಸ್ಥೆ ಸಹಭಾಗಿತ್ವನ್ನು ಹೆಚ್ಚಿಸುವುದು ಹಾಗೂ ಸ್ಥಳೀಯ ತರಭೇತಿ ಸಂಸ್ಥೆಗಳ ಸಾಮರ್ಥ್ಯವನ್ನು ಬಲಪಡಿಸಲಾಗುವುದು.

Question 3

3.ವಿಶ್ವದ ಅತಿ ದೊಡ್ಡ ಒಳಾಂಗಣ ಥೀಮ್ ಪಾರ್ಕ್ (Indoor Theme Park) ಎಲ್ಲಿ ಸಿದ್ದುವಾಗುತ್ತಿದೆ?

A
ನ್ಯೂಯಾರ್ಕ್
B
ದುಬೈ
C
ಸಿಡ್ನಿ
D
ಬೀಜಿಂಗ್
Question 3 Explanation: 
ದುಬೈ:

ವಿಶ್ವದ ಅತೀ ದೊಡ್ಡ ಒಳಾಂಗಣ ಥೀಮ್ ಪಾರ್ಕ್ ದುಬೈನಲ್ಲಿ ಸಿದ್ದವಾಗುತ್ತಿದ್ದು, ಮುಂದಿನ ಆಕ್ಟೋಬರಿನಲ್ಲಿ ಈ ಥೀಮ್ ಲೋಕಾರ್ಪಣೆಗೊಳ್ಳಲಿದೆ. ಪ್ರವಾಸಿಗರ ಕನಸಿನ ಲೋಕದಂತೆ ಈ ಉದ್ಯಾನವವ ರೂಪುಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

Question 4

4.ಪ್ರಪ್ರಥಮ “ಏಷ್ಯಾನ್ ಸೈನ್ ಅಂಡ್ ಟೆಕ್ನಲಾಜಿ ಕಾನ್ಪರೆನ್ಸ್ ಫಾರ್ ಡಿಸೆಸ್ಟರ್ ರಿಸ್ಕ್ ರೆಡಕ್ಷನ್” ಯಾವ ದೇಶದಲ್ಲಿ ನೆಡಯಿತು?

A
ಸಿಂಗಾಪುರ
B
ಭಾರತ
C
ಜಪಾನ್
D
ಬಾಂಗ್ಲದೇಶ
E
ಥಾಯ್ಲೆಂಡ್ನ ಬ್ಯಾಂಕಾಕ್
Question 4 Explanation: 

ಥಾಯ್ಲೆಂಡ್ನ ಬ್ಯಾಂಕಾಕ್ ನಲ್ಲಿ ಮೊದಲ ಏಷ್ಯಾನ್ ಸೈನ್ ಅಂಡ್ ಟೆಕ್ನಲಾಜಿ ಕಾನ್ಪರೆನ್ಸ್ ಫಾರ್ ಡಿಸೆಸ್ಟರ್ ರಿಸ್ಕ್ ರೆಡಕ್ಷನ್” (Asian Science and Technology (S&T) Conference for Disaster Risk Reduction (DRR)) ಆಗಸ್ಟ್ 23-24 ರಂದು ನಡೆಯಿತು. ಈ ಸಮ್ಮೇಳನದಲ್ಲಿ ವಿಪತ್ತು ಭೀತಿ ನಿರ್ವಹಣೆಯ ಪ್ರಮುಖ ಸಮಸ್ಯೆಗಳು, ಸವಾಲುಗಳು ಮತ್ತು ನೀತಿ ರೂಪಿಸಲು ವಿಜ್ಞಾನದಡಿ ಇರುವ ಅವಕಾಶಗಳ ಬಗ್ಗೆ ಚರ್ಚಿಸಲಾಯಿತು. ಭಾರತದ ಪರವಾಗಿ ಕೇಂದ್ರ ಸಚಿವ ಕಿರೆನ್ ರೆಜಿಜು ಭಾಗವಹಿಸಿದ್ದರು.

Question 5

5.ಫೋರ್ಬ್ಸ್ ನಿಯತಕಾಲಿಕೆಯ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ನಟರ ಪಟ್ಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತದ ನಟ ಯಾರು?

A
ರಜನೀಕಾಂತ್
B
ಅಕ್ಷಯ್ ಕುಮಾರ್
C
ಶಾರೂಖ್ ಖಾನ್
D
ಸಲ್ಮಾನ್ ಖಾನ್
Question 5 Explanation: 
ಶಾರೂಖ್ ಖಾನ್ :

ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಈ ವರ್ಷದ ವಿಶ್ವದ ಶ್ರೀಮಂತ ನಟರ ಟಾಪ್ 10ನಲ್ಲಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಮತ್ತು ಶಾರೂಖ್ ಖಾನ್ ಸ್ಥಾನ ಪಡೆದಿದ್ದಾರೆ. ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರೂಖ್ ಖಾನ್ 8ನೇ (33 ಮಿಲಿಯನ್ ಡಾಲರ್) ಸ್ಥಾನಗಳಿಸಿದ್ದು, ಆ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತದ ನಟ ಎನಿಸಿದ್ದಾರೆ. ಅಕ್ಷಯ್ ಕುಮಾರ್ 10ನೇ (31.5 ಮಿಲಿಯನ್ ಡಾಲರ್) ಸ್ಥಾನವನ್ನು ಪಡೆದಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆಯ ಮೊದಲ ಸ್ಥಾನದಲ್ಲಿ ಡ್ವಾಯ್ನೆ ಜಾನ್ಸನ್ ಮತ್ತು ಎರಡನೇ ಸ್ಥಾನದಲ್ಲಿ ಜಾಕಿ ಚಾನ್ ಇದ್ದಾರೆ.

Question 6

6.ಈ ಕೆಳಗಿನ ಯಾವ ದೇಶದ ಪ್ರಥಮ “ಬ್ರಿಕ್ಸ್ ಸಿನಿಮೋತ್ಸವ (BRICS Festival)”ದ ಅತಿಥ್ಯ ವಹಿಸಲಿದೆ?

A
ಭಾರತ
B
ರಷ್ಯಾ
C
ಚೀನಾ
D
ದಕ್ಷಿಣ ಆಫ್ರಿಕಾ
Question 6 Explanation: 
ಭಾರತ:

ಮೊದಲ ಬ್ರಿಕ್ಸ್ ಸಿನಿಮೋತ್ಸವವು ನವದೆಹಲಿಯ ಸಿರಿಫೋರ್ಟ್ ಆಡಿಟೋರಿಯಂ ಸಂಕೀರ್ಣದಲ್ಲಿ ಸೆಪ್ಟೆಂಬರ್ 2 ರಿಂದ 6 ವರೆಗೆ ನಡೆಯಲಿದೆ. ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಚಲನಚಿತ್ರೋದ್ಯಮದ ಜನರ ನಡುವೆ ಸಿನಿಮಾ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ವೃದ್ದಿಸಲು ಇದು ವೇದಿಕೆಯಾಗಲಿದೆ. ಅಲ್ಲದೇ, ಸಿನಿಮಾ ಕ್ಷೇತ್ರಕ್ಕೆ ಅಘಣನೀಯ ಸೇವೆ ನೀಡಿದ ನಟ, ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಈ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು.

Question 7

7.ದೃಷ್ಟಿ ಮಾಂದ್ಯರಿಗಾಗಿ ಯಾವ “ಇ-ಲೈಬ್ರರಿ (e-Library)ಯನ್ನು” ಕೇಂದ್ರ ಸರ್ಕಾರ ಇತ್ತೀಚೆಗೆ ಆರಂಭಿಸದೆ?

A
ದಿವ್ಯ ಪುಸ್ತಕಾಲಯ
B
ದೃಷ್ಟಿ ಪುಸ್ತಕಾಲಯ
C
ಸುಗಮ್ಯ ಪುಸ್ತಕಾಲಯ
D
ಸುಲಭ್ ಪುಸ್ತಕಾಲಯ
Question 7 Explanation: 
ಸುಗಮ್ಯ ಪುಸ್ತಕಾಲಯ:

ದೃಷ್ಟಿ ಮಾಂದ್ಯರಿಗೆ ಓದುವ ಅವಕಾಶವನ್ನು ಕಲ್ಪಿಸುವ ದಿಸೆಯಿಂದ ಕೇಂದ್ರ ಸರ್ಕಾರ ಸುಗಮ್ಯ ಪುಸ್ತಕಾಲಯವನ್ನು ಇತ್ತೀಚೆಗೆ ಆರಂಭಿಸಿದೆ. ಇದೊಂದು ಆನ್ ಲೈನ್ ಲೈಬ್ರರಿಯಾಗಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ವಿವಿಧ ಭಾಷೆಯಲ್ಲಿ ಲಭಿಸಲಿವೆ. ದೃಷ್ಟಿ ಮಾಂದ್ಯರು ಕೇವಲ ಬಟನ್ ಒತ್ತುವ ಮೂಲಕ ತಮಗೆ ಬೇಕಾದ ಪುಸ್ತಕಗಳನ್ನು ಓದಬಹುದಾಗಿದೆ. ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್ ಮೂಲಕ ಸಹ ಪುಸ್ತಕಗಳನ್ನು ಓದಬಹುದಾಗಿದೆ. ಈ ಆನ್ ಲೈನ್ ಲೈಬ್ರರಿಯನ್ನು ಡೈಸಿ ಫೋರಂ ಆಫ್ ಇಂಡಿಯಾ ಮತ್ತು ಬುಕ್ ಶೇರ್ ಸಹಯೋಗದೊಂದಿಗೆ ಆರಂಭಿಸಲಾಗಿದೆ.

Question 8

8.ಈ ಕೆಳಗಿನ ಯಾವ ದೇಶ 2016 ಭಾರತ-ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ(International Film Festival of India) ಆದ್ಯತಾ ದೇಶವಾಗಿದೆ?

A
ದಕ್ಷಿಣ ಕೊರಿಯಾ
B
ರಷ್ಯಾ
C
ಚೀನಾ
D
ಪಾಕಿಸ್ತಾನ
Question 8 Explanation: 
ದಕ್ಷಿಣ ಕೊರಿಯಾ:

47ನೇ ಭಾರತ-ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನವೆಂಬರ್ ನಲ್ಲಿ ನಡೆಯಲಿದೆ. ಈ ಬಾರಿಯ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಕೊರಿಯಾ ಆದ್ಯತಾ ರಾಷ್ಟ್ರವಾಗಿದ್ದು, ದಕ್ಷಿಣ ಕೊರಿಯಾದ ಪ್ರಮುಖ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು ಹಾಗೂ ಕೊರಿಯಾದ ಪ್ರಸಿದ್ದ ಸಿನಿಮಾ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

Question 9

9.“ಥಿಯೇಟರ್ ಆಫ್ ಡೆಮೋಕ್ರಸಿ (Theatre of Democracy)” ಪುಸ್ತಕದ ಲೇಖಕರು ______?

A
ಶಿವ್ ವಿಶ್ವನಾಥನ್
B
ಕುಮಾರ ಚೌಧರಿ
C
ಅಮಿತಾವ್ ಘೋಷ್
D
ರವೀಂದ್ರ ಸಿಂಗ್
Question 9 Explanation: 
ಶಿವ್ ವಿಶ್ವನಾಥನ್
Question 10

10.ಇತ್ತೀಚೆಗೆ ನಿಧನರಾದ ಕೆ.ಕೆ. ಶ್ರೀಧರನ್ ನಾಯರ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?

A
ಕ್ರೀಡೆ
B
ಪತ್ರಿಕೋದ್ಯಮ
C
ವಿಜ್ಞಾನ
D
ಸಾಹಿತ್ಯ
Question 10 Explanation: 
ಪತ್ರಿಕೋದ್ಯಮ:

ಕೆ.ಕೆ.ಶ್ರೀಧರನ್ ಅವರು ಮಲಯಾಳಂ ನ ಮಾತೃಭೂಮಿ ನಿಯತಕಾಲಿಕೆಯ ಮಾಜಿ ಸಂಪಾದಕರು. 86 ವರ್ಷದ ಶ್ರೀಧರನ್ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕೇರಳದ ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಸಂಸ್ಥೆ ಮಾತೃಭೂಮಿ ಸಾಪ್ತಾಯಿಕ ನಿಯತಕಾಲಿಕೆಯನ್ನು ಪ್ರಕಟಿಸುತ್ತಿದೆ.

There are 10 questions to complete.

Leave a Comment

This site uses Akismet to reduce spam. Learn how your comment data is processed.