ರಿಯೋ ಒಲಂಪಿಕ್ಸ್ ಶೂಟಿಂಗ್ ವಿಭಾಗದಲ್ಲಿ ಭಾರತದ ಶೂಟರ್ ಗಳು ತೋರಿದ ಕಳಪೆ ಪ್ರದರ್ಶನದ ಪರಾರ್ಮಶೆ ಮಾಡಲು ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ(NRAI) ಸಮಿತಿ ರಚಿಸಿದೆ. ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವ ಶೂಟರ್ ಅಭಿನವ್ ಬಿಂದ್ರಾ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯು ನಾಲ್ಕು ವಾರದೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ.
- ಒಲಂಪಿಕ್ಸ್ ನ ಶೂಟಿಂಗ್ ನಲ್ಲಿ ಭಾರತದ ಶೂಟರ್ ಗಳು ಪದಕ ಗೆಲ್ಲದೆ ವಿಫಲರಾಗಲು ಕಾರಣವೇನು ಎಂಬುದನ್ನು ಸಮಿತಿ ಅಧ್ಯಯನ ನಡೆಸಲಿದೆ.
- ಮುಂದಿನ ಒಲಂಪಿಕ್ಸ್ ನಲ್ಲಿ ಇದೇ ರೀತಿ ವೈಫಲ್ಯತೆ ಮುಂದುವರೆಯದಿರಲು NRAI ತೆಗೆದುಕೊಳ್ಳಬೇಕಾಗಿರುವ ಅಗತ್ಯ ಕ್ರಮಗಳನ್ನು ಸಮಿತಿ ಶಿಫಾರಸ್ಸು ಮಾಡಲಿದೆ.
ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ:
- ಶೂಟಿಂಗ್ ಕ್ರೀಡೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾವನ್ನು 1951 ರಲ್ಲಿ ಸ್ಥಾಪಿಸಲಾಗಿದೆ.
- ಅಂತಾರಾಷ್ಟ್ರೀಯ ಶೂಟಿಂಗ್ ಫೆಡೆರೇಶನ್ ಮತ್ತು ಭಾರತೀಯ ಒಲಂಪಿಕ್ ಅಸೋಸಿಯೇಶನ್ ಮಾನ್ಯತೆ ಪಡೆದಿದೆ.
- ಲೋಕಸಭೆಯ ಮೊದಲ ಸ್ಪೀಕರ್ ಜಿ.ವಿ.ಮಾವ್ಳಂಕರ್ ಅವರು NRAIನ ಸಂಸ್ಥಾಪಕರು ಮತ್ತು ಮೊದಲ ಅಧ್ಯಕ್ಷರು.
- ಪ್ರಸ್ತುತ ರಣವೀರ್ ಸಿಂಗ್ NRAIನ ಅಧ್ಯಕ್ಷರಾಗಿದ್ದಾರೆ.
[…] […]