ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-18,19, 2016
Question 1 |
1.2016 ಚೀನಾ ಬ್ಯಾಡ್ಮಿಂಟನ್ ಓಪನ್ ಟೂರ್ನಿಯಲ್ಲಿ ಪಿ ವಿ ಸಿಂಧು ಯಾರನ್ನು ಮಣಿಸುವ ಮೂಲಕ ಚಾಂಪಿಯನ್ ಆದರು?
ಸನ್ ಯು | |
ಶಿಂಗ್ ಕಿ ಸನ್ | |
ಕರೋಲಿನ ಮರಿನ್ | |
ಸಂಗ್ ಕಿ ಸೂಯಿ |
ಒಲಿಂಪಿಕ್ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಸ್ಥಳೀಯ ಆಟಗಾರ್ತಿ ಸನ್ ಯು ಅವರನ್ನು 21-11, 17-21, 21-11 ಸೆಟ್ಗಳ ಅಂತರದಲ್ಲಿ ಮಣಿಸಿ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.
Question 2 |
2.ಈ ಕೆಳಗಿನ ರಾಜ್ಯಗಳನ್ನು ಗಮನಿಸಿ:
I) ಅರುಣಾಚಲ ಪ್ರದೇಶ
II) ಸಿಕ್ಕಿಂ
III) ನಾಗಾಲ್ಯಾಂಡ್
IV) ಮಿಜೋರಾಂ
V) ಮಣಿಪುರ
ಈ ಮೇಲಿನ ಯಾವ ರಾಜ್ಯಗಳ ಬುಡಕಟ್ಟು ಜನರು ಆದಾಯ ತೆರಿಗೆ ಪಾವತಿಯಿಂದ ವಿನಾಯತಿ ನೀಡಲಾಗಿದೆ?
I, II & III | |
II, III & IV | |
I, III, IV & V | |
ಮೇಲಿನ ಎಲ್ಲವೂ |
ಈಶಾನ್ಯ ಭಾಗದ ಐದು ರಾಜ್ಯಗಳಾದ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದ ಬುಡಕಟ್ಟು ಜನರು ಆದಾಯ ತೆರಿಗೆ ಪಾವತಿಸುವುದರಿಂದ ವಿನಾಯತಿ ನೀಡಲಾಗಿದೆ.
Question 3 |
3.2016 ಮದರ್ ತೆರೆಸಾ ಮೆಮೊರಿಯಲ್ ಇಂಟರ್ನ್ಯಾಷನಲ್ ಆವಾರ್ಡ್ ಫಾರ್ ಸೋಶಿಯಲ್ ಜಸ್ಟೀಸ್ ಅನ್ನು ಯಾರಿಗೆ ನೀಡಲಾಗಿದೆ?
ಮಹಮ್ಮದ್ ಹಮೀರ್ | |
ಫರಾಜ್ ಅಯಾಜ್ ಹುಸೇನ್ | |
ಅಬಿಂತ ಕಬೀರ್ | |
ಇಮ್ರಾನ್ ಹಸೀಫ್ |
ಬಾಂಗ್ಲದೇಶ ಫರಾಜ್ ಅಯಾಜ್ ಹುಸೇನ್ ಅವರಿಗೆ 2016 ಮದರ್ ತೆರೆಸಾ ಮೆಮೊರಿಯಲ್ ಇಂಟರ್ನ್ಯಾಷನಲ್ ಆವಾರ್ಡ್ ಫಾರ್ ಸೋಶಿಯಲ್ ಜಸ್ಟೀಸ್ (Mother Teresa Memorial International Award for Social Justice). ಹುಸೇನ್ ರವರು ಜುಲೈ 1 ರಂದು ಬಾಂಗ್ಲದೇಶದ ಹೊಲಿ ಆರ್ಟಿಸನ್ ಬೇಕರಿ ಮೇಲೆ ನಡೆದ ಉಗ್ರರ ದಾಳೆ ವೇಳೆ ತನ್ನ ಸ್ನೇಹಿತರಿಗಾಗಿ ಪ್ರಾಣ ಬಿಟ್ಟಿದ್ದರು. ಇದೇ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಮರೋಣತ್ತರವಾಗಿ ನೀಡಲಾಗಿದೆ.
Question 4 |
4. ಕಿಂಬರ್ಲಿ ಪ್ರೊಸೆಸ್ ಸರ್ಟಿಫಿಕೇಟ್ ಸ್ಕೀಮ್ (Kimberly Process Certificate Scheme)ನ 2019ನೇ ವರ್ಷದ ಅಧ್ಯಕ್ಷತೆಯನ್ನು ಯಾವ ರಾಷ್ಟ್ರವಹಿಸಲಿದೆ?
ಅಮೆರಿಕ | |
ಭಾರತ | |
ಬಾಂಗ್ಲದೇಶ | |
ಚೀನಾ |
2019ನೇ ವರ್ಷದ ಕಿಂಬರ್ಲಿ ಪ್ರೊಸೆಸ್ ಸರ್ಟಿಫಿಕೇಟ್ ಸ್ಕೀಮ್ ಅವಧಿಗೆ ಭಾರತ ಅಧ್ಯಕ್ಷತೆ ವಹಿಸಲಿದೆ. ಅಲ್ಲದೇ 2018ನೇ ವರ್ಷಕ್ಕೆ ಉಪ ಅಧ್ಯಕ್ಷ ಸ್ಥಾನ ಭಾರತಕ್ಕೆ ಲಭಿಸಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಕಿಂಬರ್ಲಿ ಪ್ರಾನೆಟರಿ ಮೀಟಿಂಗ್ ನಲ್ಲಿ ಈ ವಿಷಯವನ್ನು ಘೋಷಿಸಲಾಯಿತು. ಭಾರತ ವಿಶ್ವಸಂಸ್ಥೆಯ ಕಚ್ಚಾ ವಜ್ರ ರಫ್ತು/ಆಮದು ಮಾಡುವ ಕಿಂಬರ್ಲಿಯ ಯೋಜನೆಯ ಸಂಸ್ಥಾಪನ ಸದಸ್ಯ ರಾಷ್ಟ್ರವಾಗಿದೆ. ಅಧ್ಯಕ್ಷ ಸ್ಥಾನ ವಾರ್ಷಿಕವಾಗಿ ಬದಲಾಗುತ್ತದೆ.
Question 5 |
5. ವಿಶ್ವ ಶೌಚಾಲಯವ ದಿನವನ್ನ _______ ರಂದು ಆಚರಿಸಲಾಗುತ್ತದೆ?
ನವೆಂಬರ್ 18 | |
ನವೆಂಬರ್ 19 | |
ನವೆಂಬರ್ 17 | |
ನವೆಂಬರ್ 20 |
ವಿಶ್ವ ಶೌಚಾಲಯ ದಿನವನ್ನು ಪ್ರತಿ ವರ್ಷ ನವೆಂಬರ್ 19 ರಂದು ಆಚರಿಸಲಾಗುತ್ತದೆ. ನೈಮರ್ಲ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ನೈರ್ಮಲ್ಯತೆ ಕಾಪಾಡಲು ಭಾಗವಹಿಸುವಂತೆ ಪ್ರೇರೆಪಿಸುವುದು ಈ ದಿನದ ಮಹತ್ವ. ಈ ವರ್ಷದ ಆಚರಣೆಯ ಥೀಮ್ “ಟಾಯ್ಲೆಟ್ಸ್ ಅಂಡ್ ಜಾಬ್ಸ್ (Toilets and Jobs)”.
Question 6 |
6. 2016 ಸುಮಿತ್ರ ಚರತ್ ರಾಮ್ ಜೀವಮಾನ ಸಾಧನೆ ಪ್ರಶಸ್ತಿ(Sumitra Charat Ram Award) ಯನ್ನು ಯಾರಿಗೆ ನೀಡಲಾಗುತ್ತಿದೆ?
ಪಂಡಿತ್ ಹರಿಪ್ರಸಾದ್ ಚೌರಸಿಯಾ | |
ಬಾಲಮುರಳಿ ಕೃಷ್ಣ | |
ಪಂಡಿತ್ ರವಿಶಂಕರ್ ಗುರೂಜಿ | |
ಬಿರ್ಜು ಮಹಾರಾಜ್ |
ಪ್ರಖ್ಯಾತ ಕೊಳಲು ವಾದಕ ಪಂಡಿತ್ ಹರಿ ಪ್ರಸಾದ್ ಚೌರಸಿಯಾ ಅವರನ್ನು 2016 ಸುಮಿತ್ರ ಚರತ್ ರಾಮ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಚೌರಸಿಯಾ ನೀಡಿರುವ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯನ್ನು ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಅಥವಾ ಭಾರತೀಯ ಕಲೆ ಮತ್ತು ಸಂಸ್ಕೃತಿಯಲ್ಲಿ ಕಳೆದ 15 ವರ್ಷಗಳಿಂದ ತೊಡಗಿಸಿಕೊಂಡವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
Question 7 |
7. ಏರ್ಟೆಲ್ ದೆಹಲಿ ಹಾಫ್ ಮ್ಯಾರಥನ್ ಪುರುಷರ ವಿಭಾಗದಲ್ಲಿ ಪ್ರಶಸ್ತಿ“ಎಲಿಡ್ ಕಿಪ್ಚೊಗೆ (Eliud Kipchoge)” ಯಾವ ದೇಶದವರು?
ಜಮೈಕಾ | |
ಇಥೊಪಿಯಾ | |
ಕೀನ್ಯಾ | |
ಮ್ಯಾನ್ಮಾರ್ |
ಕೀನ್ಯಾದ ರಿಯೋ ಒಲಂಪಿಕ್ ಚಾಂಪಿಯನ್ ಎಲಿಡ್ ಕಿಪ್ಚೊಗೆ ರವರು 9ನೇ ಏರ್ಟೆಲ್ ದೆಹಲಿ ಹಾಫ್ ಮ್ಯಾರಥನ್ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಇಥೊಪಿಯಾದ ವರ್ಕನೆಷ್ ದೆಗೆಫಾ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ವಿಶ್ವದ ರಾಷ್ಟ್ರಗಳಿಂದ ಸರಿಸುಮಾರು 34000 ಜನರು ಈ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.
Question 8 |
8. “ರಾಜೀವ್ ಹತ್ಯೆ: ಗೊತ್ತಿಲ್ಲದ ಸತ್ಯಗಳು” ಇದು ಯಾರ ಆತ್ಮಕಥೆ _______?
ಪ್ರಿಯಾಂಕ ವಾದ್ರಾ | |
ನಳಿನಿ ಶ್ರೀಹರನ್ | |
ತಂಗವೇಲು | |
ಸೋನಿಯಾ ಗಾಂಧಿ |
“ರಾಜೀವ್ ಹತ್ಯೆ: ಗೊತ್ತಿಲ್ಲದ ಸತ್ಯಗಳು” ಇದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್ ಅವರ ಆತ್ಮಚರಿತ್ರೆ. ತಮಿಳು ಭಾಷೆಯಲ್ಲಿರುವ ಪುಸ್ತಕ 600 ಪುಟಗಳನ್ನು ಹೊಂದಿದೆ. ನಳಿನಿ ಈಗ ತಮಿಳುನಾಡಿನ ವೆಲ್ಲೂರು ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಳೆ. 2008ರ ಮಾರ್ಚ್ನಲ್ಲಿ ಪ್ರಿಯಾಂಕಾ ಗಾಂಧಿ ಜತೆಗಿನ ಭೇಟಿಯ ಕುರಿತ ವಿವರಗಳಿಗೆ ಪುಸ್ತಕದಲ್ಲಿ ಆದ್ಯತೆ ನೀಡಲಾಗಿದೆ. ಎಲ್ಟಿಟಿಇ ಪರ ಸಹಾನುಭೂತಿ ಹೊಂದಿರುವವರ ಅಭಿಪ್ರಾಯಗಳಿಗಾಗಿ 100 ಪುಟಗಳನ್ನು ಮೀಸಲಿಡಲಾಗಿದೆ. ಎಲ್ಟಿಟಿಇ ಸದಸ್ಯ ಶ್ರೀಹರನ್ (ಮುರುಗನ್) ಜತೆಗಿನ ಪ್ರಣಯ ಮತ್ತು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಘಟನೆಗಳ ಬಗ್ಗೆಯೂ ವಿವರಿಸಿದ್ದಾಳೆ.
Question 9 |
9.ಇವರಲ್ಲಿ “ಹೋಮ್ ರೂಲ್ ಚಳುವಳಿ”ಯನ್ನು ಸ್ಥಾಪಿಸಿದವರನ್ನು ಗುರುತಿಸಿ:
I) ಬಾಲ ಗಂಗಾಧರ ತಿಲಕ್
II) ಅನ್ನಿ ಬೆಸೆಂಟ್
III) ಮಹಮ್ಮದ್ ಅಲಿ ಜಿನ್ನಾ
III) ಮಹಾತ್ಮ ಗಾಂಧಿ
ಸರಿಯಾದ ಉತ್ತರವನ್ನು ಕೆಳಗೆ ನೀಡಿರುವ ಕೋಡ್ ಮೂಲಕ ಗುರುತಿಸಿ?
I & II | |
II & III | |
III & IV | |
I, II, III & IV |
Question 10 |
10.ವಿಟಮಿನ್ “ಸಿ”ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ:
ವಿಟಮಿನ್ ಸಿ ಕೇವಲ ವಿಟಮಿನ್ ಅಲ್ಲದೇ ಹಾರ್ಮೋನ್ ಸಹ ಆಗಿದೆ | |
ಸ್ಕರ್ವಿ ಕಾಯಿಲೆ ವಿಟಮಿನ್ ಸಿ ಕೊರತೆಯಿಂದ ಬರುವ ಕಾಯಿಲೆ | |
ವಿಟಮಿನ್ ಸಿ ನೀರಿನಲ್ಲಿ ಕರಗುವ ವಿಟಮಿನ್ | |
ಕೇವಲ ವಿಟಮಿನ್ ಸಿ ಯನ್ನು ಬಾಹ್ಯವಾಗಿ ಸೇವಿಸಬೇಕು ಉಳಿದೆಲ್ಲವು ದೇಹದಲ್ಲಿ ಉತ್ಪತ್ತಿಯಾಗುತ್ತವೆ |
[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-18.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
nice