ಯುಎಸ್ ಸೆನೆಟ್ ಗೆ ಆಯ್ಕೆಯಾದ ಭಾರತ-ಅಮೆರಿಕ ಸಂಜಾತೆ ಕಮಲಾ ಹ್ಯಾರಿಸ್

ಭಾರತ ಸಂಜಾತೆ ಕ್ಯಾಲಿಫೋರ್ನಿಯದ ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್ ಅಮೆರಿಕದ ಸೆನೆಟರ್ ಆಗಿ ಆಯ್ಕೆಯಾಗುವುದರೊಂದಿಗೆ ಇತಿಹಾಸ ಬರೆದಿದ್ದಾರೆ. ತವರು ರಾಜ್ಯ ಕ್ಯಾಲಿಫೋರ್ನಿಯದಲ್ಲಿ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಲೊರೆಟ್ಟಾ ಸ್ಯಾಂಚೆಝ್ ವಿರುದ್ಧ 34.8 ಶೇ. ಅಂಕಗಳ ಅಂತರದಿಂದ ಗೆಲುವು ಸಾಧಿಸಿರುವ 51ರ ಪ್ರಾಯದ ಹ್ಯಾರಿಸ್ 1,904,714 ಮತಗಳನ್ನು ಪಡೆದಿದ್ದರು. ಹ್ಯಾರಿಸ್ ಅಮೆರಿಕದ ಶಾಸಕಾಂಗದ ಮೇಲ್ಮನೆ ಸೆನೆಟ್ಗೆ ಆಯ್ಕೆಯಾದ ಮೊದಲ ಭಾರತೀಯ ಸಂಜಾತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಮಲಾ ಹ್ಯಾರಿಸ್ ಬಗ್ಗೆ:

  • ಕಮಲಾ ಹ್ಯಾರಿಸ್ ರವರು ಅಮೆರಿಕದ ರಾಜಕಾರಿಣಿ, ವಕೀಲೆ ಮತ್ತು ಡೆಮಾಕ್ರೆಟಿಕ್ ಪಕ್ಷದ ಸದಸ್ಯೆ.
  • ಕಮಲಾ ರವರು ಭಾರತ-ಅಮೆರಿಕ ಸಂಜಾತೆ ಡಾ. ಶ್ಯಾಮಲ ಗೋಪಾಲನ್ ಹ್ಯಾರಿಸ್ ಮತ್ತು ಜಮೈಕನ್-ಅಮೆರಿಕ ಪ್ರಜೆ ಡೊನಾಲ್ಡ್ ಹ್ಯಾರಿಸ್ ರವರ ಪುತ್ರಿ.
  • 2011 ರಿಂದ ಇವರು ಕ್ಯಾಲಿಪೋರ್ನಿಯಾದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2010 ರಲ್ಲಿ ಮೊದಲ ಬಾರಿಗೆ ಕ್ಯಾಲಿಪೋರ್ನಿಯಾದ ಅಟಾರ್ನಿ ಜನರಲ್ ಆಗಿ ಆಯ್ಕೆಯಾಗಿದ್ದರು. 2014 ರಲ್ಲಿ ಎರಡನೇ ಅವಧಿಗೆ ಪುನರ್ ಆಯ್ಕೆಯಾಗಿದ್ದರು.

ಅಮೆರಿಕದ 45ನೇ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಆಯ್ಕೆ

ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ರವರು ಅಮೆರಿಕ ಸಂಯುಕ್ತ ಸಂಸ್ಥಾನದ 45ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಟ್ರಂಪ್ ರವರು ಡ್ವೈಟ್ ಡಿ ಐಸೊನ್ಹೋವರ್ (34ನೇ ಅಧ್ಯಕ್ಷ) ನಂತರ ರಾಜಕೀಯ ಅನುಭವವಿಲ್ಲದ ಅಧ್ಯಕ್ಷ ಸ್ಥಾನವನ್ನು ಹಿಡಿದ ಅಮೆರಿಕಾ ಮೊದಲ ಅಧ್ಯಕ್ಷ ಅಲ್ಲದೇ ಅಮೆರಿಕ ಇತಿಹಾಸದಲ್ಲೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿ. ಟ್ರಂಪ್ ರವರು ಒರಾಕ್ ಒಬಾಮ ರವರ ಉತ್ತರಾಧಿಕಾರಿಯಾಗಲಿದ್ದು, 20ನೇ ಜನವರಿ 2017 ರಂದು ಕಚೇರಿ ಪ್ರವೇಶ ಮಾಡಲಿದ್ದಾರೆ.

ಹಿನ್ನಲೆ:

ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಶೇ48 ಮತ ಪಡೆಯುವದರೊಂದಿಗೆ 279 ಸ್ಥಾನಗಳನ್ನು ಗೆದ್ದುಕೊಂಡರೆ ಅವರ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಶೇ47 ಮತ ಪಡೆದು  218 ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ.

ಟ್ರಂಪ್ ಬಗ್ಗೆ:

  • ಡೋನಾಲ್ಡ್ ಜಾನ್ ಟ್ರಂಪ್ ಆಗಿ ಜೂನ್ 14, 1946 ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಜನನ.
  • ಟ್ರಂಪ್ ರವರು ರಿಯಲ್ ಎಸ್ಟೇಟ್ ಹಾಗೂ ಇತರೆ ವ್ಯವಹಾರಗಳನ್ನು ಹೊಂದಿರುವ ಟ್ರಂಪ್ ಆರ್ಗನೈಸೇಷನ್ ನ ಮುಖ್ಯಸ್ಥ ಹಾಗೂ ಅಧ್ಯಕ್ಷರಾಗಿದ್ದಾರೆ.
  • ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಪದವಿ ಪಡೆದಿರುವ ಟ್ರಂಪ್ ಅವರು 1968 ರಲ್ಲಿ ತಮ್ಮ ತಂದೆಯ ಸಂಸ್ಥೆಯನ್ನು ಸೇರಿಕೊಂಡರು. 1971 ರಲ್ಲಿ ಟ್ರಂಪ್ ಈ ಸಂಸ್ಥೆಯ ಸಂಪೂರ್ಣ ಅಧಿಕಾರವನ್ನು ವಹಿಸಿಕೊಂಡು ಈ ಸಂಸ್ಥೆಗೆ ಟ್ರಂಪ್ ಆರ್ಗನೈಸೇಷನ್ ಎಂದು ಹೆಸರಿಟ್ಟರು.
  • 2016 ರಲ್ಲಿ ಫೋರ್ಬ್ಸ್ ನಿಯತಕಾಲಿಕೆ ಟ್ರಂಪ್ ಅವರನ್ನು ವಿಶ್ವದ 324ನೇ ಶ್ರೀಮಂತ ವ್ಯಕ್ತಿ ಹಾಗೂ ಅಮೆರಿಕದ 156ನೇ ಶ್ರೀಮಂತ ಎಂದು ಬಣ್ಣಿಸಿತ್ತು.

ಚೀನಾದ “ಸನ್ ವೇ ಟೈಹುಲೈಟ್” ವಿಶ್ವದ ನಂ.1 ಸೂಪರ್ ಕಂಪ್ಯೂಟರ್

ಇತ್ತೀಚೆಗೆ ಬಿಡುಗಡೆಗೊಂಡ ವಿಶ್ವದ ಟಾಪ್ 500 ಸೂಪರ್ ಕಂಪ್ಯೂಟರ್ ಗಳ 49ನೇ ಆವೃತ್ತಿಯ ಪಟ್ಟಿಯಲ್ಲಿ ಚೀನಾದ “ಸನ್ ವೇ ಟೈಹುಲೈಟ್ (Sunway Taihulight)” ವಿಶ್ವದ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್ ಎನಿಸುವ ಮೂಲಕ ನಂ.1 ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಈ ಪಟ್ಟಿಯಲ್ಲಿ ಚೀನಾದಲ್ಲಿ ಅಳವಡಿಸಿಲಾಗಿರುವ ಸೂಪರ್ ಕಂಪ್ಯೂಟರ್ ಗಳ ಸಂಖ್ಯೆ 168 ರಿಂದ 171ಕ್ಕೆ ಏರಿಕೆಯಾಗಿದೆ.

  • ಸನ್ ವೇ ಟೈಹುಲೈಟ್ ಸೂಪರ್ ಕಂಪ್ಯೂಟರ್ ಅನ್ನು ಚೀನಾದಲ್ಲೆ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ದಿಪಡಿಸಲಾದ ಪ್ರೊಸೆಸರ್ ಬಳಸಿ ವಿನ್ಯಾಸಗೊಳಿಸಲಾಗಿದೆ.
  • ಚೀನಾದ ನ್ಯಾಷನಲ್ ರಿಸರ್ಚ್ ಸೆಂಟರ್ ಆಫ್ ಪ್ಯಾರಲೆಲ್ ಕಂಪ್ಯೂಟರ್ ಎಂಜನಿಯರಿಂಗ್ ಅಂಡ್ ಟೆಕ್ನಾಲಜಿ ಇದನ್ನು ವಿನ್ಯಾಸಗೊಳಿಸಿದೆ.
  • ಪ್ರತಿ ಸೆಕೆಂಡ್ ಗೆ 93 ಕ್ವಾಡ್ರಿಲಿಯನ್ಸ್ ಕ್ಯಾಲುಕೇಷನ್ ಮಾಡುವ ಸಾಮರ್ಥ್ಯವನ್ನು ಈ ಸೂಪರ್ ಕಂಪ್ಯೂಟರ್ ಹೊಂದಿದೆ. ಚೀನಾದ ಮತ್ತೊಂದು ಸೂಪರ್ ಕಂಪ್ಯೂಟರ್ ಆದ ಟಿಯಾನೆ-2 ಗಿಂತಲೂ ಮೂರು ಪಟ್ಟು ಹೆಚ್ಚು ವೇಗವನ್ನು ಹೊಂದಿದೆ.
  • ಜೂನ್ 2016 ರವರೆಗೆ ಟಿಯಾನೆ-2 ವಿಶ್ವದ ನಂ.1 ಸೂಪರ್ ಕಂಪ್ಯೂಟರ್ ಎನಿಸಿತ್ತು. ಸತತವಾಗಿ ಮೂರು ವರ್ಷ ಈ ಸ್ಥಾನವನ್ನು ಗಿಟ್ಟಿಸಿಕೊಂಡಿತ್ತು.
  • ಟೈಹುಲೈಟ್ ಸೂಪರ್ ಕಂಪ್ಯೂಟರ್ ಅನ್ನು ಹವಾಮಾನ, ವಾತಾವರಣ, ಜೀವ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆಗೆ ಬಳಸಲಾಗುವುದು.
  • ಎರಡನೇ ಸ್ಥಾನದಲ್ಲಿ ಚೀನಾ ದೇಶದ್ದೆ ಆದ ಟಿಯಾನೆ-2, ಮೂರನೇ ಸ್ಥಾನದಲ್ಲಿ ಅಮೆರಿಕದ ಟೈಟಾನ್ ಮತ್ತು ನಾಲ್ಕನೇ ಸ್ಥಾನದಲ್ಲಿ ಐಬಿಎಮ್ ನ ಸೆಕ್ವೊಯ ಇದೆ.

One Thought to “ಪ್ರಚಲಿತ ವಿದ್ಯಮಾನಗಳು- ನವೆಂಬರ್-16, 2016”

Leave a Comment

This site uses Akismet to reduce spam. Learn how your comment data is processed.