ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-21,22, 2016
Question 1 |
1.2017 ಹವಾಮಾನ ಬದಲಾವಣೆ ಕಾರ್ಯನಿರ್ವಹಣೆ ಸೂಚ್ಯಂಕ (Climate Change Performance Index) ದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
55 | |
20 | |
63 | |
42 |
2017ಹವಾಮಾನ ಬದಲಾವಣೆ ಕಾರ್ಯನಿರ್ವಹಣೆ ಸೂಚ್ಯಂಕದಲ್ಲಿ ಭಾರತ 20ನೇ ಸ್ಥಾನವನ್ನು ಪಡೆದುಕೊಂಡಿದೆ. ಜರ್ಮನ್ ವಾಚ್ ಅಂಡ್ ಕ್ಲೈಮೆಟ್ ಆಕ್ಷನ್ ನೆಟವರ್ಕ್ ಯುರೋಪ್ ಈ ಸೂಚ್ಯಂಕವನ್ನು ಹೊರತಂದಿದೆ. ಮೊದಲ ಮೂರು ಸ್ಥಾನವನ್ನು ಖಾಲಿ ಬಿಡಲಾಗಿದ್ದು, ನಾಲ್ಕನೇ ಸ್ಥಾನದಲ್ಲಿ ಫ್ರಾನ್ಸ್ ಪಡೆದುಕೊಂಡಿದೆ.
Question 2 |
2. ವಿಶ್ವದ ಮೊದಲ ಕೃತಕ ಹೃದಯ ಕಸಿ ಮಾಡಿದ ಪ್ರಸಿದ್ದ ಶಸ್ತ್ರಚಿಕಿತ್ಸಕ “ಡೆಂಟನ್ ಕೂಲಿ”ಯಾವ ದೇಶದವರು?
ಅಮೆರಿಕ | |
ಫ್ರಾನ್ಸ್ | |
ಕೆನಡಾ | |
ಆಸ್ಟ್ರೇಲಿಯಾ |
ಅಮೆರಿಕದ ಪ್ರಸಿದ್ದ ಹೈದಯ ತಜ್ಞ ಡಾ. ಡೆಂಟನ್ ಕೂಲಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಕೂಲಿ ಅವರು ವಿಶ್ವದ ಮೊದಲ ಕೃತಕ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಿ ವಿಶ್ವ ವಿಖ್ಯಾತಿಗೊಳಿಸಿದ್ದರು. ಟೆಕ್ಸಾಸ್ ಹೃದಯ ಸಂಸ್ಥೆಯ ಸಂಸ್ಥಾಪಕರಾದ ಕೂಲಿ ಅವರು ಪ್ರಸ್ತುತ ಚಾಲ್ತಿಯಲ್ಲಿರು ಅನೇಕ ಹೃದಯ ಸಂಬಂಧಿ ಚಿಕಿತ್ಸೆ ತಂತ್ರಜ್ಞಾನಗಳನ್ನು ಅಭಿವೃದ್ದಿಪಡಿಸುವಲ್ಲಿ ಮುಂಚೂಣಿಯಲ್ಲಿದ್ದರು. ಸ್ವೀಡನ್, ಯುಕೆ ಮತ್ತು ಸಿಪ್ರಸ್ ನಂತರ ಸ್ಥಾನದಲ್ಲಿವೆ.
Question 3 |
3. 2016 ಶಕ್ತಿ ಭಟ್ ಮೊದಲ ಪುಸ್ತಕ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಅಕ್ಷಯ ಮುಕುಲ್ | |
ಚೇತನ್ ಭಗತ್ | |
ರಾಜೇಶ್ ಕುಲಕರ್ಣಿ | |
ಶರತ್ ಬಾದಲ್ |
ಹಿರಿಯ ಪತ್ರಕರ್ತ ಅಕ್ಷಯ ಮುಕುಲ್ ರವರಿಗೆ 2016 ಶಕ್ತಿ ಭಟ್ ಮೊದಲ ಪುಸ್ತಕ ಪ್ರಶಸ್ತಿಯನ್ನು ನೀಡಲಾಗಿದೆ. ಮುಕುಲ್ ರವರ ಪುಸ್ತಕ “ಗೀತಾ ಪ್ರೆಸ್ ಅಂಡ್ ದಿ ಮೇಕಿಂಗ್ ಆಫ್ ಹಿಂದೂ ಇಂಡಿಯಾ” ಪುಸ್ತಕಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
Question 4 |
4. ಇತ್ತೀಚೆಗೆ ನಿಧನರಾದ “ವಿಲಿಯಂ ಟ್ರೆವರ್ (William Trevor)” ಯಾವ ದೇಶದ ಪ್ರಸಿದ್ದ ಸಾಹಿತಿ?
ಐರ್ಲ್ಯಾಂಡ್ | |
ಪೋರ್ಚಗಲ್ | |
ಇಟಲಿ | |
ಮೆಕ್ಸಿಕೊ |
ಐರ್ಲ್ಯಾಂಡ್ ನ ಪ್ರಸಿದ್ದ ಸಾಹಿತಿ “ವಿಲಿಯಂ ಟ್ರವರ್” ನಿಧನರಾದರು. ಟ್ರವರ್ ರವರು ಸಣ್ಣಕಥೆಗಳ ಮೂಲಕ ಓದುಗರ ಮನಗೆದ್ದಿದ್ದರು.
Question 5 |
5. ಭಾರತದ ರಸ್ತೆ ಹೆದ್ದಾರಿಗಳ ಪೈಕಿ ಅತಿ ದೊಡ್ಡ ಎಕ್ಸ್ಪ್ರೆಸ್ ಹೆದ್ದಾರಿ ಯಾವುದು?
ಆಗ್ರಾ –ಲಕ್ನೋ ಎಕ್ಸ್ಪ್ರೆಸ್ ಹೆದ್ದಾರಿ | |
ಅಹಮದಾಬಾದ್-ವಡೋದರ ಎಕ್ಸ್ಪ್ರೆಸ್ ಹೆದ್ದಾರಿ | |
ಮುಂಬೈ-ಅಹಮದಾಬಾದ್ ಎಕ್ಸ್ಪ್ರೆಸ್ ಹೆದ್ದಾರಿ | |
ಕನ್ಯಾಕುಮಾರಿ ಎಕ್ಸ್ಪ್ರೆಸ್ ಹೆದ್ದಾರಿ |
ದೇಶದ ಅತಿದೊಡ್ಡ ಎಕ್ಸ್ಪ್ರೆಸ್ ಹೆದ್ದಾರಿ ಆಗ್ರಾ-ಲಕ್ನೋ ಎಕ್ಸ್ಪ್ರೆಸ್ ಹೆದ್ದಾರಿಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉದ್ಘಾಟಸಿದರು. ಇದರ ಉದ್ದ 302 ಕಿ.ಮೀ ಇದ್ದು, ಆರು ಪಥವನ್ನು ಹೊಂದಿದೆ. ಈ ಹಸಿರು ಹೆದ್ದಾರಿಯಿಂದ ಎರಡು ನಗರಗಳ ನಡುವಿನ ಸಂಚಾರ ಸಮಯ 3 ಗಂಟೆ 30 ನಿಮಿಷ ಕಡಿಮೆಯಾಗಲಿದೆ. ಅಷ್ಟೇ ಅಲ್ಲದೇ ಐಎಎಫ್ ಯುದ್ಧ ವಿಮಾನ ಇಳಿಯುವ ಸೌಲಭ್ಯವನ್ನು ಈ ರಸ್ತೆ ಹೊಂದಿದೆ.
Question 6 |
6. ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್ ಸೇರ್ಪಡೆಗೊಂಡ “ಕರೆನ್ ರೋಲ್ಟನ್ (Karen Rolton)” ಯಾವ ದೇಶದ ಮಹಿಳಾ ಕ್ರಿಕೆಟ್ ಆಟಗಾರ್ತಿ?
ಇಂಗ್ಲೆಂಡ್ | |
ದಕ್ಷಿಣ ಆಫ್ರಿಕಾ | |
ಆಸ್ಟ್ರೇಲಿಯಾ | |
ನ್ಯೂಜಿಲ್ಯಾಂಡ್ |
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಕರೆನ್ ರೋಲ್ಟನ್ ಅವರನ್ನು ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್ ಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ರೋಲ್ಟನ್ ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್ ಸೇರ್ಪಡೆಗೊಂಡ 81 ನೇಯವರು ಹಾಗೂ 6ನೇ ಮಹಿಳಾ ಆಟಗಾರ್ತಿ.
Question 7 |
7. ಈ ಕೆಳಗಿನವರುಗಳಲ್ಲಿ ಯಾರು ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF)ಯ ಈಗಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ?
ಅಂಥೋನಿ ಲೇಕ್ | |
ಸ್ವೆನ್ ಜುರ್ಗೆನ್ಸನ್ | |
ಇರಿನಾ ಬೊಕೊವ | |
ಜೋಸೆಟ್ ಸಿರಿನ್ |
ಯುನಿಸೆಫ್ ದೇಶದ ಅತಿ ದೊಡ್ಡ ಯು.ಎನ್.ಸಂಸ್ಥೆ. ಅಭಿವೃದ್ದಿಶೀಲ ದೇಶಗಳಲ್ಲಿ ಮಕ್ಕಳ ಮತ್ತು ತಾಯಂದಿರ ಧೀರ್ಘಕಾಲದ ಲೋಕೋಪಕಾರಿ ಮತ್ತು ಅಭಿವೃದ್ದಿಯ ನೆರವು ಒದಗಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಮಕ್ಕಳ ನಿಧಿ 1946 ರಂದು ನ್ಯೂಯಾರ್ಕ್ ನಗರದಲ್ಲಿ ಸ್ಥಾಪನೆಯಾಯಿತು. 1949ರಂದು ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿತು. ಎರಡನೆ ಮಹಾಯುದ್ದದ ನಂತರ ತೊಂದರೆಗೀಡಾದ ಮಕ್ಕಳಿಗೆ ಸಹಾಯಮಾಡುವುದು ಇದರ ಮೂಲ ಉದ್ದೇಶವಾಗಿತ್ತು.ನಂತರ 1953ರಲ್ಲಿ ಯುನಿಸೆಫ್ ವಿಶ್ವಸಂಸ್ಥೆಯ ಶಾಶ್ವತ ಭಾಗವಾಯಿತು..1965 ರಲ್ಲಿ,ಉತ್ತಮ ಸೇವೆಗಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಂಥೋನಿ ಲೇಕ್ ಯುನೆಸೆಫ್ ನ ಈಗಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಸ್ವೆನ್ ಜುರ್ಗೆನ್ಸನ್ ಯುನೆಸೆಫ್ ನ ಪ್ರಸ್ತುತ ಅಧ್ಯಕ್ಷರು.
Question 8 |
8. ಕೇಂದ್ರ ಗಾಜು ಮತ್ತು ಸೆರಾಮಿಕ್ ಸಂಶೋಧನಾ ಸಂಸ್ಥೆ ಯಾವ ನಗರದಲ್ಲಿದೆ?
ಹೈದ್ರಾಬಾದ್ | |
ಫರಿದಬಾದ್ | |
ಕೊಲ್ಕತ್ತಾ | |
ಲಕ್ನೋ |
ಕೇಂದ್ರ ಗಾಜು ಮತ್ತು ಸೆರಾಮಿಕ್ ಸಂಶೋಧನಾ ಸಂಸ್ಥೆ (Central Glass and Ceramic Research Centre) ಕೊಲ್ಕತ್ತಾದಲ್ಲಿದೆ.
Question 9 |
9. ಪ್ರಪ್ರಥಮ ಸಂಸ್ಕೃತ ಪ್ರಶಸ್ತಿ ಪಡೆದ “ಮಹಾ ಚಾಕ್ರಿ ಸಿರಿನ್ದೋರ್ನ್” ಯಾವ ದೇಶದವರು?
ಥಾಯ್ಲೆಂಡ್ | |
ಸಿರಿಯಾ | |
ಇರಾನ್ | |
ಮಲೇಷಿಯಾ |
ಥಾಯ್ಲೆಂಡ್ ರಾಣಿ ಮಹಾ ಚಾಕ್ರಿ ಸಿರಿನ್ದೋರ್ನ್ ರವರಿಗೆ ಪ್ರಪ್ರಥಮ ಸಂಸ್ಕೃತ ಪ್ರಶಸ್ತಿಯನ್ನು ನೀಡಲಾಗಿದೆ. ಸಂಸ್ಕೃತ ಭಾಷೆಗೆ ಅವರು ನೀಡಿರುವ ಕೊಡುಗೆ ಗಮನಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಭಾರತದ ಉಪರಾಷ್ಟ್ರಪತಿ ಮಹಮ್ಮದ್ ಹಮೀದ್ ಅನ್ಸಾರಿ ರವರು ಪ್ರಶಸ್ತಿಯನ್ನು ಪ್ರವಾಸಿ ಭಾರತೀಯ ಕೇಂದ್ರ, ನವದೆಹಲಿಯಲ್ಲಿ ಪ್ರಶಸ್ತಿಯನ್ನು ನೀಡಿದ್ದರು. ಪ್ರಶಸ್ತಿಯನ್ನು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಪ್ರಖ್ಯಾತ ಸಂಸ್ಕೃತ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.
Question 10 |
10. 2011ರ ಜನಗಣತಿ ಪ್ರಕಾರ ಅತಿ ಕಡಿಮೆ ಜನಸಂಖ್ಯೆ ಸಾಂದ್ರತೆಯನ್ನು ಹೊಂದಿರುವ ರಾಜ್ಯ ಯಾವುದು?
ಕೇರಳ | |
ಗೋವಾ | |
ಅರುಣಾಚಲ ಪ್ರದೇಶ | |
ಸಿಕ್ಕಿಂ |
ಅರುಣಾಚಲ ಪ್ರದೇಶ ಜನಸಾಂದ್ರತೆ 2011 ರ ಜನಗಣತಿ ಪ್ರಕಾರ ಪ್ರತಿ ಚದರ ಕಿ.ಮೀ 17 ರಷ್ಟಿದ್ದು, ದೇಶದಲ್ಲಿ ಅತಿ ಕಡಿಮೆ ಜನಸಾಂದ್ರತೆ ಹೊಂದಿದೆ. ನಂತರದ ಸ್ಥಾನದಲ್ಲಿದೆ ಮಿಜೋರಾಂ (52), ಜಮ್ಮು ಮತ್ತು ಕಾಶ್ಮೀರ (56) ಹಾಗೂ ಸಿಕ್ಕಿಂ (86) ಇದೆ.
[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-21-22.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ