ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 29, 2016

Question 1

1.ಸುಮಾರು 3450 ವರ್ಷಗಳ ಹಿಂದೆ ಸುನಾಮಿಯಿಂದ ನಾಶವಾದ ವಿಶ್ವದ ಮೊದಲ ನಗರವನ್ನು ಯಾವ ರಾಜ್ಯದಲ್ಲಿ ಪತ್ತೆಹಚ್ಚಲಾಗಿದೆ?

A
ಕರ್ನಾಟಕ
B
ರಾಜಸ್ತಾನ
C
ಗುಜರಾತ್
D
ಹರಿಯಾಣ
Question 1 Explanation: 
ಗುಜರಾತ್:

ಪುರಾತತ್ವ ಇಲಾಖೆಯವರು ಗುಜರಾತ್ ರಾಜ್ಯದ ಕಚ್ಛ್'ನ ರಣ್ ಎಂಬ ನಗರದ ಸಮೀಪವಿರುವ ಧೋಲಾವೀರಾ ಎಂಬಲ್ಲಿ ಕ್ರಿಸ್ತಪೂರ್ವ 15ನೇ ಶತಮಾನದ ಸುಮಾರಿನಲ್ಲಿ ಸುನಾಮಿ ದಾಳಿಗೆ ನಾಶವಾದ ಪುರಾತನ ನಗರವನ್ನು ಪತ್ತೆಹಚ್ಚಿದ್ದಾರೆ. ಹರಪ್ಪನ್ ಕಾಲಕ್ಕೆ ಸೇರಿದ ಈ ನಗರ 3450 ವರ್ಷಗಳ ಹಿಂದೆ ಸುನಾಮಿಯಿಂದ ನಾಶಗೊಂಡಿತ್ತು. ಈ ರೀತಿ ನಾಶವಾದ ವಿಶ್ವದ ಮೊದಲ ನಗರ ಅದಾಗಿದೆ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.ಧೋಲಾವೀರಾದಲ್ಲಿ ಅವಶೇಷವಾಗಿ ಉಳಿದುಕೊಂಡಿರುವ ಪ್ರಾಚೀನ ಪಟ್ಟಣವು 5 ಸಾವಿರ ವರ್ಷಗಳ ಹಿಂದೆ ಬಹಳ ವೈಭವ ಹೊಂದಿತ್ತೆನ್ನಲಾಗಿದೆ. 14-18 ಮೀಟರ್'ನಷ್ಟು ದಪ್ಪವಿರುವ ಗೋಡೆಯೊಂದು ಇಲ್ಲಿದೆ. ಆ ಪುರಾತನ ನಗರದಲ್ಲಿ ಸುನಾಮಿ ಭೀತಿ ಮೊದಲಿಂದಲೂ ಇತ್ತೆಂಬುದಕ್ಕೆ ಈ ಗೋಡೆಯೇ ಸಾಕ್ಷಿಯಾಗಿರುವಂತಿದೆ.

Question 2

2.ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ ದೇಶದ ಕೋಮು ಸೂಕ್ಷ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿರುವ ರಾಜ್ಯ ಯಾವುದು?

A
ಉತ್ತರ ಪ್ರದೇಶ
B
ಕರ್ನಾಟಕ
C
ಮಹಾರಾಷ್ಟ್ರ
D
ಒಡಿಶಾ
Question 2 Explanation: 
ಉತ್ತರ ಪ್ರದೇಶ:

ದೇಶದ ಕೋಮು ಸೂಕ್ಷ್ಮ ರಾಜ್ಯಗಳ ಪೈಕಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ಕೋಮು ಸೂಕ್ಷ್ಮ ರಾಜ್ಯಗಳ ಪೈಕಿ ಮೂರನೇ ಸ್ಥಾನದಲ್ಲಿದೆ ಎಂಬ ಅಂಶ ಕೇಂದ್ರ ಗೃಹ ಸಚಿವಾಲಯ ಹೊರತಂದಿರುವ ಮಾಹಿತಿಯಿಂದ ಬಹಿರಂಗಗೊಂಡಿದೆ.2013ರಿಂದ 2016ರವರೆಗೆ ಕೋಮು ಸಂಘರ್ಷ ಪ್ರಕರಣಗಳ ಸಂಖ್ಯೆಯನ್ನು ಇಟ್ಟುಕೊಂಡು ಸ್ಥಾನಗಳನ್ನು ನೀಡಲಾಗಿದೆ. ಕರ್ನಾಟಕದಲ್ಲಿ 291 ಪ್ರಕರಣ ದಾಖಲಾಗಿದ್ದು, 19 ಮಂದಿ ಮೃತಪಟ್ಟರೆ, 865 ಮಂದಿಗೆ ಗಾಯಗಳಾಗಿವೆ. ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 57 ಪ್ರಕರಣಗಳು ನಡೆದಿವೆ.

Question 3

3.ಈ ಕೆಳಗಿನ ಯಾವ ಪ್ಯಾರಮಿಲಿಟರಿ ಪಡೆ ಪಿ.ವಿ.ಸಿಂಧು ಅವರನ್ನು ರಾಯಭಾರಿ ಹಾಗೂ ಕಮಾಂಡೆಂಟ್ ಆಗಿ ನೇಮಿಸಲು ನಿರ್ಧರಿಸಿದೆ?

A
ಕೇಂದ್ರಿಯ ಪೊಲೀಸ್ ಮೀಸಲು ಪಡೆ
B
ಗಡಿ ಭದ್ರತಾ ಪಡೆ
C
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್
D
ಕೇಂದ್ರ ಕೈಗಾರಿಕ ಭದ್ರತಾ ಪಡೆ
Question 3 Explanation: 
ಕೇಂದ್ರಿಯ ಪೊಲೀಸ್ ಮೀಸಲು ಪಡೆ:

ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುವನ್ನು ದೇಶದ ಅತಿದೊಡ್ಡ ಪ್ಯಾರಾಮಿಲಿಟರಿ ದಳವಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಗೌರವ ಕಮಾಂಡೆಂಟ್ ಆಗಿ ನೇಮಿಸಲು ನಿರ್ಧರಿಸಿದೆ. ಇದೇ ಅಲ್ಲದೆ ಕೇಂದ್ರಿಯ ಪೊಲೀಸ್ ಮೀಸಲು ಪಡೆ ರಾಯಭಾರಿಯಾಗಿಯೂ ಸಿಂಧುವನ್ನು ಆಯ್ಕೆ ಮಾಡಲು ತೀರ್ಮಾನಿಸಿದ್ದು ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ತನ್ನ ಶಿಫಾರಸನ್ನು ಸಲ್ಲಿದೆ. ಕೇಂದ್ರಿಯ ಪೊಲೀಸ್ ಮೀಸಲು ಪಡೆ ಕಮಾಂಡೆಂಟ್ ಶ್ರೇಣಿ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಮಟ್ಟದ ಸ್ಧಾನವಾಗಿದ್ದು ಫೀಲ್ಡ್ ಆಪರೇಷನ್ ವೇಳೆ 1 ಸಾವಿರ ಸದಸ್ಯರ ಬೆಟಾಲಿಯನ್ ಅನ್ನು ಮುನ್ನಡೆಸುವ ಕಮಾಂಡ್ ಅಧಿಕಾರಿಯಾಗಲಿದ್ದಾರೆ.

Question 4

4.ಇತ್ತೀಚೆಗೆ ಭಾರತ ಯಾವ ದೇಶದೊಂದಿಗೆ “ಲಾಜಿಸ್ಟಿಕ್ಸ್ ಎಕ್ಸ್ಚೇಂಜ್ ಮೆಮೋರಾಂಡಂ ಆಫ್ ಅಗ್ರಿಮೆಂಟ್ (LEMOA)” ಎಂಬ ಐತಿಹಾಸಿಕ ದ್ವಿಪಕ್ಷೀಯ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿತು?

A
ಕೆನಡಾ
B
ಜಪಾನ್
C
ಮಯನ್ಮಾರ್
D
ಅಮೆರಿಕ
Question 4 Explanation: 
ಅಮೆರಿಕ:

ಲಾಜಿಸ್ಟಿಕ್ಸ್‌ ಎಕ್ಸ್‌ಚೇಂಜ್‌ ಮೆಮೋರಾಂಡಂ ಆಫ್ ಅಗ್ರಿಮೆಂಟ್‌ (ಎಲ್‌ಇಎಂಓಎ ಅಥವಾ ಲೆಮೋವಾ) ಎಂಬ ಈ ಐತಿಹಾಸಿಕ ಮೈಲುಗಲ್ಲಿನ ದ್ವಿಪಕ್ಷೀಯ ರಕ್ಷಣಾ ಒಪ್ಪಂದಕ್ಕೆ ಭಾರತದ ರಕ್ಷಣಾ ಸಚಿವ ಮನೋಹರ್‌ ಪರ್ರೀಕರ್‌ ಮತ್ತು ಅಮೆರಿಕದ ರಕ್ಷಣಾ ಸಚಿವ ಆಷ್ಟನ್‌ ಕಾರ್ಟರ್‌ ಅವರು ಸಹಿ ಹಾಕಿದರು. ಈ ಒಪ್ಪಂದದ ಅನ್ವಯ ಭಾರತ ಮತ್ತು ಅಮೆರಿಕ ಪರಸ್ಪರರ ಭೂ, ವಾಯು ಹಾಗೂ ನೌಕಾ ನೆಲೆಗಳನ್ನು ದುರಸ್ತಿ ಹಾಗೂ ಮರುಪೂರೈಕೆಯ ಉದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದೆ. ಆ ಮೂಲಕ ಉಭಯತರ ನಡುವಿನ ದ್ವಿಪಕ್ಷೀಯ ರಕ್ಷಣಾ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿದೆ. ಲೆಮೋವಾ ಒಪ್ಪಂದವು ಭಾರತ ಮತ್ತು ಅಮೆರಿಕದ ಸೇನೆಗಳಳಿಗೆ ರಕ್ಷಣಾ ಸಾರಿಗೆ ಸೌಕರ್ಯ, ಬೆಂಬಲ, ಪೂರೈಕೆ ಹಾಗೂ ಇನ್ನಿತರ ಬಗೆಯ ಆವಶ್ಯಕ ಸೇವೆಗಳನ್ನು ಪರಸ್ಪರ ಪೂರೈಸುವುದಕ್ಕೆ ಮತ್ತು ಬಳಸಿಕೊಳ್ಳುವುದಕ್ಕೆ, ಖರ್ಚು ಭರಿಸಿಕೊಳ್ಳುವುದಕ್ಕೆ ಮತ್ತು ಆಡಳಿತಾತ್ಮಕ ಚೌಕಟ್ಟನ್ನು ಒದಗಿಸುವುದಕ್ಕೆ ಅವಕಾಶ ಕಲ್ಪಿಸುತ್ತದೆ.

Question 5

5.ಒಂದು ಟಿ20 ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿ ದಾಖಲೆ ನಿರ್ಮಿಸಿದ ಕ್ರಿಕೆಟ್ ಆಟಗಾರ ಯಾರು?

A
ರವಿಚಂದ್ರನ್ ಅಶ್ವಿನ್
B
ಜಸ್ ಪ್ರೀತ್ ಬುಮ್ರಾ
C
ಭುವನೇಶ್ವರ್ ಕುಮಾರ್
D
ಆರ್ ವಿನಯ್ ಕುಮಾರ್
Question 5 Explanation: 
ಜಸ್ ಪ್ರೀತ್ ಬುಮ್ರಾ:

ಅಮೆರಿಕದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ20 ಕ್ರಿಕೆಟ್ ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸುವ ಮೂಲಕ ಬುಮ್ರಾ ಒಂದು ಟಿ20 ಋತುವಿನಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಆಟಗಾರ ಎನಿಸಿದ್ದಾರೆ. ಈ ಋತುವಿನಲ್ಲಿ ಬುಮ್ರಾ ಆಡಿದ 21 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 28 ವಿಕೆಟ್ ಕಬಳಿಸಿದ್ದಾರೆ. 2010ರ ಋತುವಿನಲ್ಲಿ ಆಸ್ಟ್ರೇಲಿಯಾದ ಡರ್ಕ್ ನಾನ್ನೆಸ್ 27 ವಿಕೆಟ್ ಪಡೆದ ದಾಖಲೆಯನ್ನು ಬುಮ್ರಾ ಅಳಿಸಿ ಹಾಕಿದ್ದಾರೆ.

Question 6

6.ಈ ಕೆಳಗಿನ ಯಾವುದು ಬಿಮ್ ಸ್ಟೆಕ್ (Bay of Bengal Initiative for Multi-Sectoral Technical and Economic Cooperation) ಸದಸ್ಯ ರಾಷ್ಟ್ರವಲ್ಲ?

A
ಭಾರತ
B
ಶ್ರೀ ಲಂಕಾ
C
ಚೀನಾ
D
ಬಾಂಗ್ಲದೇಶ
Question 6 Explanation: 
ಚೀನಾ:

ಬಿಮ್ ಸ್ಟೆಕ್ (BIMSTEC) ದಕ್ಷಿಣ ಏಷ್ಯಾ ಮತ್ತು ಆಗ್ನೇಯಾ ಏಷ್ಯಾದ ಏಳು ರಾಷ್ಟ್ರಗಳನ್ನು ಒಳಗೊಂಡ ಒಂದು ಅಂತಾರಾಷ್ಟ್ರೀಯ ಒಕ್ಕೂಟವಾಗಿದೆ. ಬಾಂಗ್ಲದೇಶ, ಭಾರತ, ಮಯನ್ಮಾರ್, ಶ್ರೀಲಂಕಾ, ಥಾಯ್ಲೆಂಡ್, ಭೂತಾನ್ ಮತ್ತು ನೇಪಾಳ ಬಿಮ್ ಸ್ಟೆಕ್ ಸದಸ್ಯ ರಾಷ್ಟ್ರಗಳು. ಜೂನ್ 6, 1997 ರಂದು ಇದನ್ನು ಸ್ಥಾಪಿಸಲಾಗಿದ್ದು, ಇದರ ಕೇಂದ್ರ ಕಚೇರಿ ಡಾಕಾದಲ್ಲಿದೆ.

Question 7

7.ಈ ಕೆಳಗಿನ ಯಾವ ಸಮಿತಿ ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿ ಭದ್ರತೆಯನ್ನು ಬಲಗೊಳಿಸುವ ಸಲುವಾಗಿ ತನ್ನ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ಸಲ್ಲಿಸಿತು?

A
ಈಶ್ವರ್ ಚಂದ್ರ ಸಮಿತಿ
B
ಮಧುಕರ್ ಗುಪ್ತ ಸಮಿತಿ
C
ಕಮಲೇಶ್ ಚಂದ್ರ ಸಮಿತಿ
D
ಸುಧೀರ್ ಗೋಕರ್ಣ ಸಮಿತಿ
Question 7 Explanation: 
ಮಧುಕರ್ ಗುಪ್ತ ಸಮಿತಿ:

ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿ ಭದ್ರತೆಯನ್ನು ಬಲಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ನೇಮಿಸಿದ್ದ ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ನೇತೃತ್ವದ ಮಧುಕರ್ ಗುಪ್ತ ಸಮಿತಿ ತನ್ನ ವರದಿಯನ್ನು ಸರ್ಕಾರ ಸಲ್ಲಿಸಿದೆ. ಭಾರತ- ಪಾಕ್ ಗಡಿಯ ಬೇಲಿಗಳು ದುರ್ಬಲವಾಗಿವೆ ಮತ್ತು ಉಗ್ರರು ನುಸುಳಬಹುದಾದ ಸಂದುಗಳು ಇವೆ ಎಂದು ಮಧುಕರ್ ಗುಪ್ತ ಅವರ ನೇತೃತ್ವದ ಸಮಿತಿ ಗುರುತು ಮಾಡಿದೆ. ಜತೆಗೆ ಗಡಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಮತ್ತು ತೀಕ್ಷ್ಣ ಕಣ್ಗಾವಲು ಇರಿಸಬೇಕಿದೆ ಎಂದು ಸಲಹೆ ನೀಡಿದೆ. ಉಗ್ರರು ಒಳನುಸುಳುವಿಕೆ ನಡೆಸಿದ ಜಾಗದಲ್ಲಿ ವೈಜ್ಞಾನಿಕ ವಿಧಾನಗಳಾದ ಲೇಸರ್ ಗೋಡೆಗಳನ್ನು ಅಳವಡಿಸಲಾಗಿರಲಿಲ್ಲ. ನದಿಗಳು ಪಾತ್ರದ ಜವುಗು ಪ್ರದೇಶಗಳಲ್ಲಿ ಬೇಲಿಗಳನ್ನು ಇದುವರೆಗೂ ಅಳವಡಿಸಲಾಗಿಲ್ಲ. ಪಾಕಿಸ್ಥಾನದ ಜತೆ ಗಡಿ ಹಂಚಿಕೊಳ್ಳುವ ಜಮ್ಮು-ಕಾಶ್ಮೀರ, ರಾಜಸ್ಥಾನ, ಗುಜರಾತ್ ಮತ್ತು ಪಂಜಾಬ್ಗಳು ಒಂದೊಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಸಮಿತಿ ತಿಳಿಸಿದೆ.

Question 8

8.ಇತ್ತೀಚೆಗೆ ನಿಧನರಾದ ಖ್ಯಾತ ಚಿತ್ರಕಾರ, ಲೇಖಕ ಮತ್ತು ಕಲಾ ಚರಿತ್ರೆಕಾರ ದೀನನಾಥ ಪಥಿ ಯಾವ ರಾಜ್ಯದವರು?

A
ಒಡಿಶಾ
B
ಜಾರ್ಖಂಡ್
C
ಪಶ್ಚಿಮ ಬಂಗಾಳ
D
ಕೇರಳ
Question 8 Explanation: 
ಓಡಿಶಾ:

ಒಡಿಶಾದ ಖ್ಯಾತ ಖ್ಯಾತ ಚಿತ್ರಕಾರ, ಲೇಖಕ ಮತ್ತು ಕಲಾ ಚರಿತ್ರೆಕಾರ ದೀನನಾಥ ಪಥಿ ಹೃದಯಸ್ತಂಭನದಿಂದ ನಿಧನರಾದರು. ಲಲಿತಾಕಲಾ ಅಕಾಡೆಮಿ ದೆಹಲಿ ಮತ್ತು ಭುವನೇಶ್ವರದ ಮಾಜಿ ಕಾರ್ಯದರ್ಶಿಯಾಗಿದ್ದ ಪಥಿ ಒಡಿಶಾದಲ್ಲಿ ಕಲಾ ಚಳುವಳಿಯ ಆದ್ಯ ಪ್ರವರ್ತಕರಾಗಿದ್ದರು. ಪಥಿ ಅವರು ಒಡಿಯಾ, ಇಂಗ್ಲೀಷ್ ಮತ್ತು ಜರ್ಮನಿ ಭಾಷೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದರು. ಭಾರತೀಯ ಕಲಾ ಚರಿತ್ರೆಯ ಸಂಶೋಧಬೆಗೆ ನೀಡಿದ ಕೊಡುಗೆಗಾಗಿ ಅವರು ಸ್ವಿಟ್ಜರ್ಲ್ಯಾಂಡ್ನ ರೈಟ್ಬರ್ಗ್ ಸೊಸೈಟಿಯ ಪ್ರತಿಷ್ಠಿತ ರೈಟ್ ಬರ್ಗ್ ಪ್ರಶಸ್ತಿಗೆ ಭಾಜನರಾಗಿದ್ದರು.

Question 9

9.“ಓಲ್ಡ್ ಹಿಸ್ಟರಿ, ನ್ಯೂ ಜಿಯಾಗ್ರಫಿ: ಬೈಫರ್ಕೆಂಟಿಗ್ ಆಂಧ್ರ ಪ್ರದೇಶ (Old History, New Geography: Bifurcating Andhra Pradesh)’ ಪುಸ್ತಕದ ಲೇಖಕರು ಯಾರು?

A
ರಾಮಚಂದ್ರ ಗುಹ
B
ಜೈರಾಂ ರಮೇಶ್
C
ಚಿದಂಬರಂ
D
ಅಮೀರ್ ಗುಪ್ತ
Question 9 Explanation: 
ಜೈರಾಂ ರಮೇಶ್:

ಮಾಜಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಹಾಗೂ ಕಾಂಗೇಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು “ಓಲ್ಡ್ ಹಿಸ್ಟರಿ, ನ್ಯೂ ಜಿಯಾಗ್ರಫಿ: ಬೈಫರ್ಕೆಂಟಿಗ್ ಆಂಧ್ರ ಪ್ರದೇಶ” ಪುಸ್ತಕದ ಲೇಖಕರು. “Making Sense of Chindia: Reflections on China and India” ಮತ್ತು “Mobilising Technology for World Development” ರಮೇಶ್ ಅವರ ಇತರೆ ಪುಸ್ತಕಗಳು.

Question 10
10.ಸ್ಕಾರ್ಪೀನ್ ಜಲಾಂತರ್ಗಾಮಿ ಮಾಹಿತಿ ಸೋರಿಕೆ ಪ್ರಕರಣ ತನಿಖೆ ನಡೆಸಲು ರಕ್ಷಣಾ ಸಚಿವಾಲಯ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರು ಯಾರು?
A
ಸುನೀಲ್ ಲಂಬಾ
B
ಅಶೋಕ್ ಕುಮಾರ್
C
ಸುಖವೀರ್ ಸಿಂಗ್
D
ಚಂದ್ರಕುಮಾರ್ ರಾಥೋಡ್
Question 10 Explanation: 
ಅಶೋಕ್ ಕುಮಾರ್:

ಭಾರತದ ನೌಕಾಪಡೆಯ ಸ್ಕಾರ್ಪೀನ್‌ ಶ್ರೇಣಿಯ ಜಲಾಂತರ್ಗಾಮಿಯ ದತ್ತಾಂಶ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇಂದ್ರ ರಕ್ಷಣಾ ಸಚಿವಾಲಯ ಡೆಪ್ಯೂಟಿ ಚೀಫ್ ಆಫ್ ನಾವಲ್ ಸ್ಟಾಪ್ ಅಡ್ಮಿರಲ್ ಅಶೋಕ್ ಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಸಮಿತಿಯು ಎಷ್ಟರ ಮಟ್ಟಿಗೆ ಮಾಹಿತಿ ಸೋರಿಕೆಯಾಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲಿದ್ದು, ಮುಂದಿನ ತಿಂಗಳಲ್ಲಿ ತನ್ನ ವರದಿಯನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಣಿಕ್ಕರ್ ಅವರಿಗೆ ಸಲ್ಲಿಸಲಿದ್ದಾರೆ.

There are 10 questions to complete.

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 29, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.