ಜೂನ್ 16ರಿಂದ ಪ್ರತಿ ದಿನ ಪೆಟ್ರೋಲ್ ಡಿಸೇಲ್ ಬೆಲೆ ಪರಿಷ್ಕರಣೆ ಜೂನ್ 16 ರಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿದಿನ ಪರಿಷ್ಕರಿಸಲು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್ಪಿಎಲ್ಎಲ್) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ (ಬಿಪಿಸಿಎಲ್) ನಿರ್ಧರಿಸಿವೆ. ಖಾಸಗಿ ತೈಲ ಉದ್ಯಮಗಳಿಗೆ ಸೆಡ್ಡು ಹೊಡೆಯಲು ಮತ್ತು ಯು.ಎಸ್. ತೈಲ ಮಾರುಕಟ್ಟೆಯೊಂದಿಗೆ ಭಾರತವನ್ನು ಸರಿದೂಗಿಸಲು ಈ ಕ್ರಮಕೈಗೊಳ್ಳಲಾಗಿದೆ. ರಿಲಯನ್ಸ್ ಮತ್ತು ಎಸ್ಸಾರ್ ಸೇರಿದಂತೆ ಪ್ರಮುಖ ಖಾಸಗಿ ತೈಲ…
Read Moreರೈಲ್ವೆ ಸಚಿವಾಲಯದ “ಮಿಷನ್ ರೆಟ್ರೊ-ಫಿಟ್ಮೆಟ್”ಗೆ ಚಾಲನೆ ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡುವ ಸಲುವಾಗಿ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಮಿಷನ್ ರೆಟ್ರೊ-ಫಿಟ್ಮೆಂಟ್ (Retro-Fitment)ಗೆ ಚಾಲನೆ ನೀಡಿದರು. ಮಿಷನ್ ರೆಟ್ರೋ-ಫಿಟ್ಮೆಂಟ್ ರೈಲ್ವೆ ಸಚಿವಾಲಯದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಭಾರತದ ರೈಲು ಬೋಗಿಗಳನ್ನು ಸಜ್ಜುಗೊಳಿಸುವಿಕೆ ಮತ್ತು ಸೌಕರ್ಯಗಳ ಮಟ್ಟವನ್ನು ನವೀಕರಿಸುವ ಉದ್ದೇಶವನ್ನು ಹೊಂದಿದೆ. ನವೀಕರಿಸಿದ ಬೋಗಿಗಳು ರೈಲ್ವೆ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಅನುಕೂಲಕರವಾದ ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಉತ್ತಮವಾದ ಸೌಕರ್ಯಗಳು ಮತ್ತು ಉತ್ತಮ ಸುರಕ್ಷತೆ ವೈಶಿಷ್ಟ್ಯಗಳನ್ನು…
Read Moreಮೂವತ್ತು ಮೀಟರ್ ಟೆಲಿಸ್ಕೋಪ್ ಮತ್ತು ಭಾರತದ ಕೊಡುಗೆ ಮೂವತ್ತು ಮೀಟರ್ ಟೆಲಿಸ್ಕೋಪ್ (Thirty Meter Telescope) ಪ್ರಪಂಚದ ಅತಿದೊಡ್ಡ ದೂರದರ್ಶಕವಾಗಿದೆ. ಈ ದೂರದಶರ್ಕದ ಮೂಲಕ ಖಗೋಳಶಾಸ್ತ್ರಜ್ಞರು ಭೂಮಿಯಿಂದ ವಿಶ್ವದ ಜಟಿಲತೆಗಳನ್ನು ವೀಕ್ಷಿಸಬಹುದಾಗಿದೆ. ಪ್ರಮುಖಾಂಶಗಳು: ಮೂವತ್ತು ಮೀಟರ್ ಟೆಲಿಸ್ಕೋಪ್ (ಟಿಎಂಟಿ) ಅನ್ನು ಭಾರತ ಸೇರಿದಂತೆ ಐದು ರಾಷ್ಟ್ರಗಳ ಅಂತಾರಾಷ್ಟ್ರೀಯ ಒಕ್ಕೂಟವು ಅಭಿವೃದ್ಧಿಪಡಿಸುತ್ತಿರುವ ಬಹು-ಮಿಲಿಯನ್ ಡಾಲರ್ ಯೋಜನೆಯಾಗಿದೆ. ಕೆನಡಾ, ಚೀನಾ, ಜಪಾನ್ ಮತ್ತು ಯು.ಎಸ್. ಇತರ ನಾಲ್ಕು ದೇಶಗಳು. ಜುಲೈ 2013ರಲ್ಲಿ ಯೋಜನೆಯಲ್ಲಿ ಪಾಲ್ಗೊಳ್ಳುವ ಐದು ದೇಶಗಳು ಮೂವತ್ತು ಮೀಟರ್…
Read Moreಈಶಾನ್ಯ ಭಾರತಕ್ಕೆ ಪ್ರತ್ಯೇಕ ಸಮಯ ವಲಯಕ್ಕೆ ಒತ್ತಾಯ ಈಶಾನ್ಯ ರಾಜ್ಯಗಳಲ್ಲಿ ಕೆಲಸದ ದಕ್ಷತೆಯನ್ನು ಸುಧಾರಿಸಲು ಮತ್ತು ಈ ಪ್ರದೇಶದಲ್ಲಿ ವಿದ್ಯುತ್ ಉಳಿಸಲು ಪ್ರತ್ಯೇಕ ಸಮಯ ವಲಯಕ್ಕೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಒತ್ತಾಯಿಸಿದ್ದಾರೆ. ಸರಕಾರಿ ಕಚೇರಿಗಳು 10 ಗಂಟೆಗೆ ತೆರೆಯುತ್ತಿದ್ದು, 4 ಗಂಟೆ ಮುಂಚೆಯೇ ಮುಚ್ಚುತ್ತಿರುವ ಕಾರಣ ಹಗಲು ಸಮಯದಲ್ಲಿ ಸಾಕಷ್ಟು ವ್ಯರ್ಥವಾಗುತ್ತಿರುವುದಾಗಿ ಪೆಮಾ ಖಂಡು ವಾದಿಸಿದ್ದಾರೆ. ಹಿನ್ನಲೆ: ಇತ್ತೀಚೆಗೆ ಈಶಾನ್ಯ ಪ್ರದೇಶಕ್ಕೆ ಪ್ರತ್ಯೇಕ ಸಮಯ ವಲಯವನ್ನು ಕೋರಿ ಗುವಾಹಟಿ ಹೈಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ…
Read Moreಕಲಾಡನ್ ಬಹು-ಮಾದರಿ ಸಾರಿಗೆ ಯೋಜನೆ (ಕೆಎಂಟಿಟಿ): KMTT ಮುಖ್ಯವಾಗಿ ಶಿಪ್ಪಿಂಗ್, ಒಳನಾಡು ಜಲಸಾರಿಗೆ ಮತ್ತು ರಸ್ತೆ ಸಾರಿಗೆ ವಿಸ್ತರಣೆಗಳನ್ನು ಒಳಗೊಂಡಿರುವ ಬಹು-ಮಾದರಿ ಸಾರಿಗೆ ಯೋಜನೆಯಾಗಿದೆ. ಇವುಗಳ ಪೈಕಿ ಕೋಲ್ಕತಾದಿಂದ ಮ್ಯಾನ್ಮಾರ್ನಲ್ಲಿನ ಸಿಟ್ವೆ ಬಂದರಿನ ಶಿಪ್ಪಿಂಗ್ ಮಾರ್ಗ ಅತಿ ಉದ್ದದು ಆಗಿದೆ. ಭಾರತ ಸರ್ಕಾರವು ಈ ಯೋಜನೆಗೆ ಧನಸಹಾಯವನ್ನು ನೀಡುತ್ತಿದೆ ಮತ್ತು ನೆರೆಹೊರೆಯ ರಾಷ್ಟ್ರಗಳಲ್ಲಿ ಭಾರತದ ಪ್ರಮುಖ ಬಂಡವಾಳ ಯೋಜನೆಯೆಂದು ಪರಿಗಣಿಸಲಾಗಿದೆ. ಸರಕುಗಳನ್ನು ಕೊಲ್ಕತ್ತಾ ಬಂದರಿನಿಂದ ಪ್ರಾರಂಭಿಸಿ ಮ್ಯಾನ್ಮಾರ್ನಲ್ಲಿ ಸಿಟ್ವೆ ಬಂದರಿಗೆ ಹಡುಗಿನ ಮೂಲಕ ಸಾಗಿಸಲಾಗುತ್ತದೆ.…
Read Moreನೀತಿ ಆಯೋಗದಿಂದ “ಸಾಥ್ (SATH)” ಕಾರ್ಯಕ್ರಮಕ್ಕೆ ಚಾಲನೆ ನೀತಿ ಆಯೋಗ ಸಾಥ್ SATH-Sustainable Action for Transforming Human Capital ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಪ್ರಮುಖಾಂಶಗಳು: ಸಾಥ್ ಕಾರ್ಯಕ್ರಮದಡಿ ನೀತಿ ಆಯೋಗ ಆರೋಗ್ಯ ವ್ಯವಸ್ಥೆಗಳಿಗೆ ಮೂರು ಭವಿಷ್ಯದ ‘ಮಾದರಿ ರಾಜ್ಯಗಳ”ನ್ನು ಗುರುತಿಸಲಿದೆ. ಮೂರು ರಾಜ್ಯಗಳನ್ನು ಗುರುತಿಸಿದ ನಂತರ ಈ ಮೂರು ರಾಜ್ಯಗಳ ಸರ್ಕಾರಗಳೊಂದಿಗೆ ನಿಕಟ ಸಹಯೋಗದೊಂದಿಗೆ ಕೆಲಸ ಮಾಡಲಿದೆ. ಆ ಮೂಲಕ ದೃಢವಾದ ಮಾರ್ಗಸೂಚಿಯನ್ನು ವಿನ್ಯಾಸಗೊಳಿಸಲು, ಕಾರ್ಯಕ್ರಮದ ಆಡಳಿತ ರಚನೆಯನ್ನು ಅಭಿವೃದ್ಧಿಪಡಿಸುವುದು, ಮೇಲ್ವಿಚಾರಣೆ ಮತ್ತು ಟ್ರ್ಯಾಕಿಂಗ್ ಕಾರ್ಯವಿಧಾನಗಳನ್ನು…
Read More“ಸೆಲ್ಫಿ ವಿತ್ ಡಾಟರ್” ಮೊಬೈಲ್ ಅಪ್ಲಿಕೇಷನ್ ಗೆ ಚಾಲನೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಮೊಬೈಲ್ ಅಪ್ಲಿಕೇಶನ್ ‘ಸೆಲ್ಫಿ ವಿತ್ ಡಾಟರ್’ಗೆ ಚಾಲನೆ ನೀಡಿದರು. ಹೆಣ್ಣು ಭ್ರೂಣಹತ್ಯೆ ಮತ್ತು ಲಿಂಗ ಆಯ್ಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಈ ಅಪ್ಲಿಕೇಶನ್ ಹೊಂದಿದೆ. ಈ ವೇಳೆ ಪ್ರಣಬ್ ಮುಖರ್ಜಿ ಅವರು ಈ ವಿನೂತನ ಪ್ರಯತ್ನವನ್ನು ದೊಡ್ಡಮಟ್ಟದಲ್ಲಿ ಯಶಸ್ವಿಗೊಳಿಸಲು ಹೆಣ್ಣುಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವಂತೆ ಪ್ರಸ್ತಾಪಿಸಿದ್ದಾರೆ. ಲಿಂಗ ಅಸಮತೋಲನದಿಂದ ಉಂಟಾದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು…
Read Moreಕಂಬಳ ಮಸೂದೆಗೆ ಕಾನೂನು ಸಚಿವಾಲಯದಿಂದ ಅನುಮೋದನೆ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯವು “ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ)ವಿಧೇಯಕ-2017’ನ್ನು ಅನುಮೋದಿಸಿದ್ದು, ಇದರಿಂದ ಕಂಬಳ ಕ್ರೀಡೆಯನ್ನು ಕಾನೂನುಬದ್ಧಗೊಳಿಸಿದೆ. ಈ ಮಸೂದೆಯನ್ನು ರಾಷ್ಟ್ರಪತಿಯವರ ಸಹಿಗೆ ಕಳುಹಿಸಿಕೊಡಲಾಗುವುದು. ಹಿನ್ನಲೆ: ಕರ್ನಾಟಕ ಹೈಕೋರ್ಟ್ ನವೆಂಬರ್ 2016ರಲ್ಲಿ ಕರಾವಳಿ ಜಾನಪದ ಕ್ರೀಡೆ ಕಂಬಳ ಆಚರಣೆಗೆ ತಡೆಯಾಜ್ಞೆ ನೀಡಿತ್ತು. ಕಂಬಳ ಕ್ರೀಡೆಯಲ್ಲಿ ಪ್ರಾಣಿ ಹಿಂಸೆಯನ್ನು ಮಾಡಲಾಗುತ್ತಿದೆ ಎಂದು ಪ್ರಾಣಿ ದಯಾ ಸಂಘದವರು 2014ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದ ರೀತಿಯಲ್ಲೆ…
Read Moreನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಮುಖ್ಯಸ್ಥರಾಗಿ ವಿಕ್ರಂ ಲಿಮಯೆ ನೇಮಕ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜಿನ (ಎನ್ಎಸ್ಇ) ಎಂಡಿ ಮತ್ತು ಸಿಇಒ ಆಗಿ ವಿಕ್ರಮ್ ಲಿಮಯೆ ನೇಮಕಾತಿಗೆ SEBI ಷರತ್ತುಬದ್ಧ ಅನುಮೋದನೆಯನ್ನು ನೀಡಿದೆ. 2017ರ ಫೆಬ್ರುವರಿಯಲ್ಲಿ ಎನ್ಎಸ್ಇ ಮುಖ್ಯಸ್ಥನ ಹುದ್ದೆಗಾಗಿ ಮೂಲಸೌಕರ್ಯ ಹಣಕಾಸು ಸಂಸ್ಥೆ IDFC ಎಂ.ಡಿ ಮತ್ತು ಸಿಇಒ ಆಗಿರುವ ಲಿಮಯೆ ಅವರನ್ನು ಆಯ್ಕೆ ಮಾಡಲಾಯಿತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವ್ಯವಹಾರಗಳನ್ನು ನಿರ್ವಹಿಸುವ ಸಲುವಾಗಿ ಸರ್ವೋಚ್ಚ ನ್ಯಾಯಾಲಯ ನೇಮಿಸಿದ್ದ ನಾಲ್ಕು ಸದಸ್ಯರ…
Read Moreನ್ಯೂಟ್ರಾನ್ ನಕ್ಷತ್ರಗಳ ಅಧ್ಯಯನಕ್ಕೆ ಹೊಸ ಮಿಷನ್ ಆರಂಭಿಸಲಿರುವ ನಾಸಾ ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲು ಮೀಸಲಾಗಿರುವ ವಿಶ್ವದ ಮೊಟ್ಟಮೊದಲ ಮಿಷನ್ ಅನ್ನು ಪ್ರಾರಂಭಿಸಲು ನಾಸಾ ಸಜ್ಜಾಗಿದೆ. ನಾಸಾವು ಫಾಲ್ಕನ್ 9 ರಾಕೆಟ್ ಬಳಸಿ “ನ್ಯೂಟ್ರಾನ್ ಸ್ಟಾರ್ ಇಂಟೀರಿಯರ್ ಕಾಂಪೋಸಿಶನ್ ಎಕ್ಸ್ಪ್ಲೋರರ್ ಅಥವಾ NICER ಅನ್ನು ಪ್ರಾರಂಭಿಸಲಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ದಲ್ಲಿ NICER ಅನ್ನು ಬಾಹ್ಯ ಪ್ಲೆಲೋಡ್ ಆಗಿ ಜೋಡಣೆ ಮಾಡಲಾಗುವುದು. ಸ್ಥಾಪನೆಯಾದ ಒಂದು ವಾರದ ನಂತರ, NICER ನ್ಯೂಟ್ರಾನ್ ನಕ್ಷತ್ರಗಳನ್ನು ವೀಕ್ಷಿಸಲು ಪ್ರಾರಂಭಿಸಲಿದೆ.…
Read More