ಪ್ರಚಲಿತ ವಿದ್ಯಮಾನಗಳು-ಮೇ,13,2017

ವಾಸಯೋಗ್ಯ ನಗರ ಸೂಚ್ಯಂಕ ಹೊರತರಲಿರುವ ಕೇಂದ್ರ ಸರ್ಕಾರ ಕೇಂದ್ರ ನಗರಾಭಿವೃದ್ದಿ ಸಚಿವಾಲಯ ದೇಶದ ವಾಸಯೋಗ್ಯ ನಗರ ಸಮೀಕ್ಷೆಯನ್ನು ಮುಂದಿನ ತಿಂಗಳು ಆರಂಭಿಸಲಿದೆ. ಸ್ಥಳೀಯವಾಗಿ ಅಭಿವೃದ್ದಿಪಡಿಸಲಾಗಿರುವ ವಿಧಾನವನ್ನು ಆಧರಿಸಿ ಸೂಚ್ಯಂಕವನ್ನು ಹೊರತರಲಾಗುವುದು. ನಗರಾಭಿವೃದ್ಧಿ ಸಚಿವಾಲಯವು ಈಗಾಗಲೇ “ನಗರಗಳಲ್ಲಿನ ಜೀವವೈವಿಧ್ಯ ಮಾನದಂಡಗಳ ಸಂಗ್ರಹ ಮತ್ತು ಗಣನೆಗೆ ಸಂಬಂಧಿಸಿದ ವಿಧಾನ” ದ ಬಗ್ಗೆ ವಿವರವಾದ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಸೂಚ್ಯಂಕವು 140 ನಗರಗಳ ವಾಸಯೋಗ್ಯ ಗುಣಮಟ್ಟವನ್ನು ಅಳೆಯಲಿದೆ. ಇದರಲ್ಲಿ 1 ಮಿಲಿಯನ್ ಮತ್ತು ಹೆಚ್ಚಿನ ಜನಸಂಖ್ಯೆ ಇರುವ 53 ನಗರಗಳು ಇರಲಿವೆ.…

Read More

ಪ್ರಚಲಿತ ವಿದ್ಯಮಾನಗಳು-ಮೇ,12,2017

ಚೀನಾಬ್ ನದಿಯ ಮೇಲೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ವಿಶ್ವದ ಅತಿ ಎತ್ತರದ ರೈಲು ಸೇತುವೆ ಚೀನಾಬ್ ನದಿಯ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಾಪನೆಗೊಳ್ಳಲಿದೆ. ಐಫೆಲ್ ಟವರ್ ಗಿಂತಲೂ 35ಮೀ ಎತ್ತರವಿರಲಿರುವ ಈ ಸೇತುವೆ ಜಮ್ಮು ಮತ್ತು ಕಾಶ್ಮೀರದ ರೆಯಾಸಿ ಜಿಲ್ಲೆಯ ಬಕ್ಕಲ್‌ ಮತ್ತು ಕೌರಿ ನಡುವೆ ಪ್ರಗತಿ ಹಂತ­ದಲ್ಲಿದೆ. 1,315 ಮೀಟರ್‌ ಉದ್ದದ ಈ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಈ ಸೇತುವೆ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಎನಿಸಿಕೊಳ್ಳಲಿದೆ.…

Read More

ಪ್ರಚಲಿತ ವಿದ್ಯಮಾನಗಳು-ಮೇ,11,2017

ಸಂಜಯ್ ಪ್ರತಿಹಾರ್ ರವರಿಗೆ INSA ಯುವ ವಿಜ್ಞಾನಿ ಪ್ರಶಸ್ತಿ ಅಸ್ಸಾಂನ ತೇಜ್ಪುರ ವಿಶ್ವವಿದ್ಯಾಲಯದ ವಿಜ್ಞಾನಿ ಸಂಜಯ್ ಪ್ರತಿಹಾರ್ ರವರಿಗೆ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ನೀಡುವ ಯುವ ವಿಜ್ಞಾನಿ-2017 ಪ್ರಶಸ್ತಿ ಲಭಿಸಿದೆ. “ಬಹು-ಲೋಹದ ಸಂಕೀರ್ಣಗಳು, ಸೈದ್ಧಾಂತಿಕ ತಿಳುವಳಿಕೆ, Hq2 + ಅಯಾನುಗಳ ಆಯ್ದ ಸಂವೇದನೆ ಮತ್ತು ಕೃಷಿಯಲ್ಲಿನ ಪ್ರಮುಖ ಅನ್ವಯಿಕೆಗಳಿಗೆ” ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಂಜಯ್ ಪ್ರತಿಹಾರ್ ಅವರು ಆರ್ಗನಿಕ್ ಕೆಮಿಸ್ಟ್ರಿಯಲ್ಲಿ ಪಿ.ಎಚ್.ಡಿ ಪದವಿಯನ್ನು ಐಐಟಿ, ಖರಗಪುರದಿಂದ ಪಡೆದಿದ್ದಾರೆ. 2012ರಲ್ಲಿ DST-INSPIRE Faculty ಪ್ರಶಸ್ತಿಯನ್ನು…

Read More

ಪ್ರಚಲಿತ ವಿದ್ಯಮಾನಗಳು-ಮೇ,9,10,2017

ಹಾಲಿವುಡ್ ನಟಿ ಎಮ್ಮಾ ವ್ಯಾಟನ್ಸ್ ಗೆ ಪ್ರಪ್ರಥಮ ಲಿಂಗಧಾರ ರಹಿತ ಪ್ರಶಸ್ತಿ ಎಂಟಿವಿ ಮೂವಿ ಮತ್ತು ಟಿವಿ ಪ್ರಶಸ್ತಿಯಲ್ಲಿ ಹಾಲಿವುಡ್ ನಟಿ ಎಮ್ಮಾ ವ್ಯಾಟ್ಸನ್ ಅತ್ಯುತ್ತಮ ನಟಿ ವಿಭಾಗದಲ್ಲಿ ಮೊದಲ ಬಾರಿಗೆ ಲಿಂಗಧಾರ ರಹಿತ (Genderless) ನಟನೆ ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾರೆ. ಲಿಂಗವನ್ನು ಆಧರಿಸಿದೆ ಪ್ರತ್ಯೇಕವಾಗಿ ನಾಮಕರಣಗೊಳ್ಳದ ಮೊದಲ ಲಿಂಗಧಾರ ರಹಿತ ಪ್ರಶಸ್ತಿಯಾಗಿದೆ. 2017ರ ಎಪ್ರಿಲ್ 7, 2017 ರಂದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿ ಎಂಟಿವಿ ಮೂವಿ & ಟಿವಿ ಪ್ರಶಸ್ತಿಯ ಆವೃತ್ತಿಯನ್ನು ಆಯೋಜಿಸಲಾಗಿತ್ತು. ಇದು ಪ್ರಶಸ್ತಿಯ…

Read More

ಪ್ರಚಲಿತ ವಿದ್ಯಮಾನಗಳು-ಮೇ,8,2017

ಪುಣೆಯಲ್ಲಿ ಭಾರತದ ಮೊದಲ ಜೈವಿಕ ಶುದ್ದೀಕರಣ ಘಟಕ ದೇಶದ ಮೊದಲ ಸಮಗ್ರ ಜೈವಿಕ ಶುದ್ದೀಕರಣ ಘಟಕವನ್ನು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಶಿಪ್ಪಿಂಗ್ ಖಾತೆ ಸಚಿವ ನಿತಿನ್ ಗಡ್ಕರಿರವರು ಉದ್ಘಾಟಿಸಿದರು. ಈ ಘಟಕದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ರಾಸಾಯನಿಕಗಳನ್ನು ಶುದ್ದೀಕರಿಸಿ ವಿವಿಧ ಬಗೆಯ ಜೈವಿಕ ತ್ಯಾಜ್ಯಗಳಿಂದ ಎಥೆನಾಲ್ ಉತ್ಪಾದಿಸಬಹುದಾಗಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ರಾಹು ಎಂಬಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದೆ. ಪ್ರಜ್ ಇಂಡಸ್ಟ್ರೀಸ್ ಈ ಪ್ರಾಯೋಗಿಕ ಘಟಕವನ್ನು ಅಭಿವೃದ್ದಿಪಡಿಸಿದೆ. ಒಂದು ಮಿಲಿಯನ್ ಲೀಟರ್ ಎಥನಾಲ್ ಉತ್ಪಾದಿಸುವ…

Read More

ಪ್ರಚಲಿತ ವಿದ್ಯಮಾನಗಳು-ಮೇ,7,2017

ಚೀನಾದ ಬೃಹತ್ ಜೆಟ್ ವಿಮಾನ ಹಾರಾಟ ಪ್ರಾರಂಭ ಚೀನಾದ ಸ್ವದೇಶಿ ನಿರ್ಮಿತ C919 ಪ್ರಯಾಣಿಕರ ಜೆಟ್ ವಿಮಾನ ತನ್ನ ಮೊದಲ ಹಾರಾಟವನ್ನು ಪ್ರಾರಂಭಿಸಿದೆ. ಜಾಗತಿಕ ಏರ್ ಜೆಟ್ ಮಾರುಕಟ್ಟೆಯಲ್ಲಿ ಬೋಯಿಂಗ್ ಮತ್ತು ಏರ್ ಬಸ್ ಪ್ರಾಬಲ್ಯ ಹೊಂದಿರುವ ಪ್ರಾಬಲ್ಯವನ್ನು ಮುಂದಿನ ಎರಡು ದಶಕಗಳಲ್ಲಿ ಚೀನಾ ಪಡೆದುಕೊಳ್ಳುವ ಗುರಿ ಹೊಂದಿದ್ದು, ಜೆಟ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಜೆಟ್ ವಿಮಾನವನ್ನು ಚೀನಾದ ಮಹತ್ವಕಾಂಕ್ಷಿ “ಮೇಡ್ ಇನ್ ಚೀನಾ 2025” ಕಾರ್ಯಕ್ರಮದಡಿ ಅಭಿವೃದ್ದಿಪಡಿಸಲಾಗಿದೆ. ಪ್ರಾಯೋಗಿಕ ಪರೀಕ್ಷಾರ್ಥ ಹಾರಾಟದಲ್ಲಿ C919 ಜೆಟ್ ವಿಮಾನ…

Read More

ಪ್ರಚಲಿತ ವಿದ್ಯಮಾನಗಳು-ಮೇ,5,6,2017

ಅಶಿಸ್ತು ಪ್ರಯಾಣಿಕರ ಮೇಲೆ ನಿಷೇಧ ಹೇರುವ “ನೋ-ಪ್ಲೈ ಪಟ್ಟಿ” ಕರಡು ನಿಯಮ ಅಶಿಸ್ತು ಪ್ರಯಾಣಿಕರನ್ನು ನಿಷೇಧಿಸುವ ನಿಟ್ಟಿನಲ್ಲಿ “ನೋ-ಪ್ಲೈ ಪಟ್ಟಿ (No Fly List)” ಕರಡು ನಿಯಮಗಳನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ಅಂತಿಮ ನಿಯಮಗಳನ್ನು ರೂಪಿಸುವ ಸಲುವಾಗಿ ಕೇಂದ್ರ ವಿಮಾನಯಾನ ಸಚಿವಾಲಯ ಸಮಿತಿಯೊಂದನ್ನು ಸಹ ರಚಿಸಿದೆ. ಹೊಸ ನಿಯಮಗಳ ಬಗ್ಗೆ ಸಲಹೆ/ಆಕ್ಷೇಪಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಒಂದು ತಿಂಗಳ ಕಾಲಾವಧಿಯನ್ನು ನೀಡಲಾಗುವುದು. ಸಲಹೆ/ಆಕ್ಷೇಪಣೆಗಳನ್ನು ಪರಿಶೀಲಿಸಿ, ಸೂಕ್ತ ಸಲಹೆಗಳನ್ನು ಪರಿಗಣಿಸಿ ಅಂತಿಮ ನಿಯಮಗಳನ್ನು ಬಿಡುಗಡೆಗೊಳಿಸಲಾಗುವುದು. ಪ್ರಮುಖಾಂಶಗಳು: ಮೂರು ಹಂತಗಳಲ್ಲಿ ವಿಮಾನ…

Read More

ಪ್ರಚಲಿತ ವಿದ್ಯಮಾನಗಳು-ಮೇ,4,2017

ಫುಟ್‌ಬಾಲ್‌ ಶ್ರೇಯಾಂಕ: ಭಾರತಕ್ಕೆ ನೂರನೇ ಸ್ಥಾನ ಫಿಫಾ ಅಂತಾರಾಷ್ಟ್ರೀಯ ಪುಟ್ಬಾಲ್ ಶ್ರೇಯಾಂಕದಲ್ಲಿ ಭಾರತ ನೂರನೇ ಸ್ಥಾನ ಪಡೆದುಕೊಳ್ಳುವ ಮೂಲಕ ಟಾಪ್ ನೂರು ರಾಷ್ಟ್ರಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಸಾಧನೆ. ಏಕೆಂದರೆ 21 ವರ್ಷಗಳ ನಂತರ ಭಾರತ ಟಾಪ್ 100 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನಪಡೆದಿದೆ. ನಿಕಾರಗುವಾ, ಲಿಥುಯಾನಿಯಾ, ಈಸ್ಟೋನಿಯಾ ರಾಷ್ಟ್ರಗಳ ಜೊತೆ 331 ಅಂಕಗಳನ್ನು ಪಡೆಯುವ ಮೂಲಕ ಭಾರತ 100ನೇ ಸ್ಥಾನವನ್ನು ಪಡೆದುಕೊಂಡಿದೆ. ಏಪ್ರಿಲ್ 2017ರ ಅಂತ್ಯಕ್ಕೆ ಭಾರತ 101ನೇ ಸ್ಥಾನವನ್ನು ಪಡೆದುಕೊಂಡಿತ್ತು. ಆದರೆ…

Read More

ಪ್ರಚಲಿತ ವಿದ್ಯಮಾನಗಳು-ಮೇ,2,3,2017

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ರವರಿಗೆ USIBC ಪ್ರಶಸ್ತಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಪ್ರತಿಷ್ಠಿತ ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (USIBC)ನ ಪರಿವರ್ತನ ಮುಖ್ಯಮಂತ್ರಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಭಾರತ ಮತ್ತು ಅಮೆರಿಕ ಪಾಲುದಾರಿಕೆ ಸಂಬಂಧವನ್ನು ಸುಧಾರಿಸುವಲ್ಲಿ ಶ್ರಮಿಸಿದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಮೇ 8 ರಂದು ಸಿಲಿಕಾನ್ ವ್ಯಾಲಿಯಲ್ಲಿ ನಡೆಯಲಿರುವ USIBC ವೆಸ್ಟ್ ಕೋಸ್ಟ್ ಶೃಂಗಸಭೆಯಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ಈ ಶೃಂಗಸಭೆಯಲ್ಲಿ ಭಾರತದ ಅಧಿಕಾರಿಗಳು ಸೇರಿದಂತೆ ಮಾಹಿತಿ ಮತ್ತು ತಂತ್ರಜ್ಞಾನ, ಆಹಾರ…

Read More

ಪ್ರಚಲಿತ ವಿದ್ಯಮಾನಗಳು-ಮೇ,1,2017

ಬಾಂಗ್ಲದೇಶದ ಸ್ವಾತಂತ್ರ ಹೋರಾಟಗಾರರ ಮಕ್ಕಳಿಗೆ ರೂ 35 ಕೋಟಿ ನೀಡಲಿರುವ ಭಾರತ ಬಾಂಗ್ಲದೇಶದ ಸ್ವಾತಂತ್ರ ಹೋರಾಟಗಾರರ ಮಕ್ಕಳಿಗೆ “ಮುಕ್ತಿಜೋಧ ವಿದ್ಯಾರ್ಥಿ ವೇತನ”ದಡಿ ರೂ 35 ಕೋಟಿಯನ್ನು ಮುಂದಿನ ಐದು ವರ್ಷಗಳ ಕಾಲ ಭಾರತ ನೀಡಲಿದೆ. ಈ ಯೋಜನೆಯಡಿ ಉನ್ನತ ಮಾಧ್ಯಮಿಕ ವಿದ್ಯಾರ್ಥಿಗಳು ರೂ 15,370 (20000 ಬಾಂಗ್ಲ ಟಕ್ಕ) ವಿದ್ಯಾರ್ಥಿ ವೇತನವನ್ನು ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳು ರೂ 38, 430 (50000 ಟಕ್ಕ) ವಿದ್ಯಾರ್ಥಿ ವೇತನವನ್ನು ಒಂದು ಬಾರಿಗೆ ಪಡೆಯಲಿದ್ದಾರೆ. ಇದರ ಜೊತೆಗೆ ಸ್ವಾತಂತ್ರ ಹೋರಾಟಗಾರರಿಗೆ…

Read More