ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-26,2016

ರಾಜ್ಯದ ಖಾಸಗಿ ಉದ್ಯಮಗಳಲ್ಲಿ ಸ್ಥಳೀಯರಿಗೆ ಶೇ.70 ರಷ್ಟು ಉದ್ಯೋಗ ಮೀಸಲಾತಿ ರಾಜ್ಯದ ಖಾಸಗಿ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕನ್ನಡಿಗರಿಗೆ ಶೇ. 70 ರಷ್ಟು ಮೀಸಲಾತಿ ಕಲ್ಪಿಸಲು ಕರಡು ಮಸೂದೆ ಸಿದ್ದಪಡಿಸಲಾಗಿದೆ. ಈ ಮಸೂದೆಯನ್ನು ಇನ್ನೆರಡು ತಿಂಗಳಲ್ಲಿ ಸಚಿವ ಸಂಪುಟದ ಮುಂದೆ ತಂದು ಒಪ್ಪಿಗೆ ಪಡೆಯಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಮಸೂದೆಯ ಪ್ರಮುಖಾಂಶಗಳು: ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಸಿ ಮತ್ತು ಡಿ ಹುದ್ದೆಗಳಲ್ಲಿ  ಶೇ. 50 ರಷ್ಟು, ಎ ಮತ್ತು…

Read More

ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-25,2016

ಸಾಹಿತಿ ಬೊಳುವಾರು ರವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕನ್ನಡದ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಅವರನ್ನು 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕುಂಞಿ ರವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ.  ಡಾ.ಎಚ್.ಸಿ. ಬೋರಲಿಂಗಯ್ಯ, ಎಲ್.ಹನುಮಂತಯ್ಯ ಹಾಗೂ ಎಸ್.ಜಿ.  ಸಿದ್ಧರಾಮಯ್ಯ ಅವರಿದ್ದ ಆಯ್ಕೆ ಸಮಿತಿಯು ಕನ್ನಡ ವಿಭಾಗದಿಂದ ಬೊಳುವಾರು ಅವರ ಈ ಕಾದಂಬರಿಯನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು. ಬೊಳುವಾರು ಬಗ್ಗೆ: ಬೊಳುವಾರು ಮಹಮ್ಮದ್ ಕುಂಞಿ ರವರು…

Read More

ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-24,2016

ಈ ಬಾರಿಯ ಸಂದೇಶ ಪ್ರಶಸ್ತಿಗೆ ನಟ ಪ್ರಕಾಶ್ ರೈ ಸೇರಿ ಏಳು ಮಂದಿ ಆಯ್ಕೆ ಮಂಗಳೂರಿನ ಸಂದೇಶ ಫೌಂಡೇಷನ್‌ ಫಾರ್‌ ಕಲ್ಚರ್‌ ಆಂಡ್‌ ಎಜುಕೇಶನ್‌ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ‘ಸಂದೇಶ’ ಪ್ರಶಸ್ತಿಗೆ ಈ ಬಾರಿ ಏಳುಮಂದಿಯನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರು: ಹಿರಿಯ ಸಾಹಿತಿ ಡಾ.ಕಮಲಾ ಹಂಪನಾ, ನಟ ಪ್ರಕಾಶ್‌ ರೈ , ಕೆ. ಯುವರಾಜ್‌ (ಕಲೆ),  ಅನಿಲ್‌ ಪತ್ರಾವೊ (ಕೊಂಕಣಿ ಸಂಗೀತ), ಜಾನ್‌ ದೇವರಾಜ್‌ (ವಿಶೇಷ ಪ್ರಶಸ್ತಿ) ಮತ್ತು ಶಮಿತಾ ರಾವ್‌–ರೆನಿಟಾ ಲೋಬೊ (ಶಿಕ್ಷಣ) ಅವರು…

Read More

ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-23,2016

ತೆರದ ಜಾಗದಲ್ಲಿ ತ್ಯಾಜ್ಯವನ್ನು ಸುಟ್ಟರೆ ರೂ 25,000 ದಂಡ: ರಾಷ್ಟ್ರೀಯ ಹಸಿರು ಮಂಡಳಿ ತೆರೆದ ಸ್ಥಳದಲ್ಲಿ ತ್ಯಾಜ್ಯ ಸುಡುವುದನ್ನು ದೇಶಾದ್ಯಂತ ಸಂಪೂರ್ಣ ನಿಷೇಧಿಸಿ ರಾಷ್ಟ್ರೀಯ ಹಸಿರು ಮಂಡಳಿ ಆದೇಶ ನೀಡಿದೆ. ಇದನ್ನು ಉಲ್ಲಂಘಿಸಿದರೆ ಗರಿಷ್ಠ 25 ಸಾವಿರ ರೂ. ದಂಡ ವಿಧಿಸುವಂತೆ ಸೂಚಿಸಿದೆ. ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ಥಳೀಯ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ, ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ. ತೀರ್ಪಿನ ಪ್ರಮುಖಾಂಶಗಳು:…

Read More

ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-22,2016

ಡಿಸೆಂಬರ್ 22: ರಾಷ್ಟ್ರೀಯ ಗಣಿತ ದಿನ ರಾಷ್ಟ್ರೀಯ ಗಣಿತ ದಿನವನ್ನು ಪ್ರತಿ ವರ್ಷ ಡಿಸೆಂಬರ್ 22 ರಂದು ಆಚರಿಸಲಾಗುತ್ತದೆ. ಪ್ರಸಿದ್ದ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ ರವರ ಜನ್ಮದಿನವನ್ನು ರಾಷ್ಟ್ರೀಯ ಗಣಿತ ದಿನವೆಂದು ಆಚರಿಸಲಾಗುತ್ತದೆ. ಈ ವರ್ಷ ರಾಮಾನುಜನ ರವರ 129ನೇ ಜನ್ಮದಿನ. ಶ್ರೀನಿವಾಸ ರಾಮಾನುಜನ್: ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಅಥವಾ ಜನಪ್ರಿಯವಾಗಿ ಶ್ರೀನಿವಾಸ ರಾಮಾನುಜನ್ ಎಂದು ಹೆಸರುವಾಸಿಯಾದ ಇವರು 19987ರ ಡಿಸೆಂಬರ್ 22 ರಂದು ತಮಿಳುನಾಡಿನ ಈರೋಡಿನಲ್ಲಿ ಜನಿಸಿದರು. ಕೇವಲ 32ನೇ ವರ್ಷದಲ್ಲಿ ಅಂದರೆ 26ನೇ ಏಪ್ರಿಲ್,…

Read More

ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-21,2016

ಬಂಗಾಳ ಕೊಲ್ಲಿಯಲ್ಲಿ ದೊಡ್ಡ “ಸತ್ತ ವಲಯ (ಡೆಡ್ ಝೋನ್) ಪತ್ತೆ ಭಾರತ ವಿಜ್ಞಾನಿಗಳನ್ನು ಒಳಗೊಂಡ ವಿಜ್ಞಾನಿಗಳ ತಂಡ ಬಂಗಾಳ ಕೊಲ್ಲಿಯಲ್ಲಿ ಸುಮಾರು 60,000 ಚದರ ಕಿಲೋ ಮೀಟರ್ ವ್ಯಾಪ್ತಿಯ ದೊಡ್ಡ “ಸತ್ತ ವಲಯ (Dead Zone)”ವನ್ನು ಪತ್ತೆಹಚ್ಚಿದ್ದಾರೆ. ಈ ಪ್ರದೇಶದವು ಅಪಾರ ಪ್ರಮಾಣದ ಸಾರಜನಕವನ್ನು ಸಾಗರದಿಂದ ಹೊರತೆಗೆಯುವ ಸೂಕ್ಷಜೀವಿಗಳ ಪ್ರಕ್ರಿಯೆಗೆ ಸೂಕ್ತವಾಗಿದೆ ಎಂದು ಹೇಳಲಾಗಿದೆ. ನೇಚರ್ ಜಿಯೋಸೈನ್ಸ್ ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಡೆಡ್ ಝೋನ್ ಎಂದರೇನು? ಡೆಡ್ ಝೋನ್ ಎಂದರೆ ನೀರಿನ ತಳದಲ್ಲಿ ಕಡಿಮೆ ಅಥವಾ…

Read More

ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-20,2016

ಗ್ರೇಟರ್ ಮೆಕಾಂಗ್ ವಲಯದಲ್ಲಿ 163 ಹೊಸ ಪ್ರಭೇದಗಳು ಪತ್ತೆ ಆಗ್ನೇಯ ಏಷ್ಯಾದ ಪರಿಸರ ವೈವಿಧ್ಯತೆ ಪ್ರದೇಶವಾದ ಗ್ರೇಟರ್ ಮೆಕಾಂಗ್ ಪ್ರದೇಶದಲ್ಲಿ 163 ಹೊಸ ಪ್ರಬೇಧಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಹೊಸ ಪ್ರಭೇದಗಳಲ್ಲಿ 3 ಸಸ್ತನಿಗಳು, 9 ಉಭಯಚರಗಳು, 11 ಮೀನುಗಳು, 14 ಸರೀಸೃಪಗಳು ಹಾಗೂ 143 ಸಸ್ಯಗಳನ್ನು ಪತ್ತೆಹಚ್ಚಲಾಗಿದೆ. ಕಾಂಬೋಡಿಯಾ, ಮಲೇಷಿಯಾ, ಲಾವೊಸ್, ವಿಯೆಟ್ನಾಂ ಮತ್ತು ಥಾಯ್ಲೆಂಡ್ ನಲ್ಲಿ ಈ ಪ್ರಭೇದಗಳು ಪತ್ತೆಯಾಗಿವೆ. ವಿಶ್ವ ವನ್ಯಜೀನಿ ಫಂಡ್ ವರದಿಯಲ್ಲಿ ಹೊಸ ಪ್ರಭೇದಗಳ ಅನ್ವೇಷಣೆ ಬಗ್ಗೆ ಪ್ರಕಟಿಸಲಾಗಿದೆ. ಪ್ರಮುಖಾಂಶಗಳು:…

Read More

ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಪೇಪರ್-2

ಆತ್ಮೀಯ ಓದುಗರೇ, ದಿನಾಂಕ 09/01/2017, ಸೋಮವಾರ ಸಂಜೆ 8 ಗಂಟೆಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಪೇಪರ್-2ರ ಯೋಜನೆಗಳ ಆಧರಿತ ಉಚಿತ ಅಣುಕು ಪರೀಕ್ಷೆಯನ್ನು ಕರುನಾಡುಎಗ್ಸಾಂ ತಂಡ ನಡೆಸಲಿದೆ. ಪ್ರಶ್ನೆಪತ್ರಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿರಲಿದೆ ಪ್ರಶ್ನೆಗಳನ್ನು ಈ ಮುಂದಿನ ಯೋಜನೆಗಳಾದ 14ನೇ ಹಣಕಾಸು ಯೋಜನೆ, ಗ್ರಾಮ ಸ್ವರಾಜ್, ಎಂಜಿಎನ್ಆರ್ ಇಜಿಎ, ಕುಡಿಯುವ ನೀರು ಮತ್ತು ನೈರ್ಮಲ್ಯ, ಸ್ವಚ್ಚ ಭಾರತ ಅಭಿಯಾನ, ಧೀನ ದಯಾಳ ಉಪಾಧ್ಯಯ ಗ್ರಾಮ ಜ್ಯೋತಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ…

Read More

PDO/SDA/FDA/KAS ಪರೀಕ್ಷಾರ್ಥಿಗಳಿಗೆ ಉಪಯುಕ್ತ ಕರೆಂಟ್ ಅಫೇರ್ಸ್ ಜನರಲ್ ನಾಲೇಜ್ ಡೈಜೆಸ್ಟ್ -2017

ಫೇಸ್’ಬುಕ್’ನಲ್ಲಿ 1,75, 000 ಜನರ ಪ್ರೀತಿಗೆ ಪಾತ್ರವಾದ ಸಾಮಾನ್ಯ ಜ್ಞಾನ ಗ್ರೂಪ್’ನಲ್ಲಿ (Ashok Gc ಅವರಿಂದ ಸಂಚಾಲಿತ) ಬರುವ ದೈನಂದಿನ ಪ್ರಶ್ನೆಗಳನ್ನು ನೀವೆಲ್ಲ ನೋಡಿರುತ್ತೀರಿ. ಜನವರಿಯಿಂದ ಡಿಸೆಂಬರ್’ತನಕ ಬಂದ ಪ್ರಚಲಿತ ವಿದ್ಯಮಾನದ (ಕರೆಂಟ್ ಅಫೇರ್ಸ್) 888 ಪ್ರಶ್ನೆಗಳನ್ನು ಇದರಲ್ಲಿ ಕವರ್ ಮಾಡಿರುವುದೊಂದು ವಿಶೇಷ. ಇದರ ಜತೆಗೆ ಇತರೆ ವಿಭಾಗಗಳು ಅಂದರೆ ಕನ್ನಡ-ಕರ್ನಾಟಕ, ಗಣಿತ, ಇಂಗ್ಲಿಷ್, ವಾಣಿಜ್ಯ, ಇತರೆ ಪ್ರಶ್ನೆಗಳು ಹೀಗೆ 2500 ರಷ್ಟು ಪ್ರಶ್ನೆಗಳು ಇವೆ.  ಎಲ್ಲ ಪರೀಕ್ಷಾರ್ಥಿಗಳಿಗೆ ಇದೊಂದು ಉಪಯುಕ್ತ ಪುಸ್ತಕ. ಈ ಪುಸ್ತಕವನ್ನು ತರಿಸಿಕೊಳ್ಳಲು ಬಯಸುವವರು…

Read More

ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-19,2016

ಗುಪ್ತದಳದ ನೂತನ ನಿರ್ದೇಶಕರಾಗಿ ರಾಜೀವ್ ಜೈನ್ ನೇಮಕ ಹಿರಿಯ ಐಪಿಎಸ್‌ ಅಧಿಕಾರಿಯಾದ ರಾಜೀವ್‌ ಜೈನ್‌ ಅವರನ್ನು ಗುಪ್ತದಳದ (Intelligence Bureau)ದ ನಿರ್ದೇಶಕರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಗುಪ್ತದಳದ ನಿರ್ದೇಶಕರಾಗಿರುವ ದಿನೇಶ್ವರ್‌ ಶರ್ಮಾ  ಅವರ ಅವಧಿ  ಡಿಸೆಂಬರ್‌ 31 ಕ್ಕೆ  ಪೂರ್ತಿಯಾಗುತ್ತದೆ. ರಾಜೀವ್‌ ಅವರು ಶರ್ಮಾ ಸ್ಥಾನವನ್ನು ತುಂಬಲಿದ್ದಾರೆ. ಜೈನ್ ರವರು 1980ನೇ ಬ್ಯಾಚ್ ನ ಜಾರ್ಖಂಡ್ ಕೇಡರ್ ನ ಐಪಿಎಸ್ ಅಧಿಕಾರಿ. ಜೈನ್ ರವರು 1989 ರಲ್ಲಿ ಗುಪ್ತಚರ ದಳದ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡರು. ಅಂದಿನಿಂದ…

Read More