2017 ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತಕ್ಕೆ 40ನೇ ಸ್ಥಾನ ವಿಶ್ವ ಆರ್ಥಿಕ ವೇದಿಕೆ ಹೊರತಂದಿರುವ 2017 ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತ 40ನೇ ಸ್ಥಾನದಲ್ಲಿದೆ. ಸೂಚ್ಯಂಕದಲ್ಲಿ ಒಟ್ಟು 136 ರಾಷ್ಟ್ರಗಳನ್ನು ಸಮೀಕ್ಷೆಗೆ ಒಳಪಡಿಸಿಲಾಗಿತ್ತು. 2015ನೇ ವರ್ಷದ ಸೂಚ್ಯಂಕದಲ್ಲಿ ಭಾರತ 52ನೇ ಸ್ಥಾನದಲ್ಲಿತ್ತು. ಈ ಬಾರಿ 12 ಸ್ಥಾನಗಳನ್ನು ಜಿಗಿಯುವ ಮೂಲಕ 40ನೇ ಸ್ಥಾನವನ್ನು ಪಡೆದುಕೊಂಡಿದೆ. ಪ್ರಮುಖಾಂಶಗಳು: ಟಾಪ್ 10 ರಾಷ್ಟ್ರಗಳು: ಸ್ಪೇನ್ (1), ಫ್ರಾನ್ಸ್ (2), ಜರ್ಮನಿ (3), ನೆದರ್ಲ್ಯಾಂಡ್ (4),…
Read Moreಅಮೆರಿಕದ ಎರಡು ಪ್ರಮುಖ ಹುದ್ದೆಗಳಿಗೆ ಭಾರತೀಯರು ನೇಮಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ಪ್ರಮುಖ ಹುದ್ದೆಗಳಿಗೆ ಇಬ್ಬರು ಭಾರತ ಸಂಜಾತರನ್ನು ನೇಮಕ ಮಾಡಿದ್ದಾರೆ. ನಿಯೋಮಿ ರಾವ್ ಅವರನ್ನು ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ತಮ್ಮ ಫೆಡರಲ್ ರೆಗ್ಯುಲೇಶನ್ಸ್ ತಜ್ಞರನ್ನಾಗಿ ನೇಮಿಸಿಕೊಂಡಿದ್ದಾರೆ. ಫೆಡರಲ್ ರೆಗ್ಯುಲೇಶನ್ಸ್ ವಿಭಾಗದಲ್ಲಿ ಶೇ. 75 ರಷ್ಟು ಯೋಜನೆಗಳನ್ನು ತೆಗೆದುಹಾಕಲು ಅಧ್ಯಕ್ಷ ಟ್ರಂಪ್ ಅವರು ನಿರ್ಧರಿಸಿದ್ದು, ನಿಯೋಮಿ ರಾವ್ ಅವರು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ಮುಂದೆ, ಅಮೆರಿಕದ ಅಧ್ಯಕ್ಷರ ಶ್ವೇತಭವನದಲ್ಲಿ ಕಾರ್ಯಕಾರಿ…
Read Moreಮಧ್ಯಪ್ರದೇಶ ಸರ್ಕಾರದಿಂದ ದೀನ್ ದಯಾಳ್ ರಸೋಯಿ ಯೋಜನೆಗೆ ಚಾಲನೆ ಬಡವರಿಗೆ ಸಬ್ಸಿಡಿ ದರದಲ್ಲಿ ಊಟ ವಿತರಿಸುವ ದೀನ್ ದಯಾಳ್ ರಸೋಯಿ ಯೋಜನೆಗೆ ಮಧ್ಯಪ್ರದೇಶ ಸರ್ಕಾರ ಚಾಲನೆ ನೀಡಿದೆ. ಬಿಜೆಪಿಯ ಧುರೀಣ ದೀನ್ ದಯಾಳ್ ಅವರ ಹೆಸರನ್ನು ಈ ಯೋಜನೆಗೆ ಇಡಲಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರು ಯೋಜನೆಯ ಮೊದಲ ಹಂತಕ್ಕೆ ರಾಜ್ಯದ 49 ಜಿಲ್ಲಾ ಕೇಂದ್ರಗಳಲ್ಲಿ ಚಾಲನೆ ನೀಡಿದರು. ಆ ಮೂಲಕ ಜನಪ್ರಿಯ ಸಬ್ಸಿಡಿ ಆಹಾರ ವಿತರಣೆ ಕಾರ್ಯಕ್ರಮವನ್ನು ಚಾಲನೆ ನೀಡಿದ ಮೂರನೇ ರಾಜ್ಯ ಎಂಬ…
Read Moreಖ್ಯಾತ ಹಿಂದೂಸ್ತಾನಿ ಗಾಯಕಿ ಕಿಶೋರಿ ಅಮೋನ್ಕರ್ ನಿಧನ ಖ್ಯಾತ ಹಿಂದೂಸ್ತಾನಿ ಗಾಯಕಿ ಕಿಶೋರಿ ಅಮೋನ್ಕರ್ (84) ನಿಧನರಾಗಿದ್ದಾರೆ. ಅಮೋನ್ಕರ್ ರವರು ಕೆಲಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಶೋರಿ ಅಮೋನ್ಕರ್ ರವರು ಜೈಪುರ ಘರಾನಾ ಶೈಲಿಯ ಗಾಯಕಿಯಾಗಿ ಪ್ರಸಿದ್ದರಾಗಿದ್ದರು. ಅವರು ದೇಶದ ಶ್ರೇಷ್ಠ ಹಿಂದೂಸ್ತಾನಿ ಗಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದರು. ಹಿಂದೂಸ್ತಾನಿ ಪಾರಂಪರಿಕ ರಾಗಗಳಲ್ಲಿ ಖ್ಯಾಲ್ ಹಾಡುವುದರಲ್ಲಿ ಕಿಶೋರಿ ಖ್ಯಾತರಾಗಿದ್ದರು. ಜತೆಗೆ ಲಘು ಸಂಗೀತದ ಠುಮರಿ, ಭಜನ್ ಹಾಗೂ ಚಿತ್ರ ಗೀತೆಗಳ ಗಾಯನದಲ್ಲೂ ಅವರು ಹೆಸರು ಗಳಿಸಿದ್ದರು. ಸಂಗೀತಾ ಕ್ಷೇತ್ರಕ್ಕೆ ಅವರು ನೀಡಿರುವ…
Read Moreಪಿ. ವಿ. ಸಿಂಧು ಮುಡಿಗೆ ಇಂಡಿಯಾ ಓಪನ್ ಸೂಪರ್ ಸರಣಿ ಪ್ರಶಸ್ತಿ ಓಲಂಪಿಕ್ ಪದಕ ವಿಜೇತೆ ಭಾರತದ ಉದಯೋನ್ಮುಖ ಆಟಗಾರ್ತಿ ಪಿ.ವಿ. ಸಿಂಧು ಅವರು ಇಂಡಿಯಾ ಓಪನ್ ಸೂಪರ್ ಸರಣಿಯ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು. ಸಿರಿಪೋರ್ಟ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು 21–19, 21–16ರ ನೇರ ಗೇಮ್‌ಗಳಿಂದ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಅವರ ವಿರುದ್ಧ ಜಯಿಸಿದರು. ಪುರುಷರ ಸಿಂಗಲ್ಸ್ ನಲ್ಲಿ ವಿಕ್ಟರ್‌ಗೆ ಪ್ರಶಸ್ತಿ: ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಡೆನ್ಮಾರ್ಕಿನ ವಿಕ್ಟರ್ ಅಕ್ಸೆಲ್ಸನ್…
Read Moreಭಾರತ-ಮಲೇಷಿಯಾ ನಡುವೆ ಏಳು ಒಪ್ಪಂದಕ್ಕೆ ಸಹಿ ಭಾರತ ಮತ್ತು ಮಲೇಷಿಯಾ ಏಳು ಒಪ್ಪಂದಗಳಿಗೆ ಸಹಿ ಹಾಕಿದ್ದು, ಉಭಯ ದೇಶಗಳ ನಡುವಿನ ಬಾಂದವ್ಯವನ್ನು ಗಟ್ಟಿಗೊಳಿಸಲು ದಿಟ್ಟ ಹೆಜ್ಜೆ ಇಟ್ಟಿವೆ. ಭಾರತ ಪ್ರವಾಸದಲ್ಲಿರುವ ಮಲೇಷಿಯಾದ ಪ್ರಧಾನಿ ನಜೀಬ್ ಅಬ್ದುಲ್ ರಜಾಕ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ನವದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಸಹಿ ಹಾಕಲಾದ ಒಪ್ಪಂದಗಳು: ವಾಯು ಸೇವೆ ಒಪ್ಪಂದ: ಉಭಯ ದೇಶಗಳ ನಡುವೆ 1974ರಲ್ಲಿ ಸಹಿ ಹಾಕಲಾದ ವಾಯು ಸೇವೆ ಒಪ್ಪಂದವನ್ನು ಪರಿಷ್ಕರಿಸುವುದಾಗಿ.…
Read Moreಗಣಿಗಾರಿಕೆ ಮೇಲೆ ನಿಷೇಧ ಹೇರಿದ ವಿಶ್ವದ ಮೊದಲ ರಾಷ್ಟ್ರ “ಎಲ್ ಸಲ್ವಡಾರ್” ಸೆಂಟ್ರಲ್ ಅಮೆರಿಕದ ಸಣ್ಣ ರಾಷ್ಟ್ರ “ಎಲ್ ಸಲ್ವಡಾರ್” ಗಣಿಗಾರಿಕೆ ಮೇಲೆ ನಿಷೇಧ ಹೇರಿದ ವಿಶ್ವದ ಮೊದಲ ರಾಷ್ಟ್ರವೆಂಬ ಗೌರವಕ್ಕೆ ಪಾತ್ರವಾಗಿದೆ. ಚಿನ್ನ ಸೇರಿದಂತೆ ಇತರೆ ಲೋಹಗಳ ಗಣಿಗಾರಿಕೆ ಮೇಲೆ ನಿಷೇಧ ಹೇರುವ ಕಾನೂನನ್ನು ಸಲ್ವಡಾರ್ ಜಾರಿಗೆ ತಂದಿದೆ. ಸಾಮಾಜಿಕ ಬಿಕ್ಕಟ್ಟು ನಿವಾರಣೆ, ಪರಿಸರ ಸಂರಕ್ಷಣೆ ಹಾಗೂ ನೀರಿನ ಜಲಾಶಯಗಳನ್ನು ರಕ್ಷಿಸುವ ಸಲುವಾಗಿ ಹೊಸ ಕಾನೂನನ್ನು ಜಾರಿಗೆ ತರಲಾಗಿದೆ. ಪ್ರಮುಖಾಂಶಗಳು: ತೆರೆದ ಗುಂಡಿ ಸೇರಿದಂತೆ ಎಲ್ಲಾ…
Read Moreಗುಜರಾತ್ ಪ್ರಾಣಿ ಸಂರಕ್ಷಣೆ (ತಿದ್ದುಪಡಿ) ಮಸೂದೆ-2017 ಗುಜರಾತ್ ಪ್ರಾಣಿ ಸಂರಕ್ಷಣೆ (ತಿದ್ದುಪಡಿ) ಮಸೂದೆ-2017ಗೆ ಗುಜರಾತ್ ವಿಧಾನ ಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ಮಸೂದೆಯು ಗುಜರಾತ್ ಪ್ರಾಣಿ ಸಂರಕ್ಷಣೆ ಕಾಯಿದೆ-1954ಕ್ಕೆ ತಿದ್ದುಪಡಿ ತರಲಿದೆ. ಆ ಮೂಲಕ ರಾಜ್ಯದಲ್ಲಿ ಗೋಹತ್ಯೆ ಮಾಡುವವರಿಗೆ ಕಠಿಣ ಶಿಕ್ಷೆ ಹಾಗೂ ಅಧಿಕ ದಂಡವನ್ನು ವಿಧಿಸಲು ಕಾಯಿದೆಯಡಿ ಅವಕಾಶ ಕಲ್ಪಿಸಲಾಗಿದೆ. ಪ್ರಮುಖಾಂಶಗಳು: ಗೋಹತ್ಯೆ ನಡೆಸುವುದು ಹಾಗೂ ಗೋಹತ್ಯೆಗೆ ಹಸುಗಳ ಸಾಗಾಣಿಕೆ ಮಾಡುವ ಅಪರಾಧಗಳಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವನ್ನು ಮಸೂದೆಯಡಿ ಕಲ್ಪಿಸಲಾಗಿದೆ. ರಾಜ್ಯ…
Read Moreಫ್ರಾನ್ಸ್ ಗಣಿತಶಾಸ್ತ್ರಜ್ಞ ವ್ಯಾಸ್ ಮೆಯೇರ್ ಗೆ ಪ್ರತಿಷ್ಠಿತ ಅಬೆಲ್ ಪ್ರಶಸ್ತಿ ಫ್ರಾನ್ಸ್ ನ ಪ್ರಖ್ಯಾತ ಗಣಿತಶಾಸ್ತ್ರಜ್ಞ ವ್ಯಾಸ್ ಮೆಯೇರ್ ಅವರಿಗೆ 2017ನೇ ಸಾಲಿನ ಪ್ರತಿಷ್ಠಿತ ಅಬೆಲ್ ಪ್ರಶಸ್ತಿ ಲಭಿಸಿದೆ. ಅಬೆಲ್ ಅವರ ಸಣ್ಣ ತರಂಗ ಹಾಗೂ ಅಲೆಗಳ ಗಣಿತಶಾಸ್ತ್ರೀಯ ಸಿದ್ದಾಂತಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅಬೆಲ್ ಅವರ ಈ ಸಿದ್ದಾಂತ ಚಿತ್ರಗಳನ್ನು ಸಂಕುಚಿತಗೊಳಿಸುವ ಹಾಗೂ ಗುರತ್ವಾಕರ್ಷಣ ಅಲೆಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಬಳಸಲಾಗುತ್ತಿದೆ. ಅಬೆಲ್ ಪ್ರಶಸ್ತಿ: ನಾರ್ವೆನ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಲೆಟರ್ಸ್ ಈ ಪ್ರಶಸ್ತಿಯನ್ನು ಪ್ರತಿ…
Read Moreಮಾರ್ಚ್ 23: ವಿಶ್ವ ಪವನಶಾಸ್ತ್ರ ದಿನ ವಿಶ್ವ ಪವನಶಾಸ್ತ್ರ ದಿನವನ್ನು ಮಾರ್ಚ್ 23 ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ. 1950 ರಲ್ಲಿ ವಿಶ್ವ ಪವನಶಾಸ್ತ್ರ ಸಂಸ್ಥೆಯನ್ನು ಸ್ಥಾಪಿಸಿದ ಸ್ಮರಣಾರ್ಥ ಈ ದಿನವನ್ನು ವಿಶ್ವ ಪವನಶಾಸ್ತ್ರ ದಿನವೆಂದು ಆಚರಿಸಲಾಗುತ್ತದೆ. 2017 ಧ್ಯೇಯವಾಕ್ಯ: “ಮೋಡಗಳನ್ನು ಅರ್ಥಮಾಡಿಕೊಳ್ಳುವುದು (Understanding Clouds)” ಇದು ಈ ವರ್ಷದ ಧ್ಯೇಯವಾಕ್ಯ. ವಾತಾವರಣ ಹಾಗೂ ಜಲ ಸಂಪನ್ಮೂಲ ನಿರ್ವಹಣೆಯಲ್ಲಿ ಮೋಡಗಳು ಹೇಗೆ ಪ್ರಾಮುಖ್ಯವಾಗಿವೆ ಎನ್ನುವುದನ್ನು ಸಾರುವುದು ಇದರ ಉದ್ದೇಶ. ಮೋಡಗಳ ಜಲ ಚಕ್ರದಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ…
Read More