ಗುಜರಾತ್ ನಲ್ಲಿ ಭಾರತದ ಮೊದಲ ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ದೇಶದ ಮೊದಲ ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ‘ಇಂಡಿಯಾ ಇಂಟರ್ ನ್ಯಾಷನಲ್ ಎಕ್ಸ್ ಚೇಂಜ್ ಇಂಡಿಯಾ ಐಎನ್ಎಕ್ಸ್ (India INX)’ಗೆ ಪ್ರಧಾನಿ ನರೇಂದ್ರ ಮೋದಿರವರು ಚಾಲನೆ ನೀಡಿದರು. ಗುಜರಾತ್ನ ಅಂತಾರಾಷ್ಟ್ರೀಯ ಹಣಕಾಸು ಟೆಕ್ಸಿಟಿ (ಗಿಪ್ಟ್ ಸಿಟಿ)ಯಲ್ಲಿ ಈ ಕೇಂದ್ರ ಸ್ಥಾಪನೆಯಾಗಿದೆ. ಇಂಡಿಯಾ ಐಎನ್ಎಕ್ಸ್ ಬಾಂಬೆ ಸ್ಟಾಕ್ ಎಕ್ಸ್ಚೆಂಜ್ ನ ಸಂಪೂರ್ಣ ಸ್ವಾಮ್ಯದ ಸಂಸ್ಥೆಯಾಗಿದೆ. ಜ. 16ರಿಂದ ಇಲ್ಲಿ ವಹಿವಾಟು ಆರಂಭವಾಗಲಿದೆ. ಪ್ರಮುಖಾಂಶಗಳು: ಆರಂಭದಲ್ಲಿ ಇಲ್ಲಿ ನಿವ್ವಳ…
Read Moreಉಪಗ್ರಹ ಉಡಾವಣೆ ತಂತ್ರಜ್ಞಾನಕ್ಕೆ ಇಸ್ರೋ ಮತ್ತು ಫ್ರೆಂಚ್ ಬಾಹ್ಯಕಾಶ ಏಜೆನ್ಸಿ ಒಪ್ಪಂದ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಫ್ರೆಂಚ್ ಸ್ಪೇಸ್ ಏಜೆನ್ಸಿ (CNES) ಸಂಸ್ಥೆಯು ಉಪಗ್ರಹ ಉಡಾವಣೆ ತಂತ್ರಜ್ಞಾನ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಇಸ್ರೋದ ಅಧ್ಯಕ್ಷ ಕಿರಣ್ ಕುಮಾರ್ ಮತ್ತು CNESನ ಅಧ್ಯಕ್ಷ ಜೀನ್ ಯ್ವೆಸ್ ಲೆ ಗಾಲ್ ನಡುವೆ ಬೆಂಗಳೂರಿಗೆ ಭೇಟಿ ನೀಡಿದ್ದ ಫ್ರೆಂಚ್ ವಿದೇಶಾಂಗ ವ್ಯವಹಾರ ಸಚಿವ ಜೀನ್ ಮಾರ್ಕ್ ಐರಾಲ್ಟ್ ರವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಪ್ರಮುಖಾಂಶಗಳು:…
Read Moreಕ್ರಿಸ್ಟಿಯಾನೋ ರೊನಾಲ್ಡೊ ಗೆ ಫಿಫಾ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ಪೋರ್ಚುಗಲ್ ತಂಡದ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರಿಗೆ 2016ನೇ ಸಾಲಿನ ಫಿಫಾ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಜೂರಿಚ್, ಸ್ಟಿಟ್ಜರ್ಲ್ಯಾಂಡ್ನಲ್ಲಿ ಪ್ರಧಾನ ಮಾಡಲಾಯಿತು. ರೊನಾಲ್ಡೊ ರವರು ಶೇ 34.45% ಮತವನ್ನು ಪಡೆಯುವ ಮೂಲಕ ಪ್ರಶಸ್ತಿಗೆ ಭಾಜನರಾದರು. ಬಾರ್ಸಿಲೋನದ ಲಿಯೊನೆಲ್ ಮೆಸ್ಸಿ (26.42%) ಮತ್ತು ಅಲ್ಟಿಕೊ ಮ್ಯಾಡ್ರಿಡ್ನ ಅಂಟೊನೆ ಗ್ರೈಝ್ ಮನ್ (7.53%) ರವರನ್ನು ಹಿಂದಿಕ್ಕಿ ರೊನಾಲ್ಡೊ ರವರು ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇತರೆ ಪ್ರಶಸ್ತಿಗಳು: ವರ್ಷದ…
Read More14ನೇ ಪ್ರವಾಸಿ ಭಾರತೀಯ ದಿವಸ್ ಗೆ ಬೆಂಗಳೂರಿನಲ್ಲಿ ಚಾಲನೆ ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ 14ನೇ ಪ್ರವಾಸಿ ಭಾರತೀಯ ದಿವಸಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. “ರಿ ಡಿಫೈನಿಂಗ್ ಎಂಗೇಂಜ್ ಮೆಂಟ್ ವಿತ್ ದಿ ಇಂಡಿಯನ್ ಡಯಾಸ್ಪೋರ” ಇದು ಈ ವರ್ಷ ಪ್ರವಾಸಿ ದಿವಸದ ಧ್ಯೇಯವಾಕ್ಯ. ಮೂರು ದಿನಗಳ ಪ್ರವಾಸಿ ಭಾರತೀಯ ದಿವಸದ ಮೊದಲ ದಿನದಂದು ಯುವ ಪ್ರವಾಸಿ ಭಾರತೀಯ ದಿವಸಕ್ಕೆ ಚಾಲನೆ ನೀಡಲಾಯಿತು. ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ (ಸ್ವತಂತ್ರ ನಿರ್ವಹಣೆ) ವಿಜಯ್‌ಗೋಯಲ್ ಚಾಲನೆ…
Read More2016-17ನೇ ಸಾಲಿನ ಬಸವ ಕೃಷಿ ಪ್ರಶಸ್ತಿಗೆ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಆಯ್ಕೆ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ ನೀಡಲಾಗುವ ರಾಷ್ಟ್ರಮಟ್ಟದ ಪ್ರಸ್ತಕ ಸಾಲಿನ ಬಸವ ಕೃಷಿ ಪ್ರಶಸ್ತಿಗೆ ತ್ರಿಪುರ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿಯನ್ನು ಜನವರಿ 15ರ ಸಂಕ್ರಾಂತಿಯಂದು ಕೂಡಲ ಸಂಗಮದ ಸಭಾಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಮಾಣಿಕ್ ಸರ್ಕಾರ್: ಜನವರಿ 22, 1949ರಲ್ಲಿ ಜನಿಸಿರುವ ಮಾಣಿಕ್ ಸರ್ಕಾರ್ ರವರು 11ನೇ ಮಾರ್ಚ್ 1998 ರಿಂದ…
Read Moreನಂಜನಗೂಡಿನ ಅಡಕನಹಳ್ಳಿಯಲ್ಲಿ 17ನೇ ರಾಷ್ಟ್ರೀಯ ಜಾಂಬೂರಿಗೆ ಅದ್ಧೂರಿ ಚಾಲನೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 17ನೇ ರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವರು 17ನೇ ರಾಷ್ಟ್ರೀಯ ಜಾಂಬೂರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತಕುಮಾರ್, ರಾಜಮಾತೆ ಡಾ.ಪ್ರಮೋದಾದೇವಿ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಉಪಸ್ಥಿತರಿದ್ದರು. ಧ್ಯೇಯವಾಕ್ಯ: “ಉತ್ತಮ…
Read Moreಕರ್ನಾಟಕ ಲಲಿತಾ ಕಲಾ ಅಕಾಡೆಮಿ ಫೆಲೋಶಿಪ್ ಗೆ ವಾಸುದೇವ ಆಯ್ಕೆ ಹಿರಿಯ ಕಲಾವಿದ ಎಸ್.ಜಿ.ವಾಸುದೇವ ಅವರನ್ನುಕರ್ನಾಟಕ ಲಲಿತಕಲಾ ಅಕಾಡೆಮಿಯ 2016ನೇ ಸಾಲಿನ ಸುವರ್ಣ ಗೌರವ ಫೆಲೋಷಿಪ್‌ಗೆ ಆಯ್ಕೆ ಮಾಡಲಾಗಿದೆ. ‘ಫೆಲೋಷಿಪ್ ₹2 ಲಕ್ಷ ಗೌರವಧನ ಒಳಗೊಂಡಿದೆ. ಸಂಶೋಧನಾ ಫೆಲೋಷಿಪ್: ‘ಅಕಾಡೆಮಿಯ ಸಂಶೋಧನಾ ಫೆಲೋಷಿಪ್‌ಗೆ 2016–17ನೇ ಸಾಲಿನಲ್ಲಿ 22 ಜನ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ದೃಶ್ಯಕಲೆ, ಕಲಾ ಶಿಕ್ಷಣ, ಗ್ರಾಫಿಕ್ಸ್ ಕಲೆಗಳಲ್ಲಿ ಪರಿಣಿತಿ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸೇರಿದ್ದಾರೆ…
Read Moreನವದೆಹಲಿಯಲ್ಲಿ ಹಣಕಾಸು ಸ್ಥಿರತೆ ಮತ್ತು ಅಭಿವೃದ್ದಿ ಮಂಡಳಿಯ 16ನೇ ಸಭೆ ಹಣಕಾಸು ಸ್ಥಿರತೆ ಮತ್ತು ಅಭಿವೃದ್ದಿ ಮಂಡಳಿ (Financial Stability and Development Council)ಯ 16ನೇ ಸಭೆ ನವದೆಹಲಿಯಲ್ಲಿ ನಡೆಯಿತು. ಹಣಕಾಸು ಸಚಿವ ಅರುಣ್ ಜೇಟ್ಲಿ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಡಳಿಯ ಸದಸ್ಯರಾದ ಆರ್ಥಿಕ ವಲಯದ ನಿಯಂತ್ರಕರು ಸಭೆಯಲ್ಲಿ ಭಾಗವಹಿಸಿದ್ದರು. ದೇಶದ ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆ ಹಾಗೂ ಸವಾಲುಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಸಭೆಯ ಪ್ರಮುಖಾಂಶಗಳು: ಭಾರತದ ಆರ್ಥಿಕತೆ: ವಿಶ್ವದ ದುರ್ಬಲ ಆರ್ಥಿಕ ಪರಿಸ್ಥಿತಿಯ ಹೊರತಾಗಿಯೂ ಭಾರತದ…
Read More2017 ಸ್ವಚ್ಚ ಭಾರತ ಸಮೀಕ್ಷೆಗೆ ಕೇಂದ್ರ ಸರ್ಕಾರ ಚಾಲನೆ ಕೇಂದ್ರ ನಗರಾಭಿವೃದ್ದಿ ಸಚಿವಾಲಯ ಸ್ವಚ್ಚ ಭಾರತ ಸಮೀಕ್ಷೆಗೆ ಚಾಲನೆ ನೀಡಿದೆ. ಇದರಡಿ ದೇಶದಾದ್ಯಂತ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 500 ನಗರ/ಪಟ್ಟಣಗಳಲ್ಲಿ ಸ್ವಚ್ಚತೆಯ ಮೇಲೆ ಸಮೀಕ್ಷೆಯನ್ನು ನಡೆಸಲಾಗುವುದು. ಈ ಸಮೀಕ್ಷೆಯನ್ನು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಸ್ವಚ್ಚ ಭಾರತ ಅಭಿಯಾನದಡಿ ನಡೆಸುತ್ತಿದ್ದು, ನೈಮರ್ಲ್ಯತೆ ಸುಧಾರಿಸಲು ನಗರಗಳ ನಡುವೆ ಸ್ಮರ್ಧಾತ್ಮಕ ವಾತಾವರಣ ಸೃಷ್ಟಿಸುವುದು ಸಮೀಕ್ಷೆಯ ಉದ್ದೇಶ. ಪ್ರಮುಖಾಂಶಗಳು: ಸ್ವಚ್ಚ ಭಾರತ ಸಮೀಕ್ಷೆಯಡಿ ಮುನಿಸಿಪಾಲಿಟಿ ಸಂಸ್ಥೆಗಳು ನೀಡುವ ಮಾಹಿತಿ,…
Read Moreಬಿಸಿಸಿಐ ನಿಂದ ಅನುರಾಗ್ ಠಾಕೂರ್ ರವರನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ಬಿಸಿಸಿಐನ ಕಾರ್ಯದರ್ಶಿ ಸ್ಥಾನದಿಂದ ಅಜಯ್ ಶಿರ್ಕೆ ಅವರನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಲೋಧಾ ಸಮಿತಿ ವರದಿಯನ್ನು ಅನುಷ್ಟಾನಗೊಳಿಸಲು ವಿಫಲರಾದ ಕಾರಣ ಸುಪ್ರೀಂಕೋರ್ಟ್ ಈ ಕಠಿಣ ನಿರ್ಣಯವನ್ನು ಕೈಗೊಂಡಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದ್ದು ಅನುರಾಗ್ ಠಾಕೂರ್ ಮತ್ತು ಅಜಯ್ ಶಿರ್ಕೆ ಈ ಹುದ್ದೆಯಲ್ಲಿ ಮುಂದುವರೆಯಲು ಯೋಗ್ಯತೆಯನ್ನು ಹೊಂದಿಲ್ಲ…
Read More