ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ನಲ್ಲಿ ಹವಳ ದಿಬ್ಬಗಳ ವಿನಾಶ ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ನಲ್ಲಿ ಇದೆಂದಿಗಿಂತಲೂ ಹೆಚ್ಚು “ಕೋರಲ್ ಬ್ಲೀಚಿಂಗ್“ ಆರಂಭವಾಗಿದ್ದು, ಹವಳದ ದಿಬ್ಬಗಳ ಸಾಮೂಹಿಕ ನಾಶಕ್ಕೆ ಕಾರಣವಾಗಿದೆ. ಅಂದಾಜಿನ ಪ್ರಕಾರ 2300 ಕಿ.ಮೀ ಉದ್ದದ ಕೋರಲ್ ರೀಫ್ ಪೈಕಿ ಉತ್ತರಭಾಗದಲ್ಲಿ ಸುಮಾರು ಎರಡನೇ ಮೂರರಷ್ಟು ಅಥವಾ 700 ಕಿ.ಮೀ ಉದ್ದದ ಹವಳ ದಿಬ್ಬ ಕಳೆದ ಒಂಬತ್ತು ತಿಂಗಳಲ್ಲಿ ನಾಶವಾಗಿದೆ ಎಂದು ಹೇಳಲಾಗಿದೆ. ಗ್ರೇಟ್ ಬ್ಯಾರಿಯತ್ ರೀಫ್ ನಲ್ಲಿ ಈ ಮಟ್ಟದ ಹವಳದ ವಿನಾಶ…
Read Moreಮ್ಯಾಗ್ನಸ್ ಕಾರ್ಲ್‌ಸನ್‌ಗೆ ಒಲಿದ 2016 ವಿಶ್ವ ಚೆಸ್ ಚಾಂಪಿಯನ್ ಷಿಪ್ ಕಿರೀಟ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರು 2016 ವಿಶ್ವ ಚೆಸ್ ಚಾಂಪಿಯನ್ ಷಿಪ್ ಕಿರೀಟವನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಕಾರ್ಲ್‌ಸನ್ ಸತತ ಮೂರನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ರೋಚಕ ಹಣಾಹಣಿಯಲ್ಲಿ ನಾರ್ವೆಯ ಆಟಗಾರ, ರಷ್ಯಾದ ಸರ್ಜಿ ಕರ್ಜಾಕಿನ್ ಅವರನ್ನು ಪರಾಭವಗೊಳಿಸಿದರು. ನಾಲ್ಕು ಸುತ್ತುಗಳ ರ್‍ಯಾಪಿಡ್ ಪ್ಲೇ ಆಫ್‌ನ ಮೊದಲ ಎರಡು ಸುತ್ತುಗಳು ಡ್ರಾದಲ್ಲಿ ಅಂತ್ಯ ಕಂಡಿದ್ದವು. ಹೀಗಾಗಿ ಮೂರನೇ ಹಾಗೂ ನಾಲ್ಕನೇ ಸುತ್ತಿನ ಹೋರಾಟ ಕುತೂಹಲ…
Read Moreಮಾನವ ಅಭಿವೃದ್ದಿ ಸಚಿವಾಲಯದಿಂದ ವಿತ್ತೀಯ ಸಾಕ್ಷರತ ಅಭಿಯಾನಕ್ಕೆ ಚಾಲನೆ ನಗದು ರಹಿತ ಆರ್ಥಿಕ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೇಂದ್ರ ಮಾನವ ಅಭಿವೃದ್ದಿ ಸಚಿವಾಲಯ ವಿತ್ತೀಯ ಸಾಕ್ಷರತ ಅಭಿಯಾನಕ್ಕೆ ಚಾಲನೆ ನೀಡಿದೆ. ಕೇಂದ್ರ ಮಾನವ ಅಭಿವೃದ್ದಿ ಸಚಿವ ಪ್ರಕಾಶ್ ಜಾವೇದಕರ್ ರವರು ಈ ಅಭಿಯಾನಕ್ಕೆ ಚಾಲನೆ ನೀಡಿದರು. ಇದು ನಗದು ರಹಿತ ಆರ್ಥಿಕ ವ್ಯವಸ್ಥೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ನಡೆಸುವ ಅಭಿಯಾನವಾಗಿದೆ. ಪ್ರಮುಖಾಂಶಗಳು: ನಗದು ರಹಿತ ಆರ್ಥಿಕ ವ್ಯವಸ್ಥೆ ಮತ್ತು ನಗದು ರಹಿತ ವಹಿವಾಟು ನಡೆಸುವ…
Read Moreಗುಜರಾತ್ ನ ಅಕೊಡರ ದೇಶದ ಮೊದಲ ಡಿಜಿಟಲ್ ಹಳ್ಳಿ ಗುಜರಾತಿನ ಸಬರಕಾಂತ್ ಜಿಲ್ಲೆಯ ಅಕೊಡರ ದೇಶದ ಮೊದಲ ಡಿಜಿಟಲ್ ಹಳ್ಳಿ ಎಂಬ ಗೌರವಕ್ಕೆ ಪಾತ್ರವಾಗಿದೆ. ಅಕೊಡರ ಗ್ರಾಮದ ಜನಸಂಖ್ಯೆ 1,191 ಹಾಗೂ 250 ಕುಟುಂಬಗಳನ್ನು ಒಳಗೊಂಡಿದ್ದು, ಪ್ರತಿನಿತ್ಯದ ವ್ಯವಹಾರಗಳನ್ನು ನಗದು ರಹಿತವಾಗಿ ನಡೆಸುವ ಮೂಲಕ ದೇಶಕ್ಕೆ ಮಾದರಿಯಾಗಿದೆ. ಅಕೊಡರದ ಜನರು ತಮ್ಮ ದಿನನಿತ್ಯದ ವ್ಯವಹಾರವನ್ನು ಎಸ್ಎಂಎಸ್, ನೆಟ್ ಬ್ಯಾಂಕಿಂಗ್ ಮತ್ತು ಕಾರ್ಡ್ ಬಳಕೆ ಮೂಲಕ ಮಾಡುತ್ತಿದ್ದಾರೆ. ಪ್ರಮುಖಾಂಶಗಳು: ಅಕೊಡರ ಗ್ರಾಮವನ್ನು ಐಸಿಐಸಿಐ ಬ್ಯಾಂಕ್ ತನ್ನ ಡಿಜಿಟಲ್ ಹಳ್ಳಿ…
Read Moreಎಐಬಿಎ ಯುವ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಸಚಿನ್ ಸಿಂಗ್ ಗೆ ಚಿನ್ನ ಭಾರತದ ಯುವ ಬಾಕ್ಸರ್ ಸಚಿನ್ ಸಿಂಗ್, ಎಐಬಿಎ ಯುವ ವಿಶ್ವ ಬಾಕ್ಸಿಂಗ್ ಚಾಂಪಿಯನ್’ಶಿಪ್‌ನ ಪುರುಷರ 49 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ರಷ್ಯಾದ ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಸಚಿನ್ 5-0 ಅಂಕಗಳಿಂದ ಕ್ಯೂಬಾದ ಜಾರ್ಜ್ ಗ್ರಿನಾನ್ ರವರನ್ನು ಮಣಸಿ ಪದಕಕ್ಕೆ ಕೊರಳೊಡ್ಡಿದರು. ಎಐಬಿಯ ಯುವ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಪ್ರಶಸ್ತಿ ಗೆದ್ದ ಮೂರನೇ ಭಾರತೀಯ ಬಾಕ್ಸರ್…
Read Moreಪ್ರಖ್ಯಾತ ಮರಾಠಿ ಲೇಖಕ ಆನಂದ್ ಯಾದವ್ ನಿಧನ ಖ್ಯಾತ ಮರಾಠಿ ಲೇಖಕ ಆನಂದ್ ಯಾದವ್ ರವರು ಪುಣೆ, ಮಹಾರಾಷ್ಟ್ರದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಯಾದವ್ ರವರ ಆತ್ಮಚರಿತ್ರೆ “ಝೊಂಬಿ” ಅವರಿಗೆ 1991 ರಲ್ಲಿ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಝೊಂಬಿ ಒಬ್ಬ ಬಾಲಕ, ಅವನ ಪ್ರೀತಿಯ ತಾಯಿ, ಕಿತ್ತು ತಿನ್ನುವ ಬಡತನ ಆದರೂ ಓದಬೇಕು ಎನ್ನುವ ಆತನ ಆಸೆಯನ್ನು ಆಧರಿತ ಕಥೆ. ಆನಂದ್ ಯಾದವ್: ಆನಂದ್ ಯಾದವ್ ರವರು ಕೊಲ್ಹಾಪುರ ಜಿಲ್ಲೆಯ ಕಗಲ್…
Read Moreತ್ರೀ-ನೇತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ರೈಲ್ವೆ ಸಚಿವಾಲಯ ಸಜ್ಜು ರೈಲು ಅಪಘಾತದಂತಹ ಅವಘಡಗಳನ್ನು ತಪ್ಪಿಸುವ ಸಲುವಾಗಿ ಭಾರತೀಯ ರೈಲ್ವೆ ತ್ರಿ-ನೇತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಜ್ಜಾಗಿದೆ. ತ್ರೀ-ನೇತ್ರ ಎಂದರೆ (terrain imaging for diesel drivers infrared, enhanced optical and radar assisted (Tri-Netra)) ರೈಲು ಅಪಘಾತವನ್ನು ತಡೆಯುವ ವ್ಯವಸ್ಥೆ. ತ್ರಿ-ನೇತ್ರ ವ್ಯವಸ್ಥೆ ಒಂದು ಸುಧಾರಿತ ವ್ಯವಸ್ಥೆಯಾಗಿದ್ದು, ಹೈ-ರೆಸಲ್ಯೂಷನ್ ಆಪ್ಟಿಕಲ್ ವಿಡಿಯೋ ಕ್ಯಾಮೆರ, ಹೈ-ಸೆನ್ಸಿಟಿವ್ ಇನ್ಪ್ರಾರೆಡ್ ವಿಡಿಯೋ ಕ್ಯಾಮೆರ ಹಾಗೂ ರಾಡಾರ್ ಆಧರಿತ ಟೆರೈನ್ ಮ್ಯಾಪಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.…
Read Moreಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ನಿಧನ ಕ್ಯೂಬಾದ ಮಾಜಿ ಅಧ್ಯಕ್ಷ ಮತ್ತು ಕಮ್ಯೂನಿಷ್ಟ್ ಕ್ರಾಂತಿಯ ನಾಯಕ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. 1959ರ ಕ್ಯೂಬಾ ಕ್ರಾಂತಿ ವೇಳೆ ಕ್ಯಾಸ್ಟ್ರೋ ರವರು ಕಮಾಂಡರ್ ಇನ್ ಚೀಫ್ ಆಗಿ ಪ್ರಮುಖ ಪಾತ್ರವಹಿಸಿದ್ದರು. 1976 ರಿಂದ 2008 ರವರೆಗೆ ಕ್ಯೂಬಾದ ಅಧ್ಯಕ್ಷರಾಗಿ ಸುಮಾರು ಅರ್ಧ ಶತಕ ಕಾಲ ಮುನ್ನಡೆಸಿದ್ದರು. ಅನಾರೋಗ್ಯ ಕಾರಣ 2008 ರಲ್ಲಿ ತಮ್ಮ ಸಹೋದರ ರೌಲ್ ಕ್ಯಾಸ್ಟ್ರೋ ರವರಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಫಿಡೆಲ್ ಕ್ಯಾಸ್ಟ್ರೋ…
Read Moreಅಗ್ನಿ-1 ಖಂಡಾಂತರ ಕ್ಷಿಪಣೆ ಪರೀಕ್ಷೆ ಯಶಸ್ವಿ ಸ್ವದೇಶಿ ನಿರ್ಮಿತ ಸಿಡಿಲ ತಲೆ ಹೊತ್ತೊಯ್ಯಬಲ್ಲ ಅಗ್ನಿ-1 ಖಂಡಾತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಒರಿಸ್ಸಾದ ಅಬ್ದುಲ್ ಕಲಾಂ ಐಲ್ಯಾಂಡ್(ವೀಲರ್ ಐಲ್ಯಾಂಡ್)ನ ಸಂಚಾರಿ ಉಡಾವಣಾ ವಾಹನದಿಂದ ಭೂಮಿಯಿಂದ ಭೂಮಿಗೆ ಅಪ್ಪಳಿಸುವ ಅಗ್ನಿ-1 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು. ಕಳೆದ ಮಾರ್ಚ್ 2016 ಇದೇ ಸ್ಥಳದಲ್ಲಿ ಅಗ್ನಿ-1 ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಅಗ್ನಿ-1 ಕ್ಷಿಪಣಿ: ಅಗ್ನಿ-1 ಖಂಡಾಂತರ ಹಾಗೂ ಭೂಮಿಯಿಂದ ಭೂಮಿಗೆ ಅಪ್ಪಳಿಸುವ ಕ್ಷಿಪಣಿ. ಅಗ್ನಿ ಸರಣಿಯ ಮೊದಲ ಕ್ಷಿಪಣಿಯನ್ನು 1983 ರಲ್ಲಿ…
Read Moreರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಯಧುವೀರ್ ಸಿಂಗ್ ಮಲಿಕ್ ನೇಮಕ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಯಧುವೀರ್ ಸಿಂಗ್ ಮಲ್ಲಿಕ್ ರವರು ನೇಮಕಗೊಂಡಿದ್ದಾರೆ. ಪ್ರಾಧಿಕಾರದ ಅಧ್ಯಕ್ಷರಾಗಿದ್ದ ರಾಘವ್ ಚಂದ್ರ ರವರು ರಾಷ್ಟ್ರೀಯ ಪರಿಶಿಷ್ಠ ಪಂಗಡ ಆಯೋಗದ ಕಾರ್ಯದರ್ಶಿಯಾಗಿ ನೇಮಕಗೊಂಡ ಕಾರಣ ಅಧ್ಯಕ್ಷ ಹುದ್ದೆ ತೆರವಾಗಿತ್ತು. ಮಲಿಕ್ ರವರು 1983 ಬ್ಯಾಚ್ ನ ಐಎಎಸ್ ಅಧಿಕಾರಿ. ನೇಮಕಾತಿ ಮುಂಚೆ ಮಲಿಕ್ ರವರು ನೀತಿ ಆಯೋಗದ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ:…
Read More