62 ಜಿಲ್ಲೆಗಳಲ್ಲಿ ನೂತನ ಜವಹರ್ ನವೋದಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಒಪ್ಪಿಗೆ ಪ್ರತಿ ಜಿಲ್ಲೆಗೆ ಒಂದರಂತೆ 62 ಜಿಲ್ಲೆಗಳಲ್ಲಿ ನೂತನ ಜವಹರ್ ನವೋದಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಈ ವಿದ್ಯಾಲಯಗಳು ನೀಡಲಿವೆ. ಸರಿಸುಮಾರು 35,000 ವಿದ್ಯಾರ್ಥಿಗಳಿಗೆ ಇದರಿಂದ ಉಪಯೋಗವಾಗಲಿದೆ. ಪ್ರಮುಖಾಂಶಗಳು: ಎಲ್ಲಾ ಜವಹರ್ ನವೋದಯ ವಿದ್ಯಾಲಯಗಳು ವಸತಿ ಆಧರಿತ ಹಾಗೂ ಸಹ ಶಿಕ್ಷಣ ಮಾದರಿಯಲ್ಲಿ ಇರಲಿವೆ. ವಿದ್ಯಾಲಯದ ನೌಕರ…
Read More14ನೇ ಪ್ರವಾಸಿ ಭಾರತೀಯ ದಿವಸದ ಮುಖ್ಯ ಅತಿಥಿಯಾಗಿ ಪೋರ್ಚುಗಲ್ ಪ್ರಧಾನಿ ಅಂಟೊನಿಯೋ ಕೋಸ್ಟಾ ಭಾರತೀಯ ಮೂಲದ ಪೋರ್ಚುಗಲ್ ಪ್ರಧಾನಿ ಅಂಟೊನಿಯೋ ಕೋಸ್ಟಾ ರವರು ಬೆಂಗಳೂರಿನಲ್ಲಿ ಜನವರಿ 7 ರಿಂದ 9 ರವರೆಗೆ ನಡೆಯಲಿರುವ 14ನೇ ಪ್ರವಾಸಿ ಭಾರತೀಯ ದಿವಸದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೋಸ್ಟಾ ರವರು ಜನವರಿ 8 ರಂದು ಪ್ರವಾಸಿ ಭಾರತೀಯ ದಿವಸ್ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ ಸುರಿನಾಮ್ ಉಪಾಧ್ಯಕ್ಷರಾದ ಮೈಕೆಲ್ ಅಶ್ವಿನ್ ಸತ್ಯಂದ್ರೆ ಅಧಿನ್ ರವರು ಜನವರಿ 7 ರಂದು ನಡೆಯಲಿರುವ ಯುವ…
Read Moreಮಾನವರಹಿತ ಯುದ್ದ ವಿಮಾನ “ರುಸ್ತಮ್-2” ಪರೀಕ್ಷಾರ್ಥ ಹಾರಾಟ ಯಶಸ್ವಿ ಸ್ವದೇಶಿ ನಿರ್ಮಿತ ಮಾನವರಹಿತ ಯುದ್ಧ ವಿಮಾನ ‘ರುಸ್ತುಮ್–2 (ತಪಸ್-201)’ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿ ನಡೆಸಲಾಗಿದೆ. ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ATR) ನಲ್ಲಿ ಪರೀಕ್ಷಾರ್ಥ ಹಾರಾಟವನ್ನು ನಡೆಸಲಾಯಿತು. ಮಾನವ ರಹಿತ ಮತ್ತು ಮಾನವ ಸಹಿತ ಯುದ್ದ ವಿಮಾನ ಹಾರಾಟ ನಡೆಸಲು ಈ ಟೆಸ್ಟ್ ರೇಂಜ್ ಅನ್ನು ಚಿತ್ರದುರ್ಗದ ಬಳಿ ನೂತನವಾಗಿ ನಿರ್ಮಿಸಲಾಗಿದೆ. ಪರೀಕ್ಷಾರ್ಥ ಹಾರಾಟದ ವೇಳೆ ವಿಮಾನದ ಟೇಕಾಫ್, ಲ್ಯಾಂಡಿಂಗ್ ಮತ್ತು ಹಾರಾಟದ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಾಯಿತು.…
Read Moreಭ್ರೂಣ ಲಿಂಗ ಪತ್ತೆ ಪರಿಕರಗಳ ಮೇಲೆ ನಿಗಾವಹಿಸಲು ನೋಡಲ್ ಏಜೆನ್ಸಿ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಇಂಟರ್ನೆಟ್ ಸರ್ಚ್ ಎಂಜಿನ್ ಗಳಾದ ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಬಿಂಗ್ ತಾಣಗಳಲ್ಲಿ ಭ್ರೂಣ ಲಿಂಗ ಪತ್ತೆ ಪರೀಕ್ಷೆ ಜಾಹೀರಾತುಗಳನ್ನು ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಅಲ್ಲದೇ ಈ ಸಂಬಂಧ ವೆಬ್ ಸೈಟ್ ಗಳ ಮೇಲೆ ನಿಗಾ ಇಡಲು ಕೇಂದ್ರ ಸರ್ಕಾರಕ್ಕೆ ನೋಡಲ್ ಏಜೆನ್ಸಿಯನ್ನು ರಚಿಸುವಂತೆ ಆದೇಶ ನೀಡಿದೆ. ಏನಿದು ಪ್ರಕರಣ? ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಡಾ. ಸಬು ಮ್ಯಾಥ್ಯು…
Read Moreಇರಾನ್ ಈಗ ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆ ರಾಷ್ಟ್ರ ಇರಾನ್ ಇದೇ ಮೊದಲ ಬಾರಿಗೆ ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ರಫ್ತು ಮಾಡುವ ದೇಶವಾಗಿ ಹೊರಹೊಮ್ಮಿದೆ. ಸೌದಿ ಅರೇಬಿಯಾವನ್ನು ಹಿಂದಿಕ್ಕುವ ಮೂಲಕ ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆ ದೇಶವೆನಿಸಿದೆ. 2010-11 ರವರೆಗೆ ಇರಾನ್ ಭಾರತಕ್ಕೆ ಕಚ್ಚಾ ತೈಲ ರಫ್ತು ಮಾಡುವ ದೇಶಗಳ ಪೈಕಿ ಎರಡನೇ ಸ್ಥಾನದಲ್ಲಿತ್ತು. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳು ಇರಾನ್ ಮೇಲೆ ನಿರ್ಬಂಧ ಹೇರಿದ ಕಾರಣ ಇರಾಕ್ ಎರಡನೇ…
Read Moreಭಾರತೀಯ ನೌಕಸೇನೆಗೆ ನಾಲ್ಕು ಸ್ವದೇಶಿ ಸೋನಾರ್ ಗಳ ಸೇರ್ಪಡೆ ಭಾರತೀಯ ನೌಕಸೇನೆಯ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಸ್ವದೇಶಿ ನಿರ್ಮಿತ ಸೋನಾರ್ ಗಳನ್ನು ಸೇರ್ಪಡೆಗೊಳಿಸಲಾಯಿತು. ಈ ಸೋನಾರ್ ಗಳು ನೌಕಪಡೆಯ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲಿವೆ. ಈ ಸೋನಾರ್ ಗಳನ್ನು ಕೊಚ್ಚಿ ಮೂಲದ ರಕ್ಷಣಾ ಸಂಶೋದನೆ ಮತ್ತು ಅಭಿವೃದ್ದಿ ಸಂಸ್ಥೆ (DRDO) ಅಂಗಸಂಸ್ಥೆಯಾದ ನವಲ್ ಫಿಸಿಕಲ್ ಅಂಡ್ ಓಷನೋಗ್ರಾಫಿಕ್ ಲ್ಯಾಬೋರೆಟರಿ ಅಭಿವೃದ್ದಿಪಡಿಸಿದೆ. ನಾಲ್ಕು ಬಗೆಯ ಸೋನಾರ್ ಗಳು: ಅಭಯ್: ಅಳವಲ್ಲದ ನೀರಿನಲ್ಲಿ ವಸ್ತುಗಳನ್ನು ಪತ್ತೆಹಚ್ಚಬಲ್ಲ ಪುಟ್ಟ ಶೋಧಕ. ಹಂಸ…
Read Moreತಮಿಳುನಾಡಿನಲ್ಲಿ ವಿಶ್ವದ ಮೊದಲ ಉಪ್ಪು ಸಹಿಷ್ಣು ಸಸ್ಯ ತೋಟ ವಿಶ್ವದ ಮೊದಲ ಉಪ್ಪು ಸಹಿಷ್ಣುತೆ ಸಸ್ಯ (Hypophytes) ತೋಟವನ್ನು ತಮಿಳುನಾಡಿನ ಕರಾವಳಿ ತೀರದ ವೇದಾರಣ್ಯಂ ಬಳಿ ಉದ್ಘಾಟಿಸಲಾಯಿತು. ವಿಶ್ವದಲ್ಲೆ ಇದೇ ಮೊದಲ ಬಾರಿಗೆ ಇಂತಹ ವಿಶಿಷ್ಟ ತೋಟ ನಿರ್ಮಿಸಲಾಗಿದ್ದು, ಮಾರಿಷಸ್ ಅಧ್ಯಕ್ಷ ಅಮಿನ ಗರಿಭ್ ಫಕಿಂ ಈ ತೋಟವನ್ನು ವಿಡಿಯೋ ಸಂವಾದ ಮೂಲಕ ಉದ್ಘಾಟಿಸಿದರು. ಪ್ರಮುಖಾಂಶಗಳು: ಹಸಿರು ಕ್ರಾಂತಿ ಹರಿಕಾರ ಎಂ ಎಸ್ ಸ್ವಾಮಿನಾಥನ್ ರವರ ಎಂ ಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್ ಈ ತೋಟವನ್ನು ನಿರ್ಮಿಸಿದೆ.…
Read Moreಯುಎಸ್ ಸೆನೆಟ್ ಗೆ ಆಯ್ಕೆಯಾದ ಭಾರತ-ಅಮೆರಿಕ ಸಂಜಾತೆ ಕಮಲಾ ಹ್ಯಾರಿಸ್ ಭಾರತ ಸಂಜಾತೆ ಕ್ಯಾಲಿಫೋರ್ನಿಯದ ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್ ಅಮೆರಿಕದ ಸೆನೆಟರ್ ಆಗಿ ಆಯ್ಕೆಯಾಗುವುದರೊಂದಿಗೆ ಇತಿಹಾಸ ಬರೆದಿದ್ದಾರೆ. ತವರು ರಾಜ್ಯ ಕ್ಯಾಲಿಫೋರ್ನಿಯದಲ್ಲಿ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಲೊರೆಟ್ಟಾ ಸ್ಯಾಂಚೆಝ್ ವಿರುದ್ಧ 34.8 ಶೇ. ಅಂಕಗಳ ಅಂತರದಿಂದ ಗೆಲುವು ಸಾಧಿಸಿರುವ 51ರ ಪ್ರಾಯದ ಹ್ಯಾರಿಸ್ 1,904,714 ಮತಗಳನ್ನು ಪಡೆದಿದ್ದರು. ಹ್ಯಾರಿಸ್ ಅಮೆರಿಕದ ಶಾಸಕಾಂಗದ ಮೇಲ್ಮನೆ ಸೆನೆಟ್ಗೆ ಆಯ್ಕೆಯಾದ ಮೊದಲ ಭಾರತೀಯ ಸಂಜಾತೆ ಎಂಬ ಹೆಗ್ಗಳಿಕೆಗೆ…
Read Moreಅಂತಾರಾಷ್ಟ್ರೀಕ ಕಾರ್ಮಿಕ ಸಂಸ್ಥೆ (ILO) ಡೈರೆಕ್ಟರ್ ಜನರಲ್ ಆಗಿ ಗೈ ರೈಡರ್ ಪುನರ್ ಆಯ್ಕೆ ಯುನೈಟೆಕ್ ಕಿಂಗ್ಡಮ್ ನ ಗೈ ರೈಡರ್ (Guy Ryder) ರವರು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಡೈರೆಕ್ಟರ್ ಜನರಲ್ ಆಗಿ ಪುನರ್ ಆಯ್ಕೆಯಾಗಿದ್ದಾರೆ. ಇವರ ಎರಡನೇ ಅವಧಿ ಮುಂದಿನ ಐದು ವರ್ಷಗಳ ತನಕ ಇರಲಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಆಡಳಿತ ಮಂಡಳಿ ಇವರನ್ನು ಆಯ್ಕೆಮಾಡಿದ್ದು, ರೈಡರ್ ಅವರು 56 ಮತಗಳ ಪೈಕಿ 54 ಮತಗಳನ್ನು ಪಡೆದರು. ರೈಡರ್ ಅವರು ಐಎಲ್ಒ ದ ಹತ್ತನೇ…
Read Moreಪಂಜಾಬ್ ಜಲ ಒಪ್ಪಂದ ಕಾಯಿದೆ-2004 ಅಸಿಂಧೂ: ಸುಪ್ರೀಂಕೋರ್ಟ್ ಪಂಜಾನ್ ವಿಧಾನಸಭೆ ಅಂಗೀಕರಿಸಿದ ಪಂಜಾನ್ ಜಲ ಒಪ್ಪಂದ ರದ್ದು ಕಾಯಿದೆ-2004 ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆ ಮೂಲಕ ರಾವಿ, ಬಿಯಾಸ್ ನದಿ ನೀರನ್ನು ನೆರೆಯ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಆದೇಶಿಸಿದೆ. ಅನಿಲ್ ಆರ್ ದಾವೆ ನೇತೃತ್ವದ ಐದು ಜನ ನ್ಯಾಯಾಧೀಶರನ್ನು ಒಳಗೊಂಡ ಪೀಠ ಈ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ತೀರ್ಪು: 1981 ರಲ್ಲಿ ರಾವಿ ಮತ್ತು ಬಿಯಾಸ್ ನೀರು ಹಂಚಿಕೆ ಸಂಬಂಧ ಪಂಜಾಬ್, ಹರಿಯಾಣ ಮತ್ತು…
Read More