ಖ್ಯಾತ ಉದ್ಯಮಿ ಹಾಗೂ ಸಿನಿಮಾ ನಿರ್ಮಾಪಕ ಶ್ರೀಹರಿಖೋಡೆ ನಿಧನ ಖ್ಯಾತ ಉದ್ಯಮಿ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರಾದ ಶ್ರೀಹರಿ ಖೋಡೆ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಖೋಡೆ ರವರು ಉದ್ಯಮವಲ್ಲದೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಖೋಡೇಸ್ ಗ್ರೂಪ್ ಆಫ್ ಇಂಡಸ್ಟ್ರೀಸ್’ನ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕದ್ದರು. ಖೋಡೆ ಯಜಮಾನ್ ಎಂಟರ್ ಪ್ರೈಸಸ್ ಬ್ಯಾನರ್’ನಡಿಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಸಂತ ಶಿಶುನಾಳ ಷರೀಫ, ಮೈಸೂರು ಮಲ್ಲಿಗೆ ಹಾಗೂ…
Read Moreಸುಗಮವಾಗಿ ವ್ಯವಹಾರ ನಡೆಸುವ ರಾಜ್ಯಗಳಲ್ಲಿ ಆಂಧ್ರ ಮತ್ತು ತೆಲಂಗಣ ನಂ.1 ಅತ್ಯಂತ ಸುಗಮವಾಗಿ ವ್ಯವಹಾರ ನಡೆಸಲು ಅವಕಾಶ ಇರುವ ರಾಜ್ಯಗಳ ಸಮೀಕ್ಷೆಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಣ ರಾಜ್ಯಗಳು ಜಂಟಿಯಾಗಿ ಮೊದಲ ಸ್ಥಾನವನ್ನು ಪಡೆದುಕೊಂಡಿವೆ. ಈ ಸಮೀಕ್ಷೆಯಲ್ಲಿ ಕರ್ನಾಟಕ 13ನೇ ಸ್ಥಾನಕ್ಕೆ ಜಾರಿದೆ. ಕಳೆದ ವರ್ಷ ರಾಜ್ಯ 9ನೇ ಸ್ಥಾನ ಪಡೆದಿತ್ತು. ವ್ಯಾಪಾರೋದ್ಯಮ ಅತ್ಯಂತ ಸುಲಭವಾಗಿರುವ ರಾಜ್ಯ ಎಂಬ ಹಿರಿಮೆಯನ್ನು ಗುಜರಾತ್ನಿಂದ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳು ಕಿತ್ತುಕೊಂಡಿವೆ. ಸಮೀಕ್ಷೆಯಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಜಂಟಿಯಾಗಿ ಮೊದಲ ಸ್ಥಾನ…
Read Moreಬೇನಾಮಿ ವಹಿವಾಟು (ತಡೆ) ತಿದ್ದುಪಡಿ ಕಾಯಿದೆ-2016 ಜಾರಿ ಕಪ್ಪುಹಣ ನಿಗ್ರಹಿಸಲು ಸಂಸತ್ತಿನಿಂದ ಅಂಗೀಕಾರಗೊಂಡ “ಬೇನಾಮಿ ವಹಿವಾಟು (ತಡೆ) ತಿದ್ದುಪಡಿ ಕಾಯಿದೆ-2016” ಜಾರಿಗೆ ಬಂದಿದೆ. ಈ ಹೊಸ ಕಾಯಿದೆಯು ಬೇನಾಮಿ ವಹಿವಾಟು ಕಾಯಿದೆ-1988ಕ್ಕೆ ತಿದ್ದುಪಡಿ ತರಲಾಗಿದೆ ಮತ್ತು ಬೇನಾಮಿ ಆಸ್ತಿ ವಹಿವಾಟು ತಡೆ ಕಾಯಿದೆ-1988 ಎಂದು ಮರುನಾಮಕರಣ ಮಾಡಲಾಗಿದೆ. ತಿದ್ದುಪಡಿ ಮೂಲಕ ಮೂಲ ಕಾಯಿದೆಗೆ ಕಾನೂನತ್ಮಕವಾಗಿ ಮತ್ತು ಆಡಳಿತಾತ್ಮಕವಾಗಿ ಮತ್ತಷ್ಟು ಕಠಿಣಗೊಳಿಸಲಾಗಿದೆ. ಬೇನಾಮಿ ಆಸ್ತಿ ಎಂದರೇನು? ಬ್ಬ ವ್ಯಕ್ತಿಯ ಹೆಸರಿಗೆ ನೋಂದಣಿಯಾಗುವ ಅಥವಾ ವರ್ಗಾವಣೆಯಾಗುವ ಆಸ್ತಿಗೆ ಬೇರೊಬ್ಬರು ಹಣ…
Read Moreಅಕ್ಟೋಬರ್ 31: ವಿಶ್ವ ನಗರಗಳ ದಿನ (World Cities Day) ವಿಶ್ವ ನಗರಗಳ ದಿನವನ್ನು ವಿಶ್ವದಾದ್ಯಂತ ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಸಮಸ್ಯೆಗಳ ಹಿನ್ನಲೆಯಲ್ಲಿ ಯೋಜಿತ ಮತ್ತು ಸುಸ್ಥಿರವಾದ ನಗರ ಜೀವನವನ್ನು ರೂಪಿಸುವುದು ಈ ದಿನದ ಧ್ಯೇಯ. ಈ ದಿನದಂದು ವ್ಯಾಪಕವಾಗಿ ಬೆಳೆಯುತ್ತಿರುವ ನಗರೀಕರಣದಿಂದ ಉದ್ಬವಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ವಿಶ್ವದ ರಾಷ್ಟ್ರಗಳಿಗೆ ಕರೆ ನೀಡಲಾಗುವುದು. 2016 ಥೀಮ್: Inclusive Cities, Shared Documents ಹಿನ್ನಲೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಕ್ಟೋಬರ್ 31…
Read Moreಹಿಮಾಚಲ ಪ್ರದೇಶ ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯ ಹಿಮಾಚಲ ಪ್ರದೇಶ ರಾಜ್ಯವನ್ನು ಅಧಿಕೃತವಾಗಿ ಬಯಲು ಮಲ ವಿಸರ್ಜನೆ ಮುಕ್ತ ರಾಷ್ಟ್ರವೆಂದು ಘೋಷಿಸಲಾಗಿದೆ. ಸ್ವಚ್ಚ ಭಾರತ ಅಭಿಯಾನದಡಿ ರಾಜ್ಯದಲ್ಲಿ ಎಲ್ಲಾ ಕುಟುಂಬಗಳು ಶೌಚಾಲಯವನ್ನು ನಿರ್ಮಿಸಿಕೊಂಡಿದ್ದು, ಬಳಸಲಾಗುತ್ತಿದೆ. ಆ ಮೂಲಕ ಸಿಕ್ಕಿಂ ನಂತರ ಈ ಸಾಧನೆ ಮಾಡಿದ ಎರಡನೇ ರಾಜ್ಯ ಹಿಮಾಚಲ ಪ್ರದೇಶ. ಆದರೆ ದೊಡ್ಡ ರಾಜ್ಯಗಳ ಪೈಕಿ ಈ ಸಾಧನೆ ಮಾಡಿದ ಮೊದಲ ರಾಜ್ಯವೆನಿಸಿದೆ. ರಾಜ್ಯದ ಎಲ್ಲಾ ಕುಟುಂಬಗಳು ಶೇ 100% ಶೌಚಾಲಯವನ್ನು ನಿರ್ಮಿಸಿಕೊಂಡು, ಬಳಸುತ್ತಿವೆ. ಹಿಮಾಚಲ…
Read Moreಗಳಗನಾಥ ಮತ್ತು ರಾಜಪುರೋಹಿತ ಪ್ರಶಸ್ತಿ ಪ್ರಕಟ ಶ್ರೀ ಗಳಗನಾಥ ಮತ್ತು ನಾ. ಶ್ರೀ ರಾಜಪುರೋಹಿತ ಪ್ರತಿಷ್ಠಾನದ ಈ ಸಾಲಿನ ‘ಶ್ರೀ ಗಳಗನಾಥ’ ಪ್ರಶಸ್ತಿಗೆ ಕಾರ್ಕಳ ತಾಲ್ಲೂಕಿನ ಕಾಂತಾವರದ ಡಾ. ನಾ. ಮೊಗಸಾಲೆ ಹಾಗೂ ‘ನಾ. ಶ್ರೀ. ರಾಜಪುರೋಹಿತ’ ಪ್ರಶಸ್ತಿಗೆ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀನಿವಾಸ ವಿ. ಪಾಡಿಗಾರ ಆಯ್ಕೆಯಾಗಿದ್ದಾರೆ. ಪ್ರತಿಷ್ಠಾನವು ಇದೇ ಮೊದಲ ಬಾರಿ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಗಳು ತಲಾ ₹ 50 ಸಾವಿರ ನಗದು ಹಾಗೂ ಫಲಕಗಳನ್ನು ಒಳಗೊಂಡಿವೆ. ಕನ್ನಡ ಸಾಹಿತ್ಯ,…
Read Moreಸಮಾನ ಶ್ರೇಣಿ ಸಮಾನ ಪಿಂಚಣಿ ನ್ಯಾಯಾಂಗ ಸಮಿತಿ ವರದಿ ಸಲ್ಲಿಕೆ ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ರಚಿಸಿದ್ದ ಏಕ ಸದಸ್ಯ ನ್ಯಾಯಾಂಗ ಸಮಿತಿ ತನ್ನ ವರದಿಯನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಣಿಕ್ಕರ್ ಅವರಿಗೆ ಸಲ್ಲಿಸಿದೆ. ಪಾಟ್ನಾ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಮೂರ್ತಿ ನರಸಿಂಹ ರೆಡ್ಡಿ ನೇತೃತ್ವದ ಸಮಿತಿಯನ್ನು ಕೇಂದ್ರ ಸರ್ಕಾರ ಡಿಸೆಂಬರ್ 2015ರಲ್ಲಿ ನೇಮಿಸಿತ್ತು. ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ ಅನುಷ್ಟಾನಕ್ಕೆ ಎದುರಾಗಬಹುದಾದ ಗೊಂದಲಗಳನ್ನು ನಿವಾರಿಸುವ ಬಗ್ಗೆ…
Read Moreಅಮೆರಿಕಾದ ಸಾಹಿತಿ ಪಾಲ್ ಬೇಟ್ಟಿ ರವರಿಗೆ 2016 ಮ್ಯಾನ್ ಬೂಕರ್ ಪ್ರಶಸ್ತಿ ಅಮೆರಿಕದ ಖ್ಯಾತ ಸಾಹಿತಿ ಪಾಲ್ ಬೇಟ್ಟಿ ಅವರು 2016 ಮ್ಯಾನ್ ಬೂಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೊಟ್ಟಮೊದಲ ಅಮೆರಿಕನ್ ಸಾಹಿತ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಬೇಟ್ಟಿ ಅವರ “ದ ಸೆಲ್ ಔಟ್” ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ. “ಈ ಕಾದಂಬರಿಯು ಆಘಾತಕಾರಿ ಹಾಗೂ ಅನಿರೀಕ್ಷಿತವಾಗಿ ಹಾಸ್ಯಮಯ” ಎಂದು ತೀರ್ಪುಗಾರರು ಬಣ್ಣಿಸಿದ್ದಾರೆ. ಹುಟ್ಟೂರು ಲಾಸ್ ಏಂಜಲೀಸ್ನ ಚಿತ್ರಣವನ್ನು ಕಾದಂಬರಿಗಾರ…
Read Moreಮಹಿಳಾ ಸಾಕ್ಷರತೆ: ನೆರೆಯ ರಾಷ್ಟ್ರಗಳಿಗಿಂತ ಕಳಪೆ ಸಾಧನೆ ತೋರಿದ ಭಾರತ ಹೊಸ ಅಧ್ಯಯನ ಒಂದರ ಪ್ರಕಾರ ಭಾರತದ ಮಹಿಳಾ ಸಾಕ್ಷರತೆ ಗುಣಮಟ್ಟ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲದೇಶ ಮತ್ತು ನೇಪಾಳಕ್ಕೆ ಹೋಲಿಸಿದರೆ ಕಳಪೆ ಎಂದು ಹೇಳಲಾಗಿದೆ. ಇಂಟರ್ನ್ಯಾಶಲ್ ಕಮೀಷನ್ ಆನ್ ಫೈನಾನ್ಸಿಂಗ್ ಗ್ಲೋಬಲ್ ಎಜುಕೇಷನ್ ಅಪರ್ಚುನಿಟಿ (International Commission on Financing Global Education Opportunity) ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಪ್ರಮುಖಾಂಶಗಳು: ಭಾರತದಲ್ಲಿ ಐದು ವರ್ಷ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಮಹಿಳೆಯರ ಪ್ರಮಾಣ…
Read Moreಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (DRS) ಅಳವಡಿಸಿಕೊಳ್ಳಲು ಬಿಸಿಸಿಐ ಒಪ್ಪಿಗೆ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್ಎಸ್) ಅಳವಡಿಸಿಕೊಳ್ಳಲು ಬಿಸಿಸಿಐ ಸಮ್ಮತಿಸಿದೆ. ಇದು ಪ್ರಾಯೋಗಿಕವಾಗಿ ಜಾರಿಯಾಗುತ್ತಿದ್ದು ಸಾಧಕ–ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಮುಂದಿನ ಕ್ರಮಕ್ಕೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಡಿಆರ್ಎಸ್ ವ್ಯವಸ್ಥೆ ಅಳವಡಿಸಿಕೊಳ್ಳಲು ಬಿಸಿಸಿಐ, ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಇತರೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ತಂತ್ರಜ್ಞಾನದಲ್ಲಿ…
Read More