ಪ್ರಾದೇಶಿಕ ಸಂಪರ್ಕ ಯೋಜನೆ “ಉಡಾನ್”ಗೆ ಕೇಂದ್ರ ಸರ್ಕಾರ ಚಾಲನೆ ಸಣ್ಣಪುಟ್ಟ ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸಲು ಹಾಗೂ ಜನಸಾಮಾನ್ಯರಿಗೆ ವಿಮಾನ ಸಂಚಾರ ಭಾಗ್ಯ ಒದಗಿಸಲು ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಣಪತಿ ರಾಜು ಅವರು ನವದೆಹಲಿಯಲ್ಲಿ ಈ ಯೋಜನೆಗೆ ಚಾಲನೆ ನೀಡಿದರು. ಜನವರಿ 2017ರಿಂದ ಈ ಯೋಜನೆ ಅಧಿಕೃತವಾಗಿ ಜಾರಿಗೆ ಬರಲಿದ್ದು, 10 ವರ್ಷಗಳ ಅವಧಿಗೆ ಜಾರಿಯಲ್ಲಿ ಇರಲಿದೆ. ಉಡಾನ್…
Read Moreಗುಜರಾತ್ ನ ಒಖ-ಕನಲುಸ್, ಪೋರ್ಬಂದರ್-ವಾನ್ಸ್ ಜಲಿಯ ರೈಲ್ವೆ ವಿಭಾಗಗಳು ಹಸಿರು ರೈಲು ಕಾರಿಡಾರ್ ಗುಜರಾತ್ನ ಒಖ-ಕನಲುಸ್, ಪೋರ್ಬಂದರ್-ವಾನ್ಸ್ ಜಲಿಯ ರೈಲ್ವೆ ವಿಭಾಗಗಳನ್ನು ಹಸಿರು ರೈಲು ಕಾರಿಡಾರ್ ಎಂದು ಕೇಂದ್ರ ರೈಲ್ವೆ ಸಚಿವಾಲಯ ಘೋಷಿಸಿದೆ. ಈ ಮಾರ್ಗ 175 ಕಿ.ಮೀ ಉದ್ದವಿದ್ದು, ಇದರ ಮೂಲಕ ಹಾದು ಹೋಗುವ ಎಲ್ಲಾ ರೈಲುಗಳಿಗೆ ಜೈವಿಕ ಶೌಚಾಲಯ (ಬಯೋ ಟಾಯ್ಲೆಟ್) ಅನ್ನು ಅಳವಡಿಸಲಾಗಿದೆ. ಈ ಮಾರ್ಗದ ಮೂಲಕ ಸಂಚರಿಸುವ 29 ರೈಲುಗಳ 700 ಬೋಗಿಗಳಿಗೆ ಜೈವಿಕ ಶೌಚಾಲಯ ಅಳವಡಿಸಿದ್ದು, ರೈಲು ಪಥಗಳ ಮೇಲೆ…
Read Moreರಷ್ಯಾದಿಂದ ಎರಡನೇ ಜಲಾಂತರ್ಗಾಮಿ ಲೀಸ್ ಆಧಾರದಲ್ಲಿ ಪಡೆಯಲಿರುವ ಭಾರತ ರಷ್ಯಾದಿಂದ ಎರಡನೇ ಜಲಾಂತರ್ಗಾಮಿಯನ್ನು ಲೀಸ್ ಆಧಾರದ ಮೇಲೆ ಪಡೆಯಲು ಭಾರತ ನಿರ್ಧರಿಸಿದ್ದು, ಇದಕ್ಕೆ ರಷ್ಯಾ ಸಹ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಇದು ಸುಮಾರು 2 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಆಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಗೋವಾಗೆ ಆಗಮಿಸಿದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಬರಲಾಗಿದೆ. ಪ್ರಾಜೆಕ್ಟ್ 971 ಹೆಸರಿನ ಅಣು ಜಲಾಂತರ್ಗಾಮಿಯನ್ನು ರಷ್ಯಾ ನೌಕಾಪಡೆಯಿಂದ ಭಾರತ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಿದೆ.…
Read More2014 ಮತ್ತು 2015ನೇ ಸಾಲಿನ ಸಿನಿಮಾ ಸಾಹಿತ್ಯ ಪ್ರಶಸ್ತಿ ಪ್ರಕಟ ರಾಜ್ಯ ಸರ್ಕಾರ ನೀಡುವ 2014 ಮತ್ತು 2015ನೇ ಸಿನಿಮಾ ಸಾಹಿತ್ಯ ಪ್ರಶಸ್ತಿಯನ್ನು ಪ್ರಕಟಗೊಂಡಿದೆ. ಪತ್ರಕರ್ತ, ಚಲನಚಿತ್ರ ಸಂಭಾಷಣಕಾರ ಉದಯ ಮರಕಿಣಿ ಅವರ ‘ಟಚ್ ಸ್ಕ್ರೀನ್’ ಅಂಕಣ ಬರಹಗಳ ಸಂಕಲನವನ್ನು ಮತ್ತು ಪತ್ರಕರ್ತ ದೊಡ್ಡಹುಲ್ಲೂರು ರುಕ್ಕೋಜಿ ಅವರ ‘ಡಾ. ರಾಜಕುಮಾರ್ ಸಮಗ್ರ ಚರಿತ್ರೆ’ ಪುಸ್ತಕವನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. 2014ನೇ ಸಾಲಿನ ಅತ್ಯುತ್ತಮ ಸಿನಿಮಾ ಸಾಹಿತ್ಯ ಪ್ರಶಸ್ತಿ: ಪತ್ರಕರ್ತ, ಚಲನಚಿತ್ರ ಸಂಭಾಷಣಕಾರ ಉದಯ ಮರಕಿಣಿ ಅವರ ‘ಟಚ್ ಸ್ಕ್ರೀನ್’…
Read Moreಭಾರತೀಯ ನೌಕಪಡೆಗೆ ಸೇರ್ಪಡೆಗೊಂಡ ಐಎನ್ಎಸ್ ತಿಹಾಯು ಕಾರ್ ನಿಕೋಬರ್ ದರ್ಜೆಯ ಕ್ಷೀಪ್ರ ದಾಳಿ ನಡೆಸಬಲ್ಲ “ಐಎನ್ಎಸ್ ತಿಹಾಯು” ನೌಕೆಯನ್ನು ಭಾರತೀತ ನೌಕಪಡೆಗೆ ನಿಯೋಜಿಸಲಾಯಿತು. ಈ ನೌಕೆಯನ್ನು ಪೂರ್ವ ನೌಕದಳದ ವೈಸ್ ಅಡ್ಮಿರಲ್ ಹೆಚ್.ಸಿ.ಎಸ್ ಬಿಶ್ತ್ ರವರು ವಿಶಾಖಪಟ್ಟಣ, ಆಂಧ್ರಪ್ರದೇಶದಲ್ಲಿ ಸೇರ್ಪಡೆಗೊಳಿಸಿದರು. ಐಎನ್ಎಸ್ ತಿಹಾಯು ಬಗ್ಗೆ: ಐಎನ್ಎಸ್ ತಿಹಾಯು ಕಾರ್ ನಿಕೋಬರ್ ದರ್ಜೆಯ ವಾಟರ್ ಜೆಟ್ ಕ್ಷೀಪ್ರ ದಾಳಿ ನಡೆಸಬಲ್ಲ ಹಡಗು (WJFAC) ಮಾದರಿಯ ಭಾರತೀಯ ನೌಕ ಸೇನೆ ಸೇರ್ಪಡೆಗೊಂಡ ಆರನೇಯದು. ಭಾರತೀಯ ನೌಕಪಡೆಯ ಪೂರ್ವದಳದಲ್ಲಿ ಇದನ್ನು ನಿಯೋಜಿಸಲಾಗಿದೆ.…
Read Moreಆಂಧ್ರಪ್ರದೇಶದ ನೀರು ಹಂಚಿಕೊಳ್ಳಿ: ಕೃಷ್ಣಾ ನ್ಯಾಯಾಧಿಕರಣ ಮಹತ್ವದ ತೀರ್ಪು ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಹೊರಬಿದಿದ್ದು, ಆಂಧ್ರಪ್ರದೇಶದ ನೀರನ್ನೇ ಹಂಚಿಕೊಳ್ಳುವಂತೆ ತೆಲಂಗಣಕ್ಕೆ ನ್ಯಾಯಮಂಡಳಿ ತೀರ್ಪು ನೀಡಿದೆ. ಈ ತೀರ್ಪಿನಿಂದ ತೆಲಂಗಣಕ್ಕೆ ಹಿನ್ನಡೆ ಉಂಟಾಗಿದೆ. ತೀರ್ಪಿನ ಪ್ರಮುಖಾಂಶಗಳು: ತೆಲಂಗಾಣ ರಾಜ್ಯ ಆಂಧ್ರ ಪ್ರದೇಶದೊಂದಿಗೆ ನೀರು ಹಂಚಿಕೆ ಮಾಡಿಕೊಳ್ಳಬೇಕು ಎಂದು ಆದೇಶಿಸಿದೆ. 2013ರಲ್ಲಿ ನೀಡಿದ್ದ ಕೃಷ್ಣಾ ನದಿ ಐ ತೀರ್ಪನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಆಂಧ್ರ ಪ್ರದೇಶ ರಾಜ್ಯಕ್ಕೆ ಹಂಚಿಕೆ ಮಾಡಲಾಗಿರುವ ನೀರಲ್ಲೇ ತೆಲಂಗಾಣ ರಾಜ್ಯ ಕೂಡ ಹಂಚಿಕೆ ಮಾಡಿಕೊಳ್ಳಬೇಕು ಎಂದು ಆದೇಶಿಸಿದೆ.…
Read Moreತಫಿಸ (TAFISA) ವಿಶ್ವ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಂದು ಚಿನ್ನ ಸೇರಿದಂತೆ ನಾಲ್ಕು ಪದಕಗಳು ಭಾರತದ ಕುಸ್ತಿಪಟುಗಳು ಇಂಡೊನೇಷ್ಯಾದ ಜರ್ಕಾರದಲ್ಲಿ ಮುಕ್ತಾಯಗೊಂಡ 6ನೇ ತಫಿಸ ವಿಶ್ವ ಕ್ರೀಡಾಕೂಟದಲ್ಲಿ ಒಂದು ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದುಕೊಂಡಿದ್ದಾರೆ. 60ಕೆ.ಜಿ ವಿಭಾಗದಲ್ಲಿ ದಾಲ್ಮಿಯ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಫೈನಲ್ನಲ್ಲಿ ಅವರು 4–1ರಲ್ಲಿ ಮೊಹಮ್ಮದ್ ಸಹಾನ್ ಎದುರು ಜಯ ದಾಖಲಿಸಿದರು. ಲುವ್ ಸಿಂಗ್: ಲುವ್ ಸಿಂಗ್ ಅವರು 80ಕೆ.ಜಿ ವಿಭಾಗದಲ್ಲಿ ಬೆಳ್ಳಿ ಗೆದ್ದುಕೊಂಡರು. ಅಜರ್ಬೈಜನ್ ನ ಮೊಹಮ್ಮದ್ ಅಲಿ ಅವರಿಗೆ ಫೈನಲ್ ಪಂದ್ಯದಲ್ಲಿ…
Read Moreಅಕ್ಟೋಬರ್ 16: ವಿಶ್ವ ಆಹಾರ ದಿನ ಪ್ರತೀ ವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. 1945 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ದಿನವನ್ನು ಜಗತ್ತಿನ ಜನರು ಹಸಿವಿನ ವಿರುದ್ಧ ಕೆಲಸ ಮಾಡಲು ಮತ್ತು ಅದರ ನಿರ್ಮೂಲನೆಗಾಗಿ ಕೆಲಸ ಮಾಡಲು ಒಗ್ಗೂಡುವ ಸಲುವಾಗಿ ಈ ದಿನವನ್ನು ಆಚರಣೆಗೆ ತಂದಿತು. 2016 ಥೀಮ್: “Climate is changing. Food and…
Read Moreಅಜಯ್ ಕುಮಾರ್ ಭಲ್ಲ ಡೈರೆಕ್ಟರ್ ಜನರಲ್ ಆಫ್ ಫಾರೀನ್ ಟ್ರೇಡ್ ನ ನೂತನ ಡೈರೆಕ್ಟರ್ ಜನರಲ್ ಹಿರಿಯ ಐಎಎಸ್ ಅಧಿಕಾರಿ ಅಜಯ್ ಕುಮಾರ್ ಭಲ್ಲ ಅವರನ್ನು ಡೈರೆಕ್ಟರ್ ಜನರಲ್ ಆಫ್ ಫಾರೀನ್ ಟ್ರೇಡ್ (Directorate General of Foreign Trade)ನ ನೂತನ ಡೈರೆಕ್ಟರ್ ಜನರಲ್ ಆಗಿ ನೇಮಕಮಾಡಲಾಗಿದೆ. ಅನೂಪ್ ವಾಧ್ವನ್ ಅವರಿಂದ ತೆರವಾಗಿದ್ದ ಸ್ಥಾನವನ್ನು ಭಲ್ಲ ರವರು ತುಂಬಲಿದ್ದಾರೆ. ಅನೂಪ್ ಅವರು ಕೇಂದ್ರ ವಾಣಿಜ್ಯ ಸಚಿವಾಲಯದ ಹೆಚ್ಚುವರಿ ನಿರ್ದೇಶಕರಾಗಿ ನೇಮಕಗೊಂಡ ಕಾರಣ ಈ ಹುದ್ದೆ ಖಾಲಿಯಾಗಿತ್ತು. ಡೈರೆಕ್ಟರ್…
Read Moreಅಕ್ರಮ ಗಣಿಗಾರಿಕೆ ತಡೆಯಲು ಉಪಗ್ರಹ ಆಧಾರಿತ “ಮೈನಿಂಗ್ ಸರ್ವೇಲನ್ಸ್ ಸಿಸ್ಟಮ್” ಜಾರಿ ಉಪಗ್ರಹ ತಂತ್ರಜ್ಞಾನ ಬಳಸಿಕೊಂಡು ಅಕ್ರಮ ಗಣಿಗಾರಿಕೆ ತಡೆಯು ಸಲುವಾಗಿ ಮೈನಿಂಗ್ ಸರ್ವೇಲನ್ಸ್ ಸಿಸ್ಟಮ್ (Mining Surveillance System) ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಮೈನಿಂಗ್ ಸರ್ವೇಲನ್ಸ್ ಸಿಸ್ಟಮ್ ಒಂದು ಉಪಗ್ರಹ ಕಣ್ಗಾವಲು ವ್ಯವಸ್ಥೆಯಾಗಿದ್ದು, ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಬಳಸಿ ಅಕ್ರಮ ಗಣಿಗಾರಿಕೆ ಮೇಲೆ ನಿಗಾ ಇಡುವ ಮೂಲಕ ತಮೂಲಕ ಅಕ್ರಮ ಗಣಿಗಾರಿಕೆ ತಡೆಗೆ ಸಹಕಾರಿಯಾಗಲಿದೆ. ಮೈನಿಂಗ್ ಸರ್ವೇಲನ್ಸ್ ಸಿಸ್ಟಮ್: ಮೈನಿಂಗ್ ಸರ್ವೇಲನ್ಸ್ ಸಿಸ್ಟಮ್ ಅನ್ನು…
Read More