ಬೇಳೆಕಾಳುಗಳ ವಿತರಣೆಗೆ ಅಂಚೆ ಕಚೇರಿಗಳನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧಾರ ದೇಶವ್ಯಾಪ್ತಿ ಇರುವ ಅಂಚೆಕಚೇರಿಗಳ ವ್ಯಾಪಕ ಜಾಲದ ಮೂಲಕ ಬೇಳೆಕಾಳುಗಳನ್ನು ಸಬ್ಸಿಡಿ ದರಗಳಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಗ್ರಾಹಕ ವ್ಯವಹಾರ ಕಾರ್ಯದರ್ಶಿ ಹೇಮ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆದ ಅಂತರ್ ಸಚಿವಾಲಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಗತ್ಯ ಪದಾರ್ಥಗಳ ಲಭ್ಯತೆ ಅದರಲ್ಲೂ ಬೇಳೆಕಾಳುಗಳ ಲಭ್ಯತೆ ಮತ್ತು ಬೆಲೆ ಬಗ್ಗೆ ಸಮಿತಿಯಲ್ಲಿ ಪರಿಶೀಲಿಸಲಾಯಿತು. ಸಕ್ಕರೆ, ಬೇಳೆಕಾಳು ಮತ್ತು ಇತರೆ ಅಗತ್ಯ ಪದಾರ್ಥಗಳ…
Read Moreಜಾಗತಿಕ ಹಸಿವು ಸೂಚ್ಯಂಕ: ಭಾರತಕ್ಕೆ 97ನೇ ಸ್ಥಾನ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 118 ದೇಶಗಳ ಪೈಕಿ 97ನೇ ಸ್ಥಾನವನ್ನು ಪಡೆದುಕೊಂಡಿದೆ. 2016ನೇ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 100 ಅಂಕಗಳಿಗೆ ಕೇವಲ 28.5 ಅಂಕಗಳನ್ನು ಮಾತ್ರ ಭಾರತ ಪಡೆದುಕೊಂಡಿದೆ. ಆ ಮೂಲಕ ಭಾರತದಲ್ಲಿ ಇನ್ನೂ ವ್ಯಾಪಕ ಪ್ರಮಾಣದಲ್ಲಿ ಹಸಿವಿನ ಸಮಸ್ಯೆ ತಾಂಡವಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇಂಟರ್ ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ (IFPRI) ಈ ಸೂಚ್ಯಂಕವನ್ನು ಬಿಡುಗಡೆಗೊಳಿಸಿದೆ. ಜಾಗತಿಕ ಹಸಿವು ಸೂಚ್ಯಂಕ: ಜಾಗತಿಕ ಹಸಿವು ಸೂಚ್ಯಂಕವನ್ನ…
Read Moreನಾನಜಿ ದೇಶಮುಖ್ ಜನ್ಮ ಶತಮಾನೋತ್ಸವ ಆಚರಿಸಲು ಕೇಂದ್ರ ಸರ್ಕಾರ ನಿರ್ಧಾರ ಕೇಂದ್ರ ಸರ್ಕಾರ ಅಕ್ಟೋಬರ್ 11, 2016 ರಿಂದ ಅಕ್ಟೋಬರ್ 11, 2017 ರವರೆಗೆ ಸಾಮಾಜಿಕ ಕಾರ್ಯಕರ್ತ ಮತ್ತು ಮಾಜಿ ಆರೆಸ್ಸೆಸ್ ನಾಯಕ ನಾನಜಿ ದೇಶಮುಖ್ ಅವರ ಜನ್ಮಶತಮಾನೋತ್ಸವವನ್ನು ಆಚರಿಸಲು ನಿರ್ಧರಿಸಿದೆ. ಕೇಂದ್ರ ಸಂಸ್ಕೃತ ಸಚಿವ ಮಹೇಶ್ ಶರ್ಮಾ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ. ನಾನಜಿ ದೇಶಮುಖ್: ನಾನಜಿ ದೇಶಮುಖ್ ಅವರು ಸಾಮಾಜಿಕ ಕಾರ್ಯಕರ್ತರಾಗಿ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಸ್ವಾಲಂಭನೆ ಕ್ಷೇತ್ರದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದರು. ಭಾರತೀಯ…
Read Moreಅಕ್ಟೋಬರ್ 11: ಅಂತಾರಾಷ್ಟ್ರೀಯ ಹೆಣ್ಣು ಮಗು ದಿನ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನವನ್ನು ಪ್ರತಿ ವರ್ಷ ಅಕ್ಟೋಬರ್ 11 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಹೆಣ್ಣು ಮಕ್ಕಳ ಹಕ್ಕುಗಳು ಮತ್ತು ಹೆಣ್ಣು ಮಕ್ಕಳು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದ ಮಹತ್ವ: ಜಾಗತಿಕ ಮಟ್ಟದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಲಿಂಗ ತಾರತಮ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಹೆಣ್ಣು ಮಕ್ಕಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು. 2012 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹೆಣ್ಣು…
Read Moreಅಕ್ಟೋಬರ್ 9: ವಿಶ್ವ ಅಂಚೆ ದಿನ (World Post Day) ವಿಶ್ವ ಅಂಚೆ ದಿನವನ್ನು ಅಕ್ಟೋಬರ್ 9 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಅಂಚೆ ಸೇವೆಯ ಮಹತ್ವ ಮತ್ತು ಜನರ ದೈನಂದಿನ ಜೀವನ ಮತ್ತು ವ್ಯವಹಾರಗಳಲ್ಲಿ ಅಂಚೆ ಸೇವೆಯ ಪಾತ್ರವನ್ನು ಸ್ಮರಿಸುವ ಸಲುವಾಗಿ ಅಂಚೆ ದಿನವನ್ನು ಆಚರಿಸಲಾಗುವುದು. 2016 ವಿಶ್ವ ಅಂಚೆ ದಿನದ ಥೀಮ್: Innovation, Integration and Inclusion”. ಭಾರತೀಯ ಅಂಚೆ ಇಲಾಖೆಯು ದೇಶದಲ್ಲಿ ವಿಶ್ವ ಅಂಚೆ ಇಲಾಖೆಯನ್ನು ಆಚರಿಸುತ್ತದೆ. ಸುಮಾರು 150 ವರ್ಷಗಳಿಂದ ಅಂಚೆ ಇಲಾಖೆ…
Read More2018ರ ಡಿಸೆಂಬರ್ ವೇಳೆಗೆ ಭಾರತ-ಪಾಕಿಸ್ತಾನ ಗಡಿ ಸಂಪೂರ್ಣ ಬಂದ್ 2018ರ ಡಿಸೆಂಬರ್ ವೇಳೆಗೆ ಭಾರತ- ಪಾಕ್ ಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿಸಿದ್ದಾರೆ. ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಳ್ಳುವ ನಾಲ್ಕು ರಾಜ್ಯಗಳ ಪ್ರತಿನಿಧಿಗಳೊಂದಿಗೆ ರಾಜಸ್ತಾನದ ಜೈಸಲ್ಮೇರ್ ನಲ್ಲಿ ನಡೆದ ಸಭೆಯ ವೇಳೆ ಈ ವಿಷಯವನ್ನು ಬಹಿರಂಗಪಡಿಸಿದರು. ಪ್ರಮುಖಾಂಶಗಳು: ಭಾರತ ಮತ್ತು ಪಾಕಿಸ್ತಾನ ನಡುವಿನ 3,323 ಕಿ.ಮೀ ಉದ್ದದ ಗಡಿಯನ್ನು ಕಾಲಮಿತಿಯೊಳಗೆ ಸಂಪೂರ್ಣವಾಗಿ ಮುಚ್ಚಲು ಕ್ರಿಯಾಯೋಜನೆಯನ್ನು ಕೇಂದ್ರ ಸರ್ಕಾರ ಈಗಾಗಲೇ ತಯಾರಿಸಿದೆ.…
Read Moreಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನ್ಯುಯಲ್ ಸ್ಯಾಂಟೋಸ್ ಗೆ ನೊಬೆಲ್ ಶಾಂತಿ 2016ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಕೊಲಂಬಿಯಾದ ಅಧ್ಯಕ್ಷ ಜುವಾನ್ ಮ್ಯಾನ್ಯುಯಲ್ ಸ್ಯಾಂಟೋಸ್ ಅವರಿಗೆ ನೀಡಲಾಗಿದೆ. ಕೊಲಂಬಿಯಾದಲ್ಲಿ ಸುಮಾರು 50 ವರ್ಷಗಳ ಸುದೀರ್ಘ ದಂಗೆಯನ್ನು ಕೊನೆಗಾಣಿಸಿ ಶಾಂತಿ ನೆಲೆಸಲು ಶ್ರಮಿಸಿದಕ್ಕಾಗಿ ಈ ನೊಬೆಲ್ ಶಾಂತಿ ಪಾರಿತೋಷಕಕ್ಕೆ ಆಯ್ಕೆ ಮಾಡಲಾಗಿದೆ. ಗ್ಯಾಬ್ರಿಯಲ್ ಗ್ರಸಿಯಾ ಮಾರ್ಕ್ವೆಜ್ ನಂತರ ನೊಬೆಲ್ ಪ್ರಶಸ್ತಿಗೆ ಭಾಜನರಾದ ಕೊಲಂಬಿಯಾದ ಎರಡನೇಯವರು. ಗ್ಯಾಬ್ರಿಯಲ್ ಗ್ರಸಿಯಾ ಮಾರ್ಕ್ವೆಜ್ ಅವರಿಗೆ 1982 ರಲ್ಲಿ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು.…
Read More2015ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಮತ್ತು ಏಕಲವ್ಯ ಪ್ರಶಸ್ತಿ ಪ್ರಕಟ ಕರ್ನಾಟಕ ರಾಜ್ಯ ಸರ್ಕಾರ 2015ನೇ ಸಾಲಿನ ‘ಕ್ರೀಡಾ ರತ್ನ’ ಪ್ರಶಸ್ತಿಗೆ ಭಾಜನರಾಗಿರುವ ಕ್ರಿಡಾಪಟುಗಳ ಪ್ರಕಟಿಸಿದೆ. ಈ ಬಾರಿ ರಾಜ್ಯದ 16 ಕ್ರೀಡಾ ಪಟುಗಳಿಗೆ 2015ನೇ ಸಾಲಿನ ‘ಏಕಲವ್ಯ’ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಏಕಲವ್ಯ ಪುರಸ್ಕೃತರು ದಾಮಿನಿ ಕೆ.ಗೌಡ (ಈಜು) – ಬೆಂಗಳೂರು, ವಿದ್ಯಾ ಪಿಳ್ಳೈ(ಬಿಲಿಯರ್ಡ್ಸ್) – ಬೆಂಗಳೂರು, ಪವನ್ ಶೆಟ್ಟಿ (ಬಾಡಿಬಿಲ್ಡಿಂಗ್)– ಬೆಂಗಳೂರು, ನಿತಿನ್ ತಿಮ್ಮಯ್ಯ (ಹಾಕಿ)- ಬೆಂಗಳೂರು, ರಾಜಗುರು ಎಸ್.(ಕಬಡ್ಡಿ- ಬೆಂಗಳೂರು, ಕೃಷ್ಣ ಎ.ನಾಯ್ಕೋಡಿ(…
Read Moreಹೆಚ್ಐವಿ ಮತ್ತು ಏಡ್ಸ್ (ತಡೆ ಮತ್ತು ನಿಯಂತ್ರಣ) ಮಸೂದೆ, 2014 ತಿದ್ದುಪಡಿ ತರಲು ಕೇಂದ್ರ ಸಂಪುಟ ಒಪ್ಪಿಗೆ ಹೆಚ್ಐವಿ/ಏಡ್ಸ್ ಮಸೂದೆ-2014ರ ಪ್ರಮುಖ ತಿದ್ದುಪಡಿಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಸೂದೆಯು ಎಚ್ಐವಿ-ಏಡ್ಸ್ ಪೀಡಿತರ ವಿರುದ್ಧ ತಾರತಮ್ಯದ ದೂರುಗಳ ತನಿಖೆಗೆ ಕಾನೂನು ಉತ್ತರದಾಯಿತ್ವ ಹಾಗೂ ಔಪಚಾರಿಕ ವ್ಯವಸ್ಥೆಯನ್ನು ಒದಗಿಸುತ್ತದೆ ಹಾಗೂ ಚಿಕಿತ್ಸೆಯನ್ನು ರೋಗಿಯ ಕಾನೂನು ಬದ್ಧ ಹಕ್ಕನ್ನಾಗಿಸುತ್ತದೆ. ಮಸೂದೆಯ ಪ್ರಮುಖಾಂಶಗಳು: ಹೆಚ್ಐವಿ/ಏಡ್ಸ್ ಪ್ರಸರಣವನ್ನು ತಡೆಯುವುದು ಮತ್ತು ನಿಯಂತ್ರಿಸುವುದು ಮಸೂದೆಯ ಉದ್ದೇಶವಾಗಿದೆ. ಎಚ್ಐವಿ-ಏಡ್ಸ್ ಪೀಡಿತರ ವಿರುದ್ಧ ತಾರತಮ್ಯವನ್ನು ಹೋಗಲಾಡಿಸುವುದು…
Read Moreಸಾಹಿತಿ ದೇವನೂರ ಮಹಾದೇವಗೆ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರನ್ನು 2016ನೇ ಸಾಲಿನ ಪ್ರತಿಷ್ಠಿತ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕುವೆಂಪು ಪ್ರತಿಷ್ಠಾನ ನೀಡುವ ಈ ಪ್ರಶಸ್ತಿಯನ್ನು ಕನ್ನಡನಾಡಿನ ಖ್ಯಾತ ಕವಿ ಕುವೆಂಪು ಅವರ ಜನ್ಮದಿನವಾದ ಅಂಗವಾಗಿ ಡಿ.1ರಂದು ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೋ.ಹಂಪ ನಾಗರಾಜಯ್ಯ ತಿಳಿಸಿದ್ದಾರೆ. 2015ನೇ ಸಾಲಿನಲ್ಲಿ ಈ ಪ್ರಶಸ್ತಿಯನ್ನು ಮರಾಠಿ ಸಾಹಿತಿ ಶ್ಯಾಮ ಮನೋಹರ್ ಅವರಿಗೆ ನೀಡಲಾಗಿತ್ತು. ದೇವನೂರ ಮಹಾದೇವರ ಬಗ್ಗೆ: ಮಹಾದೇವ ರವರು…
Read More