ಇಸ್ಟೋನಿಯಾದ ಮೊದಲ ಮಹಿಳಾ ರಾಷ್ಟ್ರಧ್ಯಕ್ಷರಾಗಿ ಕೆರ್ಸ್ಟಿ ಕಜುಲೈದ್ ನೇಮಕ ಇಸ್ಟೋನಿಯಾದ ಸಂಸತ್ತು ಕೆರ್ಸ್ಟಿ ಕಜುಲೈದ್ (Kersti Kaljulaid) ಅವರನ್ನು ಇಸ್ಟೋನಿಯಾದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿದೆ. ಕೆರ್ಸ್ಟಿ ಕಜುಲೈದ್ ಅವರು ಇಸ್ಟೋನಿಯಾದ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 20 ಸದಸ್ಯರ ಗೈರು ಹಾಜರಿ ಹೊರತಾಗಿಯೂ ಕೆರ್ಸ್ಟಿ ಅವರ ಪರವಾಗಿ 81-0 ಮತಗಳು ದಾಖಲಾದವು. ಕೆರ್ಸ್ಟಿ ಕಜುಲೈದ್ ಇಸ್ಟೋನಿಯಾದ ಐದನೇ ರಾಷ್ಟ್ರಧ್ಯಕ್ಷರು. ಕೆರ್ಸ್ಟಿ ಅವರು ಅಕ್ಟೋಬರ್ 10, 2016 ರಂದು ಅಧಿಕಾರವಹಿಸಿಕೊಳ್ಳಲಿದ್ದಾರೆ. ಕೆರ್ಸ್ಟಿ ಅವರು ಇಸ್ಟೋನಿಯಾದ ರಾಷ್ಟ್ರಧ್ಯಕ್ಷ…
Read More2016 ಗೂಗಲ್ ಸೈನ್ಸ್ ಫೇರ್ ಪ್ರಶಸ್ತಿ ಗೆದ್ದ ಭಾರತೀಯ ಮೂಲದ ಕೈರಾ ನಿರ್ಗಿನ್ (Kiara Nirghin) ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಕೈರಾ ನಿರ್ಗಿನ್ ಅವರು ಅಮೆರಿಕಾದಲ್ಲಿ ನಡೆದ ಗೂಗಲ್ ಸೈನ್ಸ್ ಫೇರ್ ನಲ್ಲಿ $50,000 ವಿದ್ಯಾರ್ಥಿ ವೇತನವನ್ನು ಗೆದ್ದಿದ್ದಾರೆ. ಕಿತ್ತಳೆ ಸಿಪ್ಪೆಯನ್ನು ಬಳಸಿ ಮಣ್ಣಿನ ತೇವಾಂಶವನ್ನು ಹಿಡಿದಿಡುವ ಅಗ್ಗದ ಪದಾರ್ಥವನ್ನು ಅನ್ವೇಷಣೆ ಮಾಡಿರುವುದಕ್ಕಾಗಿ ಕೈರಾ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಕೈರಾ ಅವರು ಸೇಂಟ್ ಮಾರ್ಟಿನ್ ಖಾಸಗಿ ಶಾಲೆಯಲ್ಲಿ 11ನೇ ತರಗತಿಯ ವಿದ್ಯಾರ್ಥಿ. ಕೈರಾ ಅವರ ಪ್ರಾಜೆಕ್ಟ್…
Read Moreಸ್ವಚ್ಚ ಭಾರತ ಕಿರು ಚಲನಚಿತ್ರೋತ್ಸವದಲ್ಲಿ “ಮುರ್ಗ”ಗೆ ಪ್ರಥಮ ಬಹುಮಾನ ಸ್ವಚ್ಚ ಭಾರತ ಆಂದೋಲದ ಅಂಗವಾಗಿ ನಡೆದ ಕಿರು ಚಲನ ಚಿತ್ರೋತ್ಸವದಲ್ಲಿ “ಮುರ್ಗ” ಚಿತ್ರ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದೆ. ಮುರ್ಗ ಚಿತ್ರವನ್ನು ಮಹಾರಾಷ್ಟ್ರ ಮೂಲದ ನಿರ್ದೇಶಕ ಕಾತ್ಯಾಯನ್ ಶಿವಪುರಿ ನಿರ್ದೇಶಿಸಿದ್ದಾರೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು ಶಿವಪುರಿ ಅವರಿಗೆ ಪ್ರಮಾಣಪತ್ರ ಮತ್ತು ರೂ 10 ಲಕ್ಷ ನಗದು ಬಹುಮಾನ ನೀಡಿ ಗೌರವಿಸಿದರು.ನಾಗರಿಕರು ಮತ್ತು ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದ ಕಾರಣ ಹೇಗೆ…
Read Moreತೈಲ ಉತ್ಪಾದನೆ ತಗ್ಗಿಸಲು ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಒಕ್ಕೂಟ (OPEC) ನಿರ್ಧಾರ ಎಂಟು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಒಕ್ಕೂಟವು (ಒಪೆಕ್) ಕಚ್ಚಾ ತೈಲ ಉತ್ಪಾದನೆ ತಗ್ಗಿಸುವ ನಿರ್ಧಾರಕ್ಕೆ ಬಂದಿವೆ. ಅಲ್ಜೀರಿಯಾದಲ್ಲಿ ನಡೆದ ಅಲ್ಜೀರಿಸ್ ಒಪೆಕ್ ರಾಷ್ಟ್ರಗಳ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಒಪೆಕ್ ರಾಷ್ಟ್ರಗಳು ಪ್ರಸ್ತುತ ಪ್ರತಿದಿನ 33.24 ಮಿಲಿಯನ್ ಬ್ಯಾರೆಲ್ ತೈಲವನ್ನು ಪ್ರತಿದಿನ ಉತ್ಪಾದಿಸುತ್ತಿದ್ದು, ಈ ಪ್ರಮಾಣವನ್ನು 32.5 ರಿಂದ 33.0 ಮಿಲಿಯನ್ ಬ್ಯಾರೆಲ್ ಗೆ ತಗ್ಗಿಸಲು ತೀರ್ಮಾನಿಸಲಾಗಿದೆ. ಆದರೆ…
Read Moreಸಂಗೀತ ನಿರ್ದೇಶಕ ಉತ್ತಮ ಸಿಂಗ್ ಗೆ ಮಹಾರಾಷ್ಟ್ರ ಸರ್ಕಾರ ನೀಡುವ ಲತಾ ಮಂಗೇಶ್ಕರ್ ಪ್ರಶಸ್ತಿ ಪ್ರಸಿದ್ದ ಸಂಗೀತ ನಿರ್ದೇಶಕ ಹಾಗೂ ಪಿಟೀಲು ವಾದಕ ಉತ್ತಮ್ ಸಿಂಗ್ ಅವರನ್ನು 2016ನೇ ಸಾಲಿನ ಲತಾ ಮಂಗೇಶ್ಕರ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮಹಾರಾಷ್ಟ್ರ ಸರ್ಕಾರ ನೀಡುತ್ತಿದೆ. ಸಂಗೀತ ಕ್ಷೇತ್ರಕ್ಕೆ ಉತ್ತಮ್ ಸಿಂಗ್ ನೀಡಿರುವ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಗೆ ಸಿಂಗ್ ಅವರನ್ನು ಆಯ್ಕೆಮಾಡಲಾಗಿದೆ. ಈ ವರ್ಷದ ಕೊನೆಯಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು. ಉತ್ತಮ್ ಸಿಂಗ್ ಬಗ್ಗೆ: ಸಿಂಗ್…
Read Moreಪ್ಯಾರಿಸ್ ಹವಾಮಾನ ಒಪ್ಪಂದ ಅನುಮೋದನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಜಾಗತಿಕ ತಾಪಮಾನ ತಗ್ಗಿಸುವ ಮಹತ್ವದ ಪ್ಯಾರಿಸ್ ಒಪ್ಪಂದಕ್ಕೆ ಅನುಮೋದನೆ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿವಸ ಭಾರತ ಅಧಿಕೃತವಾಗಿ ಈ ಒಪ್ಪಂದಕ್ಕೆ ಅನುಮೋದನೆ ನೀಡಲಿದೆ. ವಿಶ್ವದ 185 ರಾಷ್ಟ್ರಗಳು ಪ್ಯಾರಿಸ್ ಒಪ್ಪಂದವನ್ನು ಡಿಸೆಂಬರ್ 2015 ರಲ್ಲಿ ಅಳವಡಿಸಿಕೊಂಡಿದ್ದವು. ಭಾರತ ಏಪ್ರಿಲ್ 2016 ರಂದು ನ್ಯೂಯಾರ್ಕ್ ನಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಿತ್ತು. ಇಲ್ಲಿಯವರೆಗೆ 191 ರಾಷ್ಟ್ರಗಳು…
Read Moreಪಂಡಿತ್ ಸೋಮನಾಥ್ ಮರಡೂರ ಅವರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ ಧಾರಾವಾಡದ ಪಂಡಿತ್ ಸೋಮನಾಥ್ ಮರಡೂರ ಅವರನ್ನು ಪ್ರಸ್ತಕ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯನ್ನು ಮೈಸೂರು ದಸರಾ ಸಂದರ್ಭದಲ್ಲಿ ನೀಡಲಾಗುವುದೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ. ಪಂಡಿತ್ ವೆಂಕಟೇಶ ಕುಮಾರ್ ನೇತೃತ್ವದ ಸಮಿತಿಯು ಪಂಡಿತ್ ಮರಡೂರ ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು. ಪ್ರಶಸ್ತಿಯು ರೂ 3 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ವಿಶ್ವದ ಅತಿದೊಡ್ಡ ರೇಡಿಯೋ ಟೆಲಿಸ್ಕೋಪ್ ಚೀನಾದಲ್ಲಿ…
Read Moreಸುಭಾಷ್ ಚಂದ್ರ ಕುಂಟಿಯಾ ರಾಜ್ಯದ ನೂತನ ಮುಖ್ಯಕಾರ್ಯದರ್ಶಿ ಹಿರಿಯ ಐಎಎಸ್ ಅಧಿಕಾರಿ ಸುಭಾಷ್ ಚಂದ್ರ ಕುಂಟಿಯಾ ಅವರು ರಾಜ್ಯದ ನೂತನ ಮುಖ್ಯಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಕುಂಟಿಯಾ ಅವರು ನವೆಂಬರ್ 2017ರಲ್ಲಿ ನಿವೃತ್ತಿಯಾಗಲಿದ್ದು, ಒಟ್ಟು 13 ತಿಂಗಳ ಅವಧಿಗೆ ರಾಜ್ಯದ ಮುಖ್ಯಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಹಾಲಿ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಅವರು ಸೆಪ್ಟೆಂಬರ್ 30ರಂದು ನಿವೃತ್ತಿ ಹೊಂದಲಿದ್ದಾರೆ. ಸುಭಾಷ್ ಚಂದ್ರ ಕುಂಟಿಯಾ ಬಗ್ಗೆ: ಮೂಲತಃ ಒಡಿಶಾದ ಜಗತ್ ಸಿಂಗ್ ಪುರದವರಾದ ಕುಂಟಿಯಾ 1981ರ ತಂಡದ ಐಎಎಸ್ ಅಧಿಕಾರಿ ಪ್ರಾಥಮಿಕ ಶಿಕ್ಷಣ,…
Read Moreಸುಧಾರಿತ ಕುಟುಂಬ ಯೋಜನೆ ಸೇವೆಗಳಿಗೆ ಕೇಂದ್ರ ಸರ್ಕಾರದಿಂದ “ಮಿಷನ್ ಪರಿವಾರ್ ವಿಕಾಸ್” ದೇಶದ ಏಳು ರಾಜ್ಯಗಳ 145 ಜಿಲ್ಲೆಗಳಲ್ಲಿ ಸುಧಾರಿತ ಕುಟುಂಬ ಯೋಜನೆ ಸೇವೆಗಳನ್ನು ಪರಿಚಯಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು “ಮಿಷನ್ ಪರಿವಾರ್ ವಿಕಾಸ್” ಅಭಿಯಾನವನ್ನು ಶೀಘ್ರದಲ್ಲಿ ಜಾರಿಗೆ ತರಲಿದೆ. ಮಾಹಿತಿ ಆಧಾರದ ಮೇಲೆ ಉತ್ತಮ ಗುಣಮಟ್ಟದ ಕುಟುಂಬ ಯೋಜನೆಗಳನ್ನು ಮತ್ತು ವಿಶ್ವಾಸರ್ಹ ಸೇವೆಗಳನ್ನು ನೀಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. “ಮಿಷನ್ ಪರಿವಾರ್ ವಿಕಾಸ್” ಪ್ರಮುಖಾಂಶಗಳು: ಮಿಷನ್ ಪರಿವಾರ್ ವಿಕಾಸ್ ಅಭಿಯಾನವನ್ನು…
Read Moreಎಂಟು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ಭಾರತೀಯ ಬಾಹ್ಯಕಾಶ ಸಂಶೋಧನೆ ಸಂಸ್ಥೆ ಇದೇ ಮೊದಲ ಬಾರಿಕೆ ಒಂದೇ ರಾಕೆಟ್ ನಲ್ಲಿ ಎಂಟು ಉಪಗ್ರಹಗಳನ್ನು ಎರಡು ಕಕ್ಷೆಗೆ ಸೇರಿಸುವ ಮೂಲಕ ಐತಿಹಾಸಿಕ ದಾಖಲೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ PSLV-C35 ರಾಕೆಟ್ ಮೂಲಕ ಉಡಾವಣೆ ಮಾಡಲಾಯಿತು. ಪಿಎಸ್ಎಲ್ವಿ ಇತಿಹಾಸದಲ್ಲೇ ಉಡಾವಣೆ ಮತ್ತು ಸೇರ್ಪಡೆಗೊಳಿಸುವ ಕಾರ್ಯವು ಅತ್ಯಂತ ಸುದೀರ್ಘ ಅವಧಿಯದ್ದಾಗಿದೆ. ಪ್ರಮುಖಾಂಶಗಳು: ಎಂಟು ಉಪಗ್ರಹಗಳ ಪೈಕಿ ಭಾರತದ ಮೂರು ಉಪಗ್ರಹಗಳು, ಅಲ್ಜೇರಿಯಾದ ಮೂರು, ಕೆನಡಾ…
Read More