ಇಬ್ಬರು ಭಾರತೀಯರಿಗೆ “2016 ಕ್ಲಾರ್ಕ್ ಆರ್ ಭಾವಿನ್ ವೈಲ್ಡ್ ಲೈಫ್ ಲಾ ಎನ್ಪೋರ್ಸ್ಮೆಂಟ್ ಪ್ರಶಸ್ತಿ” ಭಾರತದ ಇಬ್ಬರು ಅರಣ್ಯಾಧಿಕಾರಿಗಳನ್ನು “2016 ಕ್ಲಾರ್ಕ್ ಆರ್ ಭಾವಿನ್ ವೈಲ್ಡ್ ಲೈಫ್ ಲಾ ಎನ್ಪೋರ್ಸ್ಮೆಂಟ್ ಪ್ರಶಸ್ತಿ” ಆಯ್ಕೆಮಾಡಲಾಗಿದೆ. ಮಧ್ಯಪ್ರದೇಶ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾದ “ರಿತೇಶ್ ಸರೋಥಿಯ” ಮತ್ತು ಪಶ್ಚಿಮ ಬಂಗಾಳದ ಬೆಲಕೊಬಾ ಅರಣ್ಯದಲ್ಲಿ ರೇಂಜ್ ಆಫೀಸರ್ ಆಗಿರುವ ಸಂಜಯ್ ದತ್ತಾ ಅವರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಸಮರ್ಪಕವಾಗಿ ಕಾನೂನು ಜಾರಿಗೊಳಿಸಿ ವನ್ಯಜೀವಿ ಸಂರಕ್ಷಿಸಲು ದಿಟ್ಟ ಧೈರ್ಯ ತೋರಿರುವುದಕ್ಕೆ ಇವರನ್ನು ಪ್ರಶಸ್ತಿಗೆ…
Read Moreನಿರಾಶ್ರಿತರು ಮತ್ತು ವಲಸಿತರ ಹಕ್ಕು ರಕ್ಷಣೆಗೆ “ನ್ಯೂಯಾರ್ಕ್ ಘೋಷಣೆ (New York Declaration)” ವಿಶ್ವಸಂಸ್ಥೆಯ 71ನೇ ಸಾಮಾನ್ಯ ಅಧಿವೇಶನದಲ್ಲಿ ವಿಶ್ವದ ನಾಯಕರು ನಿರಾಶ್ರಿತರು ಮತ್ತು ವಲಸಿತರ ಹಕ್ಕು ರಕ್ಷಣೆ ಕಾಪಾಡುವ ಮಹತ್ವದ “ನ್ಯೂಯಾರ್ಕ್ ಘೋಷಣೆ”ಗೆ ಸಹಿ ಹಾಕಿದ್ದಾರೆ. ನಿರಾಶ್ರಿತರ ಮತ್ತು ವಲಸಿತರ ಹಕ್ಕು ಕಾಪಾಡಲು ಹಾಗೂ ಜೀವ ರಕ್ಷಿಸಲು ವಿಶ್ವದ ನಾಯಕರು ಒಮ್ಮತದಿಂದ ಹೊಣೆಗಾರಿಕೆಯನ್ನು ಹಂಚಿಕೊಳ್ಳಬೇಕು ಎಂಬುದು ಘೋಷಣೆಯ ಮೂಲ ತಿರುಳಾಗಿದೆ. ಘೋಷಣೆಯ ಪ್ರಮುಖಾಂಶಗಳು: ದುರ್ಬಲ ಸಂದರ್ಭಗಳಲ್ಲಿ ವಲಸಿಗರನ್ನು ರಕ್ಷಿಸಲು ಮಾರ್ಗಸೂಚಿಗಳನ್ನು ರಚಿಸುವುದು. ನಿರಾಶ್ರಿತರು ಮತ್ತು ವಲಸಿಗರಿಗೆ…
Read More“ಕೆನ್-ಬೆತ್ವಾ” ಅಂತರ ರಾಜ್ಯ ನದಿ ಜೋಡಣೆಯ ಮೊದಲ ಹಂತಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಮ್ಮತಿ ಕೆನ್-ಬೆತ್ವಾ ನದಿ ಜೋಡಣೆ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಸಿರು ನಿಶಾನೆ ತೋರಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ರಾಜ್ಯ ಸಚಿವ ಅನಿಲ್ ಮಾಧವ್ ದಾವೆ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವನ್ಯ ಜೀವಿ ಮಂಡಳಿ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ರೂ 10000 ಕೋಟಿಯ ಕೆನ್-ಬೆತ್ವಾ ಯೋಜನೆ ದೇಶದ ಮೊದಲ ಅಂತರರಾಜ್ಯ ನದಿ ಜೋಡಣೆ ಯೋಜನೆಯಾಗಿದೆ. ಪ್ರಮುಖಾಂಶಗಳು: ಕೆನ್-ಬೆತ್ವಾ ನದಿ…
Read Moreಕೇರಳ ಮತ್ತು ಕೊಲ್ಕತ್ತಾ ಹೈಕೋರ್ಟ್ ಗೆ ನೂತನ ಮುಖ್ಯನ್ಯಾಯಾಧೀಶರುಗಳ ನೇಮಕ ಮೋಹನ್ ಎಂ ಶಾಂತನಗೌಡ ರವರನ್ನು ಕೇರಳ ಹೈಕೋರ್ಟ್ನ ಮುಖ್ಯನ್ಯಾಯಾಧೀಶರನ್ನಾಗಿ ಮತ್ತು ಗಿರೀಶ್ ಚಂದ್ರ ಗುಪ್ತಾ ಅವರನ್ನ ಕಲ್ಕತ್ತಾ ಹೈಕೋರ್ಟ್ನ ಮುಖ್ಯನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ. ಮೋಹನ್ ಎಂ ಶಾಂತನಗೌಡ: ಕರ್ನಾಟಕ ಮೂಲದ ಮೋಹನ್ ಎಂ ಶಾಂತನಗೌಡರವರು ಕೇರಳ ಹೈಕೋರ್ಟ್ನ ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಕೇರಳ ರಾಜ್ಯಪಾಲರಾದ ನಿವೃತ ಮುಖ್ಯನಾಯಾಧೀಶರಾದ ಪಿ.ಸಾಥಸಿವಂ ಪ್ರಮಾಣ ವಚನ ಭೋದಿಸಿದರು. ಶಾಂತನಗೌಡ ರವರು 5 ಮೇ 1958 ರಲ್ಲಿ ಹಾವೇರಿ ಜಿಲ್ಲೆಯ ಚಿಕ್ಕೆರೂರಿನಲ್ಲಿ ಜನಿಸಿದರು.…
Read Moreಮುಂಬೈ: ಜಾಗತಿಕ ಸಿನಿಮಾ ರಂಗದಲ್ಲಿ ಪ್ರತಿಷ್ಠಿತ ವೇದಿಕೆಯಾಗಿರುವ ಆಸ್ಕರ್ ಅಂಗಳಕ್ಕೆ ದಕ್ಷಿಣ ಭಾರತದ ‘ವಿಸಾರಣೈ’ ಚಿತ್ರ ಪ್ರವೇಶ ಪಡೆದಿದೆ. ಕನ್ನಡದ ‘ತಿಥಿ’ ಸಿನಿಮಾ ಪೈಪೋಟಿಯಲ್ಲಿತ್ತು. ವೆಟ್ರಿಮಾರನ್ ನಿರ್ದೇಶನದ ತಮಿಳು ಚಿತ್ರ ‘ವಿಸಾರಣೈ(ವಿಚಾರಣೆ)’ ವಿದೇಶಿ ಭಾಷಾ ಚಿತ್ರಗಳ ವಿಭಾಗದಲ್ಲಿ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸುತ್ತಿದೆ. ಇದು ವೆಟ್ರಿಮಾರನ್ ನಿರ್ದೇಶನದ ಮೂರನೇ ಚಿತ್ರವಾಗಿದ್ದು, ವಿಚಾರಣೆ ನೆಪದಲ್ಲಿ ಕೈದಿ ಅನುಭವಿಸುವ ಯಾತನೆ, ಪೊಲೀಸ್ ಇಲಾಖೆಯಲ್ಲಿನ ಲೋಪ, ಭ್ರಷ್ಟಾಚಾರದಂತಹ ವಿಷಯವನ್ನು ಪ್ರತಿಬಿಂಬಿಸುತ್ತದೆ. ಕನ್ನಡದ ‘ತಿಥಿ’ ಸಿನಿಮಾ, ಉಡ್ತಾ ಪಂಜಾಬ್, ನೀರ್ಜಾ, ಸೈರತ್, ಧಾನಕ್ ಸೇರಿದಂತೆ ದೇಶದ 29…
Read Moreಭಾರತ-ನೇಪಾಳ ನಡುವೆ ಮೂರು ಮಹತ್ವದ ಒಪ್ಪಂದಕ್ಕೆ ಸಹಿ ಭಾರತ ಮತ್ತು ನೇಪಾಳ ಮಹತ್ವದ ಮೂರು ಒಪ್ಪಂದಗಳಿಗೆ ಸಹಿಹಾಕಿವೆ. ಭೂಕಂಪ ಸಂತ್ರಸ್ಥ ನೇಪಾಳ ಪುನರ್ ನಿರ್ಮಾಣ, ರಸ್ತೆ ಮೂಲಸೌಕರ್ಯ ಅಭಿವೃದ್ದಿ ಮತ್ತು ಆರ್ಥಿಕ ನೆರವು ಒಪ್ಪಂದಗಳಿಗೆ ಸಹಿಹಾಕಲಾಗಿದೆ. ನೇಪಾಳ ಪ್ರಧಾನಿ ಪುಷ್ಪ ಕುಮಾರ್ ಧಮಾಲ್ ಅವರು ನಾಲ್ಕು ದಿನಗಳ ಕಾಲ ಭಾರತಕ್ಕೆ ಪ್ರಯಾಣ ಕೈಗೊಂಡಿದ್ದ ವೇಳೆಯಲ್ಲಿ ಈ ಒಪ್ಪಂದಗಳಿಗೆ ಸಹಿಹಾಕಲಾಯಿತು. ಪ್ರಮುಖಾಂಶಗಳು: 750 ಯುಎಸ್ ಡಾಲರ್ ಆರ್ಥಿಕ ನೆರವು: ಕಳೆದ ವರ್ಷ ಸಂಭವಿಸಿದ ಭೂಕಂಪದಿಂದ ತತ್ತರಿಸಿರುವ ನೇಪಾಳದ ಪುನರ್…
Read Moreಭಾರತ ಹಕ್ಕಿ ಜ್ವರ (H5N1) ಮುಕ್ತ ರಾಷ್ಟ್ರ: ಸರ್ಕಾರದಿಂದ ಸ್ವಯಂ ಘೋಷಣೆ ಭಾರತ ಹಕ್ಕಿ ಜ್ವರದಿಂದ ಮುಕ್ತಿ (Avian Influenza (H5N1))ಹೊಂದಿದೆ ಎಂದು ಸ್ವಯಂ ಘೋಷಣೆ ಹೊರಡಿಸಿದೆ. ಅದರಂತೆ ಈ ವಿಷಯವನ್ನು ಪ್ರಾಣೆ ಆರೋಗ್ಯ ವಿಶ್ವ ಸಂಸ್ಥೆ (OIE)ಗೂ ತಿಳಿಸಿದೆ. ಈ ವಿಷಯವನ್ನು ಕೇಂದ್ರ ಕೃಷಿ ಸಚಿವಾಲಯದ ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆ ಇಲಾಖೆ ತಿಳಿಸಿದೆ. ಕಳೆದ ಜೂನ್ 2016, ಬೀದರ್ ನ ಹುಮ್ನಾಬಾದ್ ನಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ ಪ್ರಕರಣ ದೇಶದಲ್ಲಿ ಪತ್ತೆಯಾದ ಕೊನೆಯ ಪ್ರಕರಣವಾಗಿದೆ.…
Read Moreಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಅಲಕಾ ಸಿರೋಹಿ ನೇಮಕ ನಿವೃತ್ತ ಐಎಎಸ್ ಅಧಿಕಾರಿ ಅಲಕಾ ಸಿರೋಹಿ ಅವರನ್ನು ಕೇಂದ್ರ ಲೋಕಸೇವಾ (ಯುಪಿಎಸ್ಸಿ) ಆಯೋಗದ ಅಧ್ಯಕ್ಷರನ್ನಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೇಮಕಮಾಡಿದ್ದಾರೆ. ಹಾಲಿ ಅಧ್ಯಕ್ಷರಾಗಿದ್ದು ದೀಪಕ್ ಗುಪ್ತಾ ರವರು ರಾಜೀನಾಮೆ ನೀಡಿದ ಕಾರಣ ಸೆಪ್ಟೆಂಬರ್ 20 ರಂದು ಈ ಹುದ್ದೆ ತೆರವಾಗಲಿರುವ ಕಾರಣ ಅಲಕಾ ಅವರನ್ನು ನೇಮಕಮಾಡಲಾಗಿದೆ. ಅಲಕಾ ಅವರ ಅಧ್ಯಕ್ಷ ಅವಧಿ 2017 ಜನವರಿ 3 ರವರೆಗೂ ಇದೆ. ಅಲಕಾ ಸಿರೋಹಿ ಬಗ್ಗೆ: ಸಿರೋಹಿ ರವರು…
Read Moreವಿಶ್ವ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ 112 ನೇ ಸ್ಥಾನ 2016 ವಿಶ್ವ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ ಬಿಡುಗಡೆಗೊಂಡಿದ್ದು, 159 ದೇಶಗಳ ಪೈಕಿ ಭಾರತ 112ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಸೂಚ್ಯಂಕಕ್ಕೆ ಹೋಲಿಸಿದರೆ ಭಾರತ 10 ಸ್ಥಾನಗಳ ಕುಸಿತಕಂಡಿದ್ದು, ಕಳಪೆ ಸಾಧನೆ ತೋರಿದೆ. ಟಾಪ್ ಹತ್ತು ರಾಷ್ಟ್ರಗಳು: ಸೂಚ್ಯಂಕದಲ್ಲಿ ಹಾಂಕಾಂಗ್ ಮೊದಲ ಸ್ಥಾನ ಪಡೆದುಕೊಂಡಿದೆ. ಸಿಂಗಪುರ, ನ್ಯೂಜಿಲೆಂಡ್, ಸ್ವಿಟ್ಜರ್ಲೆಂಡ್, ಕೆನಡಾ, ಮಾರಿಷಸ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಂತರದ ಸ್ಥಾನದಲ್ಲಿ ಇವೆ. ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ: ಚೀನಾ (113),…
Read Moreರಿಲಾಯನ್ಸ್ ಕಮ್ಯುನಿಕೇಷನ್ಸ್ ಮತ್ತು ಏರ್ ಸೆಲ್ ವಿಲೀನಕ್ಕೆ ಒಪ್ಪಿಗೆ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್ಕಾಂ) ಮತ್ತು ಏರ್ ಸೆಲ್ ತಮ್ಮ ವೈರ್ಲೆಸ್ ವಹಿವಾಟನ್ನು ಪರಸ್ಪರ ವಿಲೀನಗೊಳಿಸಲು ಒಪ್ಪಿಗೆ ನೀಡಿವೆ. ಈ ವಿಲೀನದೊಂದಿಗೆ ಉದಯಿಸಲಿರುವ ಹೊಸ ಸಂಸ್ಥೆಯು ಗ್ರಾಹಕರ ಸಂಖ್ಯೆ ಮತ್ತು ವರಮಾನದ ವಿಷಯದಲ್ಲಿ ದೇಶದ 4ನೇ ಅತಿದೊಡ್ಡ ದೂರಸಂಪರ್ಕ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಪ್ರಮುಖಾಂಶಗಳು: ವಿಲೀನಗೊಂಡ ಕಂಪನಿಯು 850, 900, 1800 ಮತ್ತು 2100 ಮೆಗಾ ಹರ್ಟ್ಜ್ ನಲ್ಲಿ ಒಟ್ಟಾರೆ 448 ಮೆಗಾ ಹರ್ಟ್ಜ್ ಹೊಂದುವ…
Read More