ತಮಿಳುನಾಡಿನ ಹಂಗಾಮಿ ರಾಜ್ಯಪಾಲರಾಗಿ ಸಿ ವಿದ್ಯಾಸಾಗರ್ ರಾವ್ ನೇಮಕ ಮಹಾರಾಷ್ಟ್ರದ ರಾಜ್ಯಪಾಲ ಚೆನ್ನಮನೇನಿ ವಿದ್ಯಾಸಾಗರ್ ರಾವ್ ಅವರು ತಮಿಳುನಾಡಿನ ಹಂಗಾಮಿ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮದ್ರಾಸ್ ಹೈಕೋರ್ಟ್ ಮುಖ್ಯನ್ಯಾಯಾಧೀಶರಾದ ಸಂಜಯ್ ಕೃಷ್ಣ ಕೌಲ್ ಅವರು ವಿದ್ಯಾಸಾಗರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ತಮಿಳುನಾಡಿನ ರಾಜ್ಯಪಾಲರಾಗಿದ್ದ ಕೆ.ರೋಸಯ್ಯ ಅವರ ಅವಧಿ ಆಗಸ್ಟ್ 31 ಮುಕ್ತಾಯವಾದ ಕಾರಣ ರಾಷ್ಟ್ರಪತಿಯವರು ಸಂವಿಧಾನದ ಕಲಂ 153 ರಡಿ ವಿದ್ಯಾಸಾಗರ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿದ್ದಾರೆ. ವಿದ್ಯಾಸಾಗರ್ ರಾವ್ ಬಗ್ಗೆ: ವಿದ್ಯಾಸಾಗರ್ ಪ್ರಸ್ತುತ…
Read Moreಭಾರತ ಮತ್ತು ವಿಯಟ್ನಾಂ ನಡುವೆ 12 ಮಹತ್ವದ ಒಪ್ಪಂದಗಳಿಗೆ ಸಹಿ ಭಾರತ ಮತ್ತು ವಿಯಟ್ನಾಂ ನಡುವೆ ಪರಸ್ಪರ ಸಂಬಂಧವನ್ನು ವೃದ್ದಿಸುವ ಸಲುವಾಗಿ 12 ಮಹತ್ವದ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ವಿಯಟ್ನಾಂ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ಮೋದಿ ಹಾಗೂ ವಿಯೆಟ್ನಾಂ ಪ್ರಧಾನಿ ಗುಯೆನ್ ಕ್ಸುವಾನ್ ನಡುವೆ ನಡೆದ ಸುದೀರ್ಘ ಮಾತುಕತೆ ಬಳಿಕೆ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಮೋದಿ ಅವರು 15 ವರ್ಷಗಳ ಬಳಿಕ ವಿಯಟ್ನಾಂಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಆಗಿದ್ದಾರೆ. 2001 ರಲ್ಲಿ…
Read Moreಕರ್ನಾಟಕ “ವೈಮಾನಿಕ ನೀತಿ 2013-23” ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ‘ಕರ್ನಾಟಕ ವೈಮಾನಿಕ ನೀತಿ 2013-23’ಕ್ಕೆ ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ ವೈಮಾನಿಕ ಉದ್ಯಮವನ್ನು ಪ್ರೋತ್ಸಾಹಿಸಿ ಜಾಗತಿಕ ಮಟ್ಟದ ಕೈಗಾರಿಕೆಗಳನ್ನು ಆಕರ್ಷಿಸಲು ಪೂರಕವಾಗುವ ಸಲುವಾಗಿ ತಿದ್ದುಪಡಿ ತರಲು ಸಮ್ಮಿಸಲಾಗಿದೆ. ಕರ್ನಾಟಕ ವೈಮಾನಿಕ ನೀತಿ 2013-23 ಅನ್ನು ಫೆಬ್ರವರಿ 7, 2013 ರಂದು ಅಂದಿನ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರು ಬಿಡುಗಡೆಗೊಳಿಸಿದ್ದರು, ಆ ಮೂಲಕ ದೇಶದಲ್ಲೇ ವೈಮಾನಿಕ ನೀತಿಯನ್ನು ಜಾರಿಗೆ…
Read Moreಒಡಿಶಾದಲ್ಲಿ ಭಾರತದ ಮೊದಲ ಅಡುಗೆ ಅನಿಲ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನ ಭಾರತದ ಮೊದಲ ಅಡುಗೆ ಅನಿಲ (Cooking Gas) ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನ ಒಡಿಶಾದ ಭುಬನೇಶ್ವರದಲ್ಲಿ ಆರಂಭಗೊಂಡಿತು. ಎರಡು ದಿನಗಳ ಸಮ್ಮೇಳನವನ್ನು ಜಾರ್ಖಂಡ್ ರಾಜ್ಯಪಾಲ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದರು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಸಂಸ್ಥೆಗಳು ಈ ಸಮ್ಮೇಳನವನ್ನ ಆಯೋಜಿಸಿದ್ದು, ಸಾಂಪ್ರದಾಯಿಕ ಇಂಧನಗಳ ಬಳಕೆ ಬದಲಾಗಿ LPG ಅನಿಲ ಬಳಕೆ ಪ್ರೋತ್ಸಾಹಿಸುವುದು…
Read Moreವಿಶ್ವದ ಅತಿದೊಡ್ಡ ನದಿ ದ್ವೀಪ ಪ್ರದೇಶ “ಮಜುಲಿ” ಅಧಿಕೃತವಾಗಿ ಘೋಷಣೆ ಅಸ್ಸಾಂನ ಮಜುಲಿ ದ್ವೀಪ ಪ್ರದೇಶವನ್ನು ವಿಶ್ವದ ಅತಿದೊಡ್ಡ ನದಿ ದ್ವೀಪ ಪ್ರದೇಶವೆಂದು ಗಿನ್ನಿಸ್ ವಿಶ್ವದಾಖಲೆ ಅಧಿಕೃತವಾಗಿ ಘೋಷಿಸಿದೆ. ಮಜುಲಿ ದ್ವೀಪ ಪ್ರದೇಶ ಬ್ರಹ್ಮಪುತ್ರ ನದಿಯಲ್ಲಿದೆ. ಇದು 880 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಬ್ರೆಜಿಲ್ ನ ಅಮೆಜಾನ್ ನದಿಯಲ್ಲಿರುವ ಮರಜೊ (Marajo) ದ್ವೀಪ ಪ್ರದೇಶ ಇದುವರೆಗೂ ವಿಶ್ವದ ಅತಿದೊಡ್ಡ ದ್ವೀಪ ಪ್ರದೇಶ ಎನಿಸಿತ್ತು. ಮಜುಲಿ ದ್ವೀಪ ಪ್ರದೇಶದ ಬಗ್ಗೆ: ಮಜುಲಿ ದ್ವೀಪ ಪ್ರದೇಶ ಬ್ರಹ್ಮಪುತ್ರ ನದಿಯಿಂದ…
Read Moreಸ್ಕ್ರಾಮ್ ಜೆಟ್ (Scram Jet)ಎಂಜಿನ್ ಯಶಸ್ವಿಯಾಗಿ ಪರೀಕ್ಷಿಸಿದ ಇಸ್ರೋ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಕ್ರಾಮ್ ಜೆಟ್ (Supersonic Combusting Ramjet) ಎಂಜಿನ್ ನ ಮೊದಲ ಪರೀಕ್ಷೆಯಲ್ಲೇ ಯಶಸ್ವಿಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಲ್ಲಿ ಪರೀಕ್ಷೆಯನ್ನು ನಡೆಸಲಾಗಿದ್ದು, ಯಶಸ್ವಿಯಾಗುವ ಮೂಲಕ ಇಸ್ರೋ ಮತ್ತೊಂದು ಗೆಲುವಿನ ನಗೆ ಬೀರಿದೆ. ಸ್ವದೇಶಿ ನಿರ್ಮಿತ ಸ್ಕ್ರಾಮ್ ಜೆಟ್ ಅನ್ನು RH-560 ಸೌಂಡಿಂಗ್ ರಾಕೆಟ್ ನಲ್ಲಿ ಅಳವಡಿಸಿ ಪರೀಕ್ಷೆಸಲಾಯಿತು. RH-560 ಎರಡು ಹಂತದ ಸುಧಾರಿತ ತಂತ್ರಜ್ಞಾನದ ವಾಹನವಾಗಿದೆ(Advanced Technology…
Read Moreಕಾರ್ಡ್ ಪಾವತಿ ಉತ್ತೇಜನಕ್ಕೆ ಸಮಿತಿ ರಚಿಸಿದ ಕೇಂದ್ರ ಸರ್ಕಾರ ದೇಶದಲ್ಲಿ ನಗದು ಪಾವತಿಯನ್ನು ಕಡಿಮೆಗೊಳಿಸಿ ಕಾರ್ಡ್ ಮೂಲಕ ಪಾವತಿಸುವ ವ್ಯವಸ್ಥೆಯನ್ನು ಉತ್ತೇಜಿಸಲು ಅಗತ್ಯ ಕ್ರಮಗಳನ್ನು ಶಿಫಾರಸ್ಸು ಮಾಡುವ ಸಲುವಾಗಿ ಕೇಂದ್ರ ಸರ್ಕಾರ 11 ಜನ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ. ಮಾಜಿ ಹಣಕಾಸು ಕಾರ್ಯದರ್ಶಿ ಹಾಗೂ ಹಾಲಿ ನೀತಿ ಆಯೋಗದ ಸಾಮಾಜಿಕ ವಲಯಕ್ಕೆ ಪ್ರಧಾನ ಸಲಹೆಗಾರರಾಗಿರುವ ರತನ್ ಪಿ ವಟಲ್ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯ ಹೊಣೆಗಾರಿಕೆ: ಕಾರ್ಡ್ ಮತ್ತು ಡಿಜಿಟಲ್ ಕ್ಷೇತ್ರದ ಮೂಲಕ ಹಣ ಪಾವತಿಯನ್ನು…
Read Moreಜಗತ್ತಿನ ಅತಿ ದೊಡ್ಡ ಸಾಗರ ಸಂರಕ್ಷಿತ ಪ್ರದೇಶ (Marine Protected Area) ರಚಿಸದ ಅಮೆರಿಕ ವಿಶ್ವದ ಅತಿದೊಡ್ಡ ಸಾಗರ ಸಂರಕ್ಷಿತ ಪ್ರದೇಶವನ್ನು ಅಮೆರಿಕಾದಲ್ಲಿ ರಚಸಿಲಾಗಿದೆ. ಪಾಪಾನೊಮ್ಮೌವ್ಕುಕಿ ಸಾಗರ ರಾಷ್ಟ್ರೀಯ ಸ್ಮಾರಕ (Papahanaumokuakea Marine National Monument)ಹೆಸರಿನ ಈ ಸಂರಕ್ಷಿತ ಪ್ರದೇಶವನ್ನು ಪ್ರಸ್ತುತ ಇರುವ ಹವಾಯಿ ರಾಷ್ಟ್ರೀಯ ಸ್ಮಾರಕ ಪ್ರದೇಶದ ವಿಸ್ತೀರ್ಣವನ್ನು ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮರವರು ವಿಸ್ತರಿಸಿದ್ದು ಜಗತ್ತಿನ ಅತಿ ದೊಡ್ಡ ಸಾಗರ ಸಂರಕ್ಷಿತ ಪ್ರದೇಶವೆನಿಸಿದೆ. ವಿಸ್ತರಣದ ನಂತರ ಪಾಪಾನೊಮ್ಮೌವ್ಕುಕಿ ಸಾಗರ ರಾಷ್ಟ್ರೀಯ ಸ್ಮಾರಕದ ವಿಸ್ತೀರ್ಣತೆ 582,578…
Read Moreಅಪರಾಧಿಗಳ ಡಿಎನ್ಎ ಪ್ರೋಫೈಲಿಂಗ್ ಜಾರಿಗೆ ತಂದ ಮೊದಲ ರಾಜ್ಯ ಆಂಧ್ರಪ್ರದೇಶ ಅಪರಾಧಿಗಳ ಡಿಎನ್ಎ (Deoxyribonucleac acid) ಮಾಹಿತಿಯನ್ನು ಕಲೆಹಾಕುವ ಡಿಎನ್ಎ ಇಂಡೆಕ್ಸ್ ಸಿಸ್ಟಮ್ ಅನ್ನು ಆಂಧ್ರಪ್ರದೇಶ ಜಾರಿಗೆ ತಂದಿಗೆ. ಆ ಮೂಲಕ ಈ ವಿನೂತನ ವ್ಯವಸ್ಥೆಯನ್ನು ಜಾರಿಗೆ ತಂದ ದೇಶದ ಮೊದಲ ರಾಷ್ಟ್ರವೆನಿಸಿದೆ. ಇದಕ್ಕಾಗಿ ಅಮೆರಿಕಾದ ಇಂಟೆಜೆನ್ ಎಕ್ಸ್ (InetegenX) ಅಭಿವೃದ್ದಿಪಡಿಸಿರುವ RapidHit ಡಿಎನ್ಎ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗಿದೆ. ಡಿಎನ್ಎ ಸೂಚ್ಯಂಕ ವ್ಯವಸ್ಥೆಯು ಜೊಲ್ಲು ರಸ, ರಕ್ತದ ಕಲೆ ಮತ್ತು ಕೆನ್ನೆಯ ಸ್ವೇದ ಗ್ರಂಥಿಗಳ ಮಾದರಿ ಮೂಲಕ ಡಿಎನ್ಎ…
Read Moreವಿಮಾನ ನಿಲ್ದಾಣ ನಿರ್ಮಾಣ: ಕೇಂದ್ರ ಸರ್ಕಾರರೊಂದಿಗೆ ಸಹಿ ಹಾಕಿದ ಮೊದಲ ರಾಜ್ಯ ಮಹಾರಾಷ್ಟ್ರ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಹತ್ತು ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಒಡಂಬಡಕಿಗೆ ಸಹ ಹಾಕಿದೆ. ಆ ಮೂಲಕದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಹಿ ಹಾಕಿದ ಮೊದಲ ರಾಜ್ಯ ಮಹಾರಾಷ್ಟ್ರ ಎನಿಸಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಮತ್ತು ಮಹಾರಾಷ್ಟ್ರ…
Read More