ಜಗತ್ತಿನ ಮೊದಲ ಕ್ವಾಂಟಮ್ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಿದ “ಚೀನಾ” ವಿಶ್ವದ ಮೊಲದ ಕ್ವಾಂಟಮ್ ಉಪ್ರಗಹ ಕ್ವಾಂಟಮ್ ಎಕ್ಸ್ಪೆರಿಮೆಂಟ್ಸ್ ಅಟ್ ಸ್ಪೇಸ್ ಸ್ಕೇಲ್ (QUESS)ನ್ನು ಚೀನಾ ಈಚೆಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಚೀನಾದ ಗನ್ಸುನಲ್ಲಿರುವ ಜಿಕ್ವಾನ್ ಉಪಗ್ರಹ ಉಡಾವಣ ಕೇಂದ್ರದಿಂದ ಈ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಈ ಉಪಗ್ರಹದ ಬಗ್ಗೆ: ಈ ಉಪಗ್ರಹಕ್ಕೆ ಮಿಸಿಯಸ್ ಎಂದು ಹೆಸರಿಡಲಾಗಿದೆ. ಮಿಸಿಯಸ್ ಚೀನಾದಲ್ಲಿ ಕ್ರಿ.ಪೂ. 5ನೇ ಶತಮಾನದಲ್ಲಿ ಬದುಕಿದ್ದ ತತ್ವಶಾಸ್ತ್ರಜ್ಞ ಹಾಗೂ ವಿಜ್ಞಾನಿ. ಮಾನವನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ…
Read Moreಪುಣೆಯಲ್ಲಿ ದೇಶದ ಮೊದಲ ಬಯೋ-ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (Bio-CNG) ಉತ್ಪಾದನ ಘಟಕ ದೇಶದ ಮೊದಲ ಬಯೋ-ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಉತ್ಪಾದನ ಘಟಕ ಪುಣೆಯಲ್ಲಿ ಕಾರ್ಯಾರಂಭಗೊಂಡಿತು. ಕೃಷಿ ತ್ಯಾಜ್ಯವನ್ನು ಬಳಸಿ ಅನಿಲ ಉತ್ಪಾದಿಸುವ ಈ ಘಟಕವನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಣಿಕ್ಕರ್ ಜಂಟಿಯಾಗಿ ಉದ್ಘಾಟಿಸಿದರು. ಈ ಘಟಕದ ಬಗ್ಗೆ: ಪುಣೆ ಮೂಲದ ಪ್ರೈಮೊವ್ ಎಂಜನಿಯರಿಂಗ್ ಪ್ರೈವೆಟ್ ಲಿಮಿಟೆಡ್ ಈ ಘಟಕವನ್ನು ಸ್ಥಾಪಿಸಿದೆ. ತಂತ್ರಜ್ಞಾನ ಪ್ರದರ್ಶಿಸಲು ನಿರ್ಮಿಸಲಾಗಿರುವ…
Read Moreವೀರ ಯೋಧ “ಹವಾಲ್ದಾರ್ ಹಂಗ್ಪನ್ ದಾದಾ” ಗೆ ಅಶೋಕ ಚಕ್ರ ಗೌರವ ವೀರ ಯೋಧ ಹುತ್ಮಾತ ಹವಾಲ್ಡಾರ್ ಹಂಗ್ಪನ್ ದಾದಾ ರವರಿಗೆ ದೇಶದ ಅತ್ಯುನ್ನತ ಸೇನಾ ಗೌರವವಾದ ಅಶೋಕಚಕ್ರವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ದಿನ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ರಪತಿ ಪ್ರಣಬ್ ಮುಖರ್ಜಿ ಅವರು ಅಶೋಕ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ದಾದಾ ಅವರಿಗೆ ಪ್ರದಾನ ಮಾಡಲಿದ್ದಾರೆ. ಇದೇ ವೇಳೆ ಸೇನಾ ಪಡೆ ಮತ್ತು ಅರೆ ಸೇನಾ ಪಡೆಯ ಯೋಧರಿಗೆ 82 ಶೌರ್ಯ…
Read Moreಸರಕು ಮತ್ತು ಸೇವಾ (GST) ಮಸೂದೆಗೆ ಅನುಮೋದನೆ ನೀಡಿದ ಮೊದಲ ರಾಜ್ಯ “ಅಸ್ಸಾಂ” ಈಶಾನ್ಯ ರಾಜ್ಯಗಳ ಅಸ್ಸಾಂ ರಾಜ್ಯ ಸರಕು ಮತ್ತು ಸೇವಾ ಮಸೂದೆ-2014 (ಸಂವಿಧಾನ 122ನೇ ತಿದ್ದುಪಡಿ)ಗೆ ಅನುಮೋದನೆ ಮಾಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಂಬಂಧ ಅಸ್ಸಾಂ ವಿಧಾನಸಭೆಯಲ್ಲಿ ಅವಿರೋಧವಾಗಿ ಜಿಎಸ್’ಟಿಯನ್ನು ಅನುಮೋದನೆ ಮಾಡಲಾಗಿದೆ. ಜಿಎಸ್’ಟಿ ಮಸೂದೆಯನ್ನು ಆಗಸ್ಟ್ 2016 ರಲ್ಲಿ ಸಂಸತ್ತು ಅನುಮೋದನೆಗೊಳಿಸಿ, ಸಂವಿಧಾನದ ಕಲಂ 368 ಪ್ರಕಾರ ಅನುಮೋದನೆಗೆ ರಾಜ್ಯಗಳಿಗೆ ಕಳುಹಿಲಾಗಿತ್ತು. ಸಂವಿಧಾನದ ಕಲಂ 368 ಪ್ರಕಾರ…
Read Moreಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2016-17ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರಕಟ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ ಕರ್ನಾಟಕ ಕಲಾಶ್ರೀ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಕಲಾವಿದರನ್ನು ಆಯ್ಕೆ ಮಾಡಲು ಕಲಾವಿದರ ಪ್ರತಿಭೆ, ಸೇವಾ ಹಿರಿತನ, ಶಿಷ್ಯರನ್ನು ತಯಾರು ಮಾಡಿರುವುದು, ಗ್ರಂಥಗಳ ರಚನೆ, ಪ್ರಸ್ತುತ ಸಂಬಂಧಪಟ್ಟ ಪ್ರಕಾರಕ್ಕೆ ಮಾಡುತ್ತಿರುವ ಸೇವೆ ಇವುಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳಲಾಗಿದೆ. 2016-17ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ಕಲಾಶ್ರೀ’ ವಾರ್ಷಿಕ ಪ್ರಶಸ್ತಿಗೆ ಖ್ಯಾತ ತಬಲಾ ವಾದಕ (ಹಿಂದುಸ್ತಾನಿ) ಧಾರವಾಡದ ಪಂ. ರವೀಂದ್ರ ಯಾವಗಲ್ ಮತ್ತು…
Read Moreಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಹನೀಫ್ ಮುಹಮ್ಮದ್ ನಿಧನ ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರ, ‘ಲಿಟ್ಲ್ ಮಾಸ್ಟರ್’ ಎಂದೇ ಖ್ಯಾತರಾಗಿದ್ದ ಹನೀಫ್ ಮುಹಮ್ಮದ್(81) ನಿಧನರಾದರು. ವಯೋ ಸಂಬಂಧಿ ಮತ್ತು ಶ್ವಾಸ ಕೋಶದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹನೀಫ್ ಮುಹಮ್ಮದ್ ಅವರು ಕರಾಚಿಯ ಆಗಾ ಖಾನ್ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಹನೀಫ್ ಮುಹಮ್ಮದ್ 1954-55ರಲ್ಲಿ ಭಾರತಕ್ಕೆ ಮೊದಲ ಬಾರಿ ಪ್ರವಾಸ ಕೈಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು.…
Read Moreಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ಕೆ.ಎಂ.ಹನುಮಂತರಾಯಪ್ಪ ಅಧಿಕಾರ ಸ್ವೀಕಾರ ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರಾಗಿ ಕೆ.ಎಂ.ಹನುಮಂತರಾಯಪ್ಪ ಅಧಿಕಾರ ಸ್ವೀಕರಿಸಿದರು. ಹನುಮಂತರಾಯಪ್ಪ ಅವರು ರೇಷ್ಮೆ ಮಂಡಳಿಯ 25ನೇ ಅಧ್ಯಕ್ಷರಾಗಿದ್ದಾರೆ. ಇವರು ಮೂರು ವರ್ಷಗಳ ಕಾಲ ಅಧ್ಯಕ್ಷ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕೆ.ಎಂ.ಹನುಮಂತರಾಯಪ್ಪ ಬಗ್ಗೆ: ಕೆ.ಎಂ.ಹನುಮಂತರಾಯಪ್ಪ ಅವರು ವೃತ್ತಿಯಲ್ಲಿ ರೇಷ್ಮೆ ಬೆಳೆಗಾರ ಹಾಗೂ ನೇಕಾರ. ರೇಷ್ಮೆ ನಗರ ಎಂದೇ ಖ್ಯಾತಿ ಹೊಂದಿರುವ ಕರ್ನಾಟಕದ ದೊಡ್ಡಬಳ್ಳಾಪುರ ಮೂಲದವರು. ಬಿಜೆಪಿ ಪಕ್ಷದ ಹಿರಿಯ ನಾಯಕರು ಆಗಿರುವ ಇವರು, ಕರ್ನಾಟಕ ನೇಕಾರ ಹೋರಾಟ ಸಮಿಯ…
Read More“ಯಾದ್ ಕರೋ ಕುರ್ಬಾನಿ’ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ ಪ್ರಧಾನ ಮಂತ್ರಿ ನರೇದ್ರ ಮೋದಿ ಅವರು 70ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ‘ಆಜಾದಿ 70 ಸಾಲ್-ಯಾದ್ ಕರೋ ಕುರ್ಬಾನಿ’ ಕಾರ್ಯಕ್ರಮಕ್ಕೆ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಹುಟ್ಟೂರು ಮಧ್ಯಪ್ರದೇಶದ ಅಲಿರಾಜ್ಪುರ್ ನಲ್ಲಿ ಚಾಲನೆ ನೀಡಿದರು. ಯಾದ್ ಕರೋ ಕುರ್ಬಾನಿ 15 ದಿನಗಳ ಕಾರ್ಯಕ್ರಮವಾಗಿದ್ದು, 70ನೇ ಸ್ವಾತಂತ್ರ್ಯೊತ್ಸವ ಹಾಗೂ ಕ್ವಿಟ್ ಇಂಡಿಯಾ ಚಳವಳಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.…
Read Moreಜಲ ಸಂಪನ್ಮೂಲ ಮಾಹಿತಿ ವ್ಯವಸ್ಥೆ ಆರಂಭಿಸಿದ ತೆಲಂಗಣ ರಾಜ್ಯದ ಸಮಗ್ರ ಜಲ ಸಂಪನ್ಮೂಲದ ಮಾಹಿತಿಯನ್ನು ಕಲೆ ಹಾಕುವ ಸಲುವಾಗಿ ತೆಲಂಗಣ ಸರ್ಕಾರ ಮಹತ್ವದ ಜಲ ಸಂಪನ್ಮೂಲ ಮಾಹಿತಿ ವ್ಯವಸ್ಥೆಯನ್ನು (Water Resource Information System) ಆರಂಭಿಸಿದೆ. ಈ ಸಂಬಂಧ ತೆಲಂಗಣ ನೀರಾವರಿ ಇಲಾಖೆ ಮತ್ತು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒಡಂಬಡಿಕೆಗೆ ಸಹಿಹಾಕಿವೆ. ಒಡಂಬಡಿಕೆ ಅನ್ವಯ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರವೂ ಈ ವ್ಯವಸ್ಥೆಯನ್ನು ಸ್ಥಾಪಿಸಲಿದ್ದು, ಉಪಗ್ರಹದ ಮೂಲಕ ಮಾಹಿತಿಗ ಹಂಚಲಿದೆ. ಈ ವ್ಯವಸ್ಥೆಯ ಮೂಲಕ…
Read Moreಆಗಸ್ಟ್ 7 ರಾಷ್ಟ್ರೀಯ ಕೈಮಗ್ಗ ದಿನ (National Handloom Day) ಎರಡನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 7 ರಂದು ದೇಶವ್ಯಾಪ್ತಿ ಆಚರಿಸಲಾಯಿತು. ಉತ್ತರಪ್ರದೇಶದ ವಾರಣಾಸಿಯಲ್ಲಿ ಕೈಮಗ್ಗ ದಿನ ಆಚರಣೆ ಪ್ರಯುಕ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ವಿವಿಧ ರಾಜಕೀಯ ಗಣ್ಯರು ಪಾಲ್ಗೊಂಡಿದ್ದರು. ಕೈಮಗ್ಗ ದಿನದ ಅಂಗವಾಗಿ ಸಂತ ಕಬೀರ ಮತ್ತು ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಗಳ ವಿತರಣೆ ಸಹ ನಡೆಯಿತು. ರಾಷ್ಟ್ರೀಯ ಕೈಮಗ್ಗ ದಿನವನ್ನು ಕಳೆದ ವರ್ಷದಿಂದ ಆಗಸ್ಟ್ 7 ರಂದು ಆಚರಿಸಲಾಗುತ್ತಿದೆ. ಮೊದಲನೆ ರಾಷ್ಟ್ರೀಯ…
Read More