ಬೆಂಗಳೂರಿನಲ್ಲಿ 15ನೇ ಪ್ರವಾಸಿ ಭಾರತೀಯ ದಿವಸ್ ಹದಿನೈದನೆ ಪ್ರವಾಸಿ ಭಾರತೀಯ ದಿವಸ್ ಅನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು. 2017ರ ಜನವರಿ 7ರಿಂದ 9ರವರೆಗೆ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಲ್ಗೊಳ್ಳಲಿದ್ದಾರೆ. ನಗರದ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸುಮಾರು 2500ಕ್ಕೂ ಅಧಿಕ ಎನ್ಆರ್ಐಗಳು ಭಾಗವಹಿಸುವ ನಿರೀಕ್ಷೆಯಿದೆ. ಪ್ರವಾಸಿ ಭಾರತೀಯ ದಿವಸ್ನ 3 ದಿನ…
Read Moreಅಸ್ಸಾಂನ ಖ್ಯಾತ ಸಾಹಿತಿ ಮಹೀಮ್ ಬೋರ ನಿಧನ ಅಸ್ಸಾಮಿ ಭಾಷೆಯ ಪ್ರಸಿದ್ದ ಲೇಖಕ ಹಾಗೂ ಶಿಕ್ಷಣ ತಜ್ಞ ಮಹೀಮ್ ಬೋರಾ ನಿಧನರಾದರು. 92 ವರ್ಷ ವಯಸ್ಸಿನ ಬೋರ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜುಲೈ 6, 1924 ರಲ್ಲಿ ಅಸ್ಸಾಂನ ನಾಗೋನ್ ಜಿಲ್ಲೆಯಲ್ಲಿ ಬೋರ ಜನಿಸಿದರು. ಅಸ್ಸಾಮಿ ಸಾಹಿತ್ಯದಲ್ಲಿ ಎಂ.ಎ ಪಧವೀದರರಾದ ಇವರು ನೌಗಾಂಗ್ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸಿದ್ದರು. ಸಣ್ಣ ಕಥೆಗಳು ಮತ್ತು ಕವಿತೆಗಳ ಮೂಲಕ ಅಸ್ಸಾಮಿ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ಬೋರ ನೀಡಿದ್ದರು. ಇವರ “ಇದಾನಿ ಮಹೀರ್…
Read Moreಮೋಟಾರು ವಾಹನ (ತಿದ್ದುಪಡಿ) ಮಸೂದೆ-2016ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ದೇಶದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಮಹತ್ವದ ಗುರಿ ಹೊಂದಿರುವ ಮೋಟಾರ್ ವಾಹನ (ತಿದ್ದುಪಡಿ) ಮಸೂದೆ-2016ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಸೂದೆಯು ಮೋಟಾರು ವಾಹನ ಕಾಯಿದೆ, 1998 ಕ್ಕೆ ತಿದ್ದುಪಡಿ ತರುವ ಮೂಲಕ ರಸ್ತೆ ಸುರಕ್ಷತೆ ನಿಯಮಗಳ ಉಲ್ಲಂಘನೆಗೆ ದೊಡ್ಡ ಮೊತ್ತದ ದಂಡ ವಿಧಿಸುವ ಅವಕಾಶವನ್ನು ಕಲ್ಪಿಸಲಿದೆ. ಮಸೂದೆಯಲ್ಲಿರುವ ಪ್ರಮುಖ ಅಂಶಗಳು: ಮೋಟಾರು ವಾಹನ ಕಾಯಿದೆ-1988 ಒಳಗೊಂಡಿರುವ 223 ಸೆಕ್ಷನ್ಗಳ ಪೈಕಿ 68 ಸೆಕ್ಷನ್…
Read Moreಪ್ರೋ ಸಿ.ಎನ್.ಆರ್ ರಾವ್ ಗೆ ಗಣಿತತಜ್ಞ “ಭಾಸ್ಕರ” ಪ್ರಶಸ್ತಿ ಹಿರಿಯ ವಿಜ್ಞಾನಿ, ಭಾರತ ರತ್ನ ಪುರಸ್ಕೃತ ಪ್ರೋ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ರವರನ್ನು ವಿಜಯಪುರ ಜಿಲ್ಲೆಯ ಸಿಂದಗಿ ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ನೀಡುತ್ತಿರುವ ಮೊದಲ ‘ಭಾಸ್ಕರ’ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಗಣಿತತಜ್ಞ, ಖಗೋಳವಿಜ್ಞಾನಿ ಭಾಸ್ಕರಾಚಾರ್ಯರ (ಭಾಸ್ಕರ-2) ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ಪ್ರಶಸ್ತಿಯನ್ನು ನೀಡಲಾಗುವುದೆಂದು ಪ್ರತಿಷ್ಠಾನ…
Read Moreದೆಹಲಿ-ಅಗರ್ತಲಾ ನಡುವೆ ಸಂಪರ್ಕ ಕಲ್ಪಿಸುವ ತ್ರಿಪುರ ಸುಂದರಿ ಎಕ್ಸಪ್ರೆಸ್ ರೈಲಿಗೆ ಚಾಲನೆ ದೆಹಲಿ ಮತ್ತು ಅಗರ್ತಲಾ ನಡುವೆ ಸಂಪರ್ಕ ಕಲ್ಪಿಸುವ ಮೊದಲ ಬ್ರಾಡ್ಗೇಜ್ ರೈಲು ಯೋಜನೆಗೆ ಕೇಂದ್ರ ರೈಲ್ವೇ ಖಾತೆ ಸಚಿವ ಸುರೇಶ್ ಪ್ರಭುರವರು ಚಾಲನೆ ನೀಡಿದರು. ತ್ರಿಪುರ ಸುಂದರಿ ಎಕ್ಸಪ್ರೆಸ್ ಎಂತಲೂ ಕರೆಯುವ ಈ ರೈಲು ಚಾಲನೆ ಮೂಲಕ ಈಶಾನ್ಯ ರಾಜ್ಯವಾದ ತ್ರಿಪುರ ದೇಶದ ಇತರೆ ಭಾಗಗಳೊಂದಿಗೆ ರೈಲ್ವೇ ಸಂಪರ್ಕಕ್ಕೆ ಮುಕ್ತವಾಗಲಿದೆ. ತ್ರಿಪುರ ಸುಂದರಿ ಎಕ್ಸಪ್ರೆಸ್ ವಾರಕ್ಕೊಮ್ಮೆ ದೆಹಲಿಯ ಆನಂದ ವಿಹಾರ ಮತ್ತು ತ್ರಿಪುರಾದ ಅಗರ್ತಲಾ…
Read More24 ಅಗತ್ಯ ಔಷಧಗಳ ಬೆಲೆ ಮೇಲೆ ಮಿತಿ ಹೇರಿದ ಕೇಂದ್ರ ಸರ್ಕಾರ ಕ್ಯಾನ್ಸರ್, ಎಚ್ಐವಿ, ಬ್ಯಾಕ್ಟೀರಿಯಾ ಸೋಂಕುಗಳು, ಖಿನ್ನತೆ ಮತ್ತು ಹೃದಯ ರೋಗಗಳ ಚಿಕಿತ್ಸೆಗೆ ಬಳಸುವ 24 ಅಗತ್ಯ ಔಷಧಗಳ ಬೆಲೆಗೆ ಕೇಂದ್ರ ಸರ್ಕಾರ ಮಿತಿ ಹೇರಿದೆ. ಈ ಸಂಬಂಧ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ ಸುತ್ತೋಲೆಯನ್ನು ಹೊರಡಿಸಿದ್ದು, ಈ 24 ಔಷಧಗಳ ಬೆಲೆ ಶೇ 25 ರಷ್ಟು ಕಡಿಮೆಯಾಗಲಿದೆ. ಇದಲ್ಲದೆ ಔಷಧ ಬೆಲೆ ನಿಯಂತ್ರಣ ಆದೇಶದಡಿಯಲ್ಲಿ 31 ಔಷಧ ಮಿಶ್ರಣಗಳ ರಿಟೈಲ್ ದರದ ಮೇಲು ಮಿತಿ ಹೇರಲಾಗಿದೆ…
Read Moreಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಗೆ ಪ್ರೋ ಕಬಡ್ಡಿ ಚಾಂಪಿಯನ್ ಪಟ್ಟ ಕಳೆದ ವರ್ಷ ಚಾಂಪಿಯನ್ ಆಗಿದ್ದ ಪಾಟ್ನಾ ಪೈರೇಟ್ಸ್ ತಂಡ 4ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ನಲ್ಲಿ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 37-29 ರ ಅಂತರದಲ್ಲಿ ಸೋಲಿಸುವ ಮೂಲಕ ಪಾಟ್ನಾ ಪೈರೇಟ್ಸ್ ಗೆಲುವಿನ ನಗೆ ಬೀರಿತು. ಹೈದ್ರಾಬಾದ್ ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಟ್ನಾ…
Read Moreರಾಜ್ಯೋತ್ಸವ ಪ್ರಶಸ್ತಿ: ಮಾನದಂಡ ರೂಪಿಸಲು ಸಮಿತಿ ರಚಿಸಿದ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆಮಾಡುವ ಸಲುವಾಗಿ ಮಾನದಂಡ ರಚನೆಗೆ ಸಮಿತಿಯೊಂದನ್ನು ರಾಜ್ಯ ಸರ್ಕಾರ ರಚಿಸಿದೆ. ಕರ್ನಾಟಕ ಹೈಕೋರ್ಟ್ ನಿವೃತ ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ರವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯು ವಿವಿಧ ಕ್ಷೇತ್ರಗಳಿಂದ ಆಯ್ಕೆ ಮಾಡಲಾದ 22 ಜನ ಸದಸ್ಯರನ್ನು ಒಳಗೊಂಡಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮಾಡಲು ಮಾನದಂಡಗಳನ್ನು ರಚಿಸುವ ಹೊಣೆಗಾರಿಕೆಯನ್ನು ಸಮಿತಿಗೆ ವಹಿಸಲಾಗಿದೆ. ಮಾನದಂಡ ರಚನೆ ನಂತರ ಸಮಿತಿ…
Read Moreಮಾಜಿ ಪುಟ್ ಬಾಲ್ ಆಟಗಾರ ಸಯ್ಯದ್ ನಯೀಮುದ್ದೀನ್ ಗೆ ಮೊಹುನ್ ಬಾಗನ್ ರತ್ನ ಪ್ರಶಸ್ತಿ ಭಾರತದ ಶ್ರೇಷ್ಠ ಮಾಜಿ ಪುಟ್ ಬಾಲ್ ಆಟಗಾರ ಸಯ್ಯದ್ ನಯೀಮುದ್ದೀನ್ ರವರಿಗೆ ಮೊಹುನ್ ಬಾಗನ್ ಪುಟ್ ಬಾಲ್ ಕ್ಲಬ್ ನ ಅತ್ಯುನ್ನತ ಪ್ರಶಸ್ತಿಯಾ ಮೊಹುನ್ ಬಾಗನ್ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಆ ಮೂಲಕ ಸಯ್ಯದ್ ರವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ 16 ನೇ ಆಟಗಾರ. ಸಯ್ಯದ್ ನಯೀಮುದ್ದೀನ್ ಬಗ್ಗೆ: ಸಯ್ಯದ್ ರವರು ಭಾರತ ಕಂಡ ಶ್ರೇಷ್ಠ ಮಾಜಿ ಪುಟ್ ಬಾಲ್…
Read Moreಮಹದಾಯಿ ಮದ್ಯಂತರ ತೀರ್ಪು: ಕರ್ನಾಟಕದ ಅರ್ಜಿ ತಿರಸ್ಕೃತ ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ್ದ ಮದ್ಯಂತರ ಅರ್ಜಿಯನ್ನು ಮಹದಾಯಿ ನ್ಯಾಯಮಂಡಳಿ ತಿರಸ್ಕರಿಸಿದ್ದು, ನ್ಯಾಯಾಲಯದ ತೀರ್ಪಿನಿಂದ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗಿದೆ. ಕರ್ನಾಟಕ ನಾಲ್ಕು ಜಿಲ್ಲೆಗಳಾದ ಬೆಳಗಾವಿ, ಹುಬ್ಬಳಿ-ಧಾರವಾಡ, ಗದಗ ಮತ್ತು ಬಾಗಲಕೋಟೆ ಜನರಿಗೆ ಕುಡಿಯುವ ನೀರಿನ ದಾಹ ನೀಗಿಸುವ ನಿಟ್ಟಿನಲ್ಲಿ 7.5 ಟಿಎಂಸಿ ನೀರು ನೀಡುವಂತೆ ಮಧ್ಯಂತರ ಆದೇಶ ನೀಡಬೇಕೆಂದು ಸಲ್ಲಿಸಿದ್ದ ರಾಜ್ಯ ಸರ್ಕಾರದ ಅರ್ಜಿಯನ್ನು ಆಲಿಸಿದ ನ್ಯಾ. ಜೆ.ಎಂ.ಪಾಂಚಾಲ್ ನೇತೃತ್ವದ ನ್ಯಾಯಮಂಡಳಿ 7.56 ಟಿಎಂಸಿ…
Read More