ಸಂಸತ್ ಮೇಲೆ ದಾಳಿ ತಡೆಗೆ ಕೇಂದ್ರದಿಂದ “ಆಪರೇಷನ್ ಗೋಲ್ಡನ್ ನೋಸ್” ಸಂಸತ್ ಭವನದ ಮೇಲೆ ದಾಳಿ ತಡೆಯುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯ “ಆಪರೇಷನ್ ಗೋಲ್ಡನ್ ನೋಸ್” ಎಂಬ ಕಾರ್ಯಚರಣೆ ಆರಂಭಿಸಿದೆ. ಸೋಮವಾರದಿಂದ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಂಸತ್ ಭವನದ ಮೇಲೆ ಉಗ್ರರು ದಾಳಿ ನಡೆಸದಂತೆ ತಡೆಯಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. ಸಂಸತ್ ಭವನದ ಸುತ್ತ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕಾರ್ಯಚರಣೆಯಲ್ಲಿ ಸ್ಪೋಟಕ ಪತ್ತೆಯಲ್ಲಿ ತರಬೇತಿ ಪಡೆದಿರುವ ಶ್ವಾನಗಳ ತಂಡವನ್ನು ಸಂಸತ್…
Read Moreಯುನೆಸ್ಕೂ ವಿಶ್ವ ಪಾರಂಪರಿಕ ಪಟ್ಟಿ ಸೇರ್ಪಡೆಗೊಂಡ ನಳಂದ ಮಹಾವಿಹಾರ ಭಾರತದ ನಳಂದಾ ಮಹಾವಿಹಾರ ಅವಶೇಷ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡಿದೆ. ಬಿಹಾರದಲ್ಲಿ ಇರುವ ನಳಂದಾ ಮಹಾವಿಹಾರವನ್ನು ಇತಿಹಾಸದಲ್ಲಿ ನಳಂದ ವಿಶ್ವವಿದ್ಯಾಲಯ ಎಂತಲೂ ಕರೆಯಲಾಗುತ್ತದೆ. 5ನೇ ಶತಮಾನದಿಂದ 13ನೇ ಶತಮಾನದವರೆಗೂ ಅಸ್ಥಿತ್ವದಲ್ಲಿದ್ದ ಈ ವಿದ್ಯಾಲಯದ ಕುರುಹುಗಳನ್ನು ನಳಂದ ಮಹಾವಿಹಾರದಲ್ಲಿ ಕಾಣಬಹುದಾಗಿದೆ. ನಳಂದ ಮಹಾವಿಹಾರವೂ ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 26 ಕಿ.ಮೀ ದೂರದಲ್ಲಿದ್ದು, ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡ 26 ನೇ ಸಾಂಸ್ಕೃತಿಕ ತಾಣವಾಗಿದೆ. ನಳಂದ ಮಹಾವಿಹಾರವನ್ನು…
Read Moreಝಿಕಾ ವೈರಸ್ ಉಲ್ಬಣ: ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದ ಪೆರು ಪೆರು ದೇಶದಲ್ಲಿ ಝಿಕಾ ವೈರಸ್ ಕಾಯಿಲೆ ಉಲ್ಬಣಗೊಂಡಿರುವ ಹಿನ್ನಲೆಯಲ್ಲಿ ದೇಶದ ಉತ್ತರ ಭಾಗದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಇದುವರೆಗೂ ಸುಮಾರು 100 ಕ್ಕೂ ಹೆಚ್ಚು ಝಿಕಾ ವೈರಸ್ ಸೋಂಕಿನ ಪ್ರಕರಣಗಳು ಪೆರುವಿನಲ್ಲಿ ಪತ್ತೆಯಾಗಿವೆ. ರೋಗ ಹರಡದಂತೆ ನಿಯಂತ್ರಿಸುವ ಸಲುವಾಗಿ 90 ದಿನಗಳ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಘೋಷಿಸಲಾಗಿದೆ. 34ಕ್ಕೂ ಹೆಚ್ಚು ಗರ್ಭೀಣಿ ಸ್ತ್ರೀಯರಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಪೆರುವಿನ ನೆರೆ ದೇಶವಾದ ಬ್ರೆಜಿಲ್ ನಲ್ಲಿ…
Read Moreಬೇಳೆಕಾಳು ಕೊರತೆ ನೀಗಿಸಲು ಸಮಿತಿ ರಚಿಸಿದ ಕೇಂದ್ರ ಸರ್ಕಾರ ದೇಶದಲ್ಲಿ ಎದುರಾಗಿರುವ ಬೇಳೆಕಾಳುಗಳ ಕೊರತೆಯನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಉನ್ನತಮಟ್ಟದ ಸಮಿತಿಯನ್ನು ರಚಿಸಿದೆ. ವಿತ್ತ ಸಚಿವ ಅರುಣ್ ಜೆಟ್ಲಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಮಣ್ಯನ್ ರವರು ಈ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಹಿಡಿತಕ್ಕೆ ಸಿಗದೆ ಏರುತ್ತಿರುವ ಬೇಳೆಕಾಳುಗಳ ಬೆಲೆಯನ್ನು ನಿಯಂತ್ರಿಸಲು ಅಧ್ಯಯನ ನಡೆಸಿ, ಸಲಹೆಗಳನ್ನು ಸಮಿತಿ ಶಿಫಾರಸ್ಸು ಮಾಡಲಿದೆ. ಬೇಳೆಕಾಳುಗಳನ್ನು ಬೆಳೆಯುವಂತೆ…
Read Moreಬ್ರಿಟನ್ ನ ನೂತನ ಪ್ರಧಾನಿಯಾಗಿ ತೆರೆಸಾ ಮೇ ಅಧಿಕಾರ ಸ್ವೀಕಾರ ಬ್ರಿಟನ್ ನ ನೂತನ ಪ್ರಧಾನ ಮಂತ್ರಿಯಾಗಿ ಕನ್ಸರ್ವೇಟಿವ್ ಪಕ್ಷದ ನಾಯಕಿ ತೆರೆಸಾ ಮೇ ರವರು ಅಧಿಕಾರ ಸ್ವೀಕರಿಸಿದ್ದಾರೆ. ಆ ಮೂಲಕ ಬ್ರಿಟನ್ ನ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ಎರಡನೇ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಬ್ರಿಟನ್ ನ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರೂನ್ ಬ್ರೆಕ್ಸಿಟ್ ಗಾಗಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದ ಹಿನ್ನಲೆಯಲ್ಲಿ ತೆರವಾಗಿದ್ದ ಪ್ರಧಾನಿ ಹುದ್ದೆಯನ್ನು ತೆರೆಸಾ ವಹಿಸಿಕೊಂಡಿದ್ದಾರೆ. ಡೇವಿಡ್ ಕ್ಯಾಮರೂನ್ ರವರು ಆರು…
Read Moreನೇಪಾಳದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿ ಸುಶೀಲ ಕರ್ಕಿ ಪ್ರಮಾಣ ವಚನ ಸ್ವೀಕಾರ ಸುಶೀಲ ಕರ್ಕಿರವರು ನೇಪಾಳದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಿ ಅಧಿಕಾರ ವಹಿಸಿಕೊಂಡರು. ನೇಪಾಳದ ರಾಷ್ಟ್ರಪತಿ ನಿಲಯವಾದ ಶೀತಲ್ ನಿವಾಸ್ ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸುಶೀಲ ರವರಿಗೆ ರಾಷ್ಟ್ರಪತಿ ಬಿದ್ಯ ದೇವಿ ಭಂಡಾರಿ ರವರು ಪ್ರಮಾಣ ವಚನ ಬೋಧಿಸಿದರು. ಸುಶೀಲ ರವರು ಜೂನ್ 6, 2017 ರ ತನಕ ಮುಖ್ಯ ನ್ಯಾಯಮೂರ್ತಿ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸುಶೀಲ ಕರ್ಕಿ ಬಗ್ಗೆ: ಸುಶೀಲ ರವರು ಬನರಸ್…
Read Moreಜೂನಿಯರ್ ಈಜು ಚಾಂಪಿಯನ್ ಷಿಪ್ ಕರ್ನಾಟಕಕ್ಕೆ ಸಮಗ್ರ ಚಾಂಪಿಯನ್ ಪಟ್ಟ ಗ್ಲೆನ್ವಾರ್ಕ್ 43ನೇ ಜೂನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ಆತಿಥೇಯ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಸವನಗುಡಿ ಈಜು ಕೇಂದ್ರದಲ್ಲಿ ಮುಕ್ತಾಯಗೊಂಡ ಚಾಂಪಿಯನ್ಷಿಪ್ ನಲ್ಲಿ ಕರ್ನಾಟಕ ಮೊದಲ ಸ್ಥಾನವನ್ನು ಅಲಂಕರಿಸಿದರೆ, ಮಹಾರಾಷ್ಟ್ರ ಮತ್ತು ತಮಿಳುನಾಡು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು. ಪ್ರಥಮ ಸ್ಥಾನ ಕರ್ನಾಟಕ (37ಚಿನ್ನ, 22 ಬೆಳ್ಳಿ ಮತ್ತು 23 ಕಂಚು: ಒಟ್ಟು 82 ಪದಕ)607 ಪಾಯಿಂಟ್ಗಳಿಂದ ಅಗ್ರ ಸ್ಥಾನ ಸಂಪಾದಿಸಿತು.…
Read Moreಕೇಂದ್ರ ಸಂಪುಟ ಪುನರ್ ರಚನೆ: ಒಂದು ನೋಟ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸಚಿವ ಸಂಪುಟ ಪುನಾರಚನೆಯಾಗಿದೆ. ಹೊಸ ಸಂಪುಟಕ್ಕೆ 19 ಹೊಸ ಮುಖಗಳನ್ನು ಸೇರಿಸಿಕೊಳ್ಳಲಾಗಿದೆ. ಸಂಪುಟ ಪುನರ್ ರಚನೆಯಾಗಿ ಹೊಸ ಮುಖಗಳ ಪರಿಚಯ ಇಲ್ಲಿದೆ. ಕ್ಯಾಬಿನೆಟ್ ಸಚಿವರು: ವೆಂಕಯ್ಯನಾಯ್ಡು: ನಗರಾಭಿವೃದ್ದಿ, ಬಡತನ ನಿರ್ಮೂಲನೆ ಹಾಗೂ ಮಾಹಿತಿ ಮತ್ತು ಪ್ರಸಾರ ಅನಂತ್ ಕುಮಾರ್: ರಸಗೊಬ್ಬರ, ಸಂಸದೀಯ ವ್ಯವಹಾರ ಪ್ರಕಾಶ್ ಜಾವೇದ್ಕರ್: ಮಾನವ ಸಂಪನ್ಮೂಲ ಅಭಿವೃದ್ದಿ ರವಿ ಶಂಕರ್: ಮಾಹಿತಿ ತಂತ್ರಜ್ಞಾನ, ಕಾನೂನು ನರೇಂದ್ರ ಸಿಂಗ್…
Read Moreಭಾರತದಿಂದ ನೈಜೀರಿಯಾದಲ್ಲಿ ಉಡುಪು ತರಭೇತಿ ಕೇಂದ್ರ (Apparel Training Centre) ಸ್ಥಾಪನೆ ನೈಜೀರಿಯಾದಲ್ಲಿ ಜವಳಿ ಕೈಗಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಭಾರತ ನೈಜೀರಿಯಾದ ಕಡುನ (Kaduna)ದಲ್ಲಿ ಉಡುಪು ತರಭೇತಿ ಕೇಂದ್ರವನ್ನು ಸ್ಥಾಪಿಸಿದೆ. ಇದೇ ಮೊದಲ ಬಾರಿಗೆ ಭಾರತ ನೈಜೀರಿಯಾ ಸರ್ಕಾರದೊಂದಿಗೆ ಇಂತಹ ತರಭೇತಿ ಕೇಂದ್ರವನ್ನು ಸ್ಥಾಪಿಸಿದೆ. ಈ ತರಭೇತಿ ಕೇಂದ್ರವನ್ನು ವಾಣಿಜ್ಯ ಇಲಾಖೆಯ “ಕಾಟನ್ ಟೆಕ್ನಿಕಲ್ ಅಸಿಸ್ಟನ್ಸ್ ಪೋಗ್ರಾಂ ಫಾರ್ ಆಫ್ರಿಕಾ” ಕಾರ್ಯಕ್ರಮದಡಿ ಸ್ಥಾಪಿಸಲಾಗಿದೆ. ಈ ತರಭೇತಿ ಕೇಂದ್ರದ ಮೂಲಕ ಕೌಶಲ್ಯತೆಯನ್ನು ಹೆಚ್ಚಿಸಿ, ನೈಜೀರಿಯಾದಲ್ಲಿ ಜವಳಿ ಕೈಗಾರಿಕೆಯನ್ನು ಉತ್ತೇಜಿಸುವುದು…
Read Moreರಾಧಿಕಾ ಮೆನನ್: ಅಂತಾರಾಷ್ಟ್ರೀಯ ಸಾಗರಯಾನ ಸಂಸ್ಥೆ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಮಹಿಳೆ ಕ್ಯಾಪ್ಟನ್ ರಾಧಿಕಾ ಮೆನನ್ ರವರು ಸಾಗರದಲ್ಲಿ ತೋರಿದ ಅನ್ಯನ ಸಾಧನೆಗಾಗಿ ಅಂತಾರಾಷ್ಟ್ರೀಯ ಸಾಗರಯಾನ ಸಂಸ್ಥೆ ನೀಡುವ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಪಡೆಯುವ ಮೂಲಕ ರಾಧಿಕಾ ಮೆನನ್ ರವರು ಈ ಪ್ರಶಸ್ತಿ ಪಡೆದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಧಿಕಾ ಮೆನನ್ ರವರು ತಮ್ಮ ಪ್ರಾಣವನ್ನು ಬದಿಗಿಟ್ಟು ಏಳು ಮಂದಿ ಮೀನುಗಾರರನ್ನು ರಕ್ಷಿಸಿದ ಸಾಹಸಕ್ಕಾಗಿ ಈ ಪ್ರಶಸ್ತಿ ಒಲಿದಿದೆ.…
Read More