Karunaduexams Monthly Magazine – Jan 2022 Click on the above link to download,
Read More“ಹೈ ರಿಸ್ಕ್ ಪ್ರೆಗ್ನೆನ್ಸಿ ಪೋರ್ಟಲ್” ಆರಂಭಿಸಿದ ದೇಶದ ಮೊದಲ ರಾಜ್ಯ ಹರಿಯಾಣ ಹರಿಯಾಣ ಸರ್ಕಾರ “ಹೈ ರಿಸ್ಕ್ ಪ್ರೆಗ್ನೆನ್ಸಿ (ಎಚ್ಆರ್ಪಿ) ಪೋರ್ಟಲ್ (High Risk Pregnancy Portal)” ಅನ್ನು ಪ್ರಾರಂಭಿಸಿದ್ದು, ಇಂತಹ ಪೋರ್ಟಲ್ ಜಾರಿಗೆ ತಂದ ದೇಶದ ಮೊದಲ ರಾಜ್ಯವೆನಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ನೀತಿ ಅಯೋಗ ಇದೊಂದು ಉತ್ತಮ ಕ್ರಮವೆಂದು ಬಣ್ಣಿಸಿದೆ. ಪೋರ್ಟಲ್ ಬಗ್ಗೆ: ಈ ವಿನೂತನ ವೆಬ್ ಅಪ್ಲಿಕೇಶನ್ ಹೆರಿಗೆಯಾದ 42 ದಿನಗಳ ವರೆಗೆ ಹೆಚ್ಚು ತೊಂದರೆಯಲ್ಲಿರುವ ಗರ್ಭಿಣಿ…
Read Moreಕಾಗದ ಮುಕ್ತ ವ್ಯವಹಾರಕ್ಕೆ ಇ-ಸಂಸದ್ ಮತ್ತು ಇ-ವಿಧಾನ್ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಕಾಗದ ರಹಿತ ಕಾರ್ಯಾಚರಣೆಯನ್ನು ಉತ್ತೇಜಿಸುವ ಸಲುವಾಗಿ ಇ-ಸಂಸದ್ ಮತ್ತು ಇ-ವಿಧಾನ್ ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇ-ಸಂಸದ್ & ಇ-ವಿಧಾನ್: ಇ-ಸಂಸದ್ ಮತ್ತು ಇ-ವಿಧಾನ್ ಸಂಸತ್ ಮತ್ತು ರಾಜ್ಯ ಶಾಸಕಾಂಗಗಳ ಕಾರ್ಯಚಟುವಟಿಕೆಯನ್ನು ಕಾಗದ ಮುಕ್ತ ಕಾರ್ಯರೂಪಕ್ಕೆ ತರಲು, ಡಿಜಿಟಲ್ ಇಂಡಿಯಾ ಅಡಿಯಲ್ಲಿ ಭಾರತದ ಸರ್ಕಾರದ ಯೋಜನೆಗಳಾಗಿವೆ. ಸಂಸದೀಯ ವ್ಯವಹಾರ ಸಚಿವಾಲಯ ಈ ಎರಡೂ ಯೋಜನೆಗಳನ್ನು ಅನುಷ್ಠಾನಗೊಳಿಸುವ ನೋಡಲ್ ಸಚಿವಾಲಯವಾಗಿದೆ. ಮಹತ್ವ: ಈ…
Read Moreಮೆಡಾರಂ/ಸರಳಮ್ಮ ಜಾತ್ರೆ ಮೆಡಾರಂನ ಸಮ್ಮಕ್ಕ, ಸರಕ್ಕ/ಸರಳಮ್ಮ ಜಾತ್ರೆಯನ್ನು ರಾಷ್ಟ್ರೀಯ ಉತ್ಸವವೆಂದು ಕೇಂದ್ರ ಸರ್ಕಾರ ಈ ವರ್ಷ ಘೋಷಿಸುವ ಸಂಭವವಿದೆ. ಈ ಜಾತ್ರೆಯನ್ನು ರಾಷ್ಟ್ರೀಯ ಉತ್ಸವವೆಂದು ಘೋಷಿಸಿದರೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಯ ‘ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ (‘intangible cultural heritage of humanity)” ಗೆ ಇದನ್ನು ಪರಿಗಣಿಸಬಹುದಾಗಿದೆ. ಜಾತ್ರೆಯ ಬಗ್ಗೆ: ಮೆಡಾರಂ ಅಥವಾ ಸರಳಮ್ಮ ಜಾತ್ರೆಯು ತೆಲಂಗಾಣ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಅರಣ್ಯದಲ್ಲಿ ನೆಲಸುವ ಕೋಯಾ ಬುಡಕಟ್ಟು ಜನಾಂಗ ನಡೆಸುವ…
Read Moreನಾಸಾದಿಂದ GOLD ಮತ್ತು ICON ಮಿಷನ್ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಭೂಮಿಯ ಮೇಲಿನ 60 ಮೈಲುಗಳಷ್ಟು (96 ಕಿ.ಮೀ.) ಪ್ರದೇಶವನ್ನು ಅನ್ವೇಷಿಸಲು GOLD ಮತ್ತು ICON ಎಂಬ ಎರಡು ಮಿಷನ್ ಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಜನವರಿ 2018 ರಲ್ಲಿ Global-scale Observations of the Limb and Disk (GOLD) ಅನ್ನು ಮತ್ತು Ionospheric Connection Explorer (ICON) ಅನ್ನು ಈ ವರ್ಷದ ಕೊನೆಯ ಭಾಗದಲ್ಲಿ ಆರಂಭಿಸಲಿದೆ. ಮಿಷನ್…
Read Moreಪೆರಿಹೆಲಿಯನ್ (Perihelion) ಜನವರಿ 3 ರಂದು ಭೂಮಿಯು ಸೂರ್ಯನಿಗೆ ಹತ್ತಿರವಿರಲಿದೆ ಈ ವಿದ್ಯಮಾನವನ್ನು ‘ಪೆರಿಹೆಲಿಯನ್’ ಎನ್ನಲಾಗುವುದು. ಆದರೆ ಭೂಮಿಯ ಮೇಲಿಂದ ಈ ವಿದ್ಯಮಾನವನ್ನು ನೋಡಲು ಆಗುವುದಿಲ್ಲ. ಜನವರಿ 3 ರಂದು 11.05 ಗಂಟೆಗೆ ಭೂಮಿಯು ತನ್ನ ವಾರ್ಷಿಕ ಅಂಡಾಕಾರದ ಕಕ್ಷೆಯಲ್ಲಿ ಸೂರ್ಯನಿಗೆ 14,70,97,237 ಕಿ.ಮೀ ದೂರದಲ್ಲಿರಲಿದೆ. ಪೆರಿಹೆಲಿಯನ್ ಮಹತ್ವ: ಪೆರಿಹೆಲಿಯನ್ ಸಂಶೋಧನೆ ಮತ್ತು ಶೈಕ್ಷಣಿಕ ಉದ್ದೇಶಗಳಲ್ಲಿ ಪ್ರಮುಖ ಘಟನೆಯಾಗಿದೆ. ಸಾಮಾನ್ಯವಾಗಿ ಸೂರ್ಯನಿಂದ ಭೂಮಿಯ ದೂರವು ಋತು ಅಥವಾ ತಾಪಮಾನವನ್ನು ಭೂಮಿಯ ಮೇಲೆ ನಿರ್ಧರಿಸುತ್ತದೆ ಎಂದು ನಂಬಲಾಗಿದೆ. ಆದರೆ…
Read Moreಸೂರ್ಯನ ಅಧ್ಯಯನಕ್ಕೆ 2018ರಲ್ಲಿ ನಾಸಾದಿಂದ ಪಾರ್ಕರ್ ನೌಕೆ ಸೂರ್ಯನ ರಹಸ್ಯ ಭೇದಿಸಲು ನಾಸಾ ಸಜ್ಜಾಗಿದ್ದು, ಐತಿಹಾಸಿಕ ಪಾರ್ಕರ್ ಸೌರ ಪ್ರೋಬ್ ಮಿಷನ್ ಅನ್ನು 2018ರಲ್ಲಿ ಆರಂಭಿಸುವುದಾಗಿ ಹೇಳಿದೆ. ಸೂರ್ಯನಲ್ಲಾಗುವ ಬದಲಾವಣೆಯನ್ನು ಬಗ್ಗೆ ಗ್ರಹಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಲಿದೆ. ಸೂರ್ಯನಲ್ಲಿ ಬದಲಾಗುವ ಪರಿಸ್ಥಿತಿಗಳು ಸೌರಮಂಡಲದೊಳಗೆ ಹರಡಿ ಭೂಮಿಯ ಮೇಲೆ ಮತ್ತು ಇತರ ಗ್ರಹಗಳ ಮೇಲೆ ಪರಿಣಾಮ ಬೀರುವುದರಿಂದ ಈ ಬಗ್ಗೆ ಅಧ್ಯಯನ ನಡೆಸುವುದು ಮಹತ್ವವೆನಿಸಿದೆ. ಪಾರ್ಕರ್ ನೌಕೆ ಈ ಮುಂಚಿನ ಯಾವುದೇ ಬಾಹ್ಯಾಕಾಶ ನೌಕೆಗಿಂತ ಸೂರ್ಯನ ಹತ್ತಿರಕ್ಕೆ ಚಲಿಸಲಿದ್ದು,…
Read Moreಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯದಿಂದ “ನಾರಿ” ಪೋರ್ಟಲ್ ಗೆ ಚಾಲನೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ “ನಾರಿ (NARI)” ಪೋರ್ಟಲ್ ಅನ್ನು ಹೊರತಂದಿದೆ. ಮಹಿಳೆಯರಿಗಾಗಿ ಜಾರಿಗೆ ತಂದಿರುವ ಕಾರ್ಯಕ್ರಮಗಳ ಮಾಹಿತಿಗಳು ಸುಲಭವಾಗಿ ಲಭ್ಯವಾಗುವ ಸಲುವಾಗಿ ನಾರಿ ವೆಬ್ ಪೋರ್ಟಲ್ ಅನ್ನು ಅಭಿವೃದ್ದಿಪಡಿಸಲಾಗಿದೆ. ಈ ಪೋರ್ಟಲ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಚಾಲನೆ ನೀಡಿದರು. ಉದ್ದೇಶ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ಯೋಜನೆಗಳ ಬಗ್ಗೆ ಮಾಹಿತಿಯನ್ನು…
Read Moreಗೇಲ್ (GAIL) ನಿಂದ ದೇಶದ ಎರಡನೇ ಅತಿದೊಡ್ಡ ಮೇಲ್ಛಾವಣಿ ಸೌರ ವಿದ್ಯುತ್ ಘಟಕ ಸರ್ಕಾರಿ ಸ್ವಾಮ್ಯದ ಗೇಲ್ ಇಂಡಿಯಾ ಲಿಮಿಟೆಡ್ ಭಾರತದ ಎರಡನೇ ಅತಿದೊಡ್ಡ ಮೇಲ್ಛಾವಣಿ ಸೌರ ವಿದ್ಯುತ್ ಸ್ಥಾವರವನ್ನು ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಆನಾವರಣಗೊಳಿಸಿದೆ. ಇದು 5.76 ಮೆಗಾ ವ್ಯಾಟ್ ಪೀಕ್ ಸಾಮರ್ಥ್ಯದ ಘಟಕವಾಗಿದ್ದು, ಉತ್ತರ ಪ್ರದೇಶದ ಪಾಟದಲ್ಲಿರುವ ಗೇಲ್ ನ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ನಲ್ಲಿ ಸ್ಥಾಪಿಸಲಾಗಿದೆ. ಸುಮಾರು 65000 ಚದರ ಮೀಟರಿನಷ್ಟು ವಿಸ್ತೀರ್ಣವನ್ನು ಹೊಂದಿರುವ ಮೇಲ್ಛಾವಣಿಯನ್ನು ಸ್ಥಾವರ ಹೊಂದಿದೆ. ಪ್ರತಿ ವರ್ಷ 79 ಲಕ್ಷ…
Read Moreಆಹಾರ ನಿಯಂತ್ರಣ ಪೋರ್ಟಲ್ ಮತ್ತು ನಿವೇಶ್ ಬಂಧು ಪೋರ್ಟಲ್ ಗೆ ಸರ್ಕಾರದಿಂದ ಚಾಲನೆ ಕೇಂದ್ರ ಸರ್ಕಾರ ಆಹಾರ ನಿಯಂತ್ರಣ ಪೋರ್ಟಲ್ ಮತ್ತು ಹೂಡಿಕೆದಾರರ ಸೌಲಭ್ಯ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ವರ್ಲ್ಡ್ ಫುಡ್ ಇಂಡಿಯಾ 2017 ಪ್ರದರ್ಶನ ಸಮಾರಂಭದಲ್ಲಿ ಈ ಪೋರ್ಟಲ್ ಗಳಿಗೆ ಚಾಲನೆ ನೀಡಲಾಗಿದೆ. ಆಹಾರ ಸಂಸ್ಕರಣ ಮತ್ತು ಕೈಗಾರಿಕೆಗಳ ಸಚಿವಾಲಯ (MoFPI) ಮತ್ತು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಜಂಟಿಯಾಗಿ ಈ ಪೋರ್ಟಲ್ ಗಳನ್ನು ಪ್ರಾರಂಭಿಸಿವೆ. ಆಹಾರ ವ್ಯವಹಾರ ಕ್ಷೇತ್ರದಲ್ಲಿ ದೇಶೀಯ ಬೇಡಿಕೆಗಳು…
Read More