ಆತ್ಮೀಯರೇ…
ಕರುನಾಡು ಎಗ್ಸಾಮ್ಸ್ ಕರ್ನಾಟಕದಲ್ಲೇ ಪ್ರಥಮ ಭಾರಿಗೆ ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೋಸ್ಕರ ರಚಿಸಿರುವ ವೆಬ್ ತಾಣ ಎಂದು ತಿಳಿಸಲು ಹೆಮ್ಮೆ ಅನ್ನಿಸುತ್ತಿದೆ. ನಿಮಗೆ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧಾತ್ಮಕ ಪೈಪೋಟಿ ಸರ್ವೆ ಸಾಮಾನ್ಯವಾಗಿದೆ, ನಗರ ಪ್ರದೇಶಗಳಲ್ಲಿ ತರಭೇತಿ ಕೇಂದ್ರಗಳು ಸೌಲಭ್ಯವಿರುವವರಿಗೆ ನೆರವಾಗುತ್ತಿದ್ದು, ಗ್ರಾಮೀಣ ವಿಧ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗುತ್ತಿರುವುದು ಅಕ್ಷರಃ ಸಹ ನಿಜ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಂದು ಅನೇಕ ವೆಬ್ ತಾಣಗಳು ಇಂಗ್ಲೀಷ್ ನಲ್ಲಿ ಲಭ್ಯವಿದ್ದು, ಕನ್ನಡ ಮಾಧ್ಯಮ ಅಭ್ಯರ್ಥಿಗಳು ಸ್ಪರ್ಧಾತ್ಮಕ ಮಾಸಿಕ ಪುಸ್ತಕಗಳ ಮೇಲೆ ಅವಲಂಭಿತಾರಗಿರುವುದು ಸತ್ಯದ ಸಂಗತಿ. ಗ್ರಾಮೀಣ, ಕನ್ನಡ ಅಭ್ಯರ್ಥಿಗಳು, ತರಭೇತಿ ವಂಚಿತ ಪರೀಕ್ಷಾರ್ಥಿಗಳಿಗೆಂದೆ ಕರುನಾಡುಎಕ್ಸ್ ಸಿದ್ದಪಡಿಸಿಲಾಗಿದ್ದು, ಅಂತರ್ಜಾಲದ ಮೂಲಕ ನೀವಿದ್ದಲ್ಲಿಗೆ ಪ್ರಚಲಿತ ಘಟನೆಗಳು, ಸಾಮಾನ್ಯ ಜ಼ಾನ ಹಾಗೂ ಇತರೆ ಪರೀಕ್ಷೆಗಳಿಗೆ ಸಂಬಂದಿಸಿದ ಮಾಹಿತಿ ತಲುಪಿಸಿಸುವುದು ನಮ್ಮ ಗುರಿಯಾಗಿದೆ. ನಿಮ್ಮ ಸಲಹೆ, ಅನಿಸಿಕೆಗಳಿಗೆ ಸ್ವಾಗತ. ನಿಮ್ಮ ಪ್ರೋತ್ಸಾಹಕ್ಕೆ ದನ್ಯವಾದಗಳು.
ಗುರಿ ನಿಮ್ಮದು…ಮಾರ್ಗದರ್ಶನ ನಮ್ಮದು……..
ಸಂಪಾದಕರು